ಒಬ್ಬ ಬಾರ್‌ಗೆ ಹೋಗಿ ಚಿನ್ನಾಗಿ ಕುಡಿದು ಹೊರಡಲು ಮುಂದಾದ. “ದುಡ್ಡಲ್ಲಿ ಕೊಡು”, ಮಾಲೀಕ ಕೇಳಿದ. “ನಾನು ಆಗಲೇ ಕೊಟ್ಟೆ” ಎಂದು ಹೇಳುತ್ತ ಜಾಗ ಖಾಲಿಮಾಡಿದ. ಎರಡನೆಯವನೂ ಚೆನ್ನಾಗಿ ಕುಡಿದ. ಹೊರಡುವಾಗ “ದುಡ್ಡೆಲ್ಲಿ ಕೊಡು” ಎಂದು ಕೇಳಿದರೆ “ಆಗಲೇ ಕೊಟ್ಟೆನಲ್ಲಾ” ಎಂದು ಹೇಳಿ ಅವನೂ ಜಾಗ ಖಾಲಿ ಮಾಡಿದ. ಮೂರನೆಯ ಗಿರಾಕಿ ಬಂದ ಚೆನ್ನಾಗಿ ಕುಡಿಯುತ್ರಿದ್ದಾಗಲೇ ಮಾಲೀಕ ಬಂದು “ಈಗ ಆ ಇಬ್ಬರೂ ಕುಡಿದು ಹೊರಡುವಾಗ ದುಡ್ಡು ಕೊಡಿ ಎಂದರೆ ಆಗಲೇ ಕೊಟ್ಟಿವಲ್ಲಾ, ಎಂದರು ನೀನು ಏನು ಹೇಳುತ್ತೀ ಈಗ?” “ ನಿಮ್ಮ ಮಾತು ಮೊದಲು ನಿಲ್ಲಿಸಿ; ನನ್ನ ಚೇಂಜ್ ಇತ್ತ ಕೊಡಿ.” ಮೂರನೆಯ ಗಿರಾಕಿಯ ಉತ್ತರ!
***