ಚಿತ್ರ: ರೂಡಿ ಮತ್ತು ಪೀಟರ್‍ ಸ್ಟಿಕೇರಿಯನ್ಸ್
ಚಿತ್ರ: ರೂಡಿ ಮತ್ತು ಪೀಟರ್‍ ಸ್ಟಿಕೇರಿಯನ್ಸ್

ಪತ್ರಿಕೆಯಲ್ಲಿ ಆ ಪ್ರಕಟಣೆ ಕಂಡಾಗ ಅವಳಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವನೆ. ಬಿ.ಎ. ಆಗಿ ಮನೆಯಲ್ಲಿ ಒಂದು ವರ್ಷ ಕಳೆದದ್ದು ಒಂದು ನರಕಯಾತನೆ. ಪದವಿ ಮುಗಿಯುತ್ತಲೇ ರತ್ನಗಂಬಳಿ ಹಾಸಿ ತನ್ನನ್ನು ಯಾರಾದರೂ ಕೆಲಸಕ್ಕೆ ಕರೆದುಕೊಳ್ಳುತ್ತಾರೆ ಎಂದವಳು ಕನಸು ಕಟ್ಟಿದ್ದಳು. ಸ್ನೇಹಿತೆಯರೂ ಹೇಳುತ್ತಿದ್ದಳು. ನಿನಗೇನು ಒಳ್ಳೆ ಮಾಡಲ್ ಹಾಗಿದ್ದೀಯಾ. ಯಾರು ಬೇಕಾದರೂ ಕೆಲಸ ಕೊಟ್ಟಾರು. ಮನೆಯಲ್ಲಿ ಕಳೆದುದನ್ನು ನೆನಪಿಸುತ್ತಾ ಒಂದು ವರ್ಷ ದೂಡಿದಾಗ ಅವಳಿಗೆ ಆ ಮಾತುಗಳೆಲ್ಲಾ ಅರ್ಥಹೀನ ಎನಿಸಿದ್ದವು. ವಾಸ್ತವಕ್ಕೂ ಕಲ್ಪನೆಗೂ ಎಷ್ಟು ಅಂತರ!

ಅವಳು ಚೆನ್ನಾಗಿಯೇ ಟೆಸ್ಟ್ ಬರೆದಿದ್ದಳು. ತನ್ನ ಉತ್ತರಗಳು ಸರಿಯಾಗಿದ್ದವೆಂದು ಗೆಳತಿಯರೊಡನೆ ಹೇಳಿಕೊಂಡು ಬಂದಿದ್ದಳು. ಒಬ್ಬಳೇ ಮಗಳನ್ನು ಕೆಲಸಕ್ಕೆ ಕಳಿಸಲು ಅಪ್ಪ ಅಮ್ಮನಿಗೆ ಮನಸ್ಸಿರಲಿಲ್ಲ. ಯಾರನ್ನಾದರೂ ಮನೆಯಳಿಯನನ್ನಾಗಿ ಮಾಡಿಕೊಳ್ಳಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು. ಇಷ್ಟು ಚೆಲುವೆಯಾದ ಮಗಳು ಯಾರ್ಯಾರದೋ ಕಣ್ಣುಗಳಿಗೋ, ಬಾಯಿಗಳಿಗೋ ಆಹಾರವಾಗುವುದು ಅವರಿಗೆ ಒಗ್ಗದ ಮಾತಾಗಿತ್ತು. ಅಲ್ಲದೆ ಇರೋವೊಬ್ಬಳು ಮಗಳು ಹೊರಗೆ ಹೋದರೆ ವೃದ್ಧಾಪ್ಯದಲ್ಲಿ ಹೇಗೋ ಎನ್ನುವ ಭೀತಿ ಅವರನ್ನು ಕಾಡುತ್ತಿತ್ತು. ಹಾಗಂತ ಮಗಳ ಮನಸ್ಸನ್ನು ನೋಯಿಸುವುದಕ್ಕೆ ಅವರು ಸಿದ್ಧರಿರಲಿಲ್ಲ. ಮಗಳು ಹೆಮ್ಮೆಯಿಂದ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದ್ದೇನೆಂದು ಹೇಳುವಾಗ ಅವರು ಸಂತೋಷಪಟ್ಟಿದ್ದರು. ಆ ಸಂತೋಷದಲ್ಲೂ ಒಂದು ನೋವಿನ ಎಳೆಯಿತ್ತು. ಮಗಳು ಕೆಲಸಕ್ಕೆ ಹೋದರೆ ತಾವು ಮತ್ತೆ ಏಕಾಕಿತನ ಅನುಭವಿಸಬೇಕಾಗುತ್ತದೆಂಬ ನೋವದು!

ಅವಳು ನಿರೀಕ್ಷಿಸಿದಂತೆ ಅವಳು ಪಾಸಾಗಿದ್ದಳು. ಸಂದರ್ಶನಕ್ಕೆ ಕಾಗದವೂ ಬಂತು. ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಅವಳಿಗೊಂದು ಫೋನ್. “ನೀವು ಸಂದರ್ಶನಕ್ಕೆ ಆಯ್ಕೆ ಯಾಗಿದ್ದೀರಿ. ಒಂದು ಲಕ್ಷ ಕೊಟ್ಟರೆ ಕೆಲಸ ಗ್ಯಾರಂಟಿ. ಎರಡು ದಿನದ ಬಳಿಕ ಫೋನ್ ಮಾಡುತ್ತೇನೆ. ನಿಶ್ಚಯಿಸಿ ಹೇಳಿ.” ಇವಳ ಉತ್ತರಕ್ಕೂ ಕಾಯದ ಆಚೆ ಬದಿಯ ವ್ಯಕ್ತಿ ಫೋನ್ ಇಟ್ಟಿದ್ದ.

ಅವಳು ಕುಸಿದು ಹೋದಳು. ಆ ಮಾತಾಡಿದ ವ್ಯಕ್ತಿ ಯಾರು? ಮೊಸಗಾರನೇ? ದಲ್ಲಾಳಿಯೆ? ತಾನು ಹೇಗಾದರೂ ಒಂದು ಲಕ್ಷ ಹಣ ಮಾಡಬಹುದು. ಆದರೆ ಅದರಿಂದ ಕೆಲಸ ಸಿಗುತ್ತದೆಂದು ಏನು ಗ್ಯಾರಂಟಿ. ಯಾರಲ್ಲಿ ಇದನ್ನೆಲ್ಲಾ ಹೇಳಿಕೊಳ್ಳೋದು. ಹಣದ ಪ್ರಶ್ನೆ ಬಂದಾಗ ಅಪ್ಪ ಅಮ್ಮ ಖಂಡಿತಾ ಬೇಡವೆನ್ನುತ್ತಾರೆ. ಸ್ನೇಹಿತೆಯರಿಗೆ ತನ್ನಷ್ಟೂ ಪ್ರಪಂಚ ಅನುಭವವಿಲ್ಲ. ಈ ರೀತಿ ಹಣ ತಗೊಂಡೇ ಕೆಲಸ ಪಡೆದವರ ಅನುಭವಗಳನ್ನು ಅವಳು ಕೇಳಿದ್ದಳು. ನೋಡೋಣ, ಫೋನ್ ಬಂದ ಮೇಲೆ ನಿರ್ಧರಿಸಿದರಾಯಿತು.” ಎಂದುಕೊಂಡಳು.

ಮೂರನೇ ದಿನ ಮತ್ತೆ ಫೋನ್ ಬಂತು. ಅದೇ ಗೊಗ್ಗರು ದನಿಯ ವ್ಯಕ್ತಿ ಆಚೆಕಡೆಯಿಂದ ಮಾತಾಡುತ್ತಿದ್ದ. ಇವಳು ಧೈರ್ಯದಿಂದ ಕೇಳಿದಳು. ನಾನು ಹಣ ಕೊಡುತ್ತೇನೆ. ಅದರದು ತೀರಾ ಹೆಚ್ಚಾಯಿತು. ಅಲ್ಲದೇ ಹಣ ಕೊಟ್ಟರೆ ಕೆಲ್ಸ ಸಿಗುತ್ತದೆಂದು ಗ್ಯಾರಂಟಿ ಏನು? ಅತ್ತಲಿಂದ ವಿಕಟನಗು. ನೋಡಿ ಮೇಡಮ್ ಈವರೆಗೆ ನಾನು ಯಾರಿಗೂ ಮೋಸ ಮಾಡಿದವನಲ್ಲ. ಆದರೆ ಹಣದ ಮಟ್ಟಿಗೆ ಬಾರ್ಗೈನ್ ಇಲ್ಲ. ನೀವು ಹೆದರಬೇಕಾದ ಅಗತ್ಯವಿಲ್ಲ. ಇವತ್ತು ಹಣವಿಲ್ಲದೆ ಏನೂ ನಡೆಯುವುದಿಲ್ಲ. ಆದರೆ ಆಡಿ ತಪ್ಪುವವನಲ್ಲ ನಾನು. ಇನ್ನೂ ನಿಮಗೆ ರಿಯಾಯಿತಿ ಬೇಕೇಬೇಕೆಂದಾದರೆ ನೀವು ನಮ್ಮ ಎಂ.ಡಿ. ಯವರ ಮಗನನ್ನು ಅಶೋಕ್ ಹೋಟೇಲಲ್ಲಿ ಭೇಟಿ ಯಾಗಬೇಕಾಗುತ್ತದೆ. ಅವರ ರೂಮ್ ನಂ.೭೩. ಫೋನ್ ಮಾಡಿ ಖಚಿತಪಡಿಸಿಕೊಂಡೇ  ಹೋಗಿ. ಫುಲ್ ಅಮೌಂಟ್ ಕೊಡೋದಾದರೆ ನಾನೇ ಎಲ್ಲ ಸರಿ ಮಾಡುತ್ತೇನೆ.

ಅವಳು ಫೋನ್ ನೆಂಬರ್ ಬರಕೊಂಡಳು. ಮೂರನೇ ಪ್ರಯತ್ನದಲ್ಲಿ ಸಂಪರ್ಕ ಸಿಕ್ಕಿತು. ತನ್ನ ಪರಿಚಯವನ್ನು ಹೇಳಿಕೊಂಡಳು. :ನಿಮ್ಮ ಫೋಟೋ ಅಪ್ಲಿಕೇಷನ್ ಫಾರಂನಲ್ಲಿ ನೋಡಿದ್ದೇನೆ. ನೀವು ನಾಳೇ ಸಂಜೆ ೬ ಗಂಟಿಗೆ ನೇರವಾಗಿ ಇಲ್ಲಿಗೆ ಬಂದು ಬಿಡಿ. ಆ ಬಗ್ಗೆ ಮಾತಾಡೋಣ. ಬೀ ಬೋಲ್ಡ್” ಎಂದು ಎಂ.ಡಿ.ಯವರ ಮಗ ಧೈರ್ಯ ತುಂಬಿದ. ಅವಳಿಗೆ ಖುಷಿ ಆಯಿತು.

ಮರುದಿನ ಅತ್ಯುತ್ತಮ್ಮ ಸೀರೆಯುಟ್ಟು ಮ್ಯಾಚಿಂಗ್ ಬ್ಲೌಸ್ ತೊಟ್ಟು ಮೇಕಪ್ ಮಾಡಿಕೊಂಡು ಕನ್ನಡಿಯಲ್ಲಿ ಎರಡು ಮೂರು ಬಾರಿ ತನ್ನನ್ನು ತಾನು ನೋಡಿಕೊಂಡು, ಅಪ್ಪ ಅಮ್ಮನಿಗೆ ಇಂಟರ್ವ್ಯೂಗೆ ಹೋಗಿ ಬರುತ್ತೇನೆಂದು ಹೇಳಿ ಹೊರಬಿದ್ದಳು.

ಒಂದು ಆಟೋ ಹತ್ತಿ ಅವಳು ಅಶೋಕ್ ಹೋಟೇಲ್ ಗೆ  ಬಂದಳು.ಅದು ಸ್ಟಾರ್ ಹೋಟೇಲು ಆದುದರಿಂದ ಯಾರೂ ಅವಳನ್ನು ಸಂಶಯದ ದೃಷ್ಟಿಯಿಂದ ನೋಡಲಿಲ್ಲ. ನೇರವಾಗಿ ರೂಮಿಗೆ ಹೋದವಳು ಕಾಲಿಂಗ್ ಬೆಲ್ ಒತ್ತಿದಳು. ದೃಢಕಾಯದ ತರುಣನೊಬ್ಬ ಬಾಗಿಲು ತೆರೆದ. ಅವಳು ಒಳಬರುತ್ತಲೇ ಬಾಗಿಲು ಮುಚ್ಚಿ ಬೋಲ್ಟ್ ಭದ್ರಪಡಿಸಿದ. ಅವಳ ಮುಖದಲ್ಲಿ ಸಂಶಯದ ನೆರಳೊಂದು ಹಾದುಹೋಯಿತು. “ಹೆದರಬೇಡಿ, ಈಗ ಬೇರೆ ಯಾರಿಗೂ ಅಪಾಯಿಂಟ್ ಮೆಂಟ್ ಕೊಟ್ಟಿಲ್ಲ. ಇಲ್ಲಿರೋದು ನಾವಿಬ್ಬರೇ. ಆದರೂ ವೈಟರ್ ತೊಂದರೆ ಮಾಡೋದು ಬೇಡವೆಂದು ಬಾಗಿಲು ಹಾಕಿಕೊಂಡೆ. ಬನ್ನಿ ಮಾತಾಡೋಣ.”

ಅವಳು ಸುತ್ತಲೂ ಕಣ್ಣುಹಾಯಿಸಿದಳು. ರೂಮ್ ವಿಶಾಲವಾಗಿತ್ತು. ಶುಭ್ರವಾಗಿಯೂ ಇತ್ತು. ಅವನನ್ನೊಮ್ಮೆ ದಿಟ್ಟಿಸಿದಳು. ಅವನ ಮುಖದಲ್ಲೊಂದು ನಗು ಇತ್ತು. ಅದು ಸ್ವಾಭಾವಿಕವೋ, ಕುಹಕ ನಗೆಯೋ ಎಂದು ಅವಳಿಗೆ ಅರ್ಥವಾಗಲಿಲ್ಲ. ಅವಳು ಸೋಪಾದಲ್ಲಿ ಕುಳಿತಳು. “ನಿಮ್ಮ ಸಮಸ್ಯೆ ಯೇನು?” ಎಂದವನು ಕೇಳಿದ. “ಒಂದು ಲಕ್ಷರೂಪಾಯಿ ತೀರಾ ಅತಿಯಾಯಿತು ಸರ್. ನಮ್ಮಂಥ ಮಧ್ಯಮ ವರ್ಗೀಯರು ಅಷ್ಟು ಹಣ ಒಮ್ಮೆಲೇ ಎಲ್ಲಿಂದ ತರೋದು” ನೀವು ನಮ್ಮ ಪ್ರೊಡಕ್ಷನ್ ಗೆ ಮಾಡೆಲ್ ಆದರೆ ಕನ್ಸೆಶನ್ನು ಕೊಡಬಹುದು.” ಎಂದ. ಅವಳಿಗೆ ಕಸಿವಿಸಿ ಯಾಯಿತು. ಆ ಕಂಪೆನಿಯ ಪ್ರಾಡಕ್ಟ್ಸ್ ಅಂದರೆ ಸ್ತ್ರೀ ಯರ ಒಳ ಉಡುಪುಗಳು. ತಾನು ಅವುಗಳನ್ನು ಧರಿಸಿ ಪತ್ರಿಕೆ ಗಳಲ್ಲಿ ಕಾಣಿಸಿಕೊಂಡರೆ ಅಪ್ಪ ಅಮ್ಮನಿಗೆ ಹೇಗಾದೀತು. ತುಸು ಹೊತ್ತು ಆಲೋಚಿಸಿ “ನೀವು ಮುಖವನ್ನು ಎಕ್ಸ್ ಪೋಸ್ ಮಾಡದಿದ್ದರೆ ಪರವಾಗಿಲ್ಲ ಸರ್” ಎಂದಳು.

ಹಾಗಾದರೆ ಒಂದು ಟೆಸ್ಟ್ ಮಾಡಿಯೇ ಬಿಡೋಣ. “ನೋಡಿ ಅಲ್ಲಿ ನಮ್ಮ ಪ್ರಾಡಕ್ಟ್ಸ್ ಇದೆ. ಅಲ್ಲಿ ಡ್ರೆಸ್ ಮಾಡಲು ಜಾಗವೂ ಇದೆ. ಒಮ್ಮೆ ಅವನ್ನು ಧರಿಸಿ ಬನ್ನಿ. ಅವಳು ಪೆಚ್ಚಾದಳು. “ಈಗಲಾ?” ಎಂದು ಕೇಳಿದಳು. “ಹೌದು ನಾಡಿದ್ದು ಮೇಕ್ ಅಪ್ ಮ್ಯಾನ್ ಎದುರು ನೀವು ಅವನ್ನು ತೊಟ್ಟು ಬರಬೇಕಲ್ಲಾ. ಈಗ ಇರುವುದು ನಾನೊಬ್ಬನೇ. ನಾನೊಬ್ಬ ಮನುಷ್ಯ.” ಎಂದ.

ಅವಳಿಗೆ ಸ್ವಲ್ಪ ಸಮಾಧಾನವಾಯಿತು. ಅವನು ತೋರಿಸಿದ ಪ್ರಾಡಕ್ಟ್ಸ್ ತೆಗೆದುಕೊಂಡು ಹೋಗಿ ಅವನ್ನು ತೊಟ್ಟುಕೊಂಡಳು. “ಪರವಾಗಿಲ್ಲ ಚೆನ್ನಾಗಿಯೇ ಇವೆ.” ಎಂದುಕೊಂಡಳು. ಆತ ಕರೆದದ್ದು ಕೇಳಿ ಎರಡು ಹೆಜ್ಜಿ ಇಡಬೇಕೆನ್ನುವಷ್ಟರಲ್ಲಿ ಅವನ ಬಲಿಷ್ಟ ಕೈಗಳು ಆಕೆಯನ್ನು ಬಿಗಿದಪ್ಪಿದವು. ಆ ಸ್ಪರ್ಶಕೋ ಆಕೆ ತನ್ನನ್ನೇ ತಾನು ಮರೆತಳು. ಮನಸ್ಸು ಯೋಚಿಸೋ ಶಕ್ತಿ ಕಳಕೊಂಡಿತು. ಆ ಏಕಾಂತತೆಯಲ್ಲಿ ಅವರಿಬ್ಬರೂ ಒಂದಾದರು!

ಅವಳು ನಾಚುತ್ತಾ ಹೊರಬಂದು ತಾನು ತಪ್ಪು ಮಾಡಿದ್ದೇನೆ ಎಂದು ತುಂಬಾ ಚಿಂತಿತಳಾದಳು. ತನಗಿದ್ಯಾವುದೂ ಬೇಡಿತ್ತು ಅನ್ನಿಸಿತು ಆಕೆಗೆ. ತಲೆ ತಗ್ಗಿಸುತ್ತಾ “ಏನೇನೋ ಆಗಿಹೋಯಿತು ಸರ್. ನನಗೆ ಈ ಕೆಲಸ ಬೇಡ. ನಾನು ಮಾಡಲ್ ಆಗಲಾರೆ. ಇನ್ನೆಂದೂ ಯಾವ ಇಂಟರ್ ವ್ಯೂಗೆ ಹೋಗಲಾರೆ. ಇದೇ ಕೊನೆ ನಾನು ಮನೆಯಲ್ಲೇ ಹಾಯಾಗಿರುತ್ತೇನೆ.” ಎಂದು ಅಲ್ಲಿಂದ ಕಾಲ್ತೆಗೆದಳು.

ಅವನು ಅವಳ ಬಳಿ ಬಂದು ಅವಳ ಕೈ ಹಿಡಿದುಕೊಂಡು “ಹೌದು ನೀನು ಕೆಲಸ ಮಾಡಬೇಕಾಗಿಲ್ಲ. ನನ್ನ ಹೆಂಡತಿಯಾಗಿ ಈ ಕಂಪೆನಿಗೆ ಯಜಮಾನಿಯಾಗಿರ್ತೀಯಾ? ಸರಿಯಾ” ಎಂದು ಅವಳ ಕೆನ್ನೆಗೆ ಹೂಮುತ್ತನಿತ್ತ. ಅವಳ ಕಣ್ಣುಗಳಿಂದ ಆನಂದ ಬಾಷ್ಪಗಳು ಉದುರಿದವು!
*****

Latest posts by ಪ್ರತಿಮಾ ಪನತ್ತಿಲ (see all)