ಪ್ರತಿಮಾ ಪನತ್ತಿಲ

#ಸಣ್ಣ ಕಥೆ

ಪಟೇಲರ ಆಸನ ಪ್ರಕರಣ…….

0

ತಳಿರು ತೋರಣಗಳಿಂದ ಸಿಂಗರಿಸಿ, ಅಂಗಳಗಳು ಸೆಗಣಿ ಸಾರಿಸಿಕೊಂಡು, ರಂಗೋಲಿ ಇಕ್ಕಿಸಿಕೊಂಡದ್ದಕ್ಕೆ ಸಾಯಲು ಸಿದ್ಧವಾಗಿದ್ದ ಊರಿಗೆ ಕಾಯಕಲ್ಪ ಬಂದಂತಾಗಿತ್ತು. ವರ್ಷಕೊಮ್ಮೆ ಜಾತ್ರೆಗೆ ಊರಿಗೆ ಯೌವನ ಪ್ರಾಪ್ತವಾಗುತ್ತದೆಯಾದರೂ ಅದು ಇತ್ತೀಚಿಗೆ ತನ್ನ ಆಕರ್ಷಣೆ ಕಳೆದುಕೊಂಡಿತ್ತು. ದೇವಸ್ಥಾನದ ಆಸ್ತಿಯನ್ನೆಲ್ಲಾ ಜನರು ನುಂಗಿ ನೀರು ಕುಡಿದು ಜಾತ್ರೆಯನ್ನು ಕಾಟಾಚಾರಕ್ಕೆ ಹೇಗೆ ಹೇಗೋ ನಡೆಸಿಕೊಂಡು ಹೋಗುತ್ತಿದ್ದರು. ಮೊದಲಾದರೆ ಅದು ಎರಡು ವಾರಗಳ ಭರ್ಜರಿ […]

#ಸಣ್ಣ ಕಥೆ

ಉದ್ಯೋಗ…

0

ಪತ್ರಿಕೆಯಲ್ಲಿ ಆ ಪ್ರಕಟಣೆ ಕಂಡಾಗ ಅವಳಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವನೆ. ಬಿ.ಎ. ಆಗಿ ಮನೆಯಲ್ಲಿ ಒಂದು ವರ್ಷ ಕಳೆದದ್ದು ಒಂದು ನರಕಯಾತನೆ. ಪದವಿ ಮುಗಿಯುತ್ತಲೇ ರತ್ನಗಂಬಳಿ ಹಾಸಿ ತನ್ನನ್ನು ಯಾರಾದರೂ ಕೆಲಸಕ್ಕೆ ಕರೆದುಕೊಳ್ಳುತ್ತಾರೆ ಎಂದವಳು ಕನಸು ಕಟ್ಟಿದ್ದಳು. ಸ್ನೇಹಿತೆಯರೂ ಹೇಳುತ್ತಿದ್ದಳು. ನಿನಗೇನು ಒಳ್ಳೆ ಮಾಡಲ್ ಹಾಗಿದ್ದೀಯಾ. ಯಾರು ಬೇಕಾದರೂ ಕೆಲಸ ಕೊಟ್ಟಾರು. ಮನೆಯಲ್ಲಿ […]

#ಸಣ್ಣ ಕಥೆ

ನದಿಯ ಕೆನ್ನೆ……

0

ಅವನಿಗೆ ದಿನಾ ಸಾಯಂಕಾಲದ ಹೊತ್ತು ಮುಳುಗಿತ್ತಿರುವ ಸೂರ್ಯನನ್ನು ಸೇತುವೆಯ ಮೇಲಿಂದ ನೋಡುವುದು ತುಂಬಾ ಇಷ್ಟ. ಆ ನದಿ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ಪಶ್ಚಿಮದ ಗುಡ್ಡದ ಅಂಚಿನಲ್ಲಿ ಸೂರ್ಯ ಕಂತುವಾಗ ಕೆಂಪನೆ ಕಿರಣಗಳು ನೀರಿನ ಮೇಲೆ ಪ್ರತಿಫಲಿಸಿ ದಿವ್ಯತೆಯನ್ನು ಮೂಡಿಸುತ್ತವೆ. ಆ ಹೊತ್ತು ಸಂಜೆ ಹಕ್ಕಿಗಳು ವಿಭಿನ್ನ ಸ್ವರ ಹೊರಡಿಸುತ್ತವೆ. ಅವಕ್ಕೂ ಗೊಡಗಳಿಗೆ ಮರಳಲು ಇಷ್ಟವಿಲ್ಲವೇನೋ? ಆಕಾಶದಲ್ಲಿ ಬೆಳ್ಳಕ್ಕಿಗಳು […]

#ಸಣ್ಣ ಕಥೆ

ನಿನ್ನೇಕೆ ಪ್ರೀತಿಸಿದೆ?

0

ನನ್ನಲ್ಲೇನು ಕಂಡು ನೀ ನನ್ನ ಇಷ್ಟಪಟ್ಟೆ? ನೆನಪಿದೆಯಾ ಮನು…..ನೀನಂದು ನನ್ನಲಿ ಏಕಾ‌ಏಕಿ ಪ್ರಶ್ನಿಸಿದಾಗ ನಾ ಏನೂ ಹೇಳಲಾರದೆ ಸುಮ್ಮನಾಗಿದ್ದೆ. ಆದ್ರೆ ಈಗ ಹೇಳ್ತಿದ್ದೇನೆ ಕೇಳು. ಜೀವನದಲ್ಲಿ ಮುನ್ನುಗ್ಗುವಂತೆ ಧೈರ್ಯ ತುಂಬುವ ನಿನ್ನ ಪರಿ, ಪರರ ಬಗ್ಗೆ ನಿನಗಿರೋ ಅಭಿಮಾನ, ಒಳ್ಳೆಯತನವನ್ನು ಗೌರವಿಸೋ ಆ ದೊಡ್ಡ ಗುಣ. ಇವೆಲ್ಲಾ…..ನಾನಿನ್ನ ಮೆಚ್ಕೊಳ್ಳೋಕೆ ಮೊದಲ ಕಾರಣ ಮನು……ಮತ್ತೆ ಇದ್ದೇ ಇದೆಯಲ್ಲಾ […]

#ಸಣ್ಣ ಕಥೆ

ಕೂಡದ ಕಾಲಕೆ……..

0

ಅವಳು ಹಾಗೆ ಕೂತು ಎಷ್ಟು ಹೊತ್ತಾಗಿತ್ತೋ? “ನೀನು ತೋಟಕ್ಕೆ ಹೋಗಿ ಹುಲ್ಲು ತಂದು ಹಸುಗಳಿಗೆ ಹಾಕು. ಹಾಗೆ ಕುಕ್ಕೆ ತೆಗೆದುಕೋ. ಅಡಿಕೆ ಸಿಕ್ಕಿದ್ದನ್ನು ಅದರಲ್ಲಿ ಹಾಕಿಕೊಂಡು ಬಾ. ನನಗೆ ತುಂಬಾ ಕೆಲಸವುಂಟು.” ಅಪ್ಪ ಹಾಗೆ ಹೇಳುತ್ತಿರುವುದು ಅದು ಎಷ್ಟನೆಯ ಬಾರಿಯೋ? ತೋಟಕ್ಕೆ ಹೋಗಲು ತನಗೂ ಇಷ್ಟವೇ. ಎಳೆಯವಳಿದ್ದಾಗ ತೆಂಗಿನ ಮರ ಹತ್ತಲು ಯತ್ನಿಸಿ ಬಿದ್ದದ್ದು ಎಷ್ಟು […]

#ಸಣ್ಣ ಕಥೆ

ಗೆದ್ದವರು……….

0

ಅದು ಊರನ್ನು ದಂಗುಬಡಿಸುವ ವಿಷಯವಾಗಿತ್ತು. ಆಶಾ ಮತ್ತು ರಮೇಶ ಮದುವೆ ಮಾಡಿಕೊಂಡರಂತೆ ಎಂಬ ಸುದ್ದಿ ಅದು. ಅಕ್ಕಪಕ್ಕದ ಮನೆಯ ಆಶಾ ಮತ್ತು ರಮೇಶ ಒಟ್ಟಿಗೆ ಬೆಳೆದವರು. ವೈದಿಕರ ಮನೆಯ ರಮೇಶ ಮಾಂಸ ಮಡ್ಡಿ ತಿನ್ನುವ ಗೀತಾಳ ಮನೆಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವಾಗ ಅವನಪ್ಪ ಹೆದರಿದ್ದರು, ಎಲ್ಲಿ ಹುಡುಗ ಮಾಂಸ ಮಡ್ಡಿ ತಿನ್ನುತ್ತಾನೆಂದು ಹೆದರಿಕೆ ಯಲ್ಲಿ. ಆಶಾ […]

#ಸಣ್ಣ ಕಥೆ

ಅನೂಹ್ಯ…….

0

ಗಂಗಾಧರ ಮಾಸ್ತರರು ಆ ಊರಿಗೆ ವರ್ಗವಾಗಿ ಬಂದ ಬಳಿಕ ಊರಿನ ವಾತಾವರಣವೇ ಬದಲಾಗಿ ಹೋಗಿತ್ತು. ಮಕ್ಕಳ ಪಾಲಿಗೆ ಅವರು ಶಿಕ್ಷೆ ಕೊಡುವ ಅಧ್ಯಾಪಕರಾಗಿರಲಿಲ್ಲ. ಪ್ರೀತಿಯಿಂದ ಹಾಡಿ ಕುಣಿದು ಪಾಠ ಹೇಳಿಕೊಡುವುದು ಅವರ ರೂಢಿ. ಸದಾ ಹಸನ್ಮುಖದ ಗಡ್ಡ ಮೀಸೆ ಎರಡೂ ಬೋಳಿಸಿ ಹಿಂದಿ ಸಿನೆಮಾ ನಟರ ಹಾಗೆ ಕಾಣುವ ಗಂಗಾಧರ ಮಾಸ್ತರರೆಂದರೆ ಹರೆಯದ ಹೆಣ್ಣು ಮಕ್ಕಳಿಗೆ […]

#ಸಣ್ಣ ಕಥೆ

ಕರಳಿನ ಕೂಗು…..

0

ಆಶ್ರಮದ ಮೂಲೆಯೊಂದರಲ್ಲಿ ಒಂದೆಡೆ ದೃಷ್ಟಿ ನೆಟ್ಟು ಕುಳಿತಿದ್ದ ಆ ಮಧ್ಯ ವಯಸ್ಕಳನ್ನು ಕಂಡಾಗ ಏನೋ ವಿಶೇಷ ಆಕರ್ಷಣೆ. ಜೊತೆಗೆ ಮನದೊಳಗೆ ಮರುಕ. ನನ್ನ ಕಾಲುಗಳು ಆಕೆಯತ್ತ ಸೆಳೆದವು. ನನ್ನನ್ನು ನೋಡಿ ಅವಳ ಮುಖದಲ್ಲಿ ಗಾಬರಿ! ನಾನು ಸಮಾಧಾನದ ಸ್ವರದಲ್ಲಿ ನನ್ನ ಪರಿಚಯ ಹೇಳಿಕೊಂಡೆ. ಆಕೆಯ ಮುಖ ಅರಳಿತು.”ಮರೆತೇ ಬಿಟ್ಟಿದ್ದೆ ನಿನ್ನನ್ನು ಎಷ್ಟು ವರ್ಷವಾಯಿತು ನೋಡಿ. ನಿನ್ನ […]

#ಸಣ್ಣ ಕಥೆ

ಸಾವಿರ ಕ್ಯಾಂಡಲ್ಲಿನ ದೀಪ……

0

ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರೆ, ’ಏನು ಜಲಜಕ್ಕಾ, ಬಹಳ ಖುಷಿಯಲ್ಲಿರುವಂತಿದೆ’ ಎಂದು ಕೇಳುವುದುಂಟು. ಆಗ ಅವಳು ನಗುತ್ತಾ, ’ಇದು ನಿಮ್ಮನ್ನು ನೋಡಿದ ನಂತರ ಆದ ಖುಷಿ’ ಎಂದು ಉತ್ತರಿಸುತ್ತಿದ್ದಳು. […]

#ಸಣ್ಣ ಕಥೆ

ಸಂಬಂಧ…..

0

ಮಗ ಪ್ರದೀಪ್ ನಿಂದ ಆ ಸುದ್ದಿ ತಿಳಿದ ಬಳಿಕ ಪಾರ್ವತಮ್ಮನ ಕಣ್ಣಿಗೆ ನಿದ್ರೆ ಸರಿಯಾಗಿ ಹತ್ತಿರಲಿಲ್ಲ. ಏಕೈಕ ಮಗನ ಮನಸ್ಸು ನೋಯಿಸಲೂ ಆಕೆಗೆ  ಇಷ್ಟವಿರಲಿಲ್ಲ. ಹಾಗಂತ ತನ್ನ ನಂಬಿಕೆಗಳನ್ನು ಬಿಟ್ಟುಬಿಡಲು ಆಕೆ ಸಿದ್ಧಳಿರಲಿಲ್ಲ, ಮತ್ತೆ ಮತ್ತೆ ಮಗನ ಮಾತುಗಳು ಅವಳ ಕಿವಿಗಳಲ್ಲಿ ಅನುರಣಿಸುತ್ತಿದ್ದವು. ಇಷ್ಟಕ್ಕೂ ವಯಸ್ಸಿಗೆ ಬಂದ ಮಗ ಮದುವೆ ಯಾಗಲು ಹೊರಟಿದ್ದು ತಪ್ಪಲ್ಲ. ಆದರೆ […]