ಪ್ರೇಮಿಯೊಬ್ಬಳು ಯುದ್ಧ ರಂಗದಲ್ಲಿ ಮಡಿದ ತನ್ನ ಪ್ರಿಯಕರನ ಕಳೇಬರವನ್ನು ಹುಡುಕುತ್ತಾ ಬರುತ್ತಾಳೆ. ಶರತ್ಕಾಲದ ಹಳದಿ ಕೆಂಪು ಹಣ್ಣೆಲೆಗಳು ಉದರಿ, ಭೂಮಿಗೆ ಒಣಗಿದೆಲೆಯ ಹೊದಿಕೆ ಹೊದಿಸಿ ಬೋಳು ಮರಗಳು ನಿರ್ಜೀವವಾಗಿ ನಿಂತಿವೆ. ಪ್ರೇಮಿ ಎಲೆ ಎಲೆಯ ಗುಪ್ಪೆಯನ್ನು ಸರಿಸಿ ತನ್ನ ಪ್ರಿಯಕರನಿಗಾಗಿ ಹುಡುಕುತ್ತಾಳೆ. ಎಲೆಗಳ ಚಾದರದ ಕೆಳಗೆ ಮಡಿದ ಸೈನಿಕರ ಕೈಗಳಲ್ಲಿದ್ದ ಬಂದೂಕುಗಳು ಮಾತ್ರ ಕಾಣುತ್ತವೆ. ಬೋಳು ಮರಗಳ ಮಧ್ಯೆ ತನ್ನ ಬಾಳಿನ ಗೋಳನ್ನು ತಡೆಯಲಾರದೆ ಕಣ್ಣೀರು ಸುರಿಸುತ್ತಾ ಬರುವಾಗ ಎದುರು ಹರಿದು ಬರುತ್ತದೆ ಒಂದು ಜೀವ ನದಿ. ಪ್ರೇಮಿ ಅಗಲಿಕೆ ತಾಳಲಾರದೆ ನದಿಗೆ ಹಾರಿದಾಗ ತೇಲಿಬಂದು ಅವಳನ್ನು ಅಪ್ಪುತ್ತದೆ ಸಾವನ್ನಪ್ಪಿದ ಅವಳ ಪ್ರಿಯಕರನ ಕಳೇಬರ. ಜೀವ ತುಂಬಿದ ಹರಿಯುವ ನದಿಯಲ್ಲಿ ಸಾವು ನೋವು ಎರಡು ಒಂದಾಗಿ ಪ್ರೇಮಿಗಳು ತೇಲುತ್ತಾ ಹೋಗುತ್ತಾರೆ.
*****