ದೇವಸ್ಥಾನಗಳಲ್ಲಿ ಕೊಟ್ಟ ಕುಂಕುಮವನ್ನು, ಕುಂಕುಮ ಭರಣಿಯಲ್ಲಿ ತುಂಬಿಡುತಿದ್ದಳು ಆಕೆ. ಮನೆಗೆ ಬಂದ ವಿಧವೆಯರಿಗೆ ನಿಸ್ಸಂಕೋಚವಾಗಿ ಉದಾರ ಮನಸ್ಸಿನಿಂದ ದೇವರ ಕುಂಕುಮ ತೆಗೆದುಕೊಳ್ಳಿ ಎನ್ನುತ್ತಿದ್ದಳು. ಅವರನ್ನು ಬೀಳ್ಕೊಡುವಾಗ ಅವರು ಕುಂಕುಮ ಪ್ರಸಾದದೊಂದಿಗೆ ವೀಳ್ಯ ತೆಗೆದುಕೊಂಡು ಕಳೆದು ಹೋದ ಭಾಗ್ಯ ಸಿಕ್ಕಿತೆಂದು ಮುಗುಳು ನಗುತ್ತಾ ಹೋಗುತ್ತಿದ್ದರು. ದೇವರ ಕುಂಕುಮದಿಂದ ಒಂದು ಜೀವಕ್ಕೆ ಸಾಂತ್ವನ ನೀಡುವುದು ಆಕೆಗೆ ಸಂತಸವಾಗಿತ್ತು.
*****