ಹಸಿವು ರೊಟ್ಟಿಗಾಗಿ
ರೊಟ್ಟಿ ಹಸಿವಿಗಾಗಿ
ಕಾಯುವುದು ಎಂದೂ
ಒಂದೇ ಅಲ್ಲ.
ಕಾಯುವಿಕೆಯ ಅಂತರ
ಅರಿವಾಗಿ ಕಂದಕ
ತುಂಬಿದರೆ ಸಂಗತ
ತುಂಬದಿದ್ದರೆ ಅದರದರ
ಪರಿಧಿಯಲೇ ಅಸ್ತಂಗತ.
*****