Kavana

#ಹನಿಗವನ

ಜಯದ ಮಾಲೆ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಜೀವನದ ಹಾದಿಯಲ್ಲಿ ನೂರೆಂಟು ನೋವು ಎದೆಗುಂದದೆ ನಡೆದರೆ ಇಲ್ಲಾ ಸಾವು ಸಾವಿಗೆ ಹೆದರಿ ಸೇರಬಾರದು ಮೂಲೆ ಎದುರಿಸಿ ನಡೆದರೆ ಜಯದ ಮಾಲೆ *****

#ಕವಿತೆ

ಒಂದು ಹಣತೆ ಸಾಕು

0

ಒಂದು ಹಣತೆ ಸಾಕು ಮನೆಯ ಬೆಳಗಲು ಕೋಟಿ ಕಿರಣಗಳೆ ಬೇಕು ತಾಯಿನಾಡ ಬೆಳಗಲು || ಕೋಟಿ ಕಿರಣಗಳಲಿ ಬೇಕು ಸ್ವಚ್ಛಂದ ಮನಸ್ಸು ಮನಸ್ಸುಗಳಿಗೆ ಬೇಕು ತಾಯಿ ನುಡಿ ಆರಾಧಿಸುವ ಮನಸು || ನಮ್ಮ ಮನೆ ಅಲ್ಲ ಇದು ನಿಮ್ಮ ಮನೆ ಅಲ್ಲ ಒಂದಾಗಿ ಬಾಳುವ ನಮ್ಮೆಲ್ಲರ ಮನೆ ನಮ್ಮ ತಾಯಿ ಇವಳು ನಿಮ್ಮ ತಾಯಿ ಎಂದಲ್ಲ […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೨

0

ಎಂಜಲು ಮೆತ್ತಿ ಮಲಿನಗೊಳುವ ರೊಟ್ಟಿ ಮೈಲಿಗೆ. ಎಂಜಲೊಳಗೆ ಹಾಡಿ ಕುಣಿದು ಕುಪ್ಪಳಿಸುವ ಹಸಿವು ಮಡಿ ಮಡಿ. ವ್ಯಾಖ್ಯೆಯೂ ಪ್ರಭುತ್ವದ ಮೂಗಿನ ನೇರಕ್ಕೇ. *****

#ಕವಿತೆ

ನಾನು ಅಂಧನಾಗಿ

0
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)

ನಾನು ಅಂಧಕನಾಗಿ ಜನಿಸಿರಲುಬಹುದು ಅದಕೆ ಕಾರಣಗಳೇನೇ ಇರಲುಬಹುದು| ಆದರೆ ಎನಗೆ ಬದುಕಲು ಅವಕಾಶದ ನೀಡಿ|| ಅನುಕಂಪದ ಅಲೆಗಿಂತ ಸ್ವಾಭಿಮಾನ ಒಳಿತು ಆತ್ಮಾಭಿಮಾನ ಹಿರಿದು ಅದಕೆ ನೀರೆರೆದು ಅಂಧಕಾರವ ಹೊಡೆದೋಡಿಸಿ|| ಭಿಕ್ಷೆ ಬೇಡಲೆನಗೆ ಮನಸಿಲ್ಲಾ ಹಣದ ಭಿಕ್ಷೆ ಅಲ್ಪತೃಪ್ತಿ ಜ್ಞಾನಧೀಕ್ಷೆ ಮಹಾಶಕ್ತಿ| ಕೈಯಲಾಗುವ ಕಾಯಕವ ಮಾಡಿ ಬದುಕಲಿಚ್ಚೆಯುಳ್ಳವರಿಗೆ ಅನುಭವಗಳಿಸೆ ಅವಕಾಶ ನೀಡಿ| ಹರಸೆಮ್ಮ ಅಭಿಲಾಶೆಯ ಪೂರೈಸಿರೆಮ್ಮ ಮನದಿಚ್ಚೆಯ|| […]

#ಕವಿತೆ

ಕದನ ವಿರಾಮದ ಮಾತು

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹಣ್ಣು ತಿನ್ನುವುದಿರಲಿ ನಿನ್ನ ಸ್ನೇಹಕ್ಕೆ ಸೋತು ಮಣ್ಣು ತಿಂದೇನು ಅಂದಿದ್ದೆ, ಅಲ್ಲವ ಹೇಳು? ಅಂದಿದ್ದೆ ಹೌದು ಒಂದಾನೊಂದು ಕಾಲದಲಿ ಬುದ್ದಿಯಿದ್ದದ್ದೆಲ್ಲ ಆಗಿನ್ನು ಬಾಲದಲಿ ಕೈಯಾರೆ ಬೆಳೆಸಿದ್ದ ಚಂದ್ರ ಹಲಸಿನ ಗಿಡ ಬುಡಕ್ಕೆ ಗೆದ್ದಲು ಹಿಡಿದು ಒಲೆಗೆ ಬಿದ್ದಿದೆ ಈಗ ಇದ್ದಿಲಾಗುತ್ತ, ಹೂಬಿಟ್ಟ ಸ್ನೇಹ ಛೂಬಿಟ್ಟ ನಾಯಾಗಿ ಹಾರಿ ಬರುತಿದೆ ಮೇಲೆ ಜೋರು ಬೊಗಳುತ್ತ ಸತ್ತ ಗಾಯದ […]

#ಕವಿತೆ

ಕವಿಯುತಿದೆ ಮೋಡ

0

ಕವಿಯುತಿದೆ ಮೋಡ ಸುಳಿಗಾಳಿ ಕಂಪ ಹೀರಿ ನನ್ನೆದೆಯ ಭಾವ ತುಂಬಿ ಚದುರಿದೆ ಮೋಡ ಬಾನಲಿ || ಕರಗುತಿದೆ ಮೋಡ ಸುಳಿಗಾಳಿ ತಂಪಲೆರೆದು ನನ್ನದೆಯ ಕಾಮನೆ ಹೊರಹೊಮ್ಮಿ ಚಿಮ್ಮಿ || ಹಸಿರಾಗುತಿದೆ ನೆಲವು ಬಣ್ಣಗಳ ತುಂಬಿ ಚೆಲ್ಲಿ ಭಾವ ಸಂಗಮದಿ ನಿಶೆಯಿಂದ ಹಸಿರು ಉಸಿರಾಗಿ || *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೧

0

ರೂಹುಳ್ಳ ರೊಟ್ಟಿಗೊಂದೇ ಅರ್ಥ ನಿರಾಕಾರ ಅವಿನಾಶಿ ಹಸಿವೆಗೆ ನೂರು ಪರಮಾರ್ಥ ಈ ಅಂತರಗಳ ಅರಿಯುವ ಕ್ಷಣ ರೊಟ್ಟಿಗೆ ಅಲ್ಲೋಲಕಲ್ಲೋಲ. *****

#ಕವಿತೆ

ಅಲ್ಪ ತೃಪ್ತನಾಗಿರೆ

0
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)

ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ ಬರೀ ಕೆಡಕು|| ಅತಿಯಾದ ಆಸೆ ತರುವುದು ನಿರಾಸೆ| ಬರೀ ಹಗಲುಗನಸು ನೋಡಲಷ್ಟೇ ಸೊಗಸು ನಿಜವಾಗದೆಂದೆದಿಗೂ ಸತ್ಯಕ್ಕೆ ದೂರವಿಹುದು|| ಆಸೆಗಳಿರಬೇಕು ಈಡೇರುವಷ್ಟು, […]