ಓ ಭಾನು
ಓ ಹಕ್ಕಿ
ನೀಲಾಕಾಶದ ಚುಕ್ಕಿ
ಸೆರೆಯಾಗಿಹೆ ನಾನು ನಿನ್ನಲ್ಲಿ
ಬಾಳ ಕವನ ಹಂದರದಲ್ಲಿ
ಆ ಎಲೆ
ಈ ಹೂವು
ಎಲೆಮರೆಯಾಗಿ ನಾನು
ಮುಡಿದಾ ಮಲ್ಲಿಗೆ ಎಳೆಯಲ್ಲಿ
ಒಂದೊಂದಾಗಿ ಸೇರಿ ನಲಿಯೋಣ
ಆ ನೆನಪು
ಈ ಸೊಗಸು
ತಂಗಾಳಿಯಲಿ ತೇಲಿ
ಉಯ್ಯಾಲೆಯಂತಾಡಿ
ಚೈತ್ರದಂಗಳದಲ್ಲಿ ಸೇರಿದಾಡೋಣ
ಆ ಭಾನು
ಈ ಭೂಮಿ
ಅನಂತ ಅನಂತತೆಯಲ್ಲಿ
ಮೂಡಣದ ಇಳೆಯಲಿ
ಹಸಿರನುಟ್ಟ ಸೆರೆಯಲ್ಲಿ ಕುಣಿಯೋಣ
ಋತುಗಳಾಗಿ ನಾವು
ನೀಲಾಕಾಶದ ಚುಕ್ಕಿಯಲ್ಲಿ
ಸೆರೆಯಾಗಿ ಬಾಳ ಕವನದಾ
ಪ್ರೀತಿ ಸುಧೆಯಲಿ ಆನಂದ ಹೊಂದೋಣ
*****