ನೀರಲಿ ಈಜುವ ಮೀನು ನೀರಿನ ರಾಣಿಯು ನೀನು ನೀರಲಿ ಜೀವನ ನಿನ್ನದು ಮುಟ್ಟಿ ನೋಡಲು ಓಡಿ ಹೋಗುವೆ ಹಿಡಿದು ಹೊರಗೆ ಹಾಕಲು ಜೀವ ಬಿಡುವೆ *****...

ಅಮ್ಮ ನನಗೆ ಬಂದೂಕು ಕೊಡಿಸು ನಾನು ಸೈನಿಕನಾಗುವೆ ದೇಶ ಸೇವೆ ಮಾಡುವೆ ವೀರನಾಗಿ ಹೋರಾಡುವೆ ಶತೃಗಳನು ಸದೆ ಬಡಿಯುವೆ ತಾಯಿ ಭಾರತಿಯ ಉಳಿಸುವೆ *****...

ಮೋಡಣ್ಣ ಏಕೆ ಹೀಗೆ ನೀನಣ್ಣ ಮಳೆಯನು ಸುರಿಸು ಬೇಗನೆ ನೀರು ಇಲ್ಲದೆ ಹೊಲವು ಒಣಗಿದೆ ಭೂಮಿಯ ದಾಹ ತೀರಿಸು ಬಾರಣ್ಣ *****...

ಚಳಿ ಚಳಿ ಚಳಿಗಾಲ ಬಂದೇ ಬಂತು ಅಣ್ಣ ಕಡಲೆ ಬೀಜ ತಿನ್ನಲು ಬಲು ರುಚಿ ಅಣ್ಣ ಬೆಚ್ಚನೆ ಟೋಪಿ, ರುಮಾಲು ಹೊದಿಕೆ ಹೊದ್ದು ಮಲಗುವೆ ನಾನಣ್ಣ *****...

ದೋಣಿ ದೋಣಿ ದೋಣಿ ನೀರಲಿ ಹೋಗುವ ದೋಣಿ ಅಂಬಿಗನಿರುವ ದೋಣಿ ಹರಿಗೋಲ ತೇಲುವ ದೋಣಿ ನನಗೂ ನಿನಗೂ ದಡ ಸೇರಿಸುವ ದೋಣಿ *****...