ಉತ್ಸವ ಉತ್ಸವ
ನಾಡ ದೇವಿಯ ಉತ್ಸವ
ಕರುನಾಡ ತಾಯಿಯ ಉತ್ಸವ
ಬೆಡಗು ಬಿನ್ನಾಣದ ಉತ್ಸವ || ಉತ್ಸವ ||
ಈ ಉತ್ಸವ ನಾಡೋತ್ಸವ
ನಿನಗುತ್ಸವ ರಾಜ್ಯೋತ್ಸವ
ದೀಪ ದೀಪಗಳ ದೀಪೋತ್ಸವ
ಮಹೋನ್ನತವು ಮಹೋತ್ಸವ || ಉತ್ಸವ ||
ಅರುಣ ದೇವಿಗೆ ಅರುಣೋತ್ಸವ
ಪುಷ್ಪಾಂಜಲಿಗೆ ಪುಷೋತ್ಸವ
ಕನಕಾಂಬೆಗೆ ಕನಕೋತ್ಸವ
ಜಗದಾಂಬೆಗೆ ಜನೋತ್ಸವ || ಉತ್ಸವ ||
ಭುವನ ಮಂಗಲೆಗೆ ಭುವನೋತ್ಸವ
ವೀರರಮಣಿಗೆ ವೀರೋತ್ಸವ
ಮಂಗಳವು ನಿನಗೆ ಸುಮಂಗಲಿಯರು
ಬೆಳಗುವ ಸೌಭಾಗ್ಯೂತ್ಸವ || ಉತ್ಸವ ||
*****