ಭವ್ಯ ಭಾರತೀಯ
ತನುಜಾತೆ ಮಣಿರತ್ನ ಪುತ್ಥಳಿ ನೀ
ಗುಣಮಾನ ಸಜ್ಜನೈಕ
ಚೂಡಾಮಣಿಯಾಗಿ ನಿಂದವಳು
ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ

ತ್ಯಾಗ ಭಾವ ಚಿತ್ತಗಂಗೆ ಎನಿಸಿ
ಕಲ್ಪಲತೆ ವೀರ ಮಾತೆ ತಪೋವಿರಾಜಿತೆ
ಜಿನಧರ್ಮಪರಾಯಕೆ ಉದಾರ
ಚುತುರ್ವಿಧ ದಾನ ಗೌರವ ಸಂಜಾತೆಯಾಗಿ
ನಿಂದವಳು ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ

ಹೆಣ್ತನದ ಹೆಗ್ಗಳಿಕೆಯ ಖಣಿ
ಸ್ತ್ರೀ ಸ್ವಾತಂತ್ರ್ಯ ಸಮತೆಗೆ ಹುರುಪ ತುಂಬಿ
ಶತಶತಮಾನದ ವರ್ತಮಾನ ಗತಕಾಲದವಳ
ಸ್ಫೂರ್ತಿಯಾಗಿ ನಿಂದವಳು
ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ

ನಾಗದೇವನ ಸತಿ ಕಲೌಪಾಸಕಿಯೇ
ಕವಿರನ್ನನ ಪೊರೆದು ಕವಿ ಕಾವ್ಯ ಕುಂಚದಲಿ
ರಾರಾಜಿಸಿದ ಶ್ರೀಗಂಧ ಚಂದನಾ ಕುಂತಳೆ
ಚಕ್ರವರ್ತಿತಾನ್ ಹಿರಿಮೆಗೆ ಗರಿಗೈದು
ಲಕ್ಕುಂಡಿಯ ಶ್ವೇತ ನಕ್ಷತ್ರ ತಾರೆಯಾಗಿ ನಿಂದವಳು
ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ
*****