ಜೀವನವೊಂದು ಭವ ಸಾಗರವು
ಈ ಭವ ಸಾಗರದಲಿ ದಾಟಿ ಹೋಗು
ಪರಮಾತ್ಮನ ನಾಮದಲಿ ಈಜಬೇಕು
ಮುಕ್ತಿ ದಡವನ್ನು ಸೇರಿ ಹೋಗು
ಪ್ರಾಣಾಯಾಮದಲಿ ಕೈ ಕಾಲು ಆಡಿಸು
ಆಗಾಗ ಧ್ಯಾನದಲಿ ಮುಳುಗಬೇಕು
ತನುವಿನ ವಿಷಯ ಕೆಸರು ತೊಳೆಯಬೇಕು
ಮನದಂಬರದಿಂದ ಶುದ್ಧ ಗೊಳಿಸಬೇಕು
ಸತ್ಯದ ವಾಣಿಯಿಂದ ಹುಟ್ಟು ಹಾಕು
ಪ್ರಾಮಾಣಿಕ ತಳ ಆಗಿರಲಿ ಗಾಢ
ಕಾಮಕಾಂಚನ ಬಿರುಗಾಳಿಯತ್ತ ಬೇಡ
ರಾಮನಾಮ ಆಳವಿಲ್ಲದತ್ತ ಜಾರಬೇಡ
ದುರಾಸೆ ಮೊಸಳೆಯತ್ತ ಹೋಗದಿರು
ಲೋಭ ತಿಮಿಂಗಿಲನತ್ತ ದುಡುಕದಿರು
ಆ ಶಾಂತ ನೀರಿನ ಸುಖ ನಂಬದಿರು
ಮುಂದೆ ಬರುವಸು ನೀರ ಸುಳಿಗೆ ನೀರಿದ ಒಡ್ಡದಿರು
ನಿನ್ನ ನಂಬಿದವರಿಗೆಲ್ಲ ಕೈ ನೀಡಿ ಸಾಗು
ಅವರಿಗೆಲ್ಲ ಎಚ್ಚರದಲ್ಲಿ ಇರಲು ಹೇಳು
ಸಾಗರವನ್ನು ದಾಟಿ ದಡ ಸೇರಿದರಾಯ್ತ
ಮಾಣಿಕ್ಯ ವಿಠಲನ ನಂಬಿ ಬಾಳು
*****