ವಾಗ್ದೇವಿಯು ಚಂಚಲನೇತ್ರರ ಸಂಗಡ ಜಗಳ ಮಾಡಿ ಬೇರೆ ಬಿಡಾರ ಮಾಡಿಕೊಂಡಿರುವ ಸುದ್ದಿಯು ಕುಮುದಪುರದಲ್ಲಿ ಹಬ್ಬಿ ಬಹು ಜನರಿಗೆ ವಿಸ್ಮಯವನ್ನುಂಟುಮಾಡಿತು. ಭೀಮಾಜಿಗೆ ಈ ವರ್ತಮಾನವು ಆರಂಭದಲ್ಲಿ ಸಟೆಯಾಗಿ ಕಂಡರೂ ವಿಚಾರಿಸಿ ತಿಳಿಕೊಂಡಾಗ ಅದರ ನಿಜತ್ವದ ಕುರಿತು ಸಂದೇಹ ಬರಲಿಲ್ಲ. ಅವನು ಸಾಯಂಕಾಲ ಸಮಯದಲ್ಲಿ ವಾಗ್ದೇವಿ ಯನ್ನು ಅವಳ ಬಿಡಾರದಲ್ಲಿ ಕಂಡು ಜಗಳದ ಮೂಲವನ್ನು ಕೇಳಿ ತಿಳಿದ ಮೇಲೆ ಅವಳ ಉದ್ದೇಶ ನೆರವೇರುವದಕ್ಕೆ ತನ್ನ ಪೂರ್ಣ ಸಹಾಯ ಉಂಟೆಂದು ಅವಳ ಮನಸಿಗೆ ದೃಢಪಡಿಸಿ ಶಾಬಯ್ಯಗೆ ಈ ವಿಶೇಷ ವರ್ತ ಮಾನವನನ್ನು ತಿಳಿಸಿದನು. ವಾಗ್ದೇವಿಯ ಮೇಲೆ ಅತಿಶಯ ಅನುರಕ್ತಿ ಇರುವ ಈ ದೊಡ್ಡ ಉದ್ಯೋಗಸ್ಥನು ಅವಳನ್ನು ಕಾಣಲಿಕ್ಕೆ ಅಪೇಕ್ಷೆಯುಳ್ಳ ನಾಗಿ ರುವನೆಂದು ಭೀಮಾಜಿಯ ಪರಿಮುಖ ತಿಳಿಸುತ್ತಲೇ ಅವಳು ಪ್ರೀತಿಯ ವಸ್ತು ಗಳನ್ನು ಹಿಡಿಸಿಕೊಂಡು ಕತ್ತಲೆಯ ಸಮಯದಲ್ಲಿ ಅವನನ್ನು ಕಂಡು ಕಣ್ಣೀ ರಿಟ್ಟು ಸಕಲ ವೃತ್ತಾಂತವನ್ನು ಆರುಹಿದಳು.
ಶಾಬಯ್ಯನು ರೇಗಿದನು. “ಹೆದರಬೇಡ; ಸರ್ವ ಅಭ್ಯಂತರಗಳನ್ನು ನಿವಾರಣೆ ಮಾಡಿ ಕೊಡುವೆನು” ಎಂದು ಆವಳಿಗೆ ಪೂರ್ಣವಾಗಿ ನಂಬಿಕೆ ಕೊಟ್ಟು ಮನೆಗೆ ಮರಳಿ ಹೋಗಿಬಿಟ್ಟನು. ವಾಗ್ದೇವಿಯ ಖತಚಿಂತಕರಲ್ಲಿ ಪ್ರಥಮಸ್ಥಾನವನ್ನು ಹೊಂದಿದ ಬಾಲಮುಕುಂದಾಚಾರ್ಯನು ಕೆಲವು ವರ್ಷಗಳಿಂದ ಅಪಸ್ಮಾರ ವ್ಯಾಧಿ ಪೀಡಿತನಾದ ದೆಸೆಯಿಂದ ಅವನನ್ನು ನೋಡಲಿಕ್ಕೆ ವಾಗ್ದೇವಿಗೆ ಸಂದರ್ಭವಾಗದೆ ಅವರೊಳಗಿನ ಮಿತ್ರತ್ವವು ಅಂತ್ಯ ವಾದಂತಾಯಿತು. ಭೀಮಾಚಾರ್ಯನು ವೃದ್ಧಾಪ್ಯದಿಂದ ಮನೆ ಬಿಟ್ಟು ಹೊರಡುವ ಮನಸಿಲ್ಲದವನಾಗಿರುವ ಪ್ರಯುಕ್ತ ಅವನೊಬ್ಬನಿಂದಲೇ ಕಾರ್ಯ ಸಾಧನೆಯಾಗುವ ಆಶೆಯು ವ್ಯರ್ಥವಾದುದರಿಂದಲೂ ಅವನ ಒತ್ತಾಸೆಯನ್ನು ವಾಗ್ದೇವಿಯು ಅಪೇಕ್ಷಿಸಲಿಲ್ಲ.. ಕಾರಭಾರಿಯ ಮತ್ತು ಕೊತ್ವಾಲನ ಪರಿ ಪೂರ್ಣವಾದ ದಯವು ದೊರಕಿರುವ ಅವಳಿಗೆ ಇನೊಬ್ಬನ ಸಾಹಾಯದ ಅಗತ್ಯವೇನದೆ? ಅಮೃತವೇ ಕೈವಶವಾದ ಮೇಲೆ ಕಲಗಚ್ಚು ಯಾರಿಗೂ ಪ್ರಿಯಕರವಾಗುವದುಂಟೇ?
ವಾಗ್ದೇವಿಯು ಮಠದಿಂದ ಹೊರಟುಹೋದ ಸಮಾಚಾರ ತಿಳಿಯಲಾಗಿ ಚಂಚಲನೇತ್ರರು ಬಹಳ ಖಿನ್ನರಾಗಿ ಅಶ್ರುಜಲವನ್ನು ಧಾರಾಳವಾಗಿ ಸುರಿಸಿದರು. ತಾನು ಮೊದಲೇ ಜನರ ಅಪಹಾಸ್ಯಕ್ಕೆ ಗುರಿಯಾಗಿರುವಾಗಲೇ ಇದೊಂದು ನವೀನವಾದ ಪರಿಹಾಸ್ಯಕ್ಕೆ ಆಸ್ಪದ ಕೊಟ್ಟೆನೆಂಬ ಚಿಂತೆಯಿಂದ ಇರುವಾಗ ಎದುರಿಗೆ ಕಾಣಸಿಕ್ಕಿದ ತಿಪ್ಪಾಶಾಸ್ತ್ರಿಯನ್ನು ಸಮಾಪಕ್ಕೆ ಕರೆದು ಸಂಧಾನೋಪಾಯವನ್ನು ವರ್ತಿಸಿ ಬಾರೆಂದು ಆಜ್ಞಾಪಿಸೆ ಆಗಬಹುದು ಅವನು ವಾಗ್ದೇವಿಯ ಬಿಡಾರಕ್ಕೆ ಹೋದನು. ಅವಳ ಕೂಡೆ ತಾನು ಬಂದಿ ರುವ ಕಾರ್ಯದ ಸ್ವಭಾವವನ್ನು ತಿಳಿಸಿದನು. ಅವಳು ಅದಕ್ಕೆ ಕಿವಿ ಕೊಡಲೇ ಇಲ್ಲ. ಹೀಗಾಗಿ ಅವನು ಮೆಲ್ಲಗೆ ಅಲ್ಲಿಂದ ಎದ್ದು ಶೃಂಗಾರಿಯ ಕೂಡೆ ಕೊಂಚ ಸಮಯ ಸಂಭಾಷಣೆಮಾಡಿ ಮಠಕ್ಕೆ ಬಂದು ತಾನು ಹೋದ ಕೆಲಸ ಕೈಗೂಡಲಿಲ್ಲವೆಂದು ಯತಿಗಳಿಗೆ ಅರಿಕೆಮಾಡಿಕೊಳ್ಳುವದಕ್ಕೆ ನಾಚಿ ದನು. ಆಬಾಚಾರ್ಯನ ಮುಖಾಂತರ ಸಂಧಾನ ನಡೆಸಿ ನೋಡೆಂದು ಯತಿ ಗಳು ತಿಪ್ಪಾಶಾಸ್ತ್ರಿಗೆ ಹೇಳಿದರು. ತಿಪ್ಪಶಾಸ್ತ್ರಿಯು ಕೇಳಿದಾಗ ಆಬಾಚಾ ರ್ಯನು ಒಲ್ಲೆನೆಂದನು.
ವೆಂಕಟಪತಿ ಆಚಾರ್ಯನ ಅನಾರೋಗ್ಯವು ನಿತ್ಯವೂ ಹೆಚ್ಚುತ್ತಿರುವ ದೆಂಬ ನೆವನದಿಂದ ಮನೆಬಿಟ್ಟು ಹೊರಡುತ್ತಿದ್ದಿಲ್ಲ. ಅವನ ತಮ್ಮ ಶ್ರೀಧರಾ ಚಾರ್ಯನು ಪಾರುಪತ್ಯವನ್ನು ನಡೆಸಿಕೊಂಡು ಬರುವನಾದರೂ ಅವನ ಮೇಲೆ ಚಂಚಲನೇತ್ರರಿಗೆ ಹೆಚ್ಚು ಪ್ರೀತಿಯಾಗಲೀ ವಿಶ್ವಾಸವಾಗಲೀ ಇರ ಲಿಲ್ಲ. ವೆಂಕಟಪತಿ ಆಚಾರ್ಯನನ್ನು ಕರೆಕಳುಹಿಸದೆ ನಿರ್ವಾಹವಿಲ್ಲವೆಂದು ಕಂಡು ಬಂದುದರಿಂದ ಅವನನ್ನು ಕರೆಯುವದಕ್ಕೆ ಜನ ಬಿಡೋಣಾಯಿತು. ಅವನು ತಡೆಯದೆ ಬಂದು ಅಪ್ಪಣೆಯಾದ ಕಾರಣವೇನೆಂದು ಏನೂ ತಿಳಿಯ ದಂತೆ ವಿಚಾರಿಸಲು ವಾಗ್ದೇವಿಗೂ ತನಗೂ ನಡೆದ ವಾಚಾಟ ಮತ್ತು ಅವಳು ಕೂಡಲೇ ಮಠವನ್ನು ಬಿಟ್ಟುಹೋದ ಹದನವನ್ನು ಅವನಿಗೆ ಆದ್ಯಂತ ತಿಳಿಸಿ ಮಗುವಿನೋಷಾದಿ ಅಳಲಿಕ್ಕೆ ತೊಡಗಿದರು. ವೆಂಕಟಪತಿಗೆ ಬಹಳ ಕರಕರೆಯಾಯಿತು. ಪರಂತು ತನ್ನ ಧಣಿಯು ವಾಗ್ದೇವಿಗೆ ಕೊಟ್ಟ ಭಾಷೆ ಯಂತೆ ನಡೆಯುವದಕ್ಕೆ ಇದೇ ಸಕಾಲವಾಗಿರುತ್ತೆ. ಅವಳ ಅಪೇಕ್ಷೆಯನ್ನು ಪೂರೈ ಸಲಕ್ಕೆ ಅನಾವಶ್ಯಕ ಅಡ್ಡಿ ಹೇಳಿದ್ದು ನ್ಯಾಯವೆಂತ ತಾನು ತಿಳಕೊಳ್ಳು ವದಿಲ್ಲವಾಗಿ ಅವನು ಖಂಡಿತವಾಗಿ ಹೇಳಿದನು.
ಚಂಚಲ–“ಈಗಲೇ ಆಶ್ರಮ ಕೊಡಬೇಕೆಂದು ನಿನ್ನದೂ ತಾತ್ಪರ್ಯವೇನಪ್ಪಾ! ಅಷ್ಟು ಅವಸರವ್ಯಾತಕ್ಕೋ ತಿಳಿಯದು.
ವೆಂಕಟಪತಿ–“ಸನ್ನಿಧಿಯ ಅಭಿಪ್ರಾಯ ಹ್ಯಾಗೋ ತಿಡಿಯದು.”
ಚಂಚಲ–“ನಮಗೆ ಅಂತ್ಯಕಾಲ ಸಮಾಪಿಸುವಾಗ ಅಶ್ರಮ ಕೊಟ್ಟು ಬಿಡೋಣ. ಈಗಲೇ ಏನು ಅಗತ್ಯ?”
ವೆಂಕಟಪತಿ –ಅಂಥಾ ಕಾಲದ ಬರುವಿಕೆಯು ಬಹಳ ಮುಂದಿರಲಿ. ಆವಾಗ ತಮ್ಮ ಸಂಕಲ್ಪ ತೀರಿಸುವುದಕ್ಕೆ ಸಾಕಷ್ಟು ಸಮಯ ದೊರಕುವ ದೆಂಬ ನಿಶ್ಚಯ ಹ್ಯಾಗೆ? ದೊರಕುವದೆನ್ನುವಾ. ಆಗ್ಗೆ ಸೂರ್ಯನಾರಾಯ ಣನ ಪ್ರಾಯವು ಬಾಲಸನ್ಯಾಸ ಪಡೆಯುವದಕ್ಕೆ ಅಧಿಕವಾಗಿರದೆ? ಆಶ್ರಮ ಕೊಡತಕ್ಕ ಪ್ರಾಯವು ಈಗಲೇ ಒದಗಿರುತ್ತದೆ. ಪರಾಕೆ! ತಾವು ವಾಗ್ದೇವಿಗೆ ಕೊಟ್ಟ ಉತ್ತರವು ಸಂದೇಹಕರವಾಗಿ ತೋರುವ ಕಾರಣದಿಂದಲೇ ಅವಳು ತಮ್ಮನ್ನಗಲಿ ಹೋಗಬೇಕಾಯಿತು. ನಾಲಿಗೆ ಮೀರಿದ ಬಳಿಕ ಅನ್ಯಥಾ ವರ್ತಿಸುವದು ಇಹಪರದಲ್ಲಿಯೂ ದೋಷಕರವಾದದ್ದು ಅಪಕೀರ್ತಿ ಬರುವ ಹಾಗಿರುವ ಈ ಆಶಾಭಂಗವು ವಾಗ್ದೇವಿಗೆ ಸನ್ನಿಧಿಯಿಂದ ಆಗಕೂಡದೆಂದು ನನ್ನ ವಿಜ್ಜಾಪನೆ.”
ಚಂಚಲ– “ವೆಂಕಟಪತಿಯೇ! ನಿನ್ನ ಮಾತು ನ್ಯಾಯವಾದದ್ದೆ. ಲೋಕಾಪವಾದಕ್ಕೆ ಹೆದರಬೇಕಾಗುತ್ತದಷ್ಟೇ. ಅದನ್ನು ಗಣ್ಯಮಾಡದೆ ಆಶ್ರಮ ಒಂದು ವೇಳೆ ಕೊಟ್ಟುಬಿಡೋಣವೆಂದರೆ ಉಳಕಿ ಮಠದವರು ಒಗ್ಗ ಟ್ಟಾಗಿ ಕೀಟಕ ಜನರ ಮಾತು ಕೇಳಿ ನಮ್ಮ ಮೇಲೆ ಸೊಂಟಕಟ್ಟಿದರೆ ಮಾಡತಕ್ಕದ್ದೇನು?”
ವೆಂಕಟಪತಿ– “ಸನ್ನಿಧಿಯ ಅಪ್ಪಣೆಯಾದರೆ ಖಡಾಖಡಿಯಾಗಿ ಒಂದು ಮಾತು ಹೇಳಿಬಿಡುತ್ತೇನೆ. ಆಕಾಶವೇ ಜರಿದು ಬಿದ್ದರೂ ಪಟ್ಟದ ದೇವರ ಮುಂದೆ ಪ್ರಮಾಣಮಾಡಿಕೊಟ್ಟ ವಾಗ್ದತ್ತ ಹುಸಿಯಾಗ ಕೂಡದು. ಏನು ಬಂದರೂ ಬರಲಿ, ದೇವರು ಸುಧಾರಿಸುವನು. ಮಠದಲ್ಲಿ ಚಿಕ್ಕಾಸೂ ಉಳಿಯಡೆ ಖರ್ಚಾದರೂ ಸರಿ. ವಾಗ್ದೇವಿಗೆ ಕೊಟ್ಟ ಭಾಷೆಯನ್ನು ಸಲ್ಲಿಸಲೇ ಬೇಕು. ಇದು ನನ್ನ ಮತ. ತಮ್ಮ ಅನುಮತಿಯನ್ನು ಮುಂದಾಗಿ ಕೇಳಿ ಕೊಂಡು ನಾನು ಅವಳನ್ನು ಮನೆಯಿಂದ ಹೊರಡಿಸಿ ತಂದು ತಮ್ಮ ಪಾದಕ್ಕೆ ಅರ್ಪಿಸಿದೆ. ತತ್ಪೂರ್ವದಲ್ಲಿ ನಾನು ಮಾಡಿದ ಪ್ರಸಂಗವು ಸನ್ನಿಧಿಗೆ ಹಿತವಾಗಿ ತೋರಲಿಲ್ಲ. ಹಿಂದೆ ಮಾಡಬೇಕಾಗಿರುತ್ತಿದ್ದ ಜಾಗ್ರತೆ ಈಗ ಮಾಡಲಿಕ್ಕೆ ನೋಡುವದು ಅನುಚಿತ. ಲೋಕಾಪವಾದಕ್ಕೆ ಆಸ್ಪದ ಕೊಡುವದಕ್ಕೆ ಇನ್ನೇನುಬೇಕು? ವಾಗ್ದೇವಿಯನ್ನು ಮೋಸಗೊಳಿಸಿದರೆ ಶ್ರೀಪಾದಂಗಳವರಿಗೆ ಬರುವ ದೋಷದ ಅರೆವಾಸಿಗೆ ನಾನು ಸಹಾ ಬಾಧ್ಯನಾಗುತ್ತೇನೆ. ಹ್ಯಾಗೆಂದು ನಾನು ವಿವರಿಸಿ ಹೇಳತಕ್ಕ ಅಗತ್ಯವೇನದೆ? ಸನ್ನಿಧಿಗೆ ಪೂರ್ಣ ಪರಾಂಬರಿಕೆ ಇರುವ ಪ್ರಸ್ತಾಪವನ್ನು ಪುನಃ ಎತ್ತಬೇಕೇನು?” ವೆಂಕಟಪತಿ ಆಚಾರ್ಯನು ಆಡಿದ ಮಾತುಗಳು ಚಂಚಲನೇತ್ರರಿಗೆ ಸಾಣೆಗೆ ಮಸಗಿದ ಬಾಣಗಳಂತೆ ಮನೋವೇದನೆ ಉಂಟು ಮಾಡಿದವು “ವಾಗ್ದೇವಿಯನ್ನು ತಾತ್ಸಾರ ಮಾಡಿ ಬಿಟ್ಟರೆ ಅವಳಿಗೆ ಕ್ರೋಧ ಹುಟ್ಟಿ ರಾಜದ್ವಾರದವರೆಗೆ ಮುಂದರಿಸಲಿಕ್ಕೆ ಅವಳು ಉದ್ಯುಕ್ತಳಾದರೆ ಮಠದ ಗತಿ ಹ್ಯಾಗಾಗುವದೆಂದು ಬುದ್ಧಿಯುಳ್ಳವರು ಗ್ರಹಿಸಿಕೊಳ್ಳ ಬಹುದು. ಸೂರ್ಯನಾರಾಯಣ ರಿಗೆ ಆಶ್ರಮ ಕೊಟ್ಟರೆ ಶತ್ರು ಗಳ ಉಪಟಳದ ದೆಸೆಯಿಂದ ಹಣ ವೆಚ್ಚವಾಗುವ ಸಂಭವ ಒದಗಲಿಕ್ಕಿಲ್ಲ ವೆನ್ನಕೂಡದು. ಹಾಗೆಯೇ ವಾಗ್ದೇವಿಯ ಸಿಟ್ಟಿನಿಂದ ದ್ರವ್ಯನಷ್ಟವಾಗಲಾರ ದೆನ್ನಬಹುದೇ? ಉಭಯ ಸಂಕಟ ಬಂದೊದಗಿದಾಗ್ಗೆ ಕಡಿಮೆ ನಷ್ಟ ಮತ್ತು ಕಡಿಮೆ ಕಷ್ಟವುಳ್ಳ ಮಾರ್ಗವನ್ನು ಹಿಡಿಯಬೇಕು. ಗುರುಗಳ ಫನತೆಗೆ ಯೋಗ್ಯವಲ್ಲದ ರೀತಿಯಲ್ಲಿ ಎಷ್ಟು ಸಣ್ಣ ಕಾರ್ಯವನ್ನಾಗಲೀ ಮಾಡಕೂಡದು” ಹೀಗೆ ನ್ಯಾಯವಾದ ತರ್ಕದಿಂದ ವೆಂಕಟಪತಿ ಆಚಾರ್ಯನು ಚಂಚಲನೇ ತ್ರರ ಮನಸ್ಸಿಗೆ ಮುಸುಕಿದ ಮೊಬ್ಬನ್ನು ಓಡಿಸಿ ಅವರಿಗೆ ನಾಚಿಕೆಯುಂಟಾ ಗುವಂತೆ ಮಾಡಿದನು. “ನಿನ್ನ ಬುದ್ದಿಗೆ ತೋಚುವಂತೆ ವರ್ತಿಸಪ್ಪಾ! ವೆಂಕಟ ಪತಿ, ನನ್ನಮೇಲೆ ಮತ್ತೆ ಮಾತಿನವಾಸಿ ಇಡಬೇಡ” ಎಂದು ಚಂಚಲನೇ ತ್ರರು ನಿಟ್ಟುಸಿರುಬಿಟ್ಟು ಖಂಡಿತವಾದ ಉತ್ತರ ಕೊಟ್ಟರು.
ಆವಾಗಲೇ ವೆಂಕಟಪತಿ ಲಚಾರ್ಯನು ಅಂತರಂಗದಲ್ಲಿ ರವಷ್ಟು ಮಾತಾಡಿ ವಾಗ್ದೇವಿಯ ಬಿಡಾರಕ್ಕೆ ತಾನೊಬ್ಬನೇ ಹೊರಟುಹೋದನು ದೂರದಿಂದ ವೆಂಕಟಪತಿಯನ್ನು ನೋಡುತ್ತಿದ್ದ ವಾಗ್ದೇವಿಯು ಇಷ್ಟುಹೊತ್ತು ತನ್ನ ಎಡ ಕಣ್ಣು ಹಾರುತ್ತಾ ಇದ್ದ ಶುಭಶಕುನವು ಈಡೇರುವದೆಂಬ ಹರು ಷದಿಂದ ಆಚಾರ್ಯನನ್ನು ಅತಿಶಯವಾದ ಉಪಚಾರಗಳಿಂದ ಎದುರು ಗೊಂಡು ಆಸನದಲ್ಲಿ ಕುಳ್ಳಿರಿಸಿ ತನ್ನ ಪೂರ್ವ ಸ್ಪಿತಿಯು ನೆನನಿಗೆ ಬರುವ ಕಾಲ ಒದಗಿದಾಗ ಮರೆಯದೆ ವಿದುರನ ಮನೆಗೆ ಶ್ರೀಕೃಷ್ಣಸ್ವಾಮಿಯು ಬಂದ ಹಾಗೆ ಸವಾರಿ ಚಿತ್ತೈಸಿದ್ದು ತನ್ನ ಪೂರ್ವ ಪುಣ್ಯವೆಂದಳು. ವೆಂಕಟಪತಿಯು ನಸುನಗುತ್ತಾ–“ಯಾಕವ್ಟಾ! ಮಠದಿಂದ ಹೊರಟು ಬಂದಿ?” ಎಂದು ಕೇಳಿದನು. “ಏನೂ ಗೊತ್ತಿಲ್ಲವವರಂತೆ ಪ್ರಶ್ನೆಮಾಡುತ್ತೀರಾ?” ಎಂದು ವಾಗ್ದೇ ವಿಯು ಪುನಃ ಪ್ರಶ್ನೆಮಾಡಿದಳು. “ಗತಗೋಷ್ಟಿ ಹಾಗಿರಲಿ. ಈಗಲೇಹೊರಡು. ಮಠಕ್ಕೆ ಮರಳಿ ಬಾ; ನಿನ್ನವಾಂಛಿತ ದೊರೆಯಲಿಕ್ಕೆ ಸರ್ವಧಾ ಅಡ್ಡಿಯುಂಟಾ ಗದು? ಎಂದು ವೆಂಕಟಪತಿ ಆಚಾರ್ಯನು ಹೇಳಿದನು. ವಾಗ್ದೇವಿಯು ಪ್ರತಿ ವಾದಿಸದೆ ಹೊರಡಲಿಕ್ಕೆ ಅನುವಾದಳು. ಶೃಂಗಾರಿಯು ಕೂಡಲೇ ಹೊರಡುವ ಮನಸ್ಸಿಲ್ಲದೆ ಸಂದು ಮೂಲೆಯಲ್ಲಿ ನಿಂತು ನೇಮರಾಜನ ಭಂಡಸಾಲೆಯಲ್ಲಿ ಅವನ ಬೈಟಕಿನ ಕಡೆಗೆ ಹಿಣಕಿ ನೋಡುತ್ತ ಕೊಂಚ ಸಾವಕಾಶ ಮಾಡುವ ಬಗೆಯನ್ನು ಕಂಡ ವಾಗ್ದೇವಿಯು ರವಷ್ಟು ಹೆದರಿಸಿದ ಹಾಗೆ ಮಾಡಿದಳು. ಅವಳು ಒಡನೆ ಹೊರಟಳು. ವೆಂಕಟಪತಿಯು ಭಂಡಿಯಲ್ಲಿ ಅವರಿಬ್ಬರನ್ನು ಕೂಡ್ರಿಸಿ ತಾನು ಪಾದಚಾರಿಯಾಗಿ ಮಠಕ್ಕೆ ಬಂದು ವಾಗ್ದೇವಿಯನ್ನು ಚಂಚಲನೇತ್ರರ ಸಮ್ಮುಖಕ್ಕೆ ಕರತಂದು ಅವರೊಳಗೆ ಪೂರ್ಣ ವಿವೇಕ ಉಂಟಾಗುವಂತೆ ಮಾಡಿ ಮರುದಿನ ಬರುವೆನೆಂದು ಮನೆಗೆ ಹೋದನು.
ಮರುದಿವಸ ವೆಂಕಟಪತಿ ಆಚಾರ್ಯನು ಮಠಕ್ಕೆ ಬಂದು ತಿಪ್ಪಾ ಶಾಸ್ತ್ರಿ ಮತ್ತು ಅವನಿಗಿಂತಲೂ ಜ್ಯೋತಿಷ್ಯದಲ್ಲಿ ಹೆಚ್ಚು ಪಾರಂಗತರಾದವ ರನ್ನು ಕರೆಸಿ ಅವರ ತರ್ಕದಿಂದ ನಿರ್ಣಯಿಸಿದ ಮುಹೂರ್ತವನ್ನು ಒಪ್ಪಿ ಕೊಂಡು ಆ ಮುಹೂರ್ತಕ್ಕೆ ಮಠದ ಪದ್ಧತಿಗನುಸಾರವಾಗಿ ಸೂರ್ಯ ನಾರಾಯಣನಿಗೆ ಆಶ್ರಮ ಕೊಡುವದಕ್ಕೋಸ್ಕ್ಯರ ಬೇಕಾದ ಸನ್ನಾಹಗಳು ಸರಿಯಾಗಿ ಆಗುವ ವಿಷಯದಲ್ಲಿ ಮುಂಜಾಗ್ರತೆಯನ್ನು ತಕ್ಕೊಂಡನು. ವಾಗ್ದೇವಿಯು ಈ ವದಂತಿಯನ್ನು ಕೇಳಿ ಆನಂದದಲ್ಲಿ ಮುಳುಗಿದಳು. ಭೀಮಾಜಿಯು ಅವಳನ್ನು ಕಂಡು ಅವಳ ಮನಸ್ಸಿಗೆ ಸರಿಯಾಗಿ ಯತಿಗಳು ನಡಕೊಳ್ಳಲಿಕ್ಕೆ ಒಡಂಬಟ್ಟರೆಂಬ ಸಂಹರ್ಷ ತಡೆಯದೆ ಹೋದನು. ಆ ಶುಭ ವಾರ್ತೆಯು ಶಾಬಯಗೆ ತಿಳಿದಾಗ ಆ ದೊಡ್ಡ ಉದ್ಯೋಗಸ್ತನು ಹರ್ಹಿತ ನಾದನು. ಆಶ್ರಮ ಕೊಡುವದಕ್ಕೆ ನೇಮಿಸಿದ ದಿನದ ಎರಡು ಮೂರು ದಿನ ಗಳ ಮುಂಚೆಯೇ ವಾಗ್ದೇವಿಯು ಪ್ರೀತಿಕರವಾದ ವಸ್ತುಗಳನ್ನು ಹಿಡಿಸಿ ಕೊಂಡು ಶಾಬಯನೆ ಮನೆಗೆ ಹೋಗಿ ಅವನನ್ನು ಕಂಡು ಹೆಚ್ಚು ಹೊತ್ತು ಆಹ್ಲಾದಕರವಾಗಿ ಸಂಭಾಷಣೆ ಮಾಡುತ್ತಾ ಮುಂದೆ. ಬರಬಹುದಾದ ಸಂಕಷ್ಟ ನಿವಾರಣೆಯಾಗುವ ಪ್ರಮೇಯದಲ್ಲಿ ಸಂಪೂರ್ಣವಾದ ಸಹಾಯ ಮಾಡುವೆನೆಂಬ ವಾಗ್ದಾನವನ್ನು ಸುಲಭವಾಗಿ ಅವನಿಂದ ಪಡಕೊಂಡು ಮನೆಗೆ ಬಂದಳು.
ಮಠದ ಸಂಪ್ರದಾಯಕ್ಕನುಗುಣವಾಗಿ ಶಿಷ್ಯವರ್ಗಕ್ಕೂ ಬೇರೆ ಪ್ರಮುಖ ಗ್ರಹಸ್ತರಿಗೂ ಅಭಿಮಂತ್ರಣ ಕೊಡೋಣಾಯಿತು. ಇಟ್ಟ ಲಗ್ನಕ್ಕೆ ಕೆಲವು ದಿವಸಗಳ ಮೊದಲು ಸೂರ್ಯನಾರಾಯಣನಿಗೆ ಚೈತನ್ಯಸ್ತರು ತಮ್ಮ ತಮ್ಮ ಮನೆಗಳಿಗೆ ಕರಸಿ ದೊಡ್ಡ ಔತಣ ಉಡುಗೊರೆ ಉಪಚಾರಾದಿಗಳಿಂದ ಸತ್ಯರಿಸಿ ಮಠದ ಕೃಷಾವಲೋಕನಕ್ಕೆ ಪಾತ್ರರಾದರು. ವೆಂಕಟಪತಿ ಆಚಾ ರ್ಯನು ತನ್ನ ಮುಂದಿನ ಧನಿಯನ್ನು ಮನೆಗೆ ಭಾರಿ ಗದ್ದಲದಿಂದ ಕರಿಸಿ ಕೊಂಡು, ಉತ್ಕೃಷ್ಟವಾದ ಔತಣವನ್ನು ಮಾಡಿಸಿ ಹೆಚ್ಚು ಮೌಲ್ಯದ ಉಚಿತಗಳನ್ನು ಕೊಟ್ಟು ಚಂಚಲನೇತ್ರರ ಅನುಗ್ರಹಕ್ಕೆ ಆರ್ಹನಾದನು. ಕುಮುದಪುರದ ನಿವಾಸಿಕರಲ್ಲಿ ಅನ್ಯಮತದ ಶಿಷ್ಯರಾದ ಭೂಸುರರೂ ಶಕ್ತ್ಯಾ ನುಸಾರವಾಗಿ ಸೂರ್ಯನಾರಾಯಣನನ್ನು ಔತಣೋಪಚಾರಗಳಿಂದ ಸಂತುಷ್ಟಿ ಪಡಿಸಿ ಯತಿಗಳ ಶ್ಲಾಘನೆಗೆ ಯೋಗ್ಯರಾದರು. ಒಬ್ಬನಿಂದಲೇ ಪೂರೈಸದ ಸಂದಿನಲ್ಲಿ ಕೆಲವರು ಒಟ್ಟು ಕೂಡಿ ದೇವಸ್ತಾನ ಮುಂತಾದ ತಾವಿ ನಲ್ಲಿ ಅವನಿಗೆ ಭೋಜನಾದಿ ಸತ್ಯಾರಗಳಿಂದ ಸಂತೃಪ್ತಿಪಡಿಸಿ ಚಂಚಲನೇತ್ರ ರಿಗೂ ವಾಗ್ದೇವಿಗೂ ಪ್ರೇಮಪಾತ್ರರಾದರು. ಸದ್ಗುಣಭರಿತನಾದ ಸೂರ್ಯ ನಾರಾಯಣನು ಪುರವಾಸಿ ಸಕಲರಿಗೂ ಪ್ರೇಮಿಯಾಗಿರುವ ಕಾರಣ ಆನು ಕೂಲವಿರುವಷ್ಟರಮಟ್ಟಗೆ ಒಬ್ಬನಾದರೂ ತನ್ನ ಕಡೆಯಿಂದ ಅವನಿಗೆ ಸಾಭಿ ಮಾನವಾಗುವದರಲ್ಲಿ ಕಡಿಮೆ ಆಸಕ್ತಿಯುಳ್ಳ ವನೆಂಬ ಅಪವಾದಕ್ಕೆ ಬೀಳಲಿಲ್ಲ. ಆಶ್ರಮ ಹೊಂದುವ ತನಕ ಈ ಒಳ್ಳೇಹುಡುಗನು ಪಟ್ಟಣದಲ್ಲಿ ತುಂಬಾ ಸಂತೋಷದಿಂದ ಆದರಣೆಯನ್ನು ಹೆಚ್ಚು ಕಡಿಮೆ ಸರ್ವರಿಂದಲೂ ಪಡ ಕೊಂಡು ಮರಾಧಿಪತಿಯಾಗಲಿಕ್ಕೆ ತಕ್ಕ ಪುರುಷನೆಂದು ಬಹುಜನರಿಂದ ಹೇಳಿಸಿಕೊಂಡು ನಿಶ್ಚೈಸಲ್ಪಟ್ಟ ಲಗ್ನದಲ್ಲಿ ಸನ್ಯಾಸವನ್ನು ಹೊಂದುವ ನಿರೀಕ್ಷೆ ಯಲ್ಲಿ ಸುಖವಾಗಿ ಕಾಲವನ್ನು ಕಳೆದನು.
ವಾಗ್ದೇವಿಯ ಪರಿಮುಖ ಮಠದ ದ್ರವ್ಯದ ಮೇಲೆ ವಾತ್ಸಲ್ಯ ಇಟ್ಟಿರು ತ್ತಿದ್ದ ಭೀಮಾಜಿಯೂ ಶಾಬಯನೂ ಈ ವೇಳೆ ತಮ್ಮ ಕರ್ತವ್ಯವನ್ನು ಮರೆತಿರಲಿಲ್ಲ. ತಿಪ್ಪಾಶಾಸ್ತ್ರಿಯ ಮನೆಯಲ್ಲಿ ಅವರಿಬ್ಬರ ಕಡೆಯಿಂದಲೂ ಬೇರೆ ಬೇರೆ ದಿವಸಗಳಲ್ಲಿ ಯಥೋಚಿತವಾಗಿ ಸೂರ್ಯನಾರಾಯಣನಿಗೆ ಔತಣಗಳಾದುವು. ಅವರ ಪದವಿಗೆ ಯೋಗ್ಯವಾದ ಉಚಿತಗಳನ್ನು ಕೊಡುವದರ ಮೂಲಕ ಅವರೀರ್ವರೂ ವಾಗ್ದೇವಿಯ ಪ್ರೇಮಕ್ಕೆ ಭಾಗಿಗಳಾದರು. ನೇಮ ರಾಜಸೆಟ್ಟಿಯು ಹೆಸರುಹೋದ ಸಾವಕಾರನಾಗಿ ಕುಮುದಪುರದಲ್ಲಿ ಆಢ್ಯ ಮನುಷ್ಯನಾಗಿ ಕೊಂಚ ಕೃಪಣತ್ವ ಉಳ್ಳ ವನಾದರೂ ತಾನು ಮಾಡಬೇಕಾದ ಉಪಚಾರವನ್ನು ಮರೆಯದೆ ಅಂಜನೇಯ ದೇವಸ್ಥಾ ನದಲ್ಲಿ ಊಟದ ರುಚಿ ಚೆನ್ನಾಗಿ ಬಲ್ಲವರು ಹೊಗಳುವಂತೆ ಔತಣವನ್ನು ಮಾಡಿಸಿ ಸೂರ್ಯನಾರಾ ಯಣನನ್ನು ದಣಿಸಿದನು. ಆ ಕಾಲದಲ್ಲಿ ಆ ದೊಡ್ಡ ವರ್ತಕನು ಧಾರಾಳ ವಾಗಿ ಕೊಟ್ಟ ಉತ್ಕೃಷ್ಟವಾದ ಉಡುಗೊರೆಯನ್ನು ಕುರಿತು ಪುರನಿವಾಸಿಗಳು ಆಗಾಗ್ಗೆ ಶ್ಲಾಘನೀಯವಾಗಿ ಮಾತಾಡುತ್ತಿರುವವರಾದರು. ವಾಗ್ದೇವಿಯು ಇಂಥಾ ಶುಭ ಸಮಯದಲ್ಲಿ ಹೆಚ್ಚಳಪಡಬೇಕಲ್ಲವೇ? ಹೌದು; ಅವಳು ಪರಿ ಪೂರ್ಣವಾಗಿ ಆನಂದನ ಸಾಗರದಲ್ಲಿ ಮುಳುಗಿದಳು. ಕುಮದಪುರಮಠದ ಸಂಸ್ಥಾನವು ಸಣ್ಣದಾದ್ದಲ್ಲ. ಹೆಸರುಹೋದ ಪುರವೇಸರಿ. ಅದರ ಆಧಿಪತ್ಯವು ತನ್ನ ಕುಮಾರನಿಗೆ ದೊರೆಯುವ ಸಂಭವ ಒದಗಿರುವ ಕಾಲದಲ್ಲಿ ಸಂತೋಷ ಪಡುವದು ಅಸಹಜವಾದ್ದಲ್ಲ. ಚಂಚಲನೇತ್ರರು ಪ್ರಥಮತಃ ಈ ಪ್ರಮೇಯ ನಿರ್ಲಕ್ಷ ಮಾಡಿಬಿಟ್ಟರೂ ವೆಂಕಟಪತಿ ಆಚಾರ್ಯನು ಅವರಲ್ಲಿ ವಿವೇಕ ಹುಟ್ಟುವಂತೆ ಮಾಡಿದ ಬಳಿಕ ಅವರ ಮನೋಭಾವವು ಪೂರ್ಣವಾಗಿ ಮಾರ್ಪಾಟಾಯಿತು. ವಾಗ್ದೇವಿಯಲ್ಲಿ ತನಗೆ ಹುಟ್ಟಿದ ಮಗನನ್ನು ಪಟ್ಟಕ್ಕೆ ನೇಮಿಸುವದು ಧರ್ಮವೆಂದು ಸಮ್ಮತಿಪಟ್ಟು ಈ ಶುಭಕಾರ್ಯವು ಚಂದ ವಾಗಿ ನೆರವೇರುವದಕ್ಕೆ ಅವಶ್ಯವೆಂದು ತೋರಿದ ಎಲ್ಲಾ ಸಾಧನೆಗಳನ್ನು ಹಣದ ಮುಖನೋಡದೆ ಒದಗಿಸಿ ಕೊಳ್ಳುವದರಲ್ಲಿ ಸ್ವತಃ ಹೆಚ್ಚು ಪ್ರಯಾಸ ಪಟ್ಟರು.
*****
ಮುಂದುವರೆಯುವುದು