ಅತಿಥಿ

ಕಂಡೆ ನನ್ನ ಆಂತರ್ಯದಮರಪುರುಷನನು ತೆರೆಯಲಿಹನ
ಮನದ ಮುಖವಾಡ ತೊಟ್ಟುಕೊಂಡ, ಭಧ್ರಾಃಕಾರ, ಘನನ
ಮೃತ್ಯುಲೋಕವನು ಅಮೃತನಂತೆ ಯಾಹೊತ್ತು ಕಾಣುವವನ
ಮರ್ತ್ಯಲೀಲೆಯನು ದಿವ್ಯಪ್ರೇಕ್ಷಕನ ಹಾಗೆ ನೋಡುತಿಹನ !

ಹೃದಯಕಿರುವ ಮೈಗಿರುವ ಹರ್ಷ-ಖೇದಗಳ ಸ್ಪರ್ಶಗಿರ್ಶ
ತಟ್ಟಲರಿಯನಾಗರ್ಭಗುಡಿಯ ನಿಃಶಬ್ದ ಶುಚಿ ವಿಮರ್ಶ.
ಸಂಕಟವು ಭಯವು – ಭೂಬಿಟ್ಟ ವಿಧಿಯ ಕ್ರೂರಾತ್ಮ ಕರ್ಮಶುನಕ
ಹರಕೊಳ್ಳಬಹುದು ಮೈಮನವ, ಬರವು-ಮುಕ್ತಾತ್ಮನಲ್ಲಿ ತನಕ

ನಿರ್ನಿದ್ರವಾದ ಆ ದೇವಕಿರಣ ಹೃದಯದಲಿ ಸಾಕ್ಷಿಯಾಗಿ
ನಿರ್ಮರಣವಾದ ಸಾತ್ವಿಕದ ಅಚ್ಚ ಜೀವಾತ್ಮದಕ್ಷಿಯಾಗಿ
ಸರ್ವಶಕ್ತ, ದುರ್ಗಮ್ಯ, ಅತಿಥಿ ಊರ್ವ್ಯೂಧ್ವ ಅಗ್ನಿ ನಿಧಿಯು
ಮರಣ ಬರಲು, ಬಲಿಯೆಂದು ಅದನೆ ಎತ್ತಿತ್ತು ದಿವ್ಯ ವಿಧಿಯು

ಪೂರ್ವಪಕೃತಿಯಾ ಮನೆಯು ಬೀಳುತಿದೆ, ಕೊಚ್ಚಿ ಕೆಳಗೆ ಕುಸಿದು
ದುರ್ದಮ್ಯನಂತೆ ಅಕ್ಷುಬ್ಧಶಾಂತ ಇಹನಾತ ಮಿಂಚ ಮಸೆದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚಿನ ಮಾಟ
Next post ವಾಗ್ದೇವಿ – ೩೬

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…