(ಕೆಲವು ಸಾಲುಗಳು) ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು. ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು. ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ ಕಾಲಪಥಿಕನಾ ಕಿವಿಗೆ...
ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ...
ಎಲ್ಲ ನಾದದಲಿ ಎಲ್ಲ ದನಿಗಳಲಿ ದೇವವಾಣಿ ಜಾಗು ಹಾಡು-ಪಾಡು ಗುಡುಗಾಟ ಮತ್ತೆ ಕುಹುಕಾಟ ಕೇಕ ಕೂಗು. ಹರ್ಷಶೋಕದಲಿ ಮಿಕ್ಕಿಬರುವ ಜೀವನದ ತೊದಲು ಬದಲು ವೈಖರಿಯ ಗಮಕ, ಗುಂಗುಣಿಸಿ ಬರುವ ಸವಿನುಡಿಯ ಯಮಕಗಳಲು. ಕಡಲ ಮೊರೆತ...
ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ...
ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ ಏಳು ಏಳು ಜಗದಗ್ನಿಲಿಂಗವೇ ದೇವಕಿರಣದಂದ ಎತ್ತು ನಿನ್ನ ಮನ, ಎತ್ತು ಹೃದಯಧನ, ಏರು ಯಶದ ತೆಂಗು ತಿಮಿರ-ಗರ್ಭದರ್ಭಕನೆ ಸೂರ್ಯನೇ `ತತ್ತ್ವಮಸಿ'ಯ ನುಂಗು ಏಕ ವಿಶ್ವ, ಸರ್ವಾತ್ಮಸೃಷ್ಟಿಯೇ ಏಳು...
ದಿನವು ಮುಳುಗಿತು ಬೆಳೆದು ಚಾಚುತ ಇರುಳ ಸಂಜೆಯ ಲಯದಲಿ ಉದ್ದೊ ಉದ್ದಿನ ಹಾದಿ ಮುಗಿದಿದೆ ಸ್ವಲ್ಪ ಉಳಿದಿದೆ ಮಾರ್ಗವು ಇನ್ನು ಒಣ ಒಣ ರಣದ ಭಣಭಣ, ಇನ್ನು ಮೌನಾಶ್ರಯದಲಿ ಬಂತು ಕತ್ತಲು ಗೋಡೆ, ನಡೆ...