ಚುಮು ಚುಮು ನಸುಕಿನಲಿ
ಹೂವುಗಳರಳುವವು
ಅಂದವ ತೋರಿ ಸುಗಂಧವ ಬೀರಿ
ಸಂಜೆಗೆ ತೆರಳುವವು.
ಅದೆ ಹೊಸ ಹರೆಯದಲಿ
ಆಸೆಯು ಮೊಳೆಯುವದು
ಹೂತು ಕಾತು ಹಣ್ಣಾತು ಬೀತು
ಮುಪ್ಪಿನಲಳಿಯುವದು.
ಗಾಳಿಯ ಗತಿಯಲ್ಲಿ
ದುಃಖದ ಸುಳಿವಿಲ್ಲ
ಚಿಕ್ಕಮಕ್ಕಳೂ ನಕ್ಕ ನಗೆಯಲೂ
ಸುಖಕೂ ಅಳಿವಿಲ್ಲ.
*****
ಚುಮು ಚುಮು ನಸುಕಿನಲಿ
ಹೂವುಗಳರಳುವವು
ಅಂದವ ತೋರಿ ಸುಗಂಧವ ಬೀರಿ
ಸಂಜೆಗೆ ತೆರಳುವವು.
ಅದೆ ಹೊಸ ಹರೆಯದಲಿ
ಆಸೆಯು ಮೊಳೆಯುವದು
ಹೂತು ಕಾತು ಹಣ್ಣಾತು ಬೀತು
ಮುಪ್ಪಿನಲಳಿಯುವದು.
ಗಾಳಿಯ ಗತಿಯಲ್ಲಿ
ದುಃಖದ ಸುಳಿವಿಲ್ಲ
ಚಿಕ್ಕಮಕ್ಕಳೂ ನಕ್ಕ ನಗೆಯಲೂ
ಸುಖಕೂ ಅಳಿವಿಲ್ಲ.
*****