Home / Da Ra Bendre

Browsing Tag: Da Ra Bendre

ಆಕಾಶದಲ್ಲಿ ಧ್ವನಿ-ದೂರದಿಂದ ಕೃಷ್ಣ ಕೃಷ್ಣ ಜಯ ಕೃಷ್ಣ ಮುರಾರೇ ವಿತೃಷ್ಣನಾದೆನು ನಾ ಬಾಯಾರೆ ದ್ವಾರಕೆ ಬಾಗಿಲ ತೆರೆಯದೊ ಬಾರೆ ಉತ್ತರೆಯಿಂದುತ್ತರವನು ತಾರೆ. ಕೃಷ್ಣ ಕೃಷ್ಣ ಜಯ ಜಯ ತ್ರಿಪುರಾರೇ ಶರಪಂಜರದಲಿಯೊರಗರಲಾರೆ ಕೃಷ್ಣ ಕೃಷ್ಣ ಜಯ ಜಯ ಕೃಷ್ಣ ...

-ಬೇಡಿ ಮಾಡುವದೇನು? ಬಂದಂದು, ಬಾ, ನೀನು ಹಿಗ್ಗಿನಿಂಗಡಲ ಮನೆಯೇ! ಬಾಡೇನು! ಎಂದೆಂದು ಆರದಿರು, ಹಾರದಿರು ಕಾಡಹೂ ಜೇನ ಹನಿಯೇ! ಹೆಣಗಿ ಮಾಡುವದೇನು? ದೊರೆವಂದು ದೊರೆ ನೀನು ಕನಿಯ ಬಿಳಿ ಹರಳಗಣಿಯೇ! ಒಣಗೇನು! ಎಂದೆಂದು ಉರುಳದಿರು, ತೆರಳದಿರು ಬಡ ಹುಲ...

ನನ್ನ ಪಂಕದಲ್ಲಿ ಹುಟ್ಟಿ ಲೇಪವಿಲ್ಲದಿರುವೆ, ನನ್ನ ಪಂಕಜವೆ ! ನನ್ನ ನೀರಲ್ಲಿ ಬೆಳೆದು ನೀರಾಳದಲ್ಲಿರುವೆ, ನನ್ನ ನೀರಜವೆ ! ಒಡೆಯಲು ಬಾರದ ಒಡಪಿನಂತಿರುವೆ, ಬಿಡಿಸಿಲು ಬಾರದ ತೊಡಕಿನಂತಿರುವೆ, ನನ್ನ ಮಾನಸದ ಮದಗವೆ ಮುಳುಗಿ ನೋಡಿದೆ. ಮುದ್ದಿಸಿ ನೋಡ...

ಅಹಾ ನನ್ನ ಚೆಂದದ! ಚಂದಿರೆಯೆ! ಕುಂದದ ಕುಡಿಮಲರೆ! ಅಹಾ! ನಾನು ಕೈಕೊಂಡ ಜಿದ್ದೇ! ನನ್ನ ಮೈಗೊಂಡ ಮುದ್ದೆ! ಅಧರದಲ್ಲಿ ಮುದ್ದಾಗಿ ಉದರದಲ್ಲಿ ಮುತ್ತಾಗಿ ಇದಿರು ಮೂರ್‍ತಿಗೊಂಡು ನಿಂತ ಜೀವದ ಹೂವೇ! ಬ್ರಹ್ಮಾಂಡವನೊಳಗೊಂಡ, ನಾನು ಹೊತ್ತು ಹೆತ್ತ-ಪಿಂಡವ...

ಇದಾವ ಹಾಡು ? ಇದಾವ ತಾಲ ? ಇದಾವ ರಾಗ ? ನನ್ನ ಪುಟ್ಟ ಪುರಂದರ ವಿಠಲಾ ! ಕೈಯ ತಾರಮ್ಮಯ್ಯಕ್ಕೆ ತೊದಲು ನುಡಿಯ ತಿಲ್ಲಾಣ; ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ; ಇದಾವ ರಸ ? ಇದಾವ ಭಾವ ? ಇದಾವ ಹಾವ ? ನನ್ನ ಪುಟ್ಟ ಪುರಂದರ ವಿಠಲಾ ! ಮಾತಿನ ಸೂತಕವ...

ಅಹಾ! ನಿನ್ನ ಮೀಸಲು ಮುರಿಯದ ನಗೆಯೆ ಸೂಸಲವಾಗಿಹ ನಗೆಯೆ! ಅಂತರಗಂಗೆಯರಿಯದ ಗಂಗೆ-ನಿನ್ನ ನಗೆ. ಅದೆ ನಿದ್ದೆಯಿಂದೆಚ್ಚತ್ತಾಗಿನ ಇನ್ನೂ ಅರಳದಿದ್ದ ನಿನ್ನ ನಗೆಯು ಏಳನೇಸರಿನ ಹೊಂಬಿಸಿಲ ಕಂದಿಸಿತು. ನೀನು ಅಳುತಿರುವಾಗಲೆ ತಲೆದೋರುವ ಮುಗುಳುನಗೆಯು ಮಳೆ...

ಮೋಹಿನಿಯ ಕೈಯೊಳಗಿನ ಮೊಹಪಾತ್ರ- ಈ ನನ್ನ ಮಗನ ಮೊಗ ಅಂಗಾಂಗದೊಳಗಿನ ದೇವದೇವತೆಗಳು ತಣಿದರು-ಇದರೊಳಗಿನ ರಸವ ಸವಿದು. ನಕ್ಕು ನಕ್ಕು ನಲಿವಾಗ ಬಿಕ್ಕಿ ಬಿಕ್ಕಿ ಅಳುವಾಗ ಮಿಗುವ ಸೊಲ್ಲು ಒಗುವ ಜೊಲ್ಲು ವಾತ್ಸಲ್ಯದ ಸೆಲೆಯ ನೆಲೆದೋರಿತು ನಿದ್ದೆಯೊಳಗಿಂದ ...

ರೆಕ್ಕೆಯ ಕುದುರೆಯನೇರಿ, ಹಕ್ಕಿಯ ಹಾದಿಯ ಹಿಡಿದು, ದಿಕ್ಕಿನ ತುದಿಗಿದ್ದ ಚಿಕ್ಕೆಗಳ ನಾಡಿನಲ್ಲಿ – ಮಾತಿನ ಗಿಳಿಯ ದೂತಿಯ ಮಾಡಿ, ಪ್ರೀತಿಯ ರಸದ ಗೀತಿಯ ಹಾಡಿ, ವೇತಾಳರಾಯನಾ ಕೋಟೆಯ ನೋಡಿ – ರಕ್ಕಸರನ್ನು ಕಾದಿ ಕೊಂದು, ಬೊಕ್ಕಸವನ್ನು ...

ಸ್ವಾಮಿ ನಮ್ಮಪ್ಪಾ-ಮಾಡಪ್ಪಾ! ಮೂಡಣಕೆ ಮೂಡಿದ ಹೊತ್ತಿಗೆ-ಹಗಲಿನ ಬೆಳಕಿಗೆ. ಸ್ವಾಮಿ ನಮ್ಮಪ್ಪಾ-ಮಾಡಪ್ಪಾ! ಮುಗಿಲಲ್ಲಿ ನೆರೆದ ಚಿಕ್ಕೆಯ ಜಾತ್ರೆಗೆ-ಇರುಳ ತಳಕಿಗೆ. ಸ್ವಾಮೀ ನಮ್ಮಪ್ಪಾ-ಮಾಡಪ್ಪಾ! ಬೆಳತಿಗೆಯ ತಿಂಗಳನಿಗೆ-ಹಾಲಗೋಪಾಲನಿಗೆ. ಸ್ವಾಮಿ ನಮ...

ಸುಖದ ಸೆರೆಯಾಗಿ ಬಂತು, ದುಃಖದ ಮರೆಯಾಗಿ ಬಂತು ನನ್ನ ಮಗುವಿನ ಮಮತೆ. ಹಿಗ್ಗಿನ ತೊರೆಯಾಗಿ ಬಂತು, ನಗೆಯ ತೆರೆಯಾಗಿ ಬಂತು, ನನ್ನ ಮಗುವಿನ ಮಮತೆ. ತಳಮಳದ ನೆರೆಯಾಗಿ ಬಂತು, ಕಳವಳದ ನೊರೆಯಾಗಿ ಬಂತು, ನನ್ನ ಮಗುವಿನ ಮಮತೆ. ಮುಗಿಲಿನ ಸೆರೆಯಾಗಿ ಬಂತು,...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...