-ಬೇಡಿ ಮಾಡುವದೇನು?
ಬಂದಂದು, ಬಾ, ನೀನು
ಹಿಗ್ಗಿನಿಂಗಡಲ ಮನೆಯೇ!
ಬಾಡೇನು! ಎಂದೆಂದು
ಆರದಿರು, ಹಾರದಿರು
ಕಾಡಹೂ ಜೇನ ಹನಿಯೇ!
ಹೆಣಗಿ ಮಾಡುವದೇನು?
ದೊರೆವಂದು ದೊರೆ ನೀನು
ಕನಿಯ ಬಿಳಿ ಹರಳಗಣಿಯೇ!
ಒಣಗೇನು! ಎಂದೆಂದು
ಉರುಳದಿರು, ತೆರಳದಿರು
ಬಡ ಹುಲ್ಲ ಮಂಜು ಮಣಿಯೇ!
*****
ಕನ್ನಡ ನಲ್ಬರಹ ತಾಣ
-ಬೇಡಿ ಮಾಡುವದೇನು?
ಬಂದಂದು, ಬಾ, ನೀನು
ಹಿಗ್ಗಿನಿಂಗಡಲ ಮನೆಯೇ!
ಬಾಡೇನು! ಎಂದೆಂದು
ಆರದಿರು, ಹಾರದಿರು
ಕಾಡಹೂ ಜೇನ ಹನಿಯೇ!
ಹೆಣಗಿ ಮಾಡುವದೇನು?
ದೊರೆವಂದು ದೊರೆ ನೀನು
ಕನಿಯ ಬಿಳಿ ಹರಳಗಣಿಯೇ!
ಒಣಗೇನು! ಎಂದೆಂದು
ಉರುಳದಿರು, ತೆರಳದಿರು
ಬಡ ಹುಲ್ಲ ಮಂಜು ಮಣಿಯೇ!
*****
ಕೀಲಿಕರಣ: ಎಂ ಎನ್ ಎಸ್ ರಾವ್