ಭೂಮಿಯು ೬೪೦ ಕಿ.ಮೀ.ಗಳ ದಪ್ಪದ ಗಾಳಿಯ ಕವಚದಿಂದ ಸುತ್ತುವರೆದಿದೆ. ಈ ಕವಚವು ಸುಮಾರು ೨೦ ಅನಿಲಗಳಿಂದ ಕೂಡಿದೆ. ಆ ಅನಿಲಗಳಲ್ಲಿ ಸಾರಜನಕ, ಆಮ್ಲಜನಕಗಳು ಹೆಚ್ಚು ಶೇಕಡಾಂಶವನ್ನು ಹೊಂದಿದೆ. ವಾತಾವರಣವಿಲ್ಲದೇ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ವಾತಾವರಣವು ಸೂರ್ಯನ ಅಪಾಯಕಾರಿ ಕಿರಣ ಮತ್ತು ಹೊರಜಗತ್ತಿನ ಚಳಿಯಿಂದ ನಮ್ಮನ್ನು ರಕ್ಷಿಸುತ್ತದೆ. “ತೂಕ” ಎಂಬ ಪದವನ್ನು ವಸ್ತುವಿನ ಮೇಲಿರುವ ಗುರುತ್ವಾಕರ್ಷಣೆಯನ್ನು ಅಳೆಯಲು ಉಪಯೋಗಿಸಲಾಗಿದೆ. ಸಮುದ್ರಮಟ್ಟದಲಿ ವಾತಾವರಣದಲ್ಲಿ ಒಂದು ಚದರ ಸೆಂ.ಮಿ. ಕ್ಷೇತ್ರದ ಮೇಲೆ ಒಂದು ಕಿಲೋ ಗ್ರಾಂನ ಸ್ಥಿರವಾದ ಒತ್ತಡವನ್ನು ಉಂಟು ಮಾಡುತ್ತದೆ. ನಾವು ಮೇಲ ಮೇಲಕ್ಕೆ ಹೋದಂತೆ ಒತ್ತಡವು ಕಡಿಮೆಯಾಗುತ್ತಾ ಹೋಗುತ್ತದೆ. ಒಟ್ಟು ವಾತಾರವಣವನ್ನು ತೂಗಿದರೆ ಒಟ್ಟು ೫,೧೫೦,೦೦೦,೦೦೦,೦೦೦,೦೦೦ ಟನ್ನುಗಳಷ್ಟು ತೂಗುತ್ತದೆ ಎಂದು ಕಂಡು ಹಿಡಿಯಲಾಗಿದೆ.
*****