Science article

#ವಿಜ್ಞಾನ

ಉರುಬುವ ಹವ್ಯಾಸ ಬಿಡಿ

0

ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಜೊಲ್ಲಿನ ತುಂತುರಿನಿಂದೊಡಗೂಡಿ ತೇವವಾಗಿರುತ್ತದೆ. ಹೀಗೆ ಉರುಬಿದಾಗ ಬಾಯಿಯಿಂದ ಹೊರಟ ಗಾಳಿ ಆಹಾರ ಪಾನೀಯಗಳ ಮೇಲೆ […]

#ವಿಜ್ಞಾನ

ಮಹಾಮಾರಿ ರೋಗ – ಏಡ್ಸ್

0

ಏಡ್ಸ್ ವೈರಸ್ ಏಡ್ಸ್ ಪಸರಿಸಿ ವರ್ಷಗಳೇ ಸಂದರೂ ಅದಕ್ಕೆ ಕಾರಣವಾದ ವೈರಸ್ಸ್ ಬಗ್ಗೆ ತಿಳಿದಿದ್ದಿಲ್ಲ.  ಅಥವಾ ಏ ಆರ ಯು ಮುಂತಾದ ವೈರಸ್‌ಗಳು ಏಡ್ಸ್‌ಗೆ ಕಾರಣವೆಂದು ತಿಳಿಯಲಾಗಿತ್ತು.  ಆದರೆ ಪ್ಯಾಶ್ಚರ್‍ ಇನ್ಸ್‌ಟಿಟ್ಯೂಟ ಪ್ಯಾರಿಸ್‌ನ ತಜ್ಞರಾದ ಪ್ರೊ. ಎಲ್. ಮೊಂಟೆಗ್ನೇರ್‍ ಮತ್ತು ಸಹಪಾಠಿಗಳು ೧೯೮೩ ರಲ್ಲಿ ಏಡ್ಸ್‌ಗೆ ಕಾರಣವೆಂದು ತೋರಿಸಿಕೊಟ್ಟರು.  ಎಚ್.ಅಯ್.ವಿ ಯಲ್ಲಿ ಎಚ್.ಅಯ್.ವಿ-೨ ಎಂದು ಎರಡು […]

#ವಿಜ್ಞಾನ

ಆಮ್ಲ ಮಳೆ

0

ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಮಾರಕವಾದ ಆಮ್ಲ ಮಳೆ ಅತ್ಯಂತ ಅಪಾಯಕಾರಿ.  ಈ ಮಳೆಯಿಂದಾಗುವ ಅನಾಹುತಗಳನ್ನು ಅರಿಯಲು ಜಪಾನ್, ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಜಪಾನ್‌ನಲ್ಲಿ ಸಭೆ ಸೇರಲಿವೆ.  ಇಲ್ಲಿ ರಚಿಸಲಾಗುವ ಸಂಘಟನೆಯು ಏಷ್ಯಾದಲ್ಲಿ ಸುರಿಯುವ ಆಮ್ಲ ಮಳೆಯ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ. ಈ ದಿನಗಳಲ್ಲಿ ದಿನಕ್ಕೊಂದು ಕಾರ್ಖಾನೆ ತಲೆಯೆತ್ತುತ್ತಿದೆ.  ಇವುಗಳ ಜೀವಾಳ ಕಲ್ಲಿದ್ದಲು ಮತ್ತು […]

#ವಿಜ್ಞಾನ

ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

0

‘ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿಯನ್ನು ಯಾರೂ ಅಲ್ಲಗಳೆಯಲಾರರು.  ಈ ಭಾಗ್ಯವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿದೆ.  ಉಚಿತಾನುಚಿತಗಳನ್ನು ಅರಿತು ಸಕಾಲದಲ್ಲಿ ಸೇವಿಸುವ ಶುಚಿರುಚಿಯ ಆಹಾರವು ನಮ್ಮ ಆರೋಗ್ಯಪಾಲನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಇದು ಸಾಮಾನ್ಯ ಅಭಿಪ್ರಾಯ ಮಾತ್ರವಲ್ಲದೇ ವೈದ್ಯಕೀಯ ಅಭಿಪ್ರಾಯವೂ ಹೌದು. […]

#ವಿಜ್ಞಾನ

ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

0

ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿಗೆ ಬೀಳುತ್ತಿರುವಾಗ ತಿನ್ನುವ ಪದಾರ್ಥಗಳು ಹೆಚ್ಚು ರುಚಿಯಾಗಿ ಕಾಣಿಸುತ್ತದೆಂದು ಅವರ ಪ್ರಯೋಗಗಳಲ್ಲಿ ವ್ಯಕ್ತವಾಗಿದೆ. ವ್ಯಕ್ತಿಗಳು ಬೀರ್‍, ಕಾಫಿ, ಚಹಾ, ವಿಸ್ಕಿ ಇಂಥ ವಿವಿಧ ಪೇಯಗಳನ್ನು ಸೇವಿಸುತ್ತಿರುವಾಗ […]

#ವಿಜ್ಞಾನ

ತಂಬಾಕು – ಕೆಲ ಮಾಹಿತಿಗಳು

0

ಹೊಗೆ ಸೊಪ್ಪು ಒಂದು ವಿಷ ಪದಾರ್ಥ.  ಅದರ ಗಿಡ ಸುಮಾರು ಎರಡರಿಂದ ಎರಡೂವರೆ ಅಡಿ ಎತ್ತರವಾಗಿರುತ್ತದೆ.  ಅದರೆಲೆಗಳು ಅರಿಸಿನ ಬಣ್ಣದ್ದಿರುತ್ತವೆ.  ಇವೇ ಎಲೆಗಳನ್ನು ಒಣಗಿಸಿ, ಸೇವಿಸಲು, ಸೇದಲು ಉಪಯೋಗಿಸುತ್ತಾರೆ.  ತಂಬಾಕಿನಲ್ಲಿ ಯ್ಯಾವ್ಯಾವ ವಿಷಪದಾರ್ಥ ಅಡಗಿವೆಯೆಂಬುದು ಕೆಳಗೆ ಕೊಡಲಾಗಿದೆ: ೧. ನಿಕೋಟಿನ್ – ಎಂಬ ವಿಷಪದಾರ್ಥ. ೨. ಟಾರ್‍ – ಪಪ್ಪುಸವನ್ನು ಕರ್‍ರಗೆ ಮಾಡುವಂತಹದು. ೩. ಅಮೋನಿಯ […]

#ವಿಜ್ಞಾನ

ಗ್ರೀನ್ ಹೌಸ್ ಎಫೆಕ್ಟ್

0

“ಗ್ರೀನ್‌ಹೌಸ್” ಎಂದರೆ “ಹಸಿರುಮನೆ” ಎಂದರ್ಥ.  ಒಂದು ದೊಡ್ಡ ಮನೆಯಾಕಾರದ ಕಟ್ಟಡ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ.  ಈ ಮನೆಯಲ್ಲಿ ಗಾಳಿ, ಉಷ್ಣತೆ, ಇಂಗಾಲದ ಡೈಆಕ್ಸೈಡ್, ತಂಪು ಮುಂತಾದವುಗಳನ್ನು ಅಗತ್ಯವಿದ್ದಷ್ಟು ಪೂರೈಸಿ ಗಿಡಗಳನ್ನು ಬೆಳೆಸುತ್ತಾರೆ.  ಈ ಮನೆ ಸೂರ್ಯನಿಂದ ಬರುವ ಬಿಸಿಲನ್ನು ಹೀರಿಕೊಳ್ಳುತ್ತದೆ, ಆದರೆ ಬಿಡುವುದಿಲ್ಲ.  ಹೀಗಾಗಿ ಇದರಲ್ಲಿನ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ. ನೈಸರ್ಗಿಕ ಹಸಿರುಮನೆ “ಓಜೋನ್” […]

#ವಿಜ್ಞಾನ

ಗರ್ಭದಲ್ಲಿರುವ ಮಗುವಿನೊಂದಿಗೆ ಸಂಭಾಷಣೆ

0

ಗರ್ಭದಲ್ಲಿರುವ ಮಗು ಹೊರಜಗತ್ತಿನೊಂದಿಗೆ ಯಾವ ಸಂಪರ್ಕವನ್ನು ಹೊಂದಿರಲಾರದು ಎಂಬ ಈವರೆಗಿನ ವಿಜ್ಞಾನ, ಈಗ ಬದಲಾಗಿದೆ. ಗರ್ಭಧರಿಸಿದವಳು ತನ್ನ ಹೊಟ್ಟೆಯೊಳಗಿನ ಮಗುವಿನೊಂದಿಗೆ ಮಾತನಾಡಬಹುದು ಎಂಬ ಸಂಶೋಧನೆಯನ್ನು ಬ್ರಿಟನ್ನಿನ ವಿಜ್ಞಾನಿ ಕ್ರಿಸ್ಟಫರ್ ಪ್ರಯೋಗಗಳಿಂದ ದೃಢೀಕರಿಸಿದ್ದಾರೆ. ಗರ್ಭಧರಿಸಿದ ತಾಯಿ ಮಾನಸಿಕವಾಗಿ, ದೈಹಿಕವಾಗಿ ಬಳಲಿದಾಗ ಮಗು ಬಳಲುತ್ತದೆ. ಉಲ್ಲಾಸದಿಂದಿರುವಾಗ ಒಳಗಡೆಯ ಶಿಶುವೂ ಕೂಡ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ. ತಾಯಿಯಾದವಳು ಗರ್ಭದೊಳಗಿನ ತನ್ನ […]

#ವಿಜ್ಞಾನ

ಇದೇನಿದು ಆಮ್ಲಮಳೆ !?

0

ಮಾನವ ಪ್ರಗತಿ ಹೊಂದಿದಂತೆ, ಹೊಸ ಆವಿಷ್ಕಾರಗಳು ಬಂದವು. ಈ ಅವಿಷ್ಕಾರಗಳಿಂದ ಜಗತ್ತಿನೆಲ್ಲೆಡೆ ಜನತೆಗೆ ಉಪಕಾರವಾಗುವುದೊಂದು ಕಡೆಯಾದರೆ ಆಪಾಯಗಳಾಗುವ ಭೀತಿಯೇ ಹೆಚ್ಚಾಗಿದೆ. ಈಗ ಪ್ರತಿದಿನ ಅಗಾಧ ಪ್ರಮಾಣದಲ್ಲಿ ಇಂಧನಗಳನ್ನು ಉರಿಸಲಾಗುತ್ತದೆ. ಭಾರಿ ವಿದ್ಯುತ್ ಸ್ಥಾವರಗಳಲ್ಪಿ ಸಣ್ಣ ಮತ್ತು ದೊಡ್ಡ ಕೈಗಾರಿಕೆ- ಗಳಲ್ಲಿ ಅಸಂಖ್ಯಾತ ವಾಹನಗಳಿಂದಾಗಿ, ನೆಲದೊಳಗಿನ ತೈಲ, ಅನಿಲ, ಕಲ್ಲಿದ್ದಲು ಇಂಧನಗಳನ್ನು ಮಿತಿಮೀರಿ ಬಳಸಲಾಗುತ್ತದೆ. ಈ ಹೊರಬರುವ […]

#ವಿಜ್ಞಾನ

ಆಕರ್ಷಕ ಮರದ ಟೆಲಿಫೋನ್ ಮಾರುಕಟ್ಟೆಗೆ

0

ಇದುವರೆಗೆ ಪೈಬರ್ ಮತ್ತು ಪ್ಲಾಸ್ಟಿಕ್‌ನ ಫೋನ್‌ಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವಿದ್ಯುತ್ ಸರ್ಕ್ಯುಟ್ ಅಪಾಯ ಮತ್ತು ವಿದ್ಯುಶಾಖ ಹೊಡೆಯುವುದು ಆಗುತ್ತಿತ್ತು ಈದೀಗ ಗಂಟೆ ಬಾರಿಸುವ ಮರದ ಟೆಲಿಫೋನ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆಕ್ಕರ ಗ್ರಾಮದ ಉದ್ಯಮಿ ಕೃಷ್ಣಭಟ್ ಅವರು ತಯಾರಿಸಿದ್ದಾರೆ. ಇದು ಇಂದಿನ ತಾಂತ್ರಿಕ ಯುಗದಲ್ಲಿ ಟೆಲಿಫೋನ್ ಜಗತ್ತಿಗೆ ಪೈಪೋಟಿ ನಡೆಸುತ್ತದೆ. ‘ಉಡ್‌ಬೆಲ್’ ಎಂದು […]