ಮಾನವ ಪ್ರಗತಿ ಹೊಂದಿದಂತೆ, ಹೊಸ ಆವಿಷ್ಕಾರಗಳು ಬಂದವು. ಈ ಅವಿಷ್ಕಾರಗಳಿಂದ ಜಗತ್ತಿನೆಲ್ಲೆಡೆ ಜನತೆಗೆ ಉಪಕಾರವಾಗುವುದೊಂದು ಕಡೆಯಾದರೆ ಆಪಾಯಗಳಾಗುವ ಭೀತಿಯೇ ಹೆಚ್ಚಾಗಿದೆ. ಈಗ ಪ್ರತಿದಿನ ಅಗಾಧ ಪ್ರಮಾಣದಲ್ಲಿ ಇಂಧನಗಳನ್ನು ಉರಿಸಲಾಗುತ್ತದೆ. ಭಾರಿ ವಿದ್ಯುತ್ ಸ್ಥಾವರಗಳಲ್ಪಿ ಸಣ್ಣ ಮತ್ತು ದೊಡ್ಡ ಕೈಗಾರಿಕೆ- ಗಳಲ್ಲಿ ಅಸಂಖ್ಯಾತ ವಾಹನಗಳಿಂದಾಗಿ, ನೆಲದೊಳಗಿನ ತೈಲ, ಅನಿಲ, ಕಲ್ಲಿದ್ದಲು ಇಂಧನಗಳನ್ನು ಮಿತಿಮೀರಿ ಬಳಸಲಾಗುತ್ತದೆ. ಈ ಹೊರಬರುವ ಹೊಗೆಯ ಜೊತೆಗೆ ಗಂಧಕದ ಡೈಯಾಕ್ಸೈಡ್ (S02) ಸಾರಜನಕ, ಇಂಗಾಲಗಳ ವಿವಿಧ ಬಗೆಯ ಆಕ್ಸೈಡ್‌ಗಳ ಉತ್ಪತ್ತಿಯಾಗಿ ಪರಿಸರದಲ್ಲಿ ಸೇರುತ್ತವೆ. ಇದರ ಜತೆಗೆ ವಿಷಾನಿಲಗಳು ಸೂಕ್ಷ್ಮಕಣಗಳಾಗಿ ಅಲ್ಲಲ್ಲೇ ತೇಲುತ್ತ ಕೊನೆಗೆ ಕೆಳಬಂದು ಭೂಮಿಗಿಳಿಯುತ್ತವೆ. ಗಿಡ, ಮರ ಕಟ್ಟಡಗಳ ಮೇಲೆ ಕಪ್ಪಾಗಿ (ಮಸಿ) ಮುಸುಕುತ್ತದೆ. ಮಳೆಬಂದಾಗ ಅಥವಾ ಇಬ್ಬನಿ ಸುರಿದಾಗ ತೇವಾಂಶದಲ್ಲಿ ಕರಗಿ ಆಮ್ಲವಾಗಿ ಬಿಡುತ್ತದೆ. ತನ್ನ ಸ್ಪರ್ಶಕ್ಕೆ ಸಿಲುಕುವ ಎಲ್ಲ ವಸ್ತುಗಳೊಂದಿಗೆ ಸಂಯೋಗ ನಡೆಯಿಸಿ ಕೊರೆಯಲಾರಂಭಿಸುತ್ತದೆ. ನಿಧಾನವಾಗಿ ವಸ್ತುಗಳು ಕರಗುವಂತೆ ಮಾಡುತ್ತದೆ. ಇದು ಮೋಡಗಳೊಡನೆಯೂ ಸೇರಿಕೊಳ್ಳುತ್ತದೆ. ವಿಷಾನಿಲವೂ ಸಹ ತೇಲುತ್ತ ಹೋಗಿ ಮೋಡಗಳೊಳಗೆ ಒಂದಾಗುತ್ತದೆ. ಈ ಮೋಡಗಳು ಭೂಮಿಗೆ ಮಳೆಯಾಗಿ ಸುರಿಯುವಾಗ ನೀರಿನ ಜತೆ ಮಿಶ್ರಣಗೊಂಡು ‘ಆಮ್ಲಮಳೆ’ಯಾಗಿ ಬಿಡುತ್ತದೆ.

ಗಂಧಕ, ಸಾರಜನಕ, ಹಾಗೂ ಇಂಗಾಲದ ವಿವಿಧ ಆಕ್ಸೈಡ್‌ಗಳ ಬಹುಭಾಗ ಮುಗಿಲಲ್ಲಿ ಏರುತ್ತ ಉನ್ನತ ಸ್ಥರದಲ್ಲಿ ವಾಯು ಪ್ರವಾಹದಲ್ಲಿ ಬೆರೆತು, ವಿವಿಧ, ವಿಭಿನ್ನ ಸಂಯುಕ್ತ ವಸ್ತುಗಳಾಗಿ ಮಾರ್ಪಟ್ಟು ಕೊನೆಗೆ ಮೋಡಗಳಲ್ಲಿ ಬೆರೆತುಕೊಳ್ಳುತ್ತದೆ. ಮಂಜಿನ ಕಣಗಳಲ್ಲಿ ಲೀನಗೊಂಡು ನೈಟ್ರಿಕ್ ಆಮ್ಲ ಕಾರ್ಬನಿಕ್ ಆಮ್ಲ್ತ್ರ ಗಂಧಕಾಮ್ಲ ರೂಪದಲ್ಲಿ ನೆಲವನ್ನು ತಲುಪಿ ಅನೇಕ ದುಷ್ಪರಿಣಾಮವನ್ನು ಮಾಡುತ್ತದೆ. ಇದರ ದುಷ್ಟರಿಣಾಮವಾಗಿಯೇ ಜಗತ್ತಿನ ಸುಂದರ ಶಿಲ್ಪಿಗಳು, ಕಟ್ಟಡಗಳು ಸೇತುವೆಗಳು ವಿರೂಪಗೊಳ್ಳುವುದಲ್ಲದೇ ಶಿಥಿಲಗೊಳ್ಳುತ್ತವೆ.

ಸುಂದರ ವಾಸ್ತುವೈಭವಗಳಾದ ತಾಜಮಹಲ್ (ಭಾರತ) ಅಥೇನ್ಸಿನ ಪಾರ್ಥೆನಾನ್, ರೋಮನ ಕೊಲೋಸಂ- ಗಳಂಥಹ ಅನುಪಮ ವಾಸ್ತುಶಿಲ್ಪಕಲಾ ವೈಭವಗಳು ಈ ಆಮ್ಲಮಳೆಯಿಂದಾಗಿ ನಿಧಾನವಾಗಿ ವಿರೂಪಗೂಳ್ಳುತ್ತವೆ. ಈ ಆಮ್ಲಮಳೆಯಿಂದಾಗಿ ಅಮೇರಿಕಾ, ಬ್ರಿಟನ, ಪ್ರಾನ್ಸ್, ಕೆನಡಾ ಇನ್ನು ಇತರ ದೇಶಗಳಲ್ಲಿಯ ಭೂಮಿ ನಿಸ್ಸಾರ- ಗೊಳ್ಳುತ್ತಲಿದೆ. ಈ ಆಮ್ಲದಿಂದಾಗಿ ಮನುಷ್ಯರ ಉಸಿರಾಟಕ್ಕೂ ಸಂಚಕಾರ ಬರುತ್ತದೆ. ಅಮ್ಲಮಳೆಗೆ ಮೂಲಕಾರಣ- ವಾದ ಸಾರಜನಕ, ಗಂಧಕ, ಕಾರ್ಬನ್‌ಡೈ ಆಕ್ಸೈಡ್ ವಾತಾವರಣಕ್ಕೆ ಬೆರೆಯದಂತೆ ಮಾಡುವುದೊಂದೇ ಈಗಿರುವ ಮಾರ್ಗ. ಕಲ್ಲಿದ್ಡಲುಗಳನ್ನು ಗಂಧಕ ರಹಿತವಾಗಿಸುವುದು, ಎಲ್ಲ ವಾಹನಗಳಲ್ಲಿ Catalytic Converter ಗಳನ್ನು ಅಳವಡಿಸಿ, ಅವುಗಳ ಹೊಗೆಯಲ್ಲಿ ಸಾರಜನಕ ಇಂಗಾಲಗಳನ್ನು ಕಡಿಮೆ ಮಾಡುವುದು, ಕೈಗಾರಿಕೆಗಳ ಹೊಗೆ- ಗಳನ್ನು ಶುದ್ಧೀಕರಿಸಿ ಬಿಡುವುಡು. ಈ ಕ್ರಮಗಳನ್ನು ಜಾರಿಗೆ ತಂದರೆ ಆಮ್ಲಮಳೆಯು ತನ್ನ ಕದಂಬ ಬಾಹುಗಳನ್ನು ಕತ್ತರಿಸಿಕೊಳ್ಳುತ್ತದೆ. ನೇರವಾಗಿ, ತಕ್ಷಣಕ್ಕೆ ಅಪಾಯ ಕಂಡು ಬರದಿದ್ಡರೂ ಇನ್ನೂ ಕೆಲವು ವರ್ಷಗಳಲ್ಲಿ ಜಗತ್ತಿನ ಅನೇಕ ಪಟ್ಟಣಗಳ ಮೇಲೆ ಆಮ್ಲಮಳೆ ಸುರಿದು ಸರ್ವನಾಶಗೊಳಿಸಬಹುದು.

೧೮೫೨ ರಲ್ಲಿಯೇ ಇಂಗ್ಲಿಂಡಿನ ಪ್ರಸಿದ್ಡ ರಸಾಯನ ಶಾಸ್ತ್ರಜ್ಞ ರಾಬರ್ಟ್ ಏಂಗಸ್‌ಸಿತ್, ಮ್ಯಾಂಚೆಸ್ಟರ್‌ನಲ್ಲಿ ಸುರಿದ ಮಳೆನೀರಿನಲ್ಲಿ ಅಸಾಧಾರಣವಾದ ಆಮ್ಲೀಯ ಮಟ್ಟ ಇದ್ದುದನ್ನು ಗುರುತಿಸಿದ್ದರು ೧೯೬೦ರಲ್ಲಿ ಸ್ವೀಡನ್ ತಜ್ಞ ಸ್ಟೇಂಟಿಓಡನ್ ಅವರು ‘ಆಮ್ಲಮಳೆ’ “ನಿಸರ್ಗದ ಮೇಲೆ ಮಾನವ ಹೂಡಿರುವ ಒಂದು ರಾಸಾಯನಿಕ ಸಮರ” ಎಂದು ಹೇಳಿದರು. ಈ ಮಾತು ಅಂದು ಸತ್ಯ ಮತ್ತು ಇಂದು, ಮುಂದೆದೂ ಸತ್ಯವಾಗಲಿದೆ.
******