Home / ಲೇಖನ / ವಿಜ್ಞಾನ / ಗಂಡಿಲ್ಲದೇ ಕೇವಲ ಹೆಣ್ಣಿಗೆ ಜನಿಸಿದ ಶಿಶು !?

ಗಂಡಿಲ್ಲದೇ ಕೇವಲ ಹೆಣ್ಣಿಗೆ ಜನಿಸಿದ ಶಿಶು !?

ಜಪಾನಿನ ಟೊಕಿಯೋ ಕೃಷಿ ವಿ.ವಿ.ಯ ಜೀವಶಾಸ್ತ್ರಜ್ಞ ಟೊಮೊಹಿರೋಕೊನೊ, ಎಂಬ ವಿಜ್ಞಾನಿ ವಿರ್ಯಾಣುವನ್ನು ದೂರವಿಟ್ಟು ಕೇವಲ ಎರಡು ಅಂಡಾಣುಗಳ ಸಹಾಯದಿಂದ ಇಲಿ, ಮರಿಯೊಂದು ಜನ್ಮತಳೆಯುವಂತೆ ಮಾಡಿದ ಸಾಹಸಿ ವಿಜ್ಞಾನಿ. ಈ ಮರಿ ಇಲಿಯ ಹೆಸರು ಕಾಗುಯಾ ಜೀವಶಾಸ್ತ್ರದ ನಂಬಿಕೆಗಳನ್ನೇ ಹುಸಿಗೂಳಿಸಿದ ಸಂಶೋಧನೆ ಇದಾಗಿದೆ. ಗಂಡು ಒದಗಿಸುವ ವಿರ್ಯಾಣುವಿನ ಸಹಕಾರವಿಲ್ಲದೇ ಕೇವಲ ಅಂಡಾಣುಗಳು ಪರಿಪೂರ್ಣ ಜೀವಿಯಾಗಿ ಬೆಳೆಯಬಲ್ಲ ಕ್ರಿಯೆ ಪ್ರಾಣಿ ಜಗತ್ತಿನಲ್ಲಿ ಹೊಸದೇನೂ ಅಲ್ಲ. ಅದು ಉಭವಯವಾಸಿಗಳಲ್ಲಿ (ಕಪ್ಪೆ ಇತ್ಯಾದಿ) ಮೀನುಗಳಲ್ಲಿ ಕೀಟಗಳಲ್ಲಿ ಕಂಡುಬರುತ್ತದೆ. ಅಂತಹ ಪ್ರಕ್ರಿಯೆಯನ್ನು ‘ಪಿತೃ ರಹಿತಜನನ’, ಎಂದು ಕರೆಯುತ್ತಾರೆ. ಗಂಡು ಹೆಣ್ಣಿನ ಮಿಥುನವಿಲ್ಲದೇ ಈ ಇಲಿ ಮರಿಯನ್ನು ಸೃಷ್ಟಿಸಿದ್ದಾರೂ ಹೇಗೆ? ವಿರ್ಯಾಣು ಮತ್ತು ಅಂಡಾಣುವಿನ ನಡುವಿನ ವಿಶಿಷ್ಟ ತಾಳಮೇಳಗಳನ್ನು ಅರ್‍ಥೈಸಿಕೊಳ್ಳಬೇಕಿದೆ. ಸಸ್ತಿನಿಗಳಲ್ಲಿ ಲೈಂಗಿಕ ಸಂತಾನೋತ್ಪಾದನೆ ನಡೆದಾಗ ತಂದೆಯ ವಂಶವಾಹನಿ ಒಂದು ಗುಂಪು ವಿರ್ಯ್ಯಾಣುವಿನ ಮೂಲಕ ಒದಗಿ ಬಂದರೆ ತಾಯಿಯ ವಂಶವಾಹಿಗಳ ಒಂದು ಗುಂಪು ಅಂಡಾಣುವಿರಲ್ಲಿರುತ್ತದೆ. ಅಂದರೆ ಅವೆರಡರ ಸಂಯೋಗದಿಂದ ಜನ್ಮತಾಳೆಯುವ ಶಿಶುವಿನಲ್ಲಿ ತಂದೆ ಮತ್ತು ತಾಯಿ ಇಬ್ಬರ ವಂಶವಾಹಿಗಳು ಕಂಡು ಬರುತ್ತವೆ. ಇಂಥಹ ಬೆಳವಣಿಗೆಯೊಂದು ನೈಸರ್ಗಿಕವಾಗಿ ಸಾಧ್ಯವಾಗಬೇಕೆಂದಾದರೆ ಅಂಡಾಣು ಮತ್ತು ವೀರ್‍ಯಾಣುವಿನ ಸಂಯೋಗವಾಗಬೇಕು.

ಇಲಿಗಳಲ್ಲಿರುವ ಅಂಡಾಣುಗಳಲ್ಲಿ ಇಂಡ್ರಿಂಟ್, ಇನ್ನು ಪರಿಪೂರ್‍ಣಗೊಂಡಿರುವುದಿಲ್ಲ ಅಂದ ಮೇಲೆ ಆ ಅಂಡಾಣುಗಳನ್ನು ವಿರ್ಯಾಣುಗಳ ಬದಲು (ರೂಪದಲ್ಲಿ) ಬಳಸಿಕೊಳ್ಳಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಕೂಡಿದ ಅಂಡಾಣುಗಳನ್ನು ಮತ್ತು ಪ್ರೌಢ ಅಂಡಾಣುಗಳನ್ನು ಜತೆಗೂಡಿಸಿ ನೋಡಿದರು. ವಿಭಜನೆಯೇನೋ ಪ್ರಾರಂಭಗೊಂಡಿತು. ಭ್ರೂಣವೂ ರೂಪಗೊಂಡಿತು. ಆದರೆ ಮಾಸು (Plecenta) ಸ್ಪಷ್ಟವಾಗಿ ರೂಪುಗೊಂಡಿರದ ಕಾರಣ ಅದಕ್ಕಿಂತ ಹೆಚ್ಚಿನ ಬೆಳವಣಿಗೆ ಕಂಡು ಬರದೇ ಇಲ್ಲ ಅಂದರೆ ಇಂಪ್ರೆಟೆಡ್ ವಂಶವಾಹಿಗಳು ಈ ಹಂತದಲ್ಲಿ ಅಸಂಬದ್ಧಗೂಂಡವು. ಕೊನೆಗೆ ಕೊನೊ, ಅವರ ತಂಡ ಇಲಿಗಳಲ್ಲಿ ಅಂತಹ ಎರಡು ವಂಶವಾಹಿಗಳತ್ತ ಗಮನ ಹರಿಸಿತು. Iy.f2 ಬ್ರೂಣದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಇದು ಅವಶ್ಯಕವಾಗಿದೆ. (ಆದರೆ ಇದು ವಿರ್ಯಾಣಗಳಲ್ಲಿ ಮಾತ್ರ ಇದೆ) ಅಂಡಾಣುಗಳಲ್ಲಿ H lg ಎಂಬ ಮತ್ತೊಂದು ವಂಶವಾಹಿ ಇರುತ್ತದೆ. ಅದು ಅಂಡಾಣುವಿನಲ್ಲಿರುವ IG.f2 ವಂಶವಾಹಿಗಳು ತಮ್ಮ ಸಾಮಾರ್‍ಥ್ಯ ಪ್ರದರ್ಶನ ಮಾಡದಂತೆ ತಡೆಯೊಡ್ಡಿ ಬಿಡುತ್ತವೆ. ಅಂದರೆ ಎರಡು ಅಂಡಾಣುಗಳನ್ನು ಸೇರಿಸಿದಾಗ ವಂಶವಾಹಿಗಳು ಕಾರ್ಯನಿರ್ವಹಿಸುವುದೇ ಇಲ್ಲ ಅಂದ ಮೇಲೆ ಭ್ರೂಣದ ಬೆಳವಣಿಗೆ ಯಾಗುವುದಾದರೂ ಹೇಗೆ? ಪುನಃ ಎರಡು ಅಂಡಾಣುಗಳನ್ನು ಸೇರಿಸುವಾಗ ಆ ಪ್ರೌಢವಸ್ಥೆಯ ಅಂಡಾಣುವಿನ H19 ವಂಶವಾಹಿಯನ್ನು ವಿಜ್ಞಾನಿಗಳು ವಿಶೇಷ ಕೈಚಳಕ ನಡೆಸಿ ಆಫ್ ಮಾಡಿಯೇ ಬಿಟ್ಟರು. ಅದರಲ್ಲಿನ I.GF2, ವಂಶವಾಹಿ ಆನ್, ಆಗಿ ಕಾರ್ಯನಿರ್ವಹಿಸಲಾರಂಭಿಸಿತು. ಅಲ್ಲಿಗೆ ಇಲಿಯಲ್ಲಿನ ಸಂತಾನೋತ್ಪಾದನಾ ವ್ಯವಸ್ಥೆ ಆ ಪ್ರೌಢ ಅಂಡಾಣುವನ್ನೇ ವಿರ್ಯಾಣು ಎಂದು ಭಾವಿಸಿತು. ಭ್ರೂಣದ ಸುಲಲಿತ ಅಭಿವೃದ್ಧಿ ಕಂಡು ಬಂತು. ಹೊಸದೊಂದು ಇಲಿ ಜನ್ಮ ತಳೆಯಿತು. ಈ ಇಡೀ ಪ್ರಕ್ರಿಯೆ ಪ್ರೌಢ ಅಂಡಾಣು ಮತ್ತು IGF2 ಉತ್ಪಾದಿಸುವ ಆ ಪ್ರೌಢವಸ್ಥೆ ಅಂಡಾಣು ಎರಡನ್ನು ಸೇರಿಸಿ ವಿಶೇಷ ಅಂಡಗಳನ್ನು ತಯಾರಿಸಿದ ವಿಜ್ಞಾನಿಗಳು ಅಂತಹ ೪೫೭ ಅಂಡಾಣುಗಳನ್ನು ರೂಪಿಸಿಬೇಕಾಯಿತು. ಅವು ಬ್ಲಾಸ್ಕೋ ಸಿಸ್ಟ್‌ಗಳಾಗಿ ಬೆಳವಣಿಗೆ ಹೊಂದಿದವು. ಹೀಗೆ ಬ್ಲಾಸ್ಕೋಸಿಸ್ಟ್‌ಗಳಾಗಿ ೩೭೧ ಅಂಡಾಣುಗಳು ಮಾತ್ರ ಮುಂದೆ ತಾಯಿಗರ್ಭದಲ್ಲಿ ರೂಪುಗೊಂಡ ಇಲಿಮರಿಗಳು ಕೇವಲ ಹತ್ತು ಜನ್ಮ ತಳೆಯುವ ವೇಳೆಗೆ ಉಳಿದದ್ದು ಎರಡು ಮಾತ್ರ ಕೊನೆಗೆ ಈಗ ಉಳಿದದ್ದು ಕಾಗೂಯಾ, ಮಾತ್ರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...