ಗರ್ಭದಲ್ಲಿರುವ ಮಗು ಹೊರಜಗತ್ತಿನೊಂದಿಗೆ ಯಾವ ಸಂಪರ್ಕವನ್ನು ಹೊಂದಿರಲಾರದು ಎಂಬ ಈವರೆಗಿನ ವಿಜ್ಞಾನ, ಈಗ ಬದಲಾಗಿದೆ. ಗರ್ಭಧರಿಸಿದವಳು ತನ್ನ ಹೊಟ್ಟೆಯೊಳಗಿನ ಮಗುವಿನೊಂದಿಗೆ ಮಾತನಾಡಬಹುದು ಎಂಬ ಸಂಶೋಧನೆಯನ್ನು ಬ್ರಿಟನ್ನಿನ ವಿಜ್ಞಾನಿ ಕ್ರಿಸ್ಟಫರ್ ಪ್ರಯೋಗಗಳಿಂದ ದೃಢೀಕರಿಸಿದ್ದಾರೆ. ಗರ್ಭಧರಿಸಿದ ತಾಯಿ ಮಾನಸಿಕವಾಗಿ, ದೈಹಿಕವಾಗಿ ಬಳಲಿದಾಗ ಮಗು ಬಳಲುತ್ತದೆ. ಉಲ್ಲಾಸದಿಂದಿರುವಾಗ ಒಳಗಡೆಯ ಶಿಶುವೂ ಕೂಡ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ.
ತಾಯಿಯಾದವಳು ಗರ್ಭದೊಳಗಿನ ತನ್ನ ಮಗುವಿನೊಂದಿಗೆ ಮಾತನಾಡಲು ‘ಎಂಬ್ರಿಯೋಫೋನ್’ ಎಂಬ ಹೊಸ ಉಪಕರಣವನ್ನು ಬಳಸಬಹುದಾಗಿದೆ. ಸಣ್ಣ ಗಾತ್ರದ ಒಂದು ಮೈಕ್ರೋಫೋನ್ ಮತ್ತು ಮೊಬೈಲ್ ರೀಸಿವರ್‌ವನ್ನು ಒಳಗೊಂಡಿರುವ ಈ ಉಪಕರಣವನ್ನು ಗರ್ಭಿಣಿಯ ಸೊಂಟಕ್ಕೆ ಬೆಲ್ಟಿನ ಮೂಲಕ ಕಟ್ಟಲಾಗುತ್ತದೆ. ಕೈಯಲ್ಲಿರುವ ರಿಸೀವರ್‌ನಲ್ಲಿ (ಮೂಲಕ) ಮಾತನಾಡಿದಾಗ ಆ ಶಬ್ಧಗಳನ್ನು ಮೈಕ್ರೋಫೋನ್ ದಾಖಲಿಸಿಕೊಂಡು ಗರ್ಭದಲ್ಲಿರುವ ಮಗುವಿನ ಕಿವಿಗೆ ತಲುಪಿಸುತ್ತದೆ. ಗರ್ಭಿಣಿಯು ತಾನು ಗರ್ಭಧರಿಸಿದ ೪ನೇ ತಿಂಗಳಿನಿಂದ ಈ ರೀತಿಯ ಸಂದೇಶಗಳನ್ನು ಗರ್ಭಸ್ಥ ಶಿಶುವಿನ ಕಿವಿಗೆ ಕಳಿಸಬಹುದು.
ಈ ರೀತಿ ಗರ್ಭದೊಳಗಿನ ಶಿಶುವಿನೊಂದಿಗೆ ಸಂಭಾಷಣೆ ನಡೆಸುವುದರಿಂದ ಮಗುವಿನ ನರವ್ಯೂಹಗಳಲ್ಲಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಮಾನಸಿಕ, ದೈಹಿಕವಾಗಿಯೂ ಮಗು ಆರೋಗ್ಯಪೂರ್ಣವಾಗಿ ಬೆಳವಣಿಗೆ ಹೊಂದುತ್ತದೆಂದು ಸಂಶೋಧಕರು ಪ್ರಯೋಗಗಳಿಂದ ಕಂಡುಕೊಂಡಿದ್ದಾರೆ ಅಲ್ಲದೇ ಹೆರಿಗೆಯ ಸಮಯದಲ್ಲಿಯೇ ಮಗು ತಾಯಿಯನ್ನು ಗ್ರಹಿಸಲು ಇದರಿಂದ ಸಾಧ್ಯವಾಗುತ್ತದೆ. ‘ಎಂಬ್ರಿಯೋ ಫೋನ್’ ಎನ್ನುವ ಈ ಉಪಕರಣ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ.
******