ವಾಗ್ದೇವಿ – ೫೦

ವಾಗ್ದೇವಿ – ೫೦

ದುಷ್ಮಾನರು ಅಪಜಯ ಹೊಂದಿ, ಶಿಕ್ಷೆಗೆ ಪಾತ್ರರಾದರೆಂಬ ಆಹ್ಲಾದ ಕರವಾದ ವಾರ್ತೆಯು ಕಿವಿಗೆ ಬೀಳುತ್ತಲೇ ವಾಗ್ದೇವಿಯೂ ಚಂಚನೇತ್ರರೂ ಪುಳಕಿತರಾದರು. ಭೀಮಾಜಿಗೂ ಶಾಬಯ್ಯಗೂ ಸದ್ಭಶರಾದ ಗಂಡುಗಲಿ ಗಳು ಹುಟ್ಟಲೇ ಇಲ್ಲವೆಂದರು. ಸಕ್ರೆ ಪಂಚಕಜ್ಜಾಯ ದೊಡ್ಡ ದೊಡ್ಡ ದೋಣಿಗಳಲ್ಲಿ ಕಲಸಿ, ಊರೆಲ್ಲಾ ಹಂಚಿದರು. ಕೊತ್ಟಾಲನ ಮತ್ತು ಕಾರಭಾರಿಯು ಜವಾನರಿಗೆ ಉಡುಗೊರೆಗಳಿಂದ ಸಾಕು ಸಾಕೆನ್ನಿಸಿದರು. ಅಂದು ಸಾಯಂಕಾಲ ಭೀಮಾಜಿಯು ಮಠದಲ್ಲಿ ವಾಗ್ದೇನಿಯನ್ನು ಕಂಡು ಈ‌ಗಲಾದರೂ ನಿನ್ನ ಮನಸ್ಸು ತೃಪ್ತಿಯಾಯಿತೇ?? ಎಂದು ಕೇಳಿದನು. ನಾಲ್ಕು ಮಠಾಧಿಪತಿಗಳು ಬಿಟ್ಟ ಮಂಡೆಯಲ್ಲಿ ಕಚೇರಿ ಹತ್ತಿದ್ದು ನೋಡ ಬೇಕೆಂಬ ಆಶೆಯೊಂದು ತುಂಬಾ ಅದೆ. ಅಂದಾಗ ಶೀಘ್ರದಲ್ಲಿ ಅಂಥಾ ದ್ದೊಂದು ವಿನೋದವಾಗುವ ಸಂಭವ ಉಂಟು; ಸಟೆಯಲ್ಲವೆಂದು ಅವಳಿಗೆ ಭರವಸೆ ಕೊಟ್ಟನು.

ರಘುವೀರರಾಯನೂ ಅವನ ಜೊತೆಯಲ್ಲಿ ಅಪರಾಧ ಹಾಕಲ್ಪಟ್ಟ ವರೂ ಅವಮರ್ಯಾದೆಯನ್ನು ಸಹಿಸಕೂಡದೆ ದೊಡ್ಡ ಒಬ್ಬ ವಕೀಲನನ್ನು ಹಿಡಿದು ವಿಮರ್ಶಾಧಿಕಾರಿಯ ಮುಂದಿ ತಮ್ಮ ಮೇಲೆ ಅನ್ಯಾಯವಾಗಿ ಕಾರಭಾರಿಯು ಕೊಟ್ಟ ಪಕ್ಷವಾತದ ವಿಧಿಯನ್ನು ತಿರುಗಿಸಬೇಕೆಂದು ವಿಮರ್ಶೆ ಮನವಿಯನ್ನು ಕೊಟ್ಟರು. ಮೊಕದ್ದಮೆಯ ಲವಾಜಮೆಗಳನ್ನು ತರಿಸಿ ಕೊಂಡು, ಆ ಅಧಿಕಾರಿಯು ಬಹು ತಾಳ್ಮೆಯಿಂದ ಓದಿ ನೋಡಿ, ಉಭಯ ಕಡೆ ವಕೀಲರ ಚರ್ಚೆಯನ್ನು ಎರಡು ದಿವಸಗಳವರೆಗೆ ಕೇಳಿದ ಬಳಿಕ ಕಾರಭಾರಿಯು ಮಾಡಿದ ತೀರ್ಮಾನವು ಸತ್ಯಕ್ಕೂ ನ್ಯಾಯಕ್ಕೂ ಅನುಗುಣ ವಾಗಿಯೇ ಇರುವದಾಗಿ ಮನಸ್ಸಿಗೆ ತೋರಿಬಂದುದರಿಂದ ಮೂಲ ತೀರ್ಪು ಸ್ಥಿರಪಡಿಸಿದನು. ಹೀಗಾಗಿ ಕುಮುದಪುರದ ಮಠದಲ್ಲಿ ಮತ್ತಷ್ಟು ಪ್ರಮೋದ ವಾಯಿತು. ದ್ರೇಷಿಕರಾದ ಚತುರ್ಮಠದವರನ್ನು ಜಯಶ್ರೀ ಕೈಬಿಟ್ಟಳೆಂದು ಚಂಚಲನೇತ್ರರೂ ವಾಗ್ದೇವಿಯೂ ಉಬ್ಬೇರಿದರು.

ಶಾಬಯ್ಯನು ವಿಧಿಸಿದ ತೀರ್ಪು ಸ್ಥಿರವಾದ ಕಾರಣ ನೃಸಿಂಹಪುರಾದಿ ನಾಲ್ಕು ಮಠದ ಸನ್ಯಾಸಿಗಳ ಮೇಲೆ ಕೊತ್ವಾಲನು ಕಲಹಕ್ಕೆ ಸಹಕರಿಸಿದ ದೋಷ ಆರೋಪಿಸಿ, ಅಪರಾಧ ಪತ್ರವನ್ನು ಶಾಬಯ್ಯನ ಬಳಿಗೆ ಕಳುಹಿಸಿ ಕೊಟ್ಟನು. ವಿಚಾರಣೆಗೆ ದಿನ ನಿಶ್ಚೈಸಿ, ಕಾರಭಾರಿಯು ಅಜ್ಜಾ ಪತ್ರಗಳನ್ನು ಚರ್ತುಮಠದ ಯತಿಗಳಿಗೆ ಕಳುಹಿಸಿಕೊಟ್ಟನು. ಅವುಗಳನ್ನು ನೋಡಿ ಸನ್ಯಾಸಿಗಳು ನಾಲ್ವರಿಗೂ ದಿಗಿಲು ಹತ್ತಿತು. ರಘುವೀರರಾಯನನ್ನೂ ರಾಮದಾಸರಾಯನನ್ನೂ ಕರಿಸಿ, ಒಂದೆರಡು ದಿವಸ ಮಾತನಾಡಿಸಿ ನೋಡಿ ದ್ದಲ್ಲಿ ಸುಸೂತ್ರವಾದ ಆಲೋಚನೆ ಹತ್ತದೆ ಇದ್ದುದರಿಂದ ಕೋದಂಡಪಾಣಿ ರಾಯನನ್ನು ಕುದುರೆಯ ಬಂಡಿಯಲ್ಲಿ ಕೂರಿಸಿ, ನೃಸಿಂಹಪುರದ ಮಠಕ್ಕೆ ಕರಿಸಿಕೊಂಡು, ಮರಾಧಿಪತಿಗಳು ಕಣ್ಣೀರಿಟ್ಟು ಅವನ ಕೂಡೆ ಆಲೋಚನೆ ಕೇಳಿದರು. “ವಿಮರ್ಶಾಧಿಕಾರಿಯು ಸತ್ಯವಂತನೂ, ನಿಷ್ಪಕ್ಷಪಾತಿಯೂ, ದುರಪೇಕ್ಷೆಯಿಲ್ಲದವನೇ ಸರಿ. ಅವನನ್ನೇ ಮಠಾಧಿಪತಿಗಳ ಹುಚ್ಚುತನದ ದೆಸೆಯಿಂದೆ ಅವರ ಮೇಲೆ ವಿಮುಖನಾದ ಕಾರಭಾರಿಯು ಮಂಕುಗೊಳಿಸಿ ಮಂಗನನ್ನು ಗಾರಡಿಗನು ಆಡಿಸುವಂತೆ ಕುಣಿಸುವದು ನೋಡುವಾಗ್ಗೆ ಮಠದವರಿಗೆ ಏಕೋ ದುರ್ದಶೆ ಬಂದಿದೆ. ಯತಿಗಳೆಲರೂ ಕಚೇರಿಗೆ ಹಾಜರಾಗಬೇಕೆಂದು ಅವನು ಒತ್ತಾಯ ಮಾಡದಿರನು. ಹಾಗೆಂತ ನಾವು ಸುಮ್ಮಗಿರಬಾರದು. ಆಗುವಷ್ಟು ಪೇಚಾಡಿ ನೋಡಬೇಕು. ರಾಜರ ಸಮ್ಮುಖಕ್ಕೆ ಹೋಗಿ ದೂರು ಹೇಳುವಷ್ಟರ ಪ್ರಯತ್ನವನ್ನು ನಡಿಸಬೇಕು. ದೇವರ ಚಿತ್ತವಿದ್ದ ರೀತಿ ಆಗುವದು.” ಹೀಗೆಂದು ವಶೀಲನು ತನ್ನ ಅಭಿ ಪ್ರಾಯವನ್ನು ತಿಳಸಿದಾಗ—“ಅದೆಲ್ಲಾ ಹಾಳಾಗಲಿ, ನಾವೇ ಊರುಬಿಟ್ಟು ಓಡಿಹೋದರೇನಾಗುತ್ತೆ? ಎಂದು ಮಠಾಧಿಪತಿಗಳು ಕೇಳದರು. ಅಂಥಾ ಹೇಡಿತನದಿಂದ. ಮುಖ ಕಾರ್ಯವೇ ಕೆಟ್ಟುಹೋಗಿ ನಿರಾಯಾಸವಾಗಿ ಚಂಚಲನೇತ್ರರ ಮನೋರಥವು ಈಡೇರುವದು. ಇಂಥಾ ಅಭಾಸವಾಗುವ ದಕ್ಕಿಂತ ಮರಣವೇ ಲೇಸೆಂದು ತೋರುತ್ತದೆ? ಎಂದು. ರಘುವೀರನೂ ರಾಮದಾಸನೂ ಐಕಮತ್ಯವಾದ ಆಲೋಚನೆಯನ್ನು ಕೊಟ್ಟರು. “ಇಡೀ ಮಠವೇ ಮಾರಿಹೋಗಿ ನಾನು ದೇಶಾಂತರ ಹೋದರೂ ಚಿಂತೆಯಿಲ್ಲ, ಹಟ ಮೆರೆಯುವ ಸಾಧನೆ ನಡೆಸಬೇಕಲ್ಲದೆ ಓಡಿಹೋಗಲ್ಯಾಕೆ? ಶತ್ರುಗಳ ಪ್ರತಾಪ ಹಾಗಿರಲಿ; ಹುಚ್ಚುಮುಂಡೇ ಗಂಡರ ಬಿಸಾತೇನದೆ?” ಎಂದು ನೃಸಿಂಹ ಪುರಾಧೀಶರು ಪೌರುಷ ಮಾತಾಡಿದರು. ಬೇರೆ ಕೆಲವರು ಪನ್ನಿ ಕೊಚ್ಚಿದರು. ಚತುರ್ಮಠದವರಿಗೂ ಕಾರಭಾರಿಗೂ ತುಂಬಾ ಮನಃಕ್ಲೇಶ ಇರುವ ದೆಸೆ ಯಿಂದ ತಮ್ಮ ಮೇಲಿನ ಪ್ರಕರಣವನ್ನು ಅವನು ಹಿಡಿಯಕೂಡದಾಗಿ ರಾಜದ್ದಾರದ ತನಕ ಮನವಿಗಳನ್ನು ಮಾಡಲಿಕ್ಕೆ ನಿಶ್ಚೈಸಲಾಯಿತು.

ರಘುವೀರರಾಯನ ಮೇಲೆ ಸ್ಥಾಪನೆಯಾದ ಅಪರಾಧದ ದೆಸೆಯಿಂದ ಅವನು ವಕೀಲಿ ಕೆಲಸ ನೋಡಲಿಕ್ಕೆ ಅಯೋಗ್ಯನೆನ್ನಿಸಲ್ಪಡುನನೆಂಬ ಹೆದ ರಿಕೆಯಿಂದ ಅವನು ಕಿರಿ ದಿವಾನರ ಮುಂದೆ ವಿಶೇಷ ವಿಮರ್ಶೆ ಮನವಿಯನ್ನು ಕೊಟ್ಟು ಭಗೀರಥ ಪ್ರಯತ್ನ ಮಾಡಿದನು. ಅವನು ಅಪರಾಧಿಗಳ ಕೂಟದಲ್ಲಿ ಸೇರಿದವನೆಂಬುದು ಮನಸ್ಸಿಗೆ ನಿರ್ಧರವಾಗುವ ಹಾಗಿನ ನಿರನುಮಾನವಾದ ಸಾಕ್ಷಿಯು ಮೊಕದ್ದಮೆಯಲ್ಲಿ ಕಂಡುಬರುವದಿಲ್ಲವಾದ ಕಾರಣ ಅವನಿಗೆ ಅನುಮಾನದ ಫಲವನ್ನು ಕೊಟ್ಟು ವಿಮೋಚನೆ ಮಾಡಿಯದೆ ಎದು ಕಿರಿ ದಿವಾನರ ತೀರ್ಪಾಯಿತು. ಬೇರೆ ಅಪರಾಧಿಗಳ ಮೇಲೆ ವಿಧಿಸಿದ ಶಿಕ್ಷೆಯು ಸ್ಥಿರಪಟ್ಟಿತು. ರಘುವೀರನು ಹ್ಯಾಗಾದರೂ ಮರ್ಯಾದೆ ಉಳಿಸಿಕೊಂಡನೆಂಬ. ಸಂತೋಷವು ಮಠಾದಿಪತಿಗಳಿಗೆ ಹೊಸ ಯೌವನ ಉಂಟುಮಾಡಿತೆನ್ನ ಬಹುದು. ಹಾಗೆಯೇ ತಮ್ಮ ಮೇಲಿನ ಪ್ರಕರಣವನ್ನು ಕಾರಭಾರಿಯು ವಿಚಾರಣೆ ಮಾಡದೆ ಹಾಗೂ ತಮ್ಮನ್ನು ಕಚೇರಿಗೆ ಬರುವುದಕ್ಕೆ ಬಲತ್ಕಾರಿ ಸದ ಹಾಗೂ ಹುಕುಂ ಅಪೇಕ್ಷಿಸಿ, ಅವರ ಕಡೆಯಿಂದ ಒಂದು ಅರ್ಜಿಯು ಕಿರಿದಿನಾನರ ಬಳಿಗೆ ಹೋಯಿತು. ಅದರಲ್ಲಿ ತಾವು ಪ್ರವೇಶಿಸಲಿಕ್ಯಾಗುವದಿಲ್ಲ. ವಿಮರ್ಶಾಧಿಕಾರಿಗೆ ಅದನ್ನು ಕೊಟ್ಟು ನಿವೃತ್ತಿ ಪಡೆದುಕೊಳ್ಳಬೇಕೆಂದು ವಿಧಿ ಸೋಣಾಯಿತು. ವಿಮರ್ಶಾಧಿಕಾರಿಯ ಕೂಡೆ ಮನವಿ ಮಾಡಿಕೊಂಡಲ್ಲಿ ಅವನು ಅದನ್ನು ಮನ್ನಿಸದೆ ತೆಗೆದು ಹಾಕಿದನು. ಶಾಬಯ್ಯನು ಈ ಸಮಾ ಚಾರವನ್ನು ಕೇಳಿ ಹೆಚ್ಚಳಿಸಿದನು. ಭೀಮಾಜಿಯ ಉಲ್ಲಾಸಕ್ಕೆ ಪಾರವೇ ಇರಲಿಲ್ಲ. ತಾವು ಕಚೇರಿಗೆ ಹಾಜರಾಗುವವರಲ್ಲ. ವಕೀಲನ ಪರಿಮುಖ ವ್ಯವ ಹರಿಸಿಕೊಳ್ಳುವಂತೆ ತಮಗೆ ಅಪ್ಪಣೆಯಾಗಬೇಕೆಂದು ಚತುರ್ಮಠಾಧಿಪರು ಕೇಳಿದ್ದಲ್ಲಿ ಶಾಬಯ್ಯನು ಅವರ ಅರಿಕೆಯನ್ನು ನಿರಾಕರಿಸಿ ಬಿಟ್ಟನು. ಈ ಸಂಬಂಧ ದೊಡ್ಡ ಗಾಬರಿಯಾಯಿತು. ಮರ್ಯಾದೆ ಹೋಗುವ ಕಾಲ ಸಮಾ ಪಿಸಿತೆಂದು ಅವರು ಬಹಳವಾಗಿ ಉಪತಾಪ ಪಟ್ಟರು.

ಕುಮುದಪುರದ ಮಠಾಧಿಪತಿಯು ದ್ರವ್ಯಬಲದಿಂದ ತಮ್ಮ ಅಭಿಮಾನ ವನ್ನು ಭಂಗಿಸಿ ಜಯಹೊಂದಿದರಲ್ಲವೇ? ಕೊತ್ವಾಲನೂ ಅಧಿಕಾರಿಯೂ ಧ್ರವ್ಯಾಭಿಲಾಷಿಗಳಾಗಿರುವದಾದರೆ ನಾಲ್ಕು ಮಠದವರು ಯಥೇಷ್ಟ ಹಣ ಕೊಟ್ಟರಾದರೂ ಅವರ ಮೇಲೆ ಕನಿಕರ ಪಡಲಿಕ್ಕೆ ಸಾಕೆಂಬ ಕೋರಿಕೆಯಿಂದ ಶಾಬಯ್ಯನ ಅಪ್ತರ್ಯುರಾದರೂ ದೊರಕಿದರೆ ಮಾತನಾಡಿಸಿ ನೋಡಬಹುದಿ ತ್ತೆಂಬ ಯೋಚನೆಯಲ್ಲಿರುವಾಗ– ಅದರ ಯೋಚನೆ ಬೇಡ, ತಾನು ಆ ಕೆಲಸ ಸುಧಾರಿಸುವವರನ್ನು ಹುಡುಕಿ ತರುವೆನೆಂದು ರಘುವೀರನು ವೇದವ್ಯಾಸ ಉಪಾಧ್ಯನನ್ನು ಕಟ್ಟಿಕೊಂಡು ಹೊರಟನು. ಇವರಿಬ್ಬರೂ ಪಟ್ಟಣವೆಲ್ಲಾ ತಿರುಗಾಡಿ ತಮಗೆ ಯುಕ್ತಕಂಡ ಜನರ ಪರಿಮುಖ ಯದ್ವಾ ತದ್ವಾ ಪ್ರಸ್ತಾಪ ಮಾಡಿರುವ ವರ್ತಮಾನವು ಶಾಬಯ್ಯನ ತಿಳುವಳಿಕೆಗೆ ಬಂದು ಕಾರ್ಯ ಸಾಧನೆಯ ಅಂದವೇ ಪೂರ್ಣವಾಗಿ ಕೆಟ್ಟುಹೋಗಿ ಚತುರ್ಮಠದರು ಮತ್ತ ಷ್ಟೂ ವೃಸನಪಡುವದಾಯಿತು. ಇಂಥಾ ದೊಡ್ಡ ಇಕ್ಕಟ್ಟಿನಿಂದ ತನ್ಸಿಸಿಕೊಳ್ಳು ವ ಉಪಾಯವೇ ತೋರದೆ ಒಬ್ಬೊಬ್ಬರು ಒಂದೊಂದು ವಿಧವಾಗಿ ಯೋಚನೆ ಮಾಡುತ್ತಿರುವಷ್ಟರಲ್ಲಿ ಯತಿಗಳು ಕಾರಭಾರಿಯ ಮುಂದೆ ಹಾಜರಾಗ ಬೇಕಾದ ದಿವಸವು ಬಂದೇ ಬಂತು. ಅಂದು ಆದುದಾಗಲೆಂದು ಅವರ್ಯಾರೊ ಬ್ಬರೂ ಕಚೇರಿಯ ಮುಂದೆ ಬರಲಿಲ್ಲ. ಒಬ್ಬರು ಅಸ್ವಸ್ತದಲ್ಲಿರುವದಾಗಿ ವೈದ್ಯನ ದೃಢ ಪತ್ರಿಕೆಯನ್ನು ಕಳುಹಿಸಿಕೊಟ್ಟರು. ಅನ್ನೊಬ್ಬರು ಬೇರೊಂದು ಕಡೆಗೆ ಮತ ಸಂಬಂಧವಾದ ವಿವಾದದ ನಿವೃತ್ತಿಗೋಸ್ತರ ಹೋಗದಿರಕೂಡ ದೆಂಬ ನೆವನದ ಮೇಲೆ ವ್ಯವಧಾನವನ್ನು ಅಪೇಕ್ಷಿಸಿದರು. ಇನ್ನೊಬ್ಬರು ಮಠದಲ್ಲಿ ವಿಶೇಷವಾದ ದೇವರಾರಾಧನೆ ಸಲುವಾಗಿ ಸಮಯ ಕೊಡಬೇಕಾಗಿ ಬೇಡಿಕೊಂಡರು. ನಾಲ್ಕನೆಯನರು ಅಕಸ್ಮಾತ್ತಾಗಿ ಪರ ಊರಿಗೆ ಹೋಗುವ ಅಗತ್ಯವಿದೆ; ಕೊಂಚ ಸಮಯದ ವರೆಗೆ ಪ್ರಕರಣವನ್ನು ಮುಂದರಿಸಿಡಬೇ ಕೆಂದು ಮನವಿ ಮಾಡಿಕೊಂಡರು ಕಾರಭಾರಿಯು ಆ ನೆವನಗಳ್ಳಾವದನ್ನೂ ತಾನು ಅಂಗೀಕರಿಸುವದಿಲ್ಲವೆಂದು ಪ್ರಥಮತಾ ಹೇಳಿದನು. ತರುವಾಯ ವಕೀಲನು ಕಠಿಣವಾದ. ರೀತಿಯಲ್ಲಿ ಪ್ರತಿವಾದ ಮಾಡಿದಾಗ ಅವಸರ ಮಾಡುವದರಿಂದ ಕೆಲಸ ಕೆಟ್ಟು ಹೋಗುವುದೆಂಬ ಗ್ರಹಿಕೆಯಿಂದ ಒಂದು ತಿಂಗಳಿನಷ್ಟು ವ್ಯವಧಾನ ಕೊಡುವುದಕ್ಕೆ ಅಪ್ಪಣೆ ಮಾಡಿದನು. ಏತನ್ಮಧ್ಯೆ ರಘುವೀರರಾಯನು ಬುದ್ಧಿವಂತ ವಕೀಲರ ಕೂಡೆ ಆಲೋಚಿಸಿ ಯತಿಗಳನ್ನು ಮುತ್ತಾಲಿಕರ ಪರಿಮುಖ ಹಾಜರಾಗುವಂತೆ ಸಮ್ಮತಿಕೊಡಲಿಕ್ಕೆ ನಿರಾಕರಿ ಸಿದ ಕಾರಭಾರಿಯ ಹುಕುಮ್ಮಿನ ಮೇಲೆ ನಿಮರ್ಶೆ ಕ್ರಮವಾಗಿ ಇನ್ನೊಮ್ಮೆ ಮಾಡಿ ನೋಡಲಿಕ್ಕೆ ಬೇಕಾದ ಉಪಾಯಗಳನ್ನು ನಡಿಸಿದನು. ವಿಮರ್ಶಾಧಿ ಕಾರಿಯ ಮುಂದೆ ಮೊದಲು ಒಂದು ಬಿನ್ನಹವನ್ನು ಮಾಡಲು, ಅವನು ಅದನ್ನು ಧಿಕ್ಕರಿಸಿಬಿಟ್ಟನು.

ಆ ಅಪ್ಪಣೆಯ ಮೇಲೆ ಕಿರಿದಿನಾನರ ಮುಂದೆ ಮನವಿಯಾಯಿತು. ಅವರು ಅದನ್ನು ತಿರಸ್ಕರಿಸಿದರು. ಇವರು ಕಡು ಶೈವರಾಗಿ ವೈಷ್ಣವ ಮತ ದ್ವೇಷಿಯಾಗಿರುವ ದೆಸೆಯಿಂದ ವಿಹಿತವಾದೆ ಆಜ್ಞೆಯನ್ನು ಮಾಡಲಿಕ್ಕೆ ಮನ ಸ್ಸಿಲ್ಲವಾದ ಕಾರಣ ಇದನ್ನು ಚನ್ನಾಗಿ ಶೋಧಿಸಿ ನೋಡಿ ಯತಿಗಳಿಗೆ ಅನಾ ವಶ್ಯಕವಾದ ಅವಮರ್ಯಾದೆ ಆಗದ ಹಾಗೆ ಅನುಜ್ಞೆಯಾಗಬೇಕೆಂದು ರಾಜರ ಮುಂದೆ ಮನವಿ ಮಾಡೋಣಾಯಿತು ಅವರು ಅದನ್ನು ಹಿರೇ ದಿವಾನರ ಬಳಿಗೆ ತೀರ್ಮಾನಕ್ಕೋಸ್ಕರ ಕಳುಹಿಸಿಕೊಟ್ಟರು. ಆ ಉದ್ಯೋಗಸ್ಥರು ತಾನೇ ವೈಷ್ಣವ ಮತಾಭಿಮಾನಿಯಾದರೂ ನ್ಯಾಯವಾದ ಅಪ್ಪಣೆಯನ್ನು ಮಾಡಿದರೆ ದೂರಿಗೆ ಗುರಿಯಾಗವಲ್ಲೆನೆಂಬ ಭರವಸೆಯಿಂದ ಮನನಿದಾರರ ಕಡೆ ವಕೀಲನು ಮಾಡಿದ ಚರ್ಚೆಗಳನ್ನು ಲಾಲಿಸಿ ವಿಹಿತವಾದ ಆಜ್ಞೆಯನ್ನು ಮಾಡಿದನು. ಹ್ಯಾಗೆಂದರೆ–“ಒಂದು ಪ್ರಕರಣದ ಕಕ್ಷಿಗಾರರಲ್ಲಿ ಅಪರಾಧಿಗಳು ಪ್ರತಿ ಒಂದು ಸಂಗತಿಯಲ್ಲಿಯೂ ಸ್ವತಃ ಕಚೇರಿಗೆ ಹಾಜರಾಗಬೇಕೆಂದು ಒಬ್ಬ ಅಧಿಕಾರಿಯು ಬಲತ್ಕಾರಿಸತಕ್ಕ ಅಗತ್ಯವೇನೆಂದು ನಮಗೆ ತಿಳಿಯಲಿಕ್ಕಾಗುವು ದಿಲ್ಲ. ಹಾಗೆಯೇ ಒಬ್ಬ ಅಪರಾಧಿಯು ಸರ್ವಧಾ ಕಚೇರಿಗೆ ಬರಲಾರೆನೆಂದು ಹಟ ಮಾಡುವದಕ್ಕೆ ಸ್ವತಂತ್ರ ಉಳ್ಳವನಾಗಿರುವದಿಲ್ಲ. ಮುಖ್ಯತಃ ಇಂಥಾ ವಿಷಯಗಳಲ್ಲಿ ಒಂದು. ಖಂಡಿತವಾವ ಕ್ರಮವನ್ನು ಏರ್ಪಡಿಸಲಾಗದು. ಆಯಾ ಮೊಕದ್ದಮೆಯ ಸ್ಟಿತಿಗನುಸಾರವಾಗಿ ಅಪರಾಧಿಗಳ ಅಪೇಕ್ಷೆ ಯನ್ನು ಪೂರೈಸುವದಾಗಲೀ ನಿರಕರಿಸುವದಾಗಲೀ ಯುಕ್ತವಾಗುವದು. ಪ್ರಕೃತದ ಸಂಗತಿಯಲ್ಲಿ ಸನ್ಯಾಸಿಗಳನ್ನು ಸಂದರ್ಭವನಿರುವ ಮಟ್ಟಿಗೆ ಮರ್ಯಾದೆಯಿಂದ ನಡೆಸಬಹುದು. ಅಪರಾಧಿಗಳೆಂಬ ಒಂದೇ ಕಾರಣದಿಂದ ಅವರ ಮೇಲೆ ಅಪರಾಧ ಸ್ಥಾಪನೆ ಆಗುವ ಮೊದಲೇ ಜರದು ಬೀಳತಕ್ಕ ಅಗತ್ಯವಿಲ್ಲ. ಅತಿ ಅವಶ್ಯವಾದಾಗ ಅವರು ಕಾರಭಾರಿಯ ಮುಂದೆ ಹಾಜ ರಾಗುವದಕ್ಕೆ ಬದ್ಧರಾಗಿರುತ್ತಾರೆ. ನೀತಿಯನ್ನು ಮಾಡಲಿಕ್ಕೆ ಕೂತ ಅಧಿಕಾ ರಿಗೆ ಸನ್ಯಾಸಿಯಾಗಲೀ ಅರಸನಾಗಲೀ ಭಿಕ್ಷುಕನಾಗಲೀ ಸಮಾನರೆಂತಲೇ ಕಾಣುವದು ಧರ್ಮಶಾಸ್ತ್ರಕ್ಕೆ ವೃತಿರಿಕ್ತವಾದ್ದಲ್ಲ. ಇದಕ್ಕಿಂತಲೂ ಹೆಚ್ಚು ಸ್ಪಷ್ಟವಾದ ಅನುಜ್ಞೆಗಳನ್ನು ಅನುಭವಸ್ಥ ಮತ್ತು ನಿಪ್ಪಕ್ಷಪಾತಿಯಾದ ಒಬ್ಬ ಉದ್ಯೋಗಸ್ಥನ ನಡವಳಕೆಗೋಸ್ಟರ ಏರ್ಪಡಿಸುವದು ಅನಾವಶ್ಯಕ ವೆಂತ ನಮಗೆ ತೋರುತ್ತದೆ” ಈ ಅಪ್ಪಣೆಯು ವಿಮರ್ಶಾಧಿಕಾರಿಯ ಪರಿ ಮುಖ ಕಾರಭಾರಿಗೆ ಕಳುಹಿಸೋಣಾಯಿತು.

ಚಮತ್ಕಾರಿಕ ಒಕ್ಕಣೆಯುಳ್ಳ ಈ ಅಪ್ಪಣೆಯನ್ನು ನೋಡಿ ವಿಮರ್ಶಾಧಿ ಕಾರಿಯು ದಿವಾನನ ಬುದ್ಧಿವಂತಿಕೆಗೆ ಮೆಚ್ಚಿ ಅವನನ್ನು ಹೊಗಳಿದನು. ಆದರೆ ಕಾರಭಾರಿಯು ಅದನ್ನು ನೋಡಿದೊಡನೆ ಕೊಂಚ ಚಕಿತನಾಗಿ ಸಂದರ್ಭ ಸಿಕ್ಕಿದರೆ ಹಿರೀ ದಿನಾನನು ತನ್ನನ್ನು ನೆಲಕ್ಕೆ ಬಡಿಯಲಿಕ್ಕೆ ಅನುಮಾನಪಡ ಲಾರನೆಂದು ಧೈರ್ಯದಲ್ಲಿ ಸಂಕುಚಿತನಾದನು. ಆದಿನಾರಾಯಣಾಲ ಯದ ಆಡಳಿತೆಯ ಸರದಿಯು ಚಂಚಲನೇತ್ರರಿಗೆ ಸಿಕ್ಕುವದಕ್ಕೆ ವಿಘ್ನ ಬಾರ ದಂತೆ ನೋಡಿಕೊಳ್ಳುವದೇ ಆತಿ ಅವಶ್ಯ. ಆ ಕಾರ್ಯ ಕೈಗೂಡಿತೇ ಬೇರೆ ಎಲ್ಲಾ ನಿಷಯಗಳನ್ನೂ ಸರಿಪಡಿಸಬಹುದು. ಹೀಗೆಂದು ಚತುರ್ಮಠದವರ ಮೇಲನ ಪ್ರಕರಣವನ್ನು ಮೂರು ತಿಂಗಳವರೆಗೆ ಮುಂದರಿಸಿ ಇಡುವದಕ್ಕೆ ಸಮ್ಮತಿಸಿ ಕಾಗಭಾರಿಯು ಸ್ವಸ್ಥ ಚಿತ್ತನಾದನು. ವ್ಯವಧಾನ ಹ್ಯಾಗೂ ತಮ್ಮ ತಮ್ಮ ಅಪೇಕ್ಷೆಯಂತೆ ದೊರಕಿತು. ಮುಂದಿನ ಸ್ಸಿತಿ ನೋಡಲಿಕ್ಕುಂಟು. ಆದರೂ ಅವಸರವ್ಯಾಕೆ? ದೇವರು ಇಟ್ಟ ಹಾಗೆ ಆಗಲೆಂದು ಸನ್ಯಾಸಿಗಳು ಕೊಂಚ ಉತ್ಪರ್ಷತಾಳಿದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮದ ದೃಶ್ಯ
Next post ಮುಕ್ತಿ ಮಾರ್‍ಗದತ್ತ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…