ಸೂರ್ಯನಾರಾಯಣನು ವೆಂಕಟಸುಬ್ಬಿಯನ್ನು ಕರಕೊಂಡು ಹೇಮಳ ದ್ವೀಪಕ್ಕೆ ಹೋದನೆಂಬುದು ವಾಚಕರಿಗೆ ಇದರ ಮೊದಲೇ ತಿಳಿದು ಬಂತಲ್ಲ. ಅಲ್ಲಿ ಅವನು ಹ್ಯಾಗೆ ಪರಿಣಾಮ ಹೊಂದಿದನೆಂಬ ಸಮಾಚಾರವನ್ನು ತಿಳ ಕೊಳ್ಳುವದಕ್ಕೆ ಸಕಲರಿಗೂ ಕುತೂಹಲವಿರುವದು. ಆದುದರಿಂದ ಈ ವಿಷ ಯವಾಗಿ...
ಸೂರ್ಯನಾರಾಯಣನು ಯಾವ ದೇಶಕ್ಕೆ ಹೋಗಿರಬಹುದೆಂಬ ಪತ್ತೆಯು ದೊರೆಯದೆಹೋಯಿತು. ವೆಂಕಟಸುಬ್ಬಿಯ ಸಂಬಂಧಿಕರು ಹಲವು ಊರುಗಳಿಗೆ ಹೋಗಿ ಸಮಾಚಾರ ಸಂಗ್ರಹಿಸುವದಕ್ಕೆ ಮಾಡಿದ ಪ್ರಯತ್ನ ಒಂದಾದರೂ ಸಫಲವಾಗಲಿಲ್ಲ. ಇದ್ದ ಊರೆಲ್ಲಾ ತಿರುಗಿ ಮರಳಿ ನಿಟ್ಟುಸಿರು ಬಿಡುತ್ತಾ ಕುಂತುಬಿಟ್ಟರು. ಇನ್ನೊಂದು...
ಶೃಂಗಾರಿಯೂ ತಿಪ್ಪಾಶಾಸ್ತ್ರಿಯೂ ತನ್ನ ಕುತ್ಸಿತ ವಚನಗಳನ್ನು ಸಹಿಸಕೂಡದೆ, ಕುಪಿತರಾಗಿ ಹೊರಟು ಹೋದದ್ದನ್ನು ಕುರಿತು ವಾಗ್ದೇ ವಿಯು. ಚಿಂತಾಕ್ರಾಂತಳಾಗಿ. ಅವರನ್ನು ಹುಡುಕಿತರುವುದಕ್ಕೋಸ್ಟರ ಸೂರ್ಯನಾರಾಯಣನ ಸಮೇತ ಅದೇ ಶಾಂತಿಪುರಕ್ಕೆ ಬಂದಳು. ಪ್ರಾಣಸಖ ನಾದ ಭೀಮಾಜಿಯು ಇರುವ ಊರಲ್ಲಿ...
ಕುಮುದಪುರವನ್ನು ಶಾಬಯನೂ ಭೀಮಾಜಿಯೂ ಬಿಟ್ಟು ಹೋದಂ ದಿನಿಂದ ಆ ಊರಿನ ಜನರು ನಿಶ್ಚಿಂತರಾದರು. ಅವರಿಬ್ಬರ ಬದಲಿಗೆ ಬಂದ ಉದ್ಯೋಗಸ್ಥರು ಅನ್ಯಾಯ ಪ್ರವರ್ತನೆಯಲ್ಲಿ ಎಂದೂ ಸೇರುವವರಲ್ಲ ವೆಂದು ಪ್ರತಿ ಒಬ್ಬನಿಗೂ ಖಂಡಿತವಾಗಿ ಗೊತ್ತಾಯಿತು. ಮರ್ಯಾದೆವಂತ ರಾದ...
ಕಾರಭಾರಿಯ ಮುಂದೆ ಚತುರ್ಮಠದವರ ಮೇಲೆ ತರಲ್ಪಟ್ಟಿರುತ್ತಿದ್ದ ಮದ್ದತಿನ ಮೊಕದ್ದಮೆಯನ್ನು ಹೊಸಕಾರಭಾರಿಯು ಅವರನ್ನು ಕಚೇರಿಗೆ ಬರಬೇಕೆಂದು ಬಲಾತ್ವರಿಸದೆ, ಅವರ ಗುಣಕ್ಕೆ ತೀರ್ಮಾನ ಮಾಡಿ, ಇಡೀ ಊರಿನಲ್ಲಿ ಶ್ಲಾಘ್ಯನಾದನು. ವಿಮರ್ಶಾಧಿಕಾರಿಯ ಮನಸ್ಸಿನಲ್ಲಿ ಚತುರ್ಮ ಠದವರ ಮೇಲೆ ಉಂಟಾಗಿರುತ್ತಿದ್ದ...
ದೇವಾಲಯ ಪ್ರವೇಶಕ್ಕೆ ಉಭಯ ಕಡೆಯಿಂದಲೂ ನಿಶ್ಚೈಸಲ್ಪಟ್ಟ ಮುಹೂರ್ತವು ರಾತ್ರಿ ಕಾಲವಾಗಿತ್ತು. ಇದು ಪುಂಡಾಟಕೆ ನಡೆಸಲಿಕ್ಕೆ ಹೆಚ್ಚು ಅನುಕೂಲವಾದ ಸಮಯವಾದುದರಿಂದ ಉಭಯ ಪಕ್ಷದವರು ತಮ್ಮ ಪಂಥ ಕೈಗೂಡುವದಕ್ಕೆ ಹೆಚ್ಚು ಅಭ್ಯಂತರವಿರದೆಂದು ಗ್ರಹಿಸಿಕೊಂಡರು. ಭೀಮಾಜಿಯೂ ಶಾಬಯ್ಯನೂ ಶಾನೆ...
ದೇವಾಲಯದ ಪ್ರವೇಶಕ್ಕೆ ಒಂದು ತಿಂಗಳುಂಟಂದಾಗ ಒಂದು ರಾತ್ರೆ ಚಂಚಲನೇತ್ರರಿಗೆ ಅಕಸ್ಮಾತ್ಕಾಗಿ ಅಪಸ್ಮಾರ ರೋಗ ತೊಡಗಿ ಚಿಕಿತ್ಸೆಗೆ ಅವಕಾಶವಿಲ್ಲದೆ ಗತರಾದರು. ವಾಗ್ದೇವಿಗೂ ಅವಳ ಪಕ್ಷದವರಿಗೂ ಸಿಡಿಲು ಬಡಿದಂತಾಯಿತು. ಕಟ್ಟಳೆಗನುಗುಣವಾಗಿ ವೃಂದಾವನವನ್ನು ಮಾಡಿ ಮುಕ್ತರಾದ ಸನ್ಯಾಸಿಗಳಿಗೆ ಗತಿ...
ಕಟ್ಟಳೆಗನುಸಾರನಾಗಿ ಪ್ರಧಮತಃ ಮಾಡಬೇಕಾದ ಅಕ್ಕಿ ಮುಹೂ ರ್ತಕ್ಕೆ ದಿನ ನೋಡಬೇಕೆಂದು ಚಂಚಲನೇತ್ರರಿಂದ ಆಜ್ಞಾಪಿಸಲ್ಪಟ್ಟ ಮಠದ ಸೇವಕರೆಲ್ಲರೂ ಸಕಲ ಸಾಮಗ್ರಿಗಳನ್ನು ಸಂಗ್ರಹಿಸುವುದರಲ್ಲಿ ಅಮರಿದರು. ಒಮ್ಮೆ ಅವರನ್ನು ಪ್ರವೇಶವಾಗಲಿಕ್ಕೆ ಬಿಟ್ಟರೆ ಮುಂದಿ ಅವರನ್ನು ತಡಿಯು ವದು ಪ್ರಯಾಸಕರವಾದ್ದೆಂಬ...
ದೇವಾಲಯದ ಪ್ರವೇಶವು ಚಂಚಲನೇತ್ರರು ಚಾಕರರ ಪರಿಮುಖ ತನ್ನ ಕಡೆಯಿಂದ ಆಗ ಬೇಕಾಗಿರುವ ಸಾಹಿತ್ಯಗಳನ್ನು ಒದಗಿಸಿ ದೇವಾಲ ಯದ ಆಯಾ ಠಾವಿನಲ್ಲಿ ಇರಿಸುವುದಕ್ಕೆ ಪೂರ್ವಾರಭ್ಯ ನಡೆದು ಬಂದ ಪದ್ಧತಿಗನುಗುಣವಾಗಿ ಪ್ರಾರಂಭಮಾಡೋಣಾಯಿತು. ಅದನ್ನು ವಿರೋಧಿ ಸಬೇಕೆಂದು ಶತ್ರು...