ದೇವಾಲಯ ಪ್ರವೇಶಕ್ಕೆ ಉಭಯ ಕಡೆಯಿಂದಲೂ ನಿಶ್ಚೈಸಲ್ಪಟ್ಟ ಮುಹೂರ್ತವು ರಾತ್ರಿ ಕಾಲವಾಗಿತ್ತು. ಇದು ಪುಂಡಾಟಕೆ ನಡೆಸಲಿಕ್ಕೆ ಹೆಚ್ಚು ಅನುಕೂಲವಾದ ಸಮಯವಾದುದರಿಂದ ಉಭಯ ಪಕ್ಷದವರು ತಮ್ಮ ಪಂಥ ಕೈಗೂಡುವದಕ್ಕೆ ಹೆಚ್ಚು ಅಭ್ಯಂತರವಿರದೆಂದು ಗ್ರಹಿಸಿಕೊಂಡರು. ಭೀಮಾಜಿಯೂ ಶಾಬಯ್ಯನೂ ಶಾನೆ ಹೊತ್ತು ಆಲೋಚನೆ ಮಾಡಿದರು. ರಾತ್ರಿ ಕಾಲದಲ್ಲಿ ತಮಗೆ ಪ್ರಾಣಭಯವೇ ಉಂಟಾಗಲಿಕ್ಕೆ ಕಾರಣವಿರುವದು. ಮಾನಹಾನಿಯ ಹೆದರಿಕೆ ಹಾಗಿರಲಿ; ಕೈ ಹಾಕಿದ ಕೆಲಸದಲ್ಲಿ ಜಯ ಹೊಂದ ದಿದ್ದರೆ ತಾವಿಬ್ಬರೂ ಬದುಕಿ ಪುರುಷಾರ್ಥವಿಲ್ಲ. ಪ್ರಾಣ ಹೋದರೆ ಸಂಸಾರ ಪಾಶದಿಂದ ವಿಮುಕ್ತರಾಗುವೆವು. ಬದುಕಿದರೆ ತಮ್ಮ ಕೀರ್ತಿಯು ಆಚಂದ್ರಾ ರ್ಕ ಸ್ಥಿರವಾಗುವದು; ಧೈರ್ಯ ಸರ್ವಧಾ ಬಿಡಕೂಡದು. ಹೀಗೆ ನೆನದು ವೀರರಿಬ್ಬರೂ ಬಾರ್ಮಾಡಿದ ಪಿಸ್ತೂಲುಗಳನ್ನು ಸೊಂಟದಲ್ಲಿ ಅಡಗಿಸಿಟ್ಟು ಕೊಂಡು, ದೇವಸ್ಥಾನದ ಬಾಗಿಲಿಗೆ ಹೋದರು. ವಿಮರ್ಶಾಧಿಕಾರಿಯು ಪ್ರಯಾಣಸ್ಥರ ಛತ್ರದಲ್ಲಿಯೇ ಉಳಕೊಂಡಿದ್ದನು. ಯಾವದೊಂದು ಅತಿ ಶಯವಾದ ಕಲಹವಾಗಲೀ ತಂಟೆಯಾಗಲೀ ನಡೆಯಲಿಕ್ಕಿಲ್ಲವೆಂದು ಕೊತ್ವಾ ಲನೂ ಕಾರಭಾರಿಯೂ ಕೊಟ್ಟ ಧೈರ್ಯದ ಮೇಲೆ ನಂಬಿಗೆ ಇಟ್ಟು, ಅವನು- ರಾತ್ರಿ ಕಾಲ ಹೊರಗೆ ಹೊರಡಲಿಲ್ಲ. ದೇವಸ್ಥಾನದ ಬಾಗಿಲಿಗೆ ಬಂದ ಸಮಯದಲ್ಲಿ ಪ್ರಥಮತಾ ದೃಷ್ಟಿಗೆ ಗೋಚರವಾದ ವಿಶೇಷವು ಯಾವದಾಗಿ ತ್ತಂದರೆ–ಯಾರೂ ಒಳಗೆ ನುಗ್ಗದಂತೆ ಹೊರ ಬಾಗಿಲು ಮುಚ್ಚಿರುತ್ತಿತ್ತು. ಬೀದಿಯಲ್ಲಿ ಜನರು ದೂರದಿಂದ ಅತ್ತಿತ್ತ ಅಲೆದಾಡುತ್ತಾ ಇದ್ದರು. ಮಂಚೆಯೇ ಸೂಚನೆ ಕೊಡಲ್ಪಟ್ಟಿರುವ ಪ್ರಕಾರ ಕುಮುದಪುರ ಮಠದ ಪಕ್ಷದ ಕೆಲವು ಭಿಕಾರಿಗಳು-“ಸ್ವಾಮೀ! ನಾವು ಪರದೇಶದಿಂದ ದೇವರ ದರ್ಶನ ಪಡಕೊಂಡು, ಹೋಗಲಿಕ್ಕೆ ಬಂದವರು. ಒಳಗೆ ಪ್ರವೇಶವಾಗದಂತೆ ಬಾಗಿಲನ್ನೇ ಮುಚ್ಚಿ ಬಿಟ್ಟಿದ್ದಾರೆ. ತೆರೆಯುವಂತೆ ಅಜ್ಜೆಯಾಗಲಿ” ಎಂದು ಕಾರಭಾರಿಯ ಕೂಡೆ ಹೇಳಿಕೊಂಡರು. “ಒಡನೆ ಬಾಗಿಲು ತೆರೆಯದಿದ್ದರೆ ಅದೆನ್ನು ಒಡಿಯ ಬೇಕಾಗುವದು. ನೋಡಿಕೊಳ್ಳಿ” ಎಂತ ಕೊತ್ವಾಲನು ಹೊರಗಿಠಿಂದಲೇ ಬೆದರಿಸಿದಾಗ ಹೊರಗಿನ ಬಾಗಿಲಿನ ಕೀಲು ಒಳಗಿನಿಂದ ತೆಗೆದರು.
ಪರಂತು ಒಳಗೆ ಎದುರು ಕಡೆಯವರು ಪ್ರವೇಶಿಸದಂತೆ ತೆಡೆಯವದಕ್ಕೆ ಬಾಗಿಲ ಸಂದುಗಳಲ್ಲಿ ದೊಡ್ಡ ಗುಂಪು ನಿಂತುಕೊಂಡಿರುವದು ಕಾರಭಾರಿಯ ಕಣ್ಣಿಗೆ ಬಿತ್ತು. ನಾಲ್ಕು ಜನಕ್ಕಿಂತ ಹೆಚ್ಚು ಜನರು ಒಟ್ಟು ಕೂಡಿಕೊಂಡಿರು ವದು ರಾಜ್ಯದಲ್ಲಿ ಊರ್ಜಿತವಾಗಿರುವ ನ್ಯಾಯ ಶಾಸ್ತ್ರಕ್ಕೆ ವಿರೋಧವಾದ ದೆಶೆಯಿಂದ ಕೂಡಲೇ ಚೆದರದಿದ್ದರೆ ಅವರನ್ನು ಸೆರೆಮನೆಗೆ ಕಳುಹಿಸಿಕೊಡ ಬೇಕಾದೀತೆಂದು ಎಚ್ಚರಿಸೋಣಾಯಿತು. ಆ ಜನರು ತಕ್ಷಣ ಪ್ರತ್ಯೇಕವಾಗಿ ಒಳಗಿನ ಭಾಗದಲ್ಲಯೇ ಅವಿತುಕೊಂಡಿರುವದಕ್ಕೆ ಪ್ರಯತ್ನ ಮಾಡಿದರು. ಕೊತ್ವಾಲನ ಜವಾನರು ಅವರನ್ನು ಬಿಡದೆ, ಹೊರಗೆ ಬೀದಿಗೆ ದಬ್ಬಿದರು. ಬೀದಿಯಲ್ಲಿ ಇದ್ದ ಬೇರೆ ಜನಾನರು ಅವರನ್ನು ಓಡಿಸಿಬಿಟ್ಟರು. ಹೀಗಾದು ದರಿಂದೆ ಮುಂದೆ ಆಗಲಿಕ್ಳಿರುವ ದೊಡ್ಡ ಸಂಕಟದಿಂದ ತಪ್ಪಿದ ಹಾಗಾಯಿ ತೆಂದು ಸಂತೋಷದಿಂದ ಅವರು ಅಲ್ಲಿ ನಿಲ್ಲದೆ, ತಮ್ಮ ತಮ್ಮ ಮನೆಗಳಿಗೆ ನಡೆದರು. ಬೀದಿ ಕಡೆ ಬಾಗಿಲನ್ನು ಪ್ರಯಾಸನವಿಲ್ಲದೆ ತೆರೆದಿಡುವದಕ್ಕೆ ಅನು ಕೂಲವಾದರೂ ಒಳಗೆ ಹೋಗಲಿಕ್ಕಿರುವ ಇನ್ನೊಂದು ಮುಖ್ಯ ಬಾಗಿಲನ್ನು ತೆರಿಸದಿದ್ದರೆ ಸೂರ್ಯನಾರಾಯಣನು ಒಳಗೆ ಹೋಗಲಿಕ್ಕೆ ಸಂದರ್ಭವೇ ಇಲ್ಲ. ಈ ಇಕ್ಕಟ್ಟಿನಿಂದ ಪಾರಾಗುವ ಯೋಚನೆಯು ಕಾರಭಾರಿಗೆ ಹತ್ತಿ ಕೊಂಡು, ಅವನ ಮನಸ್ಸಿನಲ್ಲಿ ದೊಡ್ಡ ಉಮ್ಮಳ ಉಂಟುಮಾಡಿತು. ಪರಂತು ಭೀಮಾಜಿಯು ಧೈರ್ಯಗೆಡಲಿಲ್ಲ. ಅವನು ಒಂದು ಒಳ್ಳೆ, ಹಿಕಮತ್ತು ನಡಿಸಿದನು. ಯಾವದೆಂದರೆ_ಯಾಕುಬಖಾನನು ಬಂದು ಕಾರಭಾರಿಯ ಮುಂದೆ ನಿಂತು-“ಒಂದು ವರ್ದಿ ಇದೆ” ಅಂದನು. ಹೇಳೆಂದು ಅಪ್ಪಣೆ ಯಾಯಿತು. ಜವಾನ ನಾಗಪ್ಪ ಅಕ್ರಮ ಕೂಟದವರನ್ನು ಚದರಿಸಲಿಕ್ಕೆ ಬಾಗಿಲ ಒಳಗಡೆ ಇದ್ದವನು ಕಾಣೆಯಾಗಿದ್ದಾನೆ. ಎಲ್ಲಿ ಹುಡುಕಿದರೂ ಸಿಕ್ಕುವದಿಲ್ಲ. ಅವನನ್ನು ಒಳಗಿನ ಜನರು ಬಂದಿಯಲ್ಲಿ ಇಟ್ಟದ್ದಾರೋ ಅಥವಾ ಅವನು ಉದ್ದನಾಲಿಗೆಯವನಾದ ಕಾರಣ ಜಗಳದಲ್ಲಿ ಪ್ರವರ್ತಿಸಿದ ದೆಸೆಯಿಂದ ಘಾಸಿಯಾದನೋ ತಿಳಿಯುವದಿಲ್ಲ. ಹೀಗೆ ಅವನು ತನ್ನ ಅನುಮಾನವನ್ನು ನಿವೇದಿಸಿದನು. ಈ ಯುಕ್ತಿ ಪರಿಷ್ಠಾರವಾಗುವದಕ್ಕೆ ಕಾರಭಾರಿಗೆ ತೋನಿ, ಅವನು ನಸುನಗುತ್ತಾ ಭೀಮಾಜಿಯ ಮುಖವನ್ನು ನೋಡಿ, ಈ ವರದಿಯಲ್ಲಿ ವಿಶ್ವಾಸವಿಡಬಹುದೇ ಎಂದು ಕೇಳಿದನು. ಅಡ್ಡಿ ಏನು? ನಿಜವಾಗಿ ಆ ಜವಾನನಿಗೆ ಏನೋ ಮೋಸ ನಡೆಯಿತೆಂಬ ಸಂದೇಹ ತನ್ನ ಮನಸ್ಸಿಗೂ ಹೊಕ್ಕಿದೆ ಎಂದು ಕೊತ್ವಾಲನು ಅರಿಕೆ ಮಾಡಿಕೊಂಡನು.
ಬಾಗಿಲು ತೆರೆಯುವಂತೆ ಸಾರಿ ಹೇಳಿ, ಅಂಥಾ ಅಪ್ಪಣೆಯನ್ನು ಉಲ್ಲಂಫಿಸಿದರೆ ಛಾಸನಮಾಡದೆ ಬೀಗವನ್ನು ಮುರಿದು ಜವಾನನನ್ನು ಒಳಗೆ ನುಗ್ಗಿಸಿ, ಕಾಣೆಯಾದ ಜವಾನನನ್ನು ಚನ್ನಾಗಿ ಪರಿಶೋಧಿಸಬೇಕೆಂದು ಕಾರಭಾರಿಯು ಕೊಟ್ಟ ನಿರೂಪಕ್ಕನುಸಾರವಾಗಿ ಕೊತ್ವಾಲನು ಬಾಗಿಲು ತೆರೆಯಬೇಕಾಗಿ ಅದಕ್ಕೆ ವಿಧೇಯವಾಗಿ ನಡಕೊಳ್ಳಲಿಕ್ಕೆ ಎದುರಾಳಿಗಳು ತಪ್ಪಿದ ಕಾರಣ ಬೀಗವನ್ನು ಮುರಿದು. ಕೊತ್ವಾಲನು ಒಳಗೆ ಪ್ರವೇಶಿಸಿ ಪ್ರತಿ ಒಂದು ಸಂದು ಮೂಲೆಯನ್ನು ಬಿಡದೆ ನೋಡಿ, ಅಲ್ಲಿ ಇರುತ್ತಿದ್ದ ವಿಶಿಷ್ಟ ಜನರಲ್ಲಿ ಒಬ್ಬೊಬ್ಬನಿಗೆ ಒಂದೊಂದು ಗುದ್ದು, ಒಂದೊಂದು ಲತ್ತೆ ಯನ್ನು ಕೊಟ್ಟು ಹೊರಗೆ ದಬ್ಬಿಸಿಬಿಟ್ಟನು. ಗುದ್ದು ಮತ್ತು ಲತ್ತಾಪ್ರಹಾರ ತಡೆಯ ಕೂಡದೆ ಬಲಿಷ್ಠರು ಸಹಾ “ನಾರಾಯಣ! ನಾರಾಯಣ!” ಎಂದು ಹರಿನಾಮ ಉಚ್ಚರಿಸುತ್ತಾ ದೇವಸ್ಥಾನದಿಂದ ಹೊರಗೆ ಓಡಿಹೋಗಿ ದೇಶ ಭ್ರಷ್ಟರಾದರು. ನೃಸಿಂಹಪುರದ ಸ್ವಾಮಿಯವರಿಂದ ಹೊಸ ಆಶ್ರಮ ಹೊಂದಿದ ಹುಡುಗನು ದೇವಸ್ಥಾನದ ಒಂದು ಕೋಣೆಯಲ್ಲಿ ಅಡಗಿ ಕೂತು ಕೊಂಡಿರುವದು ಕೊತ್ವಾಲನ ಕಣ್ಣಿಗೆ ಬಿತ್ತು. ಅವನನ್ನೂ ಅವನ ಸಂಗಡಿ ಗರನ್ನೂ ಉಂಡ ಅನ್ನ ಕಾರಿ ಹಾಕುವ ವರೆಗೆ ಹೊಡದು, ಕುತ್ತಿಗೆಗೆ ಕೈ ಹಾಕಿ ಹೊರಗೆ ದೂಡಿಬಿಟ್ಟ ಭರಕ್ಕೆ “ಇನ್ನು ಮುಂದಿ ಈ ದೇವಸ್ಥಾನದ ಕಡೆಗೆ ತಲೆಹಾಕಿ. ಮಲಗುನದಿಲ್ಲವಪ್ಪಾ! ತಾಯಿಯ ಮೊಲೆಯ ಹಾಲೂ ಹೊಟ್ಟೆಯೊಳಗಿಂದ ಕಾರಿಹೋಯಿತು! ಶ್ರೀಹರಿ! ನೀನೇ ನೋಡಿಕೋ!” ಎಂದು ಹಲಬುತ್ತಾ ಅವರೆಲ್ಲರೂ ಓಡಿಹೋಗಿ ಜೀವದಾಶೆಗೆ ಎಲ್ಲಿ ಅಡಗಿ ಕೊಂಡರೆಂತಲೂ ತಿಳಿಯಲಿಲ್ಲ. ಸೂರ್ಯನಾರಾಯಣನು ಒಳಗೆ ಹೋಗ ಲಿಕ್ಕೆ ಮಾರ್ಗ ಸರಾಗವಾಯಿತಲ್ಲ. ಯಾಕುಬಖಾನನು ಸೂಚನೆ ಕಳು ಹಿಸಿದಾಗಲೇ ಕುಮುದಪುರಕ್ಕೆ ಚಂಚಲನೇತ್ರರಿಂದ ಆಶ್ರಮ ಹೊಂದಿದ ವಾಗ್ದೇವೀ ಪುತ್ರನೇ ಬಿರುದು ಬಾವಲಿ ಸಮೇತ ವಾದ್ಯ ಘೋಷದಿಂದ ಆದಿನಾರಾಯಣಾಲಯವನ್ನು ಸುಮುಹೂರ್ತದಲ್ಲಿ ಪ್ರವೇಶಮಾಡಿದನು. ಇದಕ್ಕಿಂತ ದೊಡ್ಡ ಪ್ರಮೋದವು ವಾಗ್ದೇವಿಗೆ ಅವಳ ಜೀವಕಾಲದಲ್ಲಿ ಒದಗಲಿಕ್ಕೆ ಇರುವದೇ? ದೇವರು ತನ್ನ ಮನಸಾಭೀಷ್ಟವನ್ನು ಪರಿಪೂರ್ಣ ವಾಗಿ ಸಲ್ಲಿಸಿದನೆಂಬ ಹದನವು ಸ್ವಪ್ನಾವಸ್ಥೆಯಲ್ಲವಷ್ಟೇ. ತನಗೆ ಕನಸು ಕಟ್ಟಿಲ್ಲವಲ್ಲ! ನಿಜವಾಗಿ ಜಾಗರಾವಸ್ಥೆಯಲ್ಲಿ ತಾನಿರುವಾಗ ಇಂಧಾ ಭ್ರಮೆಯು ಎಲ್ಲಿಂದ ವ್ಯಾಪಿಸಿಬಿಟ್ಟತು? ಪೂರ್ವಪುಣ್ಯದ ಪ್ರಭಾವದಿಂದ ಭೀಮಾಜಿ ಮತ್ತು ಶಾಬಯ್ಯ ಎಂಬ ಬಲಿಷ್ಟರಾದ ಉದ್ಯೋಗಸ್ಥರ ಪ್ರೀತಿಯು ದೊರಕಿತು. ಆ ಉಭಯ ಪುರುಷರ ಸಾಹಸದಿಂದ ಅನುಪಮವಾದ ಜಯವು ಮಗನಿಗೆ ಸಿಕ್ಕಿತು. ಅವರ ಕಡೆಗೆ ತನ್ನ ಕೃತಜ್ಞತೆಯು ಪ್ರಾಣಾಂತ್ಯ ಪರಿಯಂತರ ಸ್ಥಿರವಾಗಿರಬೇಕು. ಅವರಿಗೆ ಆದಿನಾರಾಯಣ ಸರ್ವದಾ ಶುಭದಾಯಕನಾಗಿ ಅವರ ಅಭಿಮಾನವನ್ನು ಕಾಯಲೆಂದು ವಾಗ್ದೇವಿಯು ಉಕ್ಕಿ ಬರುವ ಅಹ್ಲಾದದಿಂದ ರೋಮಾಂಚನವನ್ನು ತಾಳಿದಳು. ಹಾಗೆಯೇ ಕಾರಭಾರಿಯೂ ಕೊತ್ವಾಲನೂ ಹರುಷಭರಿತರಾಗಿ, “ದೇವರು ನಮ್ಮ ಮರ್ಯಾದೆಯನ್ನು ಕಾದನು. ಬಡ ವಾಗ್ದೇವಿಗೆ ಕೊಟ್ಟ ವಾಗ್ದಾನವು ನೆರವೇರಿತು. ಇನ್ನಾದರೂ ಜೀವಾಂತ್ಯದ ಪರಿಯಂತರ ಅವಳ ಪಕ್ಷವನ್ನು ಬಿಡಲಾಗದು. ಚತುರ್ಮಠದ ಶುಂಠರು ಇನ್ನು ಕೆಲವು ತೃಣಸಮಾನವಾದ ಜೀವಿಗಳೇ, ಅವರನ್ನು ಇನ್ನು ಹ್ಯಾಗೆ ಕುಣಿಸಿದರೂ ಕೇಳುವವರ್ನಾರಿಲ್ಲ. ವಿಮರ್ಶಾಧಿಕಾರಿಯು ಇಂದು ಇಲ್ಲಿಗೆ ದಯಮಾಡಿದ್ದು ದೈನಾನುಕೂಲ ವಲ್ಲವೇ? ಅಲ್ಲವಾದರೆ ಶತ್ರುಗಳು ಮನಸ್ವಿ ತಮ್ಮ ಮೇಲೆ ದೂರು ಹೇಳಿ ಕೊಳ್ಳಲಿಕ್ಕೆ ಸಂದರ್ಭವಾಗುತ್ತಿತ್ತು. ಜೀವರೇ! ನಮ್ಮ ಪಂಥ ಗೆಲ್ಲುವಂತೆ ನೀನು ಬಡವರಾದ ನಮ್ಮ ಮೇಲೆ ಕನಿಕರನಿಟ್ಟೆ!” ಎಂದು ಭಗವಂತನನ್ನು ಜ್ಞಾಪಕಕ್ಕೆ ತಂದರು. ಜವಾನ ನಾಗಪ್ಪನು ಯೇನಾದನೆಂದು ತಿಳಿಯ ಬೇಕಲ್ಲವೇ? ಅವನನ್ನು ಯಾರು ಎಲ್ಲಿಗೂ ಕರಕೊಂಡು ಹೋಗಿರಲಿಲ್ಲ. ಗಡಿಬಿಡಿ ತೀರುವವರೆಗೆ ಅವನು ಒತ್ತಟ್ಟು ಯಾರೂ ಕಾಣದಂತೆ ಕೂತು ಕೊಂಡಿದ್ದವನು ಸೂರ್ಯನಾರಾಯಣನು ದೇವಾಲಯ ಹೊಕ್ಕಿದೊಡನೆ ಕೊತ್ವಾಲನನ್ನು ಕಂಡು, ಸಲಾಂ ಮಾಡಿ, ಹೊಟ್ಟಿ ನೋವಿನಿಂದ ಕೊಂಚ ಸಮಯ ಒಂದು ಅಂಗಡಿ ಹಲಿಗೆಯ ಮೇಲೆ ಬಿದ್ದುಕೊಂಡಿದ್ದೆನೆಂದು ವಿಜ್ಞಾಪಿಸಿದನು.
ವಿಮರ್ಶಾಧಿಕಾರಿಯು ರಾತ್ರೆ ಏನಾದರೂ ಭಾರೀಕಲಹ ನಡೆದು ಉಭಯ ಸಕ್ಸದವರಲ್ಲಿ ಹೊಡೆದಾಟವಾಗುವದೊ ಎಂಬ ಸಂದೇಹ ಉಳ್ಳವ ನಾಗಿ ಗುಡಾರದಲ್ಲಿ ಮಲಗಿ ಕೊಂಡಿದ್ದನು. ಇದೊಂದು ದೊಡ್ಡ ಪ್ರಕರಣ ವಾದುದರಿಂದ ಅತಿಶಯವಾದ ಜಗಳ ನಡದರೆ ಜಾಗ್ರತೆಸಾಕಾಗಲಿಲ್ಲವೆಂಬ ಅಪವಾದ ಬರುವದೆಂಬ ಭಯವು ಅವನಿಗೆ ಚೆನ್ನಾಗಿ ಇತ್ತು. ಆದಕಾರಣ ಸ್ವಲ್ಪಶಬ್ದವಾದರೆ ಎಚ್ಚೆತ್ತು ಕಿವಿ ಗೊಡುತ್ತಿದ್ದನು. ಪರಂತು ದೇವಾಲಯದ ಕಡೆಗೆ ಹೋಗಲಿಕ್ಕೆ ಅವನಿಗೆ ಮನಸ್ಸಿರಲಿಲ್ಲ. ಮಧ್ಯರಾತ್ರೆಕಳೆದ ಮೇಲೆ ಕೊತ್ಚಾಲನೂ ಕಾರಭಾರಿಯೂ ಮೆಲ್ಲನೆ ಅವನ ಗುಡಾರದ ಸಮೀಪ ನಿಂತು ನೋಡಿದರು. ಒಳಗೆ ಅವನು ನಿದ್ರೆಯಲ್ಲಿ ಇದ್ದಹಾಗೆ ಕಂಡು ಬಂತು. ಹರಿ ಕಾರರ್ಯಾರೂ ಎಚ್ಚರವಾಗಿದ್ದ ಹಾಗೆ ಕಾಣಲಿಲ್ಲ. ಆದುದರಿಂದ ಅವರು ತಿರುಗಿ ದೇವಸ್ಥಾನಕ್ಕೆ ಹೋಗಿ ಪುನಹ ಏನಾದರೂ ತಂಟೆನಡಿಯುವ ಹಾಗಿನ ಚಿಹ್ನೆಗಳು ಇವೆಯೋ ಎಂಬುದನ್ನು ಚನ್ನಾಗಿ ನೋಡಿದರು. ಎಲ್ಲವೂ ಶಾಂತ ವಾಗಿ ಸೋತುಹೋದ ಪಕ್ಷದವರು ಪಲಾಯನ ಮಾಡಿದ ಹಾಗೆಯೇ ತೋರಿತು. ವಿಶೇಷ ಏನಾದರೂ ನಡೆದರೆ ಜಾಪ್ಯ ಮಾಡದೆ ವರದಿಕೊಡ ಬೇಕಾಗಿ ಜವಾನರಿಗೆ ಅಪ್ಪಣೆಕೊಟ್ಟು ಸಾಕಷ್ಟು ಪಹರೆಯವರನ್ನು ದೇವ ಸ್ಥಾನದ ಒಳಗೂ ಹೊರಗೂ ಇರಿಸಿಬಿಟ್ಟು ಮನೆಗಳಿಗೆ ಬಂದು “*ಹೌದೇನೆ! ಪ್ರಾಣ ಉಳಿಸಿಕೊಂಡೇ ಬಂದಿರುವೆವೆಂದು” ಮುಂಚೆ ಅನುಮಾನಗ್ರಸ್ತರಾ ಗಿನ ತಮ್ಮ ಹೆಂಡಂದಿರಿಗೆ ತಿಳಿಸಿ, ಅವರನ್ನು ನಿಶ್ಚಿಂತರಾಗಿಮಾಡಿದರು. ಮರುದಿನ ಬೆಳಿಗ್ಗೆ ಉಭಯ ಉದ್ಯೋಗಸ್ಥರು ವಿಮರ್ಶಾಧಿಕಾರಿಯನ್ನು ಕಂಡು ಮುಂಚಿನ ರಾತ್ರೆಯಲ್ಲಿ ಕುಮುದಪುರದ ಮಠದ ಪ್ರಕೃತದ ಸನ್ಯಾ ಸಿಯು ನಿರ್ವಿಘ್ನವಾಗಿ ದೇವಾಲಯ ಪ್ರವೇಶವಾದನು. ಎದುರು ಪಕ್ಷದವರು ಗುಪ್ತಠಾವುಗಳಿಗೆ ಕೆಲವು ಪೋಕರಿ ಜನರನ್ನು ಕೂಡಿಕೊಂಡಿದ್ದರೂ ಅವರು ಮುಂದೆ ಬೀಳಲಿಕ್ಕೆ ಹೆದರಿ ಸುಮ್ಮಗಾದರೆಂದು ವರದಿಕೂಟ್ಟರು. ವಿಮರ್ಶಾ ಧಿಕಾರಿಯು ಇಷ್ಟು ಒಳ್ಳೇ ವರ್ತಮಾನವನ್ನು ಕೇಳಿ, ಹರ್ಷಿತನಾಗಿ ತನ್ನ ಒಳ ಉದ್ಯೋಗಸ್ತರು ತಕ್ಕೊಂಡ ಮುಂಜಾಗ್ರತೆ ಮತ್ತು ಅವರ ಬುದ್ಧಿವಂತಿ ಕೆಯನ್ನು ಕುರಿತು ಅವರನ್ನು ಶ್ಲಾಘನೆ ಮಾಡಿದನು. ಕಿರಿ ದಿವಾನರಿಗೆ ತಾಮಸಮಾಡದೆ -ಕುಮುದಪುರದಲ್ಲಿ ಸಕಲ ವಿಷಯದಲ್ಲಿ ಶಾಂತಿಯೇ ಪ್ರಬಲವಾಗಿರುವದು. ಕಲಹವೇನೂ ನಡಿಯಲಿಲ್ಲವೆಂದು ಅಂತರಂಗದಿಂದ ಲೇಖನವನ್ನು ಕಳುಹಿಸಿದರು. ಆ ಮೇಲೆ ಅವನು ತನ್ನ ಮುಖ್ಯ ವಾಸ್ತವ್ಯಕ್ಕೆ ನಡದುಬಿಟ್ಟನು.
ಚತುರ್ಮಠದವರಿಗೆ ಸೂರ್ಯನಾರಾಯಣನ ವಿಜಯವನ್ನು ಕೇಳಿ ದಾಗ ತಲೆಯ ಮೇಲೆ ಪರ್ವತ ಜರಿದು ಬಿದ್ದಂತಾಯಿತು. ತಾನು ಹೊಸ ಆಶ್ರಮ ಕೊಟ್ಟ ಹುಡುಗನ ದುರವಸ್ಥೆಯನ್ನು ರಾತಾರಾತ್ರೆ ಓಡಿ ಬಂದ ಆವನ ಬಾಯಿಯಿಂದಲೇ ತಿಳದು ನೃಸಿಂಹಪುರಸ್ವಾಮಿಗಳು ಅಶ್ರುಜಲವನ್ನು ಶಾನೇ ಹೊತ್ತು ಸುರಿಸಿದರು. ಬೇರ ಮೂರು ಮಠಗಳ ಸನ್ಯಾಸಿಗಳೂ ತಮಗೆ ಉಂಟಾದ ಅಪಜಯವನ್ನು ಕುರಿತು ನಾಚಿಕೆಯನ್ನೂ ಶೋಕವನ್ನೂ ತಾಳಿ ಇನ್ನು ಮುಂದೆ ಶತ್ರುಗಳ ಬಾಯಿಯಲ್ಲಿ ಮರ್ಯಾದೆ ಉಳಿಸಿಕೊಂಡು ಜೀವಿಸುವ ಉಪಾಯ ಕಾಣದೆ, ಮತಿಭ್ರಷ್ಠರಾದರೆನ್ನಬಹುದು. ಅವರಿಗೆ ಬೇರೆ ಯಾವ ಹೆದರಿಕೆಯೂ ಇರಲಿಲ್ಲ. ಯಾಕಂದರೆ ಅವರು ಇರುವ ಊರು ಗಳು ಕುಮುದಪುರದ ಕಾರಭಾರಿಯ ಅಧಿಕಾರಕ್ಕೆ ಒಳಪಟ್ಟುವುಗಳಲ್ಲ. ಆದರೆ ರಘುವೀರರಾಯನು ಕೂಡಿಸಿದ ಕೂಟವನ್ನು ಕುರಿತು ಸಹಕಾರಿ ಗಳಾದರೆಂಬ ಒಂದು ದೋಷಾರೋಪಣೆಯು ಅವರ ಮೇಲೆ ಇರುವದರಿಂದ ಆ ಉದ್ಯೋಗಸ್ಥನು ತಮ್ಮನ್ನು ಈಗ ಏನೂ ಅಂಕೆಯಿಲ್ಲದೆ ಮಾನ ಭಂಗಕ್ಕೂ ದ್ರವ್ಯನಷ್ಟಕ್ಕೂ ಗುರಿಮಾಡದಿರನೆಂಬ ಘೋರ ಚಿಂತೆಯಲ್ಲಿ ಅವರು ಮುಣುಗಿದರು. ಇಡೀ ನಗರದಲ್ಲಿ ದೊಡ್ಡ ಗುಬಾರು ಹುಟ್ಟಿತು.
ಶಾಬಯ್ಯನ ಮತ್ತು ಭೀಮಾಜಿಯ ಪ್ರತಾಪವು ವಿಮರ್ಶಾಧಿಕಾರಿಯ ದಯದಿಂದ ದಿನೇ ದಿನೇ ಏರುತ್ತಾ ಬರುವ ಕಾರಣದಿಂದ ಚತುರ್ಮಠ ದವರ ಹೆದರಿಕೆಯು ಮಿತಿಮೀರಿತು. ಅವರು ಒಂದು ವ್ಯಾಜ್ಯ ಮಾಡಿಯಾ ದರೂ ನೋಡುವದಕ್ಕೆ ಬುದ್ಧಿವಂತ ವಕೀಲರ ಆಲೋಚನೆಯನ್ನು ರಘು ವೀರರಾಯನ ಪರಿಮುಖ ಪಡಕೊಂಡು, ನೃಸಿಂಹಪುರಾಧೀಶರಿಂದ ಆಶ್ರಮ ಹೊಂದಿದ ಸನ್ಯಾಸಿಯಿಂದ ಸೂರ್ಯನಾರಾಯಣನನ್ನು ಹೊರಪಡಿಸುವ ವದಕ್ಕೂ ಚಂಚಲನೇತ್ರರ ಉತ್ತರಾಧಿಕಾರಿಗಳಾಗಿ ತನ್ನನ್ನು ಅಂಗೀಕರಿಸಿ ಕೊಳ್ಳಲಿಕ್ಕೂ ಫೈಸಲಾಗಬೇಕಾಗಿ ಒಂದು ದಾವೆಯನ್ನು ಮಾಡಲಾಯಿತು. ಅಷ್ಟಾಗುವಾಗ್ಗೆ ನಾಲ್ಕು ಮಠದ ಸನ್ಯಾಸಿಗಳೊಬ್ಬೊಬ್ಬನ ಮೇಲೆ ಎದುರು ಪಕ್ಷದಿಂದ ಫಿರ್ಯಾದುಗಳು ಶಾಬಯ್ಯನ ಮುಂದೆ ಬರಲಿಕ್ಕಾದವು. ಇನ್ನು ತಮ್ಮನ್ನು ಕಾರಭಾರಿಯು ನಿಃಪಾತ ಮಾಡುವನೆಂಬ ಹೆದರಿಕೆಯಿಂದ ಪ್ರತಿ ಒಬ್ಬ ಸನ್ಯಾಸಿಯು ಮಠವನ್ನು ಬಿಟ್ಟು ಅನ್ಯರಾಜ್ಯದಲ್ಲಿ ಸಂಚಾರ ಮಾಡಿಕೊಂಡು ಇರುವ ರಕ್ಷಣೋಪಾಯವನ್ನು ಹುಡುಕಿದರು. ನೃಸಿಂಹ ಪುರ ಸನ್ಯಾಸಿಗಳು ಊರುಬಿಟ್ಟು ಹೋಗುತ್ತಾ ಅದಾಲತ್ತಿನ ವ್ಯಾಜ್ಯದ ಖರ್ಚಿಗೆ ಬೇಕಾಗುವಷ್ಟು ದ್ರವ್ಯಾನುಕೂಲವನ್ನು ರಘುವೀರನ ಸ್ವಾಧೀನ ಒಪ್ಪಿಸಿದರು. ಅದು ಸಾಲದಿದ್ದರೆ ಹೆಚ್ಚಿಗೆ ಹಣವನ್ನು ಅವನು ದೊರಕಿಸಿ ಕೊಳ್ಳುವದಕ್ಕೆ ಏರ್ಪಾಡು ಮಾಡಿದರು. ರಘುವೀರನ ದರಬಾರು ಮತ್ತೆ ನೋಡಬೇಕೇ? ಕಡಿವಾಣವಿಲ್ಲದ ಕುದುರೆಯ ಗತಿಯಾಯಿತು. ಅವನು ಕೈಗೆ ಸಿಕ್ಕಿದ ಹಣವನ್ನು ದಿಕ್ಕಾಪಾಲಾಗಿ ಅನಾವ್ರಯ ಮಾಡುತ್ತಾ ನಾಗವೇಣಿ ಯೆಂಬ ವಾರಾಂಗನೆಯ ಸ್ನೇಹವನ್ನು ಬೆಳೆಸಿ ಅವಳ ಮನೆಯಲ್ಲಿ ಅಹರ್ನಿಶಿ ಬಿದ್ದು ಕೊಂಡು, ದುರ್ನಾಮವನ್ನು ಬೇಗನೇ ಪಡದು, ಸರ್ವರಿಗೂ ಅವಿ ಶ್ವಾಸಿಯಾದನು.
ವ್ಯಾಜ್ಯದ ಗತಿ ಹೇಳಲ್ಯಾಕೆ? ವಾದೀ ಕಡೆಯ ಸಾಹಸವು ಕಡಿಮೆ. ವಾಗ್ದೇವಿಯ ಪಕ್ಷಕ್ಕೆ ವ್ಯವಹಾರ ತೀರ್ಮಾನವಾಯಿತು. ಕುಮುದಪುರ ಮಠಕ್ಕೆ ಈ ಸುದ್ದಿ ಸಿಕ್ಕಿದಾಕ್ಷಣ ಸಕ್ಕರೆ ಪಂಚಕಜ್ಜಾಯ ಊರಲ್ಲೆಲ್ಲಾ ಹಂಚಲಿಕ್ಕೆ ತಾಮಸವಾಗಲಿಲ್ಲ. ಆದರೂ ಎದುರಾಳಿಗಳು ಸುಮ್ಮನಿರವಲ್ಲರು. ಮೂಲ ಅದಾಲತಿನಲ್ಲಿ ಆದ ತೀರ್ಪಿನ ಮೇಲೆ ಮಧ್ಯ ಅದಾಲತಿನ ನ್ಯಾಯಾ ಧಿಪತಿಯ ಮುಂದೆ ವಿಮರ್ಶೆ ಮನವಿ ಕೊಡೋಣಾಯಿತು. ಅವನು ಅದನ್ನು ತಾಳ್ಮೆಯಿಂದ ಪರಾಂಬರಿಸಿ, ಮೂಲ ಲವಾಜಮೆಗಳನ್ನು ತರಿಸಿಕೊಂಡು ಎದುರು ಪಕ್ಷದವರಿಗೆ ಇಸ್ತಿಹಾರು ಆಗಬೇಕೆಂದು ಅಪ್ಪಣೆಮಾಡಿ ಕಡೇ ತೀರ್ಮಾನಕ್ಕೆ ದಿನ ನೇಮಿಸಿದನು. ವಾದಿ ಕಡೆಯಿಂದ ಘನ ಪಂಡಿತ ಹಳೇ ಕೋಟಿ ಮನಮೋಹನಯ್ಯನು ವಕೀಲನಾಗಿ ವ್ಯವಹರಿಸುವದಕ್ಕೆ ನಿಂತರು. ನ್ಯಾಯ ಶಾಸ್ತ್ರದ ಪುಸ್ತಕಗಳ ಒಂದು ದೊಡ್ಡ ಗುಪ್ಪೆಯನ್ನು ಹೊತ್ತುಕೊಂಡು ವೇದವ್ಯಾಸ ಉಪಾಧ್ಯನು ಅವನ ಬೆನ್ನ ಹಿಂದೆಯೇ ಇದ್ದನು. ಹಲವು ಪುಸ್ತ ಕಗಳನ್ನು ಮಗಚಿ ಅಸಂಖ್ಯಾತ ಆಧಾರಗಳನ್ನೆಲ್ಲಾ ನ್ಯಾಯಾಧಿಪತಿಗೆ ತೋರಿಸಿ, ಅವನು ಪ್ರಸಂಗ ಮಾಡಿ ಸೋತು ಹೋದನು. ಪಂಡಿತನ ಸಾಹ ಸವು ನಿರರ್ಥಕವಾಯಿತು. ನ್ಯಾಯಾಧಿಪತಿಯ ಮನಸ್ಸು ಪ್ರತಿವಾದಿಯ ಗುಣಕ್ಕೆ ಮಾಲುತ್ತಾ ಇತ್ತು. ಕಟ್ಟಕಡೆಯಲ್ಲಿ ಮೂಲ ತೀರ್ಪು ಸ್ಥಿರ ಪಡಿ ಸಿರುವದಾಗಿ ನಿರೂಪವಾಯಿತು. “ಮತಠಾಧಿಪತಿಗಳಿಗೆ ಏನು ದುರ್ದಶೆ ಕಾಡುತ್ತೆ? ಎಷ್ಟು ಬಲವಾದ ವ್ಯಾಜ್ಯ! ಅವರಿಗೆ ಅವಗುಣವಾಯಿತು! ವ್ಯರ್ಥವಾಗಿ ನ್ಯಾಯಾಧಿಪತಿಯ ಕೂಡೆ ಶಾನೆ ಹೊತ್ತು ವಾಗ್ವಾದ ಮಾಡಿದೆನು. ಸದರಿ ಅದಾಲತ್ತ ಎಲ್ಲಿ ಅದೆ? ಅಲ್ಲಿ ಮತ್ತೆ ನೋಡಿಕೋಬಹುದು” ಎಂದು ಪಂಡಿತನು ಮರಳಿದನು. ವೇದವ್ಯಾಸನು ಅವನ ಪುಸ್ತಕಗಳ ಹೊರೆಯನ್ನು ಹೊತ್ತು ಅನುಭವಿಸಿದ ತಲೆನೋವು ವಾಸಿ ಆಗಬೇಕಾದರೆ ಹದಿನೈದು ದಿವ ಸಗಳ ವರೆಗೆ ಶೈಲಾಭ್ಯಂಗ ಮಾಡಿಕೊಳ್ಳ ಬೇಕಾಯಿತು.
ನಾಲ್ಕು ಮಠಾಧಿಪತಿಗಳು ಕಾರಭಾರಿಯ ಭೀತಿಯಿಂದ ಪ್ರವಾಸವನ್ನು ಬಿಟ್ಟು ಮೂಲಸ್ಥಾನಕ್ಕೆ ಬರಲಿಕ್ಕೆ ಮನಸ್ಸಿಲ್ಲದವರಾದರು; ತಮ್ಮ ಅಭಿಮಾ ನಕ್ಕೆ ವಟ್ಟ ಬಂದು ಹೋಯಿತೆಂಬ ಚಿಂತೆಯಲ್ಲಿ ಕರಗುತ್ತಾ ಇರುವ ಸಂಧಿ ಯಲ್ಲಿ ಮಧ್ಯ ಅದಾಲತ್ತಿನಲ್ಲಿ ಅಪಜಯವಾದ ಸಮಾಚಾರವು ಸಿಕ್ಕಿತು. ಉರಿಯುವ ಬೆಂಕಿಯ ಮೇಲೆ ಎಣ್ಣೆ ಹೊಯಿದಂತಾಯಿತು. ಹ್ಯಾಗೂ ಆಗಲಿ ಸದರಿ ಅದಾಲತ್ತಿ ನಲ್ಲಿ ವಿಮರ್ಶೆ ಬಿನ್ನಪವನ್ನು ಕೊಡದೆ ನಿರ್ವಾಹವಿಲ್ಲವೆಂದು ಖಂಡಿತವಾಗಿ ರಘುವೀರರಾಯಗೆ ರಾಯಸ ಬಂತು. ಅವನು ಅದರ ಆಶಯ ವನ್ನು ಘನ ಪಂಡಿತಗೆ ತಿಳಿಸು,, ಅಗತ್ಯವಿರುವ ಹಣವನ್ನು ಕೊಟ್ಟು ಪಂಡಿತ ನಿಂದ ವಿಮರ್ಶೆ ಪತ್ರವನ್ನು ಬರಸಿ ಕಳುಹಿಸಿಕೊಟ್ಟನು. ಅದು ಅವಧಿ ದಾಟುವ ಒಂದು ದಿನದ ಮುಂಚೆ ಸದರಿ ಅವಾಲತ್ತಿನಲ್ಲಿ ದಾಖಲಾಗಿ ಲವಾ ಜಮೆಗಳನ್ನು ತರಿಸಿಕೊಳ್ಳುವದಕ್ಕೆ ಅಪ್ಪಣೆಯಾಯಿತು. ಇತ್ತಲು ರಾಮ ದಾಸರಾಯನು ಸುಮ್ಮಗಿರಲಿಲ್ಲ. ಕೊತ್ವಾಲ ಮತ್ತು ಕಾರಭಾರಿಯ ಮೇಲೆ ದೊಡ್ಡದೊಂದು ತಳ್ಳಿಯನ್ನು ಬರದು ಅಂಚೆಯ ದ್ವಾರ ನೆಟ್ಟನೆ ರಾಜರ ಸನ್ನಿಧಿಗೆ ಕಳುಹಿಸಿ ಬಿಟ್ಟನು. ರಾಜನು ಅದನ್ನು ಪದೇ ಪದೇ ಓದಿ ನೋಡಿ ರವಷ್ಟು ಬೆರಗಾದನು. ತನ್ನ ರಾಜ್ಯದಲ್ಲಿ ಇಂಥಾ ದುರಾಚಾರ ನಡಿಯುವಾಗ್ಗೆ ದಿವಾನರಾದರೂ ಅದರ ವಿಚಾರ ತಕ್ಕೊಳ್ಳದೆ ಕುರುಡರಂತೆ ಸುಮ್ಮಗಾದರೇ ಎಂದು ಕೊಂಚ ಸಿಟ್ಟು ತಾಳಿದನು. ಒಂದು ನೆವನದ ಮೇಲೆ ಹಿರಿ ದಿವಾನ ನನ್ನು ಕರಸಿ ಆ ತಳ್ಳಿಯನ್ನು ಓದಿ ನೋಡೆಂದನು. ದಿವಾನನು ಅದನ್ನು ಓದಿ ಮೌನತಾಳಿದನು. “ಇದು ಬರೇ ತಳ್ಳಿಯೋ? ಏನಾದರೂ ನಡದದೆಯೋ?” ಎಂದು ರಾಜನು ಪ್ರಶ್ನೆ ಮಾಡಿದನು. ದಿವಾನನು ಇಂತೆಂದನು-“ಮಹಾ ಸ್ವಾಮಾ ಬೆಂಕಿಯಿಲ್ಲದೆ ಹೊಗೆ ಬಂದೀತೇ? ಕುಮುದಪುರ’ ಮಠದಲ್ಲಿ ಅನಾ ಚಾರ ಹೆಚ್ಚಾಗಿ ಲೋಕನಿಂದೆಗೆ ಆಸ್ಪದವಾಯಿತು. ವಿಮರ್ಶಾಧಿಕಾರಿಯು ನಿಷ್ಕಪಟ ಸಾಭ್ಯಸ್ಥ ಮತ್ತು ನಿರಪೇಕ್ಷಿಯಾದರೂ ಹಟದಲ್ಲಿಯೂ ಮರುಳು ತನದಲ್ಲಿಯೂ ಅಪ್ರತಿಮನಾದ ಕಾರಭಾರಿಯ ಗುಣಗಳನ್ನು ತಿಳಿಯದೆ, ಅನ್ಯಾಯವಾಗಗೊಟ್ಟನೋ ಎಂಬ ಅನುಮಾನ ಹುಟ್ಟುತ್ತದೆ. ಮಠಾಧಿಪತಿ ಗಳು ಕಡಿಮೆ ಮರುಳುತನದವರಲ್ಲವಷ್ಪೆ. ಹೋರಾಡುವ ಉಭಯ ಕಡೆ ಯವರು ಮರುಳುಮೂರ್ತಿಗಳಾದರೆ ಬೇರೆ ಎಂಥಾ ಅವಸ್ಥೆಯಾಗಬಹುದು? ಕಿರಿ ದಿವಾನರು ಇದನ್ನೆಲ್ಲಾ ನೋಡಬೇಕಾದದ್ದು. ಆದರೆ ಅವರು ವಿಮರ್ಶಾ ಧಿಕಾರಿಯ ಮೇಲಿನ ವಿಶ್ವಾಸದಿಂದ ಸುಷುಪ್ತಾವಸ್ಥೆಯಲ್ಲಿದ್ದು ಕೊಂಡರೇ ಹೊರ್ತು ಬೇಕೆಂತ ಅವರು ತಾತ್ಸಾರ ಮಾಡಲಿಲ್ಲ.”
ಹಿರಿ ದಿವಾನನ ಪ್ರತ್ಯುತ್ತರವನ್ನು ಕೇಳಿ, ರಾಜನಿಗೆ ಮತ್ತಷ್ಟು ಕೋಪೋದ್ರೇಕವಾಯಿತು. “ವಿಮರ್ಶಾಧಿಕಾರಿಯೂ ಕಿರಿದಿವಾನನೂ ಕುರು ಡರಾದಕೆ ನೀನೂ ಕಣ್ಣುಮುಚ್ಚಿಕೊಂಡು ನಮ್ಮ ರಾಜ್ಯಕ್ಕೆ ಅಪಕೀರ್ತಿ ಬರುವ ಹಾಗಿನ ಕೃತ್ಯಗಳು ನಡಿಯುವಾಗ್ಗೆ ನಮ್ಮ ತಿಳುವಳಿಕೆಗೆ ಒಂದಿಷ್ಟಾ ದರೂತಾರದೆ ಸುಮ್ಮಗಿದ್ದ ಬುದ್ಧಿವಂತಿಗೆಗೆ ಬಹಳವಾಗಿ ಮೆಚ್ಚಿದೆನು” ಎಂದು ರಾಜರು ಹೇಳಿದರು. ಹಿರಿ ದಿವಾನನು ನಮ್ರಭಾವದಿಂದ ಸರಿಯಾದ ಉತ್ತರ ವನ್ನು ಕೊಟ್ಟನು. ಹ್ಯಾಗಂದರೆ:-“ಮಹಾ ಸ್ವಾಮೀ! ನಾನು ನಿಷ್ಪಕ್ಷಪಾತಿ; ವಾದಿ ಪ್ರತಿವಾದಿಗಳು ಉಭಯ ಕಡೆಯವರೂ ನನ್ನ ಮತಸ್ಥರು. ನಾನು ಸಹ ಜವಾಗಿ ಕುಮುದಪುರದ ಮಠಾಧಿಪತಿಯ ವಿರೋಧಿಯಾಗಿರುತ್ತೇನೆ. ಎದು ರಾಳಿಗಳ ಸಾಧನೆಯು ನ್ಯಾಯವೆಂದು ನನ್ನ ಅಭಿಪ್ರಾಯ; ಪರಂತು ಅವರ ಅವಸರ ಮತ್ತು ಬುದ್ಧಿ ನಿರ್ಬಲತೆಯಿಂದ ಕುಮುದಪುರದ ಕಾರಭಾರಿಯೂ ಕೊತ್ವಾಲನೂ ಅವರ ಮೇಲೆ ವೈಮನಸ್ಸುತಾಳಿ, ಚಂಚಲನೇತ್ರರ ಮೇಲೆ ಕನಿಕರಪಟ್ಟು, ಎದುರು ಕಡೆಯ ಮಠದವರ ಮೇಲೆ ಮುನಿದು, ಅನಾಹುತ ಗಳನ್ನು ಮಾಡಿದ್ದು ಜನಜನಿತವೆಂದು ಈಗ ಹಲವರು ಹೇಳುವರು ವಿನಹ ಆವಾವ ಕಾಲದಲ್ಲಿ ಅದೆಲ್ಲಾ ಖಂಡಿತವಾಗಿ ತಿಳಿಯಲಿಲ್ಲ. ಕೃತ್ಯಗಳಲ್ಲಿ ಅನು ಮಾನಕ್ಕೆ ಕಾರಣ ತೋರಿಬರದೆ, ಅವರ ಮೇಲೆ ಸಂದೇಹ ಹುಟ್ಟಲಿಲ್ಲ. ಹಾಗ ಲ್ಲದಿದ್ದರೆ ಅವರ ಮೇಲೆ ನೆಟ್ಟಗೆ ಮೇಲ್ವಿಚಾರ ನಡಿಸತಕ್ಕ ಅಧಿಕಾರಸ್ಥರಾದ ಕಿರಿದಿವಾನರು ನಿಃಶಂಕಿತರಾಗಿರುತ್ತಿದ್ದಿಲ್ಲ. ನಿವೃತ್ತಿಪೂರ್ವಕವಾಗಿ ಯಾವ ವಿಷಯವನ್ನೂ ಸನ್ನಿಧಾನದ ತಿಳುವಳಿಕೆಯಿಂದ ಮರೆಮಾಡಿದವನಲ್ಲ. ಹೆಚ್ಚಿಗೆ ಏನು ಅರಿಕೆ ಮಾಡಲಿ?”
ರಾಜರು ನಕ್ಕರು. “ಕಿರಿ ದಿನಾನನೂ ವಿಮರ್ಶಾಧಿಕಾರಿಯೂ ಇಬ್ಬರೂ ಮಂದ ಬುದ್ಧಿಯುಳ್ಳವರಾದುದರಿಂದ ಇಂಥಾ ದುರ್ನಿತಿಯು ನಮ್ಮ ರಾಜ್ಯ ದಲ್ಲಿ ನಡದುಹೋಯಿತು. ಅಹಲ್ಲೇಕಾರರ ನೇಮಕ, ವರ್ಗಾವರ್ಗಿ ಇತ್ಯಾದಿ ಕಾರಭಾರು ನಿನ್ನ ಸ್ಪತಂತ್ರದಲ್ಲಿರುವದರಿಂದ ಈಗಲಾದರೂ ಆ ಇಬ್ಬರು ಹಟ ವಾದಿಗಳನ್ನು ಕುಮುದಪುರದಿಂದ ವರ್ಗಮಾಡು. ವಿಮರ್ಶಾಧಿಕಾರಿಗೆ ಇಂಥಾ ಕಪಟನಾಟಕದಲ್ಲಿ ಇನ್ನು ಮುಂದಾದರೂ ಸಿಕ್ಕಿಬೀಳಬೇಡವೆಂದು ಎಚ್ಚರಿಸು. ಕಿರಿ ದಿವಾನನು ಮುದಿಕಾಗೆ! ಅವರಿಗೆ ಬುದ್ಧಿ ಹೇಳುವದೂ ಕೋಣನ ಬೆನ್ನಿನ ಮೇಲೆ ಮಳೆಬೀಳುವದೂ ಏಕರೀತಿಯೇ. ನೀನೂನುವೇ ಆಲಸ್ಯ ಕೊಂಚಕಡಿಮೆ ಮಾಡಿಬಿಡು. ಇನ್ನೊಮ್ಮೆ ಇಂಥಾ ಘೋರ ಪಾತಕ ನಮ್ಮ ರಾಜ್ಯದಲ್ಲಿ ನಡೆದರೆ ನಿನ್ನ ವಿಷಯದಲ್ಲಿಯೂ ನಾವು ಅನುಮಾನಪಡ ಬೇಕಾಗುವದು.”? ಹೀಗೆಂದು ರಾಜನು ಹಿರೇ ದಿವಾನನನ್ನು ನಡುಗಿಸಿಬಿಟ್ಟನು. ಅಂದು ಸೂರ್ಯಾಸ್ತ್ಯಮಯವಾಗಬೇಕಾದರೆ ಶಾಬಯಸನಿಗೂ ಭೀಮಾಜಿಗೂ ಶಾಂತಿಪುರಕ್ಕೆ ವರ್ಗವಾಯಿತು. ವಿಮರ್ಶಾಧಿಕಾರಿಯನ್ನು ಕರಸಿ ಹಿರೇ ದಿವಾನನು ರಾಜರ ಅವಕೃಪೆಯ ವೃತ್ತಾಂತವನ್ನು ತಿಳಿಸಿ ಇನ್ನು ಮುಂದಾ ದರೂ ಮಹಿಷನೆನ್ಸಿಸಿಕೋಬ್ಯಾಡವೆಂದು ಚೆನ್ನಾಗಿ ಎಚ್ಚರಿಸಿ ಬಿಟ್ಟನು. ಕಿರಿ ದಿವಾನನಿಗೆ ರಾಜನು ತಾನೇ ಕರಸಿ ಗದರಿಸಿದ ಭರಕ್ಕೆ ಅವನ ಕರುಳುಗಳು ಸಹಾ ನಡುಗಿದುವು. ಸದರ ಅದಾಲತಿನಲ್ಲಿ ಮಾಡಲ್ಪಟ್ಟ ವಿಮರ್ಶೆಯ ವ್ಯವಸ್ಥೆ ಹ್ಯಾಗಾಗುತ್ತದೆಂದು ತನಗೆ ಕ್ರಮೇಣ ತಿಳಿಸಬೇಕಾಗಿ ರಾಜನು ಹಿರೇ ದಿವಾನನಿಗೆ ಗುಪ್ತ ಅನುಜ್ಞೆಯನ್ನು ಕೊಟ್ಟನು.
ಶಾಬಯನ ಮತ್ತು ಭೀಮಾಜಿಯ ವರ್ಗಾವರ್ಗಿಯ ಒಸಗೆಯು ಊರಲ್ಲೆಲ್ಲಾ ಹಬ್ಬಿ, ಕುಮುದಪುರದ ವಿಶಿಷ್ಟ ನಿವಾಸಿಗಳಿಗೆ ಆನಂದವ ನ್ನುಂಟುಮಾಡಿತು ವಾಗ್ದೇವಿಗೂ ಅವಳ ಕಡೆಯವರಿಗೂ ಮಾತ್ರ ಖೇದ ವಾಯಿತು. ಆದರೂ ತನ್ನ ಪಂಥ ಹ್ಯಾಗೂ ಗೆದ್ದಿತು. ಮುಂದಿನ ಗತಿ ದೇವರು ಮಾಡಿದ ಹಾಗಾಗಲೆಂದು ಸ್ವಸ್ತವಾದಳು. ಪ್ರವಾಸದಲ್ಲಿರುವ ನೃಸಿಂಹಪುರ ಸ್ವಾಮಿಗಳಿಗೆ ಶತ್ರುಗಳ ಉಚ್ಚಾಟನೆಯ ವಾರ್ತೆಸಿಕ್ಕಿದರೂ ಅದನ್ನು ಕುರಿತು ಉತ್ಕರ್ಷಪಡಲಿಕ್ಕೆ ದೇಹದಲ್ಲಿ ಗಪ್ಪನೆ ಒಂದು ರೋಗ ಪ್ರಾಪ್ತಿಸಿದ್ದರಿಂದ ಅಸಂದರ್ಭವಾಯಿತು. ತನ್ನ ಜೀವ ಹೆಚ್ಚು ದಿವಸ ಉಳಿಯಲಾರದೆಂದು ಖಚಿತವಾಗಿ, ಊರಿಗೆ ಬೇಗನೇ ಬಂದು, ಪಾರುಪತ್ಯಗಾರನ ದ್ವಿತೀಯ ಪುತ್ರ ನಿಗೆ ಆಶ್ರಮ ಕೊಟ್ಟು ಗತವಾದರು. ಉಳಿದ ಮೂವರು ಸನ್ಯಾಸಿಗಳು ಸಂತೋಷಚಿತ್ತರಾಗಿ ತಮ್ಮ ಮಠಗಳಿಗೆ ಮರಳಿದರು. ಕುಮುದಪುರಕ್ಕೆ ಶಾಂತಿಪುರದಿಂದ ವರ್ಗವಾಗಿ ಬಂದ ಕಾರಭಾರಿಯೂ ಕೊತ್ವಾಲನೂ ಒಳ್ಳೇ ಸದ್ಗುಣವಂತರಾಗಿರುವುದರಿಂದ ಅವರ ಮೇಲೆ ರಹಿತರಿಗೆಲ್ಲಾ ಹೆಚ್ಚು ವಿಶ್ವಾಸ ಉಂಟಾಯಿತು. ವಾಗ್ದೇವಿಯ ಕಾರಭಾರು ಪೂರ್ಣವಾಗಿ ನಿಂತು ಹೋಯಿತು.
*****
ಮುಂದುವರೆಯುವುದು