ಬಾಳೊಂದು ತೊರೆದು ಆಚೆ ಬಾ
ದೇವರ ಪಾದದಲ್ಲಿ ಕರಗಿಹೋಗು
ಪರಮಾತ್ಮನ ಧ್ಯಾನದಲ್ಲಿ ನೀನು
ಪಡೆದುಕೊ ಮುಕ್ತಿಯೆಂಬ ಜೇನು
ಹೆರವರ ಭಾವಗಳು ನಾವೇಕೆ ತಿದ್ದಬೇಕು
ಹೆರವರ ಅನುಭಾವ ನಮಗೇಕೆ ಬೇಕು
ನಿಂದೆ ಯಾಡುವುದು ಹೀನತನದ ವ್ಯಕ್ತಿತ್ವ
ಪಡೆದುಕೊ ಅಮರನಾಗಿ ಪರಮಾತ್ಮ ತತ್ವ
ವಿಷಯಗಳ ನಿತ್ಯವೂ ಚರ್ಚೆಬೇಡ
ಉದರ ವೈರಾಗ್ಯ ಕಪಟತನ ಬೇಡ
ಹೊನ್ನು ಮಣ್ಣುಗಳೆಲ್ಲ ಬರೀ ನೀರಸ
ನಿನ್ನ ಪ್ರಪಾತಕ್ಕೆ ತಳ್ಳುವುದು ಸಹಜ
ಈ ಬದುಕೊಂದು ಚಣದ ಸಂತೆ
ಇದಕ್ಕಾಗಿ ಏಕೆ ಇಷ್ಟೆಲ್ಲ ಚಿಂತೆ
ಕಣ್ಣು ಮುಚ್ಚಿ ತೆರೆದರಾಯ್ತು ಇಲ್ಲಿ
ಎಲ್ಲವೂ ಮಂಗಮಾಯ ಕನಸು ಎಲ್ಲಿ
ಬಣ್ಣ ಬಣ್ಣಗಳ ಲೋಕ ಇದು ಮಕ್ಕಳಾಟ
ಇದು ಬರೀ ಚಂಚಲದ ಹುಡುಕಾಟ
ನಿನ್ನೆದೆಯಿಂದ ಉಕ್ಕಿಬರಲಿ ವ್ಯಾಕುಲತೆ
ಮಾಣಿಕ್ಯ ವಿಠಲನಿಗಿರಲಿ ಕಕ್ಕುಲತೆ ಕಣ್ಣೀರು ಕತೆ
*****