ನನ್ನ ಕನಸಿನ ಭಾವನೆ
ತಾಯ ನುಡಿಗಳ ಧಾರಣೆ
ಮುಗಿಲೆತ್ತರದ ಕಾಮನೆ
ಭೂಮಿಗಿಳಿದ ಧಾಮನೆ
ಎಲ್ಲೆಲ್ಲೂ ಮೂಡಿಹುದು ಚಿತ್ತಾಕಾರ
ಸಂಚರಿಸುತಿಹುದೆ ಸತ್ಯಾಕಾರ
ಭುಗಿಲೆದ್ದಿಹುದು ಮಿಥ್ಯಾಕಾರ
ಅಪಸ್ವರಗಳ ಆಹಾಕಾರ
ಕೇಳುತಿಹಳು ತಾಯಿ
ಒಡಲ ದನಿಗಳ ಮಮಕಾರ
ಎಂದಿಗೆ ಮುಗಿಯುವುದು ಆರ್‍ಥನಾದ
ಎಲ್ಲಿಹುದು ಆಸ್ಪದ
ಪುಟ ಪುಟಗಳಲಿವುದೆ ಈ ಪದ
ತಾಯ ಲಾಲನೆಯ ಆ ಪದ
ಕೇಳಲು ಇಂಪು ನುಡಿಯಲು ಕಂಪು
ಇಲ್ಲದ ಸಲ್ಲದ ಒಡನಾಟಕೆ
ತಾಯ ಮಡಿಲ ಸೆಣಸಾಟ
ಹಿಂದೆಂದು ಕಾಣದ ಸೆಣಸಾಟಕೆ
ಒಂಟಿ ಸಲಗನ ಓಡಾಟ
*****


















