ದೇವಾಲಯದ ಪ್ರವೇಶಕ್ಕೆ ಒಂದು ತಿಂಗಳುಂಟಂದಾಗ ಒಂದು ರಾತ್ರೆ ಚಂಚಲನೇತ್ರರಿಗೆ ಅಕಸ್ಮಾತ್ಕಾಗಿ ಅಪಸ್ಮಾರ ರೋಗ ತೊಡಗಿ ಚಿಕಿತ್ಸೆಗೆ ಅವಕಾಶವಿಲ್ಲದೆ ಗತರಾದರು. ವಾಗ್ದೇವಿಗೂ ಅವಳ ಪಕ್ಷದವರಿಗೂ ಸಿಡಿಲು ಬಡಿದಂತಾಯಿತು. ಕಟ್ಟಳೆಗನುಗುಣವಾಗಿ ವೃಂದಾವನವನ್ನು ಮಾಡಿ ಮುಕ್ತರಾದ ಸನ್ಯಾಸಿಗಳಿಗೆ ಗತಿ ಕಾಣಿಸಿ ಆಯಿತು. ತದುಪರಿ ವಾಗ್ದೇವಿಯು ಶೃಂಗಾರಿಯನ್ನು ಸಂಗಡ ಕರಕೊಂಡು ಕಾರಭಾರಿಯ ಮನೆಗೆ ಹೋಗಿ- “ಇನ್ನು ಮುಂದೆ ಯಾರಿಗೂ ಮುಖ ತೋರಿಸಲಾರೆ. ನನ್ನ ಮಗನ ಭವಿಷ್ಯ ವನ್ನು ಉಳಿಸುವ ಬಹುಭಾರ ತಮ್ಮನು. ಶೃಂಗಾರಿಯನ್ನು ಪಾದಕ್ಕೆ ಒಪ್ಪಿ ಸಿದ್ದೇನೆ. ಇವಳು ಸಮಯ ಬಿದ್ಬಾಗ್ಗೆ ನನ್ನ ಕಡೆಯಿಂದ ಬಂದರೆ ಅವಳನ್ನು ಮನ್ನಿಸಬೇಕು” ಎಂದು ಬೇಡಿಕೊಂಡು ಮೂರನೇ ಸಲ ಕಾರಭಾರಿಯಿಂದ ಅಭಯವನ್ನು ಪಡದು ಮರಳಿದಳು. ಚಂಚಲನೇತ್ರರು ಮುಕ್ತರಾದ ಸುದ್ದಿ ಯು ಊರಲ್ಲಿ ಆಗಲೇ ತುಂಬಿತು. ನೃಸಿಂಹಪುರಾದಿ ಮಠಾಧಿಕಾರಿಗಳು ತುಂಬಾ ಸಂತೋಷಪಟ್ಟು, ರಘುವೀರರಾಯನನ್ನು ಕರಸಿ ಸೂರ್ಯನಾರಾ ಯಣನನ್ನು ದೇವಸ್ಥಾನ ನುಗ್ಗದಂತೆ ಯಾವ ಉಪಾಯ ಮಾಡಬೇಕೆಂದು ಯೋಚನೆ ಗೈಯುವದರಲ್ಲಿ ಬಿದ್ದರು. ಹೆಚ್ಚು ಸಮಯದ ವರೆಗೆ ಚನ್ನಾಗಿ ಆಲೋಚನೆಯಿಂದ ರಾಮದಾಸನ ಕೂಡೆ ವಾದಮಾಡಿ–“ರಾಜದ್ವಾರದಲ್ಲಿ ಏನೊಂದು ವ್ಯವಹರಣೆ ನಡಿಸಿದರೆ ಕೊತ್ವಾಲನ ಆದಿಯಾಗಿ ವಿಮರ್ಶಾಧಿಕಾರಿ ಪರಿಯಂತರ ಜಯ ನಮಗೆ ಸಿಕ್ಕಲಾರದು. ಎದೆ ಘಟ್ಟಿ ಮಾಡಿಕೋಬೇಕು. ದ್ವಂದ್ವ ಮಠದಿಂದ ನೇಮಕವಾದ ಶಿಷ್ಯನನ್ನು ಯಾರೊಬ್ಬರಿಗೂ ತಿಳಿಯ ದಂತೆ ಮುಂಚೆಯೇ ದೇವಸ್ತಾನಕ್ಕೆ ಸಂಬಂಧಿ ಮಠದಲ್ಲಿ ಇರಿಸಿಬಿಟ್ಟು ದೇವಸ್ಥಾನದ ಎಲ್ಲಾ ಬಾಗಲುಗಳನ್ನೂ ಮುಚ್ಚಿ ಬೀಗ ಹಾಕಿ ಗುಪ್ತವಾದ ಠಾವುಗಳಲ್ಲಿ ಸೈನ್ಯಕ್ಕೆ ಸದೃಶವಾದ ಜನಸಂಖ್ಯೆಯನ್ನು ಅಡಗಿಸಿ ಇಟ್ಟು, ನಮ್ಮ ಕಾರ್ಯಹಾರಿ ಮಾಡಲಿಕ್ಕೆ ಬರುವವರನ್ನು ಯಮಪುರಕ್ಕೆ ಕಳುಹಿಸಿಕೊ ಡುವ ಹಾಗಿನ ಏರ್ಪಾಟು ಬಹು ಜಾಗ್ರತೆಯಿಂದ ಮಾಡಿದರೆ ಸೂರ್ಯ ನಾರಾಯಣನ ಗತಿಯು ನಗೆ ಗೀಡಾಗುವದು? ಎಂದು ರಘುನವೀರರಾಯನು ತನ್ನ ಅಭಿಪ್ರಾಯವನ್ನು ತಿಳಿಸಿದನು. “ಸರಿ, ಹಾಗೆಯೇ ಮಾಡಿಬಿಡುವ” ಎಂದು ನಾಲ್ಕು ಮಂದಿ ಸನ್ಯಾಸಿಗಳೂ ಐಕಮತ್ಯವಾದರು.
ಭೀಮಾಜಿಯೂ ಕಾರಭಾರಿಯೂ ಒಂದು ದಿನ ಒಟ್ಟು ಗೂಡಿ ಸಂಭಾ ಷಣೆ ಮಾಡಲೆಸಗಿದರು:-“ನಮ್ಮ ಶಪತವನ್ನು ತೀರಿಸಿಕೊಳ್ಳುವದಕ್ಕೆ ಹಲವು ವಿಘ್ನಗಳು ಬಾರದಿರಲಾರವು. ಸೂರ್ಯನಾರಾಯಣನನ್ನು ದೇವಾಲಯದೊ ಳಗೆ ಪ್ರವೇಷಮಾಡಿಸಲಿಕ್ಕೆ ನಮ್ಮಿಂದ ಆಗದೆ ಹೋದರೆ ನಾವು ಮೀಸೆ ಬೋಳಿಸಿಕೊಂಡು ದೇಶಾಂತರ ಹೋಗುವದೇ ಲೇಸು” ಹೀಗೆ ಕಾರಭಾರಿ ಯು ಅಂದಾಗ–“ಸೂರ್ಯನಾರಾಯಣನಿಗೆ ಜಯ ಸಿಕ್ಕುವರು ಯಾವ ದೊಡ್ಡ ಮಾತು? ಕಠಿಣವಾದ ಕೆಲಸದಲ್ಲಿ ಧೈರ್ಯವೇ ಪ್ರಧಾನ, ಪ್ರಾಣ ತ್ಯಾಗ ಮಾಡಿಯಾದರೂ ಅವನನ್ನು ನುಗ್ಗಿಸಿಬಿಡುವಾ. ತಾವು ಅನುಮಾನ ದಲ್ಲಿ ಬೀಳಬಾರದು” ಎಂದು ಭೀಮಾಜಿಯು ಕಾರಭಾರಿಗೆ ಉತ್ತೇಜನ ಕೊಟ್ಟು, ಅವನ ಮನಸ್ಸಿನ ಚಾಂಚಲ್ಯವನ್ನು ಪರಿಹರಿಸಿದನು. “ಎದುರಾಳಿ ಗಳು ಸ್ತಂಭೀಭೂತರಾಗಿರುವಂತೆ ತೋರುವದು. ಏನೋ ಗುಟ್ಟಿನ ಆಲೋ ಚನೆಯಲ್ಲಿರುವ ಹಾಗೆ ಕಾಣಿಸುತ್ತದೆ. ಸೋವು ತಿಳಿಯುವ ಪ್ರಯತ್ನ ಮಾಡಿ ಲ್ಲವೇ” ಎಂದು ಶಾಬಯ್ಯನು ಭೀಮಾಜಿಯನ್ನು ಕೇಳಿದನು. ತನ್ನ ಮನಸ್ಸಿಗೂ ಸಂದೇಹ ಹೊಕ್ಕಿರುವ ಪ್ರಯುಕ್ತ ವರ್ತಮಾನ ಸಂಗ್ರಹ ಮಾಡುವದರಲ್ಲಿ ಅಮರಿ ಇದ್ದೇನೆ. ಪ್ರಾಮಾಣಿಕವಾದ ಸಮಾಚಾರ ದೊರಿಯಲಿಲ್ಲ. ಬೇಗನೇ ದೊರಕದೆ ಹೋಗದು. ಕ್ರಮೇಣ ಅರಿಕೆ ಮಾಡದೆ ಇರುವೆನೇನೆಂದು ಉತ್ತರ ಕೊಟ್ಟು ಮನೆಗೆ ನಡೆದನು. ಹಾಗೆಯೇ ಯಾಕುಬಖಾನನನ್ನು ಕರದು ಎದುರು ವಾದಿಗಳ ಮುಂಜಾಗ್ರತೆಯ ಸ್ವಭಾವವನ್ನು ತಿಳುಕೊಳ್ಳುವ ಪ್ರಯತ್ನಮಾಡುವದಕ್ಕೆ ನೇಮಿಸಿದನು. ಅವನು ಒಳ್ಳೇಯುಕ್ತಿವಂತನೇ. ತನಗೂ ಕಾರಭಾರಿಗೂ ಅವಿವೇಕ ಹುಟ್ಟಿಯದೆಂಬ ಅನ್ವಯ ಹುಟ್ಟುವ ಮಾತುಗಳನ್ನು ಆಡುವದರ ದ್ವಾರ ಚತುರ್ಮಠದವರ ಮೇಲೆ ಅತಃಕರುಣವಿದ್ದವನಂತೆ ತೋರಿಸಿ ಕೊಂಡು, ಕೊಂಚ ಕೊಂಚ ಸಮಾಚಾರವನ್ನು ಸಂಗ್ರ ಹಿಸಿ, ಭೀಮಾಜಿಗೆ ತಿಳಿಸುತ್ತಾ ಬಂದನು. ಕಾರಭಾರಿಗೆ ಅದೇ ಪ್ರಕಾರ ವರ್ತ ಮಾನವೆಲ್ಲಾ ಸರಿಯಾಗಿ ಸಕಾಲದಲ್ಲಿಯೇ ಸಿಕ್ಕುವದಾಯಿತು.
ಏನೂ ತಿಳಿಯದವರಂತೆ ಕೊತ್ವಾಲನೂ ಕಾರಭಾರಿಯೂ ಇದ್ದು ಕೊಂಡರು. ತಮ್ಮ ಗುಪ್ತವಾದ ಆಲೋಚನೆಯೂ ಯಾರಿಗೂ ಗೊತ್ತಿಲ್ಲ ವೆಂಬ ಹೆಮ್ಮೆಯನ್ನು ತಾಳಿ, ಎದುರು ವಾದಿಗಳು ಮನಸ್ಸಿನಲ್ಲಿ ಮಂಡಿಗೆ ತಿಂದರು. ವಾಗ್ದೇವಿಗೆ ಹೆಚ್ಚು ಅನುಮಾನವೂ ಭಯವೂ ಇದ್ದಾಗ್ಲೂ ಭೀಮಾ ಜಿಯು ಅದನ್ನೆಲ್ಲಾ ನಿರಸನ ಮಾಡುವದರಲ್ಲಿ ಉದಾಸೀನ ಮಾಡಲಿಲ್ಲ. ಶೃಂಗಾರಿಯು ಸಮಯವರಿತು ಕಾರಭಾರಿಯನ್ನು ತಾನೇ ಕಂಡು, ವಾಗ್ದೇ ವಿಯ ಪ್ರತಿನಿಧಿಯಾಗಿ ಅವಳ ಸಂಕಷ್ಟಗಳನ್ನು ನಯನುಡಿಯಿಂದ ಅರುಹಿ, ಇಂಥ ಸಂಧಿಯಲ್ಲಿ ನಡಿಯಬೇಕಾದ ಕ್ರಮವನ್ನು ತಿಳುಕೊಂಡು ಅವಳಿಗೆ ಹೇಳುತ್ತಿರುವಳು. ಸೂರ್ಯನಾರಾಯಣನು ಸಹಜವಾಗಿ ತಾಯಿಯ ಮಾತಿ ನಂತೆ ನಡಕೊಳ್ಳುವದು ಧರ್ಮವೆಂದು ತಿಳುಕೊಂಡನು ತನ್ನ ಅಂತರ್ಭಾವ ವನ್ನು ಯಾರಿಗೂ ತಿಳಿಯಗೊಡಲಿಲ್ಲ. ಕುಮುದಪುರದ ಮಠದಲ್ಲಿದ್ದ ಹಣ ಕಾಸು ವಸ್ತು ಒಡವೆಗಳು ಚಿನ್ನಚಿಗರೆಲ್ಲ ದಿಕ್ಕಾಪಾಲಾಗಿ ಹೋಯಿತು. ಘಟ್ಟಿ ಘಟ್ಟ ವಸ್ತುಗಳೂ ಧಥೈಲಿ ಧೈಲಿ ಹಣವೂ ಪುಣ್ಯ ಸಂಗ್ರಹ ಸಂಗದ ಪೆಟ್ಟಿಗೆಗಳಗೆ ದಾರಿ ಹಿಡಿದುವು. ಅಲ್ಪ ಸ್ವಲ್ಪ ಬೇರೆ ವಿಧವಾಗಿ ಯಾರ್ಯಾರ ಬೊಕ್ಕಸದಲ್ಲಿ ಬಿತ್ತು. “ನಂದಾರಾಯನ ಬದುಕು ನಾಯಿನರಿ ತಿಂದು ಹೋಯಿತು” ಎಂಬ ಗಾದೆಯಂತೆ ಕುಮುದಪುರದ ಮಠದ ದ್ರವ್ಯದ ಗತಿ ಯಾಯಿತು. ಸಾಲಮಾಡುವ ಅಗತ್ಯವು ವಾಗ್ದೇವಿಗೆ ಬಿತ್ತು. ಮಠದ ಸ್ಥಿರಾ ಸ್ಕಿಗಳನ್ನು ಈಡುಕೊಟ್ಟು, ಸೂರ್ಯನಾರಾಯಣನ ಕೈಯಿಂದ ದಸ್ತಾವೇಜು ಗಳನ್ನು ಬರೆಸಿ ಕೊಡುವದರ ಮೂಲವಾಗಿಯೂ ಕೈಕಾಗದಗಳ ಮೇಲೂ ಬೇಕುಬೇಕಾದ ಹಾಗೆ ಸಾಹುಕಾರ ಫುತುಹುಲ್ಲಾಖಾನ, ದಿಗಂಬರ ಶೆಟ್ಟಿ ಗಲ್ಲಮೀಸೆ ಸುಬ್ಬಯ್ಯ ಶೆಟ್ಟಿ, ವಾಂತಸೀನಭಟ್ಟ, ಇವರಿಂದ ಹಣವನ್ನು ಈಸು ಕೊಂಡು, ವ್ಯಾಜ್ಯ ವ್ಯವಹಾರಗಳ ಉದ್ದಿಶ್ಯ ಬೇರೆ ಅನುಪತ್ಯ ಸುದಾರಿಸಿ ಕೊಳ್ಳುವದಕ್ಕೋಸ್ಟರವೂ ಉಪಯೋಗಿಸಲಾಯಿತು. ಹಣದ ಮುಖ ನೋಡಿ ದರೆ ಪಂಥ ಗೆಲ್ಲುವದು ಹ್ಯಾಗೆ? ಸೂರ್ಯನಾರಾಯಣನು ಆದಿನಾರಾಯ ಣಾಲಯ ಪ್ರವೇಶವಾಗಲಿಕ್ಕೆ ಮೂರೇ ದಿವಸ ಉಳಿದವು. ಕಿರಿ ದಿವಾನರಿಂದ ತಲಪಿರುವ ಗುಪ್ತಾನುಜ್ಞೆಗೆ ವಿಧೇಯನಾಗಿ ವಿಮರ್ಶಾಧಿಕಾರಿಯು ಫಕ್ಕನೆ ಬಂದು ಕುಮುದಪುರದಲ್ಲಿ ಉಳುಕೊಂಡನು.
*****
ಮುಂದುವರೆಯುವುದು