ನಾನು ನನ್ನದು ಎಂಬ ಅಹಂಕಾರ ಬೇಡ
ನೀನು ನಿನ್ನದು ಎಂಬ ಸದ್ವಿಚಾರವ ನೀಡ
ನಾನೇಯಂತ್ರ ನೀನು ಯಾಂತ್ರಿಕ
ನಾನೇ ಮಂತ್ರ ನೀನು ಮಾಂತ್ರಿಕ
ನನ್ನಿಚ್ಛೆಯಿಂದ ಇಲ್ಲಿ ಯಾವುದು ನಡೆಯದು
ಭಗವತ್ ಇಚ್ಛೆಯೇ ಸರ್‍ವಕ್ಕೂ ಅಹುದು
ಆಡಿಸುವಾತನ ನಾನು ಕೈಗೊಂಬೆಯಂತೆ
ಅವನ ವಿಶ್ವದಲ್ಲಿ ಮಾತ್ರ ಪಾತ್ರದಾರಿಯಂತೆ
ಕಷ್ಟ ಸುಖಗಳೆಲ್ಲವೂ ಅವನ ಪ್ರಸಾದ
ಸಮನಾಗಿ ಸ್ವೀಕರಿಸುವುದೇ ನನ್ನ ಹಿತವಾದ
ಹಿಂದೊಮ್ಮೆ ಈ ಭೂವಿಯಲ್ಲಿ ಎಷ್ಟೊ ಸಲವು
ಜನ್ಮಗಳ ಫೇರಿಯಲಿ ಪಡೆದಿರುವೆ ಫಲವು
ಮುಂದಿನ ಗಳಿಗೆಗಳು ಅರಿಯದೆ ನೀನು
ಹಾಳು ಗೆಡುವದಿರು ಒಂದೊಂದು ಅಣಿ ಮತ್ತು
ಶಾಂತಿ ಸಮಾಧಾನಕ್ಕೆ ವೇಳೆ ಖರ್‍ಚು ಮಾಡು
ಮಾಣಿಕ್ಯ ವಿಠಲನ ಜಪಿಸು ಈ ಹೊತ್ತು
*****