ಹಮ್ ನಹಿಂ ಗದ್ಧಾ

ಹಮ್ ನಹಿಂ ಗದ್ಧಾ

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂಟ್’ ಸಾಹೇಬರ ‘ಬಂಗ್ಲಗಿಂತಲೂ’ ಎತ್ತರದಲ್ಲಿ ಇದ್ದುವು. ಈ ಮೂವರು ‘ಆಫೀಸರರ’ ಬಟ್ಟೆಗಳನ್ನೆಲ್ಲಾ ಒಗೆಯುವ ಆಗಸನು ಒಬ್ಬನೇ. ಜನರಲ್ ಸಾಹೇಬರ ಮತ್ತು ಕರ್ನೆಲ್ ಸಾಹೇಬರ ‘ಬಂಗ್ಲೆಗಳು’ ಎತ್ತರದಲ್ಲಿ ಕಟ್ಟಿದುದರಿಂದ, ಆಗಸನು ಅವರ ವಸ್ತಗಳನ್ನು ಒಯ್ಯುವುದಕ್ಕೆ ಕತೆಯನ್ನು ಇಟ್ಟುಕೊಳ್ಳ ಬೇಕಾಯಿತು. ಆದರೆ ಲಫ್ಟೆನೆಂಟ್ ಸಾಹೇಬರ ಬಟ್ಟೆಗಳಿಗೆ ತನ್ನ ಬೆನ್ನನ್ನೇ ವಾಹನವಾಗಿ ಕೊಡುತಿದ್ದನು. ಇದರಲ್ಲಿ ನೂತನವೇನೂ ಇರಲಿಲ್ಲವೆಂದು ತಾನಾಗಿಯೇ ತೋರುವುದು. ಆದರೆ ಆಗಸನ ಈ ನಡತೆಯನ್ನು ನೋಡಿ ಲೆಫ್ಟೆನೆಂಟ್ ಸಾಹೇಬರು ರೇಗಿ ಬಿದ್ದರು. ಜನರಲ್ ಮತ್ತು ಕರ್ನಲ್ ಸಾಹೇಬರುಗಳ ವಸ್ತ್ರಗಳನ್ನು ಕತ್ತೆಯ ಮೇಲೂ, ತನ್ನ ವಸ್ತ್ರಗಳನ್ನು ಮಾತ್ರ ಬೆನ್ನ ಮೇಲೂ ಏಕೆ ಕೊಂಡುಹೋಗುತ್ತಿದ್ದನು ಎಂದು ಸಾಹೇಬರ ಬುದ್ಧಿಗೆ ತಿಳಿಯಲಿಲ್ಲ. ತನಗೆ ಇದೊಂದು ಬಗೆಯ ಅವಮಾನವೆಂದು ತಿಳಿದು, ಸಾಹೇಬರು ಆ ಬಡ ಪಾಪಿಗೆ ಬುದ್ಧಿ ಕಲಿಸಬೇಕೆಂದು ನಿಶ್ಚಯ ಮಾಡಿದರು.

ಸಾಹೇಬರು ಕಾರಣಾಂತರದಿಂದ ಅನೇಕ ಮಂದಿ ಸ್ನೇಹಿತರನ್ನು ಮನೆಗೆ ಒಂದು ದಿನ ಸಾಯಂಕಾಲ ಆಮಂತ್ರಿಸಿದ್ದರು. ಅತಿಥಿಗಳಲ್ಲಾ ಮನೆಯೊಳಗೆ ಕೂಡುತ್ತಲೇ ಸಾಹೇಬರ ಬಟ್ಟೆಗಳನ್ನು ಎಂದಿನಂತೆ ಬೆನ್ನ ಮೇಲೆ ಹೊತ್ತುಕೊಂಡು ‘ಡೋಭಿಯು’ ಒಳಕ್ಕೆ ಬಂದನು. ಅತಿಥಿಗಳ ಸಮಕ್ಷಮದಲ್ಲಿ ಅಗಸನು ತನಗೆ ತೋರಿಸಿದ ಈ ಅತ್ಯಾಚಾರವನ್ನು ನೋಡಿ, ಸಾಹೇಬರು ಉರಿದು ಬಿದ್ದರು. ಅದಲ್ಲದ ತಾನು ದೇಶಭಾಷಯಲ್ಲಿ ಎಷ್ಟರ ಮಟ್ಟಿಗೆ ಅಭ್ಯಾಸ ಮಾಡಿರುವನೆಂದು ತನ್ನ ಮಿತ್ರಮಂಡಳಿಗೆ ತೋರಿಸುವುದಕ್ಕೆ ಸಾಹೇಬರು ಕಾಂಕ್ಷಿತರಾಗಿ, ಅಗಸನಿಗೆ “ಕಂ ಹಿಯರ್ ಯು ನಿಗ್ಗರ್” ಎಂದು ಓದರಿದರು.

ಬಡ ಅಗಸನು ನಡುನಡುಗಿ ಮುಂದುಹೋಗಿ ದೊಡ್ಡ ಸಲಾಂ ಮಾಡಿದನು.

“ವ್ಹಾಯ್ ಜನರಲ್ ಸಾಹೀಬ್ ಎಂಡ್ ಕರ್ನೆಲ್ ಸಾಹೆಬ್ ತುಂ ಗಿವ್ ಗದ್ಧಾ ಎಂಡ್ ಹಂ ನಹಿ?” ಎಂದು ಸಾಹೇಬರು ಕುಪಿತಸ್ವರದಿಂದ ಹೇಳಿದರು.

ಅಗಸನ ಬುದ್ಧಿ ಅಡಿಮೇಲಾಯಿತು; ಅವನಿಗೆ ಈ ಸಿಟ್ಟು ಮಾತಿನ ಅರ್ಥವೇನೆಂದು ತಿಳಿದುಬರಲಿಲ್ಲ. ಅವನು ಮೌನದಿಂದ ಇರುವುದೇ ಲೇಸಂದು ತಿಳಿದು ನಿರುತ್ತರನಾದನು. ಆದರಿ ಅವನ ನಿರುತ್ತರದಿಂದ ಸಾಹೇಬರು ಇನ್ನೂ ಕೆರಳಿದಂತಾಗಿ “ಡೆಯರ್ ಯೂ ಡಿನ್ಯಾ ಇಟ್, ಅಯ್ಲ್ ಬ್ರೇಕ್ ಎವೆರಿ ಬೋನ್ ಫೊರ್ ಯೂ-ಮಾಲುಂ?” ಎಂದರು.

“ಖುದಾವಂದ್! ಆಪ್ ಕ್ಯಾ ಕಹತೇ ಹೈ ಮೈ ಸಮಜ್ತಾ ನಹಿಂ? ಎಂದು ‘ಢೋಬಿ’ ಯು ಉತ್ತರಿಸಿದನು.

“ಸಮಜ್ತೆ ನೈ? ಒಲ್ ರ್‍ಯಾಟ್, ಆಯ್ ವಿಲ್ ಎಕ್ಸ್‍ಪ್ಲೇನ್ ಟು ಯೂ, ದೇಖೊ.”

“ಜೀ ಹುಜೂರ್”

“ದೇಕ್ಹೋ! ಕರ್ನಲ್ಸಾಹಬ್ ಗದ್ಧಾ, ಜನರಲ್ ಸಾಹಬ್ ಗದ್ಭಾ; ಹಂ ಗದ್ಧಾ ನಹಿ”

ಇದಕ್ಕೆ ಅಗಸನು ಸುಮ್ಮನಿರಲಾರದೆ “ನಹಿ ಸಾಹೆಬ್, ಆಪ್ ಕೈಸಾ ಗದ್ಧಾ? ಆಪ್ ಗದ್ಧಾ ನಹಿ” ಎಂದನು.

ಇದನ್ನು ಕೇಳುತಲೇ ಸಾಹೇಬರು ಕ್ರೋಧದಿಂದ “ಯೂ ಸ್ಟುಪಿಡ್ ಅಸ್ಸ್, ಯು ಡೆಯರ್ ಡಿನೈ ಮಿ ಯುವರ್ ಡೊಂಕಿ? ವೊಟ್ ಡು ಯು ಮೀನ್? ಹಂ ಗದ್ಧಾ, ಒಫ್ ಕೋರ್ಸ್, ಹಂ ಗದ್ಧಾ.”

ಸಾಹೇಬರ ಮನಸ್ಸು ನೆಟ್ಟಗಾದ ಸ್ಥಿತಿಯಲ್ಲಿ ಇರಲಾರದೆಂದು ಸಾಹೇಬರ ಈ ಮಾತುಗಳಿಂದ ಬಡ ಅಗಸನು ನಿಶ್ಚಯಿಸಿದನು; ತಾನು ಕತ್ತೆ ಎಂದು ಹೇಳಿಸಿಕೊಳ್ಳುವ ಹಟವನ್ನು ಸಾಹೇಬರು ಏಕೆ ಹಿಡಿದಿರುವರು ಎಂದು ಅವನಿಗೆ ತಿಳಿಯಲಿಲ್ಲ. ಅಲ್ಲಿ ನೆರದಿದ್ದ ಅತಿಥಿಗಳೆಲ್ಲರೂ ಸಾಹೇಬರ ನುಡಿಗಳಿಂದ ವಿನೋದಗೊಂಡರು. ಆದರೆ ಆಗಸನು ತನ್ನನ್ನು ಅಪಮಾನಗೊಳಿಸಿದನೆಂದು ಸಾಹೇಬರು ತಿಳಿದು, ತನ್ನ ಮುಷ್ಟಿಯಿಂದ ಎರಡು ಮೂರು ಪ್ರಹಾರಗಳನ್ನು ಕೊಟ್ಟು ಹೇಳಿದೇನೆಂದರೆ, “ಸೇ, ಯು ಇನ್‌ಫರ್‌ನಲ್ ಆಸ್ಫ಼್!-ಸೇ, ಲೆಫ್ಟನಂಟ್ ಸಾಹೆ ಗದ್ಧಾ, ಅಲ್‍ಬತ್ ಗದ್ಧಾ, ಒಲ್‍ವೆಸ್ ಗದ್ಧಾ” “ಬೊಲೋ, ಹಂ ಗದ್ಧಾ ಹೈ, ಅದರ್ ವಾಯಸ್ ಅ ವಿಲ್ ಕಿಲ್ ಯು.”

ಲೆಫ್ಟನೆಂಟ್ ಸಾಹೇಬರೂಡನೆ ಚರ್ಚಿಸುವುದು ವ್ಯರ್ಥವೆಂದು ತಿಳಿದು ಆಗಸನು “ಆವ್ರ್ ಖುದಾ ವಂದ್ ಜಬ್ತೊ ಜೈಸಿ, ಆಪ್ ಕೀ ಮರ್ಜಿ, ಆಪ್ ಬಹುತ್ ಬಡಾ ಗದ್ಧಾ” ಎಂದನು.

ಈ ಸಂಗತಿಯನ್ನು ಸಾಹೇಬರು ತನ್ನ ಹಿಂದೂಸ್ಥಾನೀ ಮುನ್ಶಿಗೆ ಹೇಳಿದರು. ಮುನ್ಶಿಯು ಇದರ ಯಥಾರ್ಥ ಸ್ಥಿತಿಯನ್ನು ತಿಳಿಸುತ್ತಲೇ ಸಾಹೇಬರಿಗೆ ಅದ ನಾಚೆಕೆಯನ್ನು ವಾಚಿಸುವುದಕ್ಕಿಂತಲೂ ನೀವು ಯೋಚಿಸುವುದೇ ಲೇಸು. ಹೇಗೂ ಅದು ಮುನ್ಶಿಯ ಸಂಬಳವನ್ನು ಹೆಚ್ಚಿಸುವಂತೆ ಪರಿಣಮಿಸಿತು. ದೇಶ ಭಾಷೆಯ ಅಭ್ಯಾಸಕ್ಕೆ ಸ್ವಲ್ಪ ಹೆಚ್ಚು ಗಮನವನ್ನು ಕೊಡುವುದಕ್ಕೆ ಸಾಹೇಬರು ತೊಡಗಿದರು; ಮತ್ತು ತಾನು ಚೆನ್ನಾಗಿ ದೇಶ ಭಾಷೆಯನ್ನು ತಿಳಿದ ಹೊರತು ಅದರಿಂದ ಒಂದೇ ಒಂದು ಅಕ್ಷರವನ್ನು ಉಚ್ಚರಿಸಲಾರೆನೆಂದು ನಿಶ್ಚೈಸಿದರು.
*****
(ಸುವಾಸಿನಿ – ೧೯೦೨)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜ್ಞಾನ
Next post ನೀ ಬರುವ ದಾರಿಯಲಿ

ಸಣ್ಣ ಕತೆ

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…