ಐಕ್ಯಸಾಗರ

ಇಗೋ ಈ ಮೌನಾ ಸುತ್ತಮುತ್ತೂ ಜಗದಗಲಾ ವಾಚಾತೀತಾ
ಶ್ವೇತಾ ಶುಭ್ರಾ ಸ್ಫೀತಾ ಖಗಮಾಲಾ ಸಾಗರಮಗ್ನಾ
ದಿಗಂತೋಡ್ಡೀನಾ ಲೀನಾ
ನಿಃಶಬ್ದಾಕಾಶವ್ಯಾಪ್ತಾ ನಿರ್ನಾದಾ ಪಾರಾವಾರಾ
ನೀಲಾಂತರ್ನೀಲಾ ಅಗಾಧಾ ಅನ್ಯೋನ್ಯಾ ಸಾಕ್ಷೀಮೂಕಾ
-ಇಗೋ ಈ ಮೌನಾ.

ಗುರುಗುಮ್ಮಾ ಅನಂತಾನಂತಾ ಏಕಾತ್ಮಾ ಏಕೋರಾಮಾ
ಈ ವಿಶ್ವಾಶಿಷ್ಟಾ ಪುರುಷಾ ಶ್ರೀ-ವಿಶ್ವಾಕಾರ ಪ್ರಾಪ್ತಾ
ದೃಷ್ಟಾ ಅದೃಷ್ಟಾಂ ಸರ್ವಾ ನಿಜಬೀಜಾಂಕುರಿತಾ ಭರಿತಾ
ಒಂದೇ ಇದೋ ಮಹೋದಾರಾ, ಒಂದೇ ಒಂದೇ ಬೃಹದಾಕಾರಾ, ಅಪಾರಾ
– ಅಹೋ ಈ ಮೌನಾ

ಇದು ಯಾರೋ ಏನೋ ಧ್ಯಾನಾಸಕ್ತಾ ವಿದೇಹ ನಾಮಾತೀತಾ
ಅಸ್ಮೀತ್ಯಾಕತಾಲಗ್ನಾ ಏಕೈಕಾ ಅಮೃತಂ ಭೂಮಾ
ಓ ಸ್ಫಾಣೋ, ಶಾಶ್ವತಾ, ಸಮಾಧಿಪ್ರಜ್ಞಾ, ಕೇವಲಾಸೀಮಾ
ಆಃ ಸತತಾ ವಿತತಾ ವಿವಿಧಾ ಲೋಕೈಕೇ ಹೃದಯೇ ಮಗ್ನಾ
-ಓಹೋ ಈ ಮೌನಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರಥಿಗೆ
Next post ವಾಗ್ದೇವಿ – ೫೧

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…