ವಾಗ್ದೇವಿ – ೫೪

ವಾಗ್ದೇವಿ – ೫೪

ಕುಮುದಪುರವನ್ನು ಶಾಬಯನೂ ಭೀಮಾಜಿಯೂ ಬಿಟ್ಟು ಹೋದಂ ದಿನಿಂದ ಆ ಊರಿನ ಜನರು ನಿಶ್ಚಿಂತರಾದರು. ಅವರಿಬ್ಬರ ಬದಲಿಗೆ ಬಂದ ಉದ್ಯೋಗಸ್ಥರು ಅನ್ಯಾಯ ಪ್ರವರ್ತನೆಯಲ್ಲಿ ಎಂದೂ ಸೇರುವವರಲ್ಲ ವೆಂದು ಪ್ರತಿ ಒಬ್ಬನಿಗೂ ಖಂಡಿತವಾಗಿ ಗೊತ್ತಾಯಿತು. ಮರ್ಯಾದೆವಂತ
ರಾದ ಜನರು ಅವರ ಮೇಲೆ ಎಷ್ಟು ವಿಶ್ವಾಸವಿಟ್ಟಿರುವರೊ ಅಷ್ಟೇ ಭಯವು ದುಷ್ಟರಿಗೆ ಹುಟ್ಟಿತು. ರಘುವೀರರಾಯನು ಮಠಾಧಿಪತಿಗಳ ಮಮಕಾರದವ ನಾಗಿ ನೃಸಿಂಹಪುರ ಮಠದಿಂದ ಹೆಚ್ಚು ದ್ರವ್ಯವನ್ನು ವಂಚಿಸಿರುವನೆಂದು ಕಾರಭಾರಿಗೆ ವರ್ತಮಾನ ಸಿಕ್ಕಿ ಅವನಿಗೆ ಸ್ವಲ್ಪ ಬುದ್ಧಿ ಕಲಿಸಬೇಕೆಂಬ ಮನಸ್ಸು ಹುಟ್ಟಿತು. ಆದರೆ ಅವನು ವಕೀಲನಾಗಿಯೂ ಹೆಚ್ಚು ಅನುಭವಸ್ಥ ನಾಗಿಯೂ ಇರುವವನಾದುದರಿಂದ ಒಮ್ಮೆಯೇ ಅವನ ಗುಟ್ಟು ತಿಳಿಯಲಿಕ್ಕೆ ಸಂದರ್ಭವಿಲ್ಲದೆ. ಯೋಚನೆಯಲ್ಲಿರುವ ಕಾಲದಲ್ಲಿ ಸ್ತ್ರೀಲಂಪಟನಾದ ಈ ವಕೀಲನು ಅದೇ ಪಟ್ಟಣದಲ್ಲಿ ಒಬ್ಬ ಪಂಡೋಜಿಯ ಹತ್ತರ ದ್ವೇಶವನ್ನು ಕಟ್ಟಿಕೊಂಡ ದೆಸೆಯಿಂದ ಆ ಪಂಡೋಜಿಯು ಇವನ ಗುಟ್ಟು ಚೆನ್ನಾಗಿ ತಿಳಿದವನಾಗಿ ಅದನೆಲ್ಲಾ ಅಂತರಂಗದಿಂದ ಕಾರಭಾರಿಗೆ ತಿಳಿಸಿದನು. ಅವನು ಪರಮ ಸಂತೋಷದಿಂದ ಕೊತ್ವಾಲನಿಂದ ಶೋಧನೆ ಮಾಡಿಸಲು ರಘು ವೀರನ ಮನೆಯಲ್ಲಿ ಅವನು ವಂಚನೆಯಿಂದ ಹಸ್ತಗತ ಮಾಡಿಕೊಂಡ ಚಿನ್ನಾ ಭರಣಗಳು ಸಿಕ್ಕಿದವು. ಕಾರಭಾರಿಯು ಕೂಡಲೇ ಅವನನ್ನು ಕೈದುಮಾಡಿ ಪಹರೆಯಲ್ಲಿರಿಸಿಬಿಟ್ಟನು. ಅವನ ಮೇಲೆ ಕೊತ್ವಾಲನು ಸಾಕಷ್ಟು ಸಾಕ್ಷವನ್ನು ಸಂಗ್ರಹಿಸಿ ಪ್ರಕರಣವನ್ನು ಮಾಡಿ ಕಾರಭಾರಿಯ ಮುಂದೆ ಕಳುಹಿಸಿದನು. ಕಾರಭಾರಿಯು ಅವನಿಗೆ ಕಠಿಣವಾದ ಶಿಕ್ಷೆಯಾಗುವದಕ್ಕೋಸ್ಟರ ಮೊಕದ್ದ ಮೆಯನ್ನು ವಿಮರ್ಶಾಧಿಕಾರಿಯ ಬಳಿಗೆ ಕಳುಹಿಸಿಕೊಟ್ಟನು. ರುಜುವಾತು ಬಲವಾದದ್ದಲ್ಲವೆಂದು ನಿಶ್ಚಯಿಸಿ ಅವನನ್ನು ವಿಮೋಚನೆ ಮಾಡಿದನು. ರಘುವೀರನು ಅಂದಿನಿಂದ ಮೂಲೆಗೆ ಸೇರುವದಾಯಿತು. ಯಾಕಂದರೆ ಅವನು ಸಂಪಾದಿಸಿದ ದ್ರವ್ಯವೆಲ್ಲಾ ಕೊಂಚ ಕೊಂಚವಾಗಿ ಹೋಗಿಬಿಟ್ಟತು.

ರಾಮದಾಸರಾಯನು ಸೂರ್ಯನಾರಾಯಣನ ಅವಗುಣಕ್ಕೆ ಸದರ ಅದಾಲತಿನವರು ಕೊಟ್ಟ ತೀರ್ಪನ್ನು ದಿನಕ್ಕೆ ಹತ್ತಾವರ್ತಿ ಓದುತ್ತಾ ನ್ಯಾಯವು ಗೆದ್ದಿತೆಂದು ಕಂಡಕಂಡವರ ಕೂಡೆ ಹೆಗ್ಗಳಿಕೆಯನ್ನು ಆಡುತ್ತಾ ಉದ್ಧರ್ಷದಿಂದ ಪದೇ ಪದೇ ನೆಗಾಡುವದರಲ್ಲಿಯೇ ಬಿದ್ದನು. ಸ್ವಲ್ಪಕಾಲ ದಲ್ಲಿಯೇ ಅವನಿಗೆ ಪಿತ್ರಭ್ರಮೆಯಂತೆ ಒಂದು ಅಸ್ಪಸ್ಥವು ತಗಲಿ ನಿತ್ಯ ಕ್ಷೀಣ ವಾಗುತ್ತಾ ಬಂದು ತಂದೆತಾಯಿಗಳಿಗೂ ಹೆಂಡತಿ ಮಕ್ಕಳಿಗೂ ಬಂಧುಬಾಂಧ ವರಿಗೂ ಭಯ ಉಂಟುಮಾಡಿದನು. ಹಲವು ವೈದ್ಯರು ಅವನ ರೋಗ ಪರೀ ಕ್ಷೆಯನ್ನು ಮಾಡಿ ಅವರವರ ಬುದಿವಂತಿಕೆಗೆ ಯುಕ್ತವಾಗಿ ಕಂಡ ಔಷಧಗಳನ್ನು ಮಾಡಿದರು. ಸರಂತು ಅವನಿಗೆ ಅವರ್ಯಾರಿಂದಲೂ ತಿಲಾಂಶಪ್ರಯೋ ಜನವೂ ದೊರಕದೆ ಅವನ ರೋಗವು ವೃದ್ಧಿಯಾಗುತ್ತಾ ಬಂದು, ಕೊನೆಗೆ ಅವನು ವೈಕುಂಠಯಾತ್ರೆಗೆ ತೆರಳಿದನು.

ವೇದವ್ಯಾಸ ಉಪಾಧ್ಯನು ಹ್ಯಾಗಾದರೂ ಕುಮುದಪುರ ಮಠಕ್ಕೆ ಪುನಃ ಸೇರಿಕೊಂಡನು. ಸೂರ್ಯಸಾರಾಯಣನು ಹೊರಟು ಹೋದ ತರು ವಾಯ ಅವನಿಗೆ ಆ ಮಠದಲ್ಲಿ ಮರ್ಯಾದೆ ಸಿಕ್ಕಿತು. ಮುಂಚೆ ಹ್ಯಾಗೋ ಹಾಗೆಯೇ ಪುರಾಣ ಓದುವ ಉದ್ಯೋಗವೂ ಅವನಿಗೆ ದೊರಕಿತು. ಮುದು ಕನಾಗಿ ಹಲ್ಲುಗಳನ್ನು ಕಳಕೊಂಡವನಾದರೂ ಒಳ್ಳೇ ಅನುಭವಸ್ಮನೂ ಗೀರ್ವಾಣ ಪಂಡಿತನೂ ಎನಿಸಿಕೊಂಡ ಅವನು ತನಗೆ ಒಪ್ಪಿದ ಕೆಲಸವನ್ನು ಲಾಲಾಜಲ ಸುರಿಸಿಕೊಂಡಾದರೂ ಮರಾಧಿವತಿಗಳು ಮೆಚ್ಚುವಂತೆ ನಿರ್ವ ಸುವದರಲ್ಲಿ ಏನೂ ಅಡಿಯಾಳಾಗಲಿಲ್ಲ. ವೆಂಕಟಪತಿ ಆಚಾರ್ಯನು ಹೆಚ್ಚು ಕಾಲ ಅಸ್ವಸ್ಥದಲ್ಲಿಯೇ ಬಿದ್ದು ಕಾಲಾನುಭಾಗದಲ್ಲಿ ತೀರಿ ಹೋದನು. ಮಠ ದಲ್ಲಿ ಹಳೇ ಅನುಭವವುಳ್ಳವನು ವೇದವ್ಯಾಸ ಉಪಾಧ್ಯ್ಯನೊಬ್ಬನೇ ಆಗಿ ಹೆಚ್ಚು ಉಪಯೋಗಕರವಾಗಿ ನಡಕೊಂಡನು. ಕೆಪ್ಪಮಾಣಿಯು ಶಾಂತಿಪುರ ಮಠದಲ್ಲಿ ನಾಯಕಸಾನಿಯ ಆಡಳತೆದಾರನಾಗಿ ಇರುವದಕ್ಕಿಂತ ತಾನು ಮೊದಲು ಇದ್ದ ಕುಮುದಪುರ ಮಠವನ್ನು ಪ್ರವೇಶಿಸುವ ಇಚ್ಛೆ ಯಿಂದ ಯತಿಗಳಿಗೆ ವಿಜ್ಞಾಪಿಸಿ ಕೊಂಡಾಗ ಅವನ ಸಾಕ್ಷ್ಯ್ಯದಿಂದಲೇ ವ್ಯಾಜ್ಯವು ಗುಣವಾಯಿತೆಂಬ ನೆನಪು ಮರೆಯದೆ ಅವರು ಅವನನ್ನು ಉಗ್ರಾ ಣದ ಕೆಲಸಕ್ಕೆ ನೇಮಿಸಿದರು. ಕಡೇ ವರೆಗೂ ಅವನು ಮಠದ ಮೇಲೆ ಶ್ರದ್ಧೆ ಯಿಂದಲೂ ವಿಶ್ವಾಸದಿಂದಲೂ ನಡಕೊಂಡು ಚಂಚಲನೇತ್ರರ ಕಾಲದಲ್ಲಿ ಚೋರತನದಿಂದ ತರಿಸಿಕೊಂಡ ದಮರ್ನಾಮವನ್ನುು ಕಳಕೊಂಡು ಮರ್ಯಾ ದಸ್ಥ ಮನುಷ್ಯನೆನ್ನಿಸಿಕೊಂಡು ಇರುವವನಾದನು.

ಸೂರ್ಯನಾರಾಯಣನ ಜನ್ಮವೇ ವ್ಯರ್ಥನಾಯಿತು. ತನ್ನ ತಾಯಿ ಯು ನಡೆಸಿದ ಘೋರವಾದ ಪಾಪಕೃತ್ಯದಿಂದ ತನಗೆ ಇಂಥಾ ಗತಿಯಾಯಿ ತೆಂದು ಬಹಿರಂಗವಾಗಿ ಅವನು ಹೇಳುವದಕ್ಕೆ ಅಂಜಿಕೊಳ್ಳಲಿಲ್ಲ. ಇದು ಅವಳ ಕಿವಿಗೆ ಆತಿ ಕಠೋರವಾಯಿತು. ತನಗೆ ಸಾವು ಬೇಗ ಬರಲಿಲ್ಲವೆಂಬ ಚಿಂತೆಯಲ್ಲಿ ಅವಳು ಮುಳುಗಿದಳು. ತಿಪ್ಪಾಶಾಸ್ತ್ರಿಯು ತನ್ನ ಮನೆಮಾರಿನ ಗೊಡವೆಯೇ ಬಿಟ್ಟು ಶೃಂಗಾರಿಯ ಒಡನಾಟದ ಸುಖವನ್ನು ಅನುಭವಿಸಿ, ವಾಗ್ದೇವಿಯ ಒಟ್ಟಿ ನಲ್ಲಿ ಸೂರ್ಯನಾರಾಯಣಕನಿಗೆ ತನ್ನಿಂದ ಕೂಡುವ ಸಹಾಯ ಮಾಡುತ್ತಿರುವಾಗ ಅವನು ಒಂದು ಸಣ್ಣ ಗಂಡಾಂತರದಲ್ಲಿ ಸಿಲು ಕಿದನು. ಹ್ಯಾಗಂದರೆ-ಕುಮುದಪುರ ಮಠದಿಂದ ಹೊರಟು ಪ್ರವಾಸದಲ್ಲಿರು ವಾಗ ಸೂರ್ಯನಾರಾಯಣಕನಿಗೆ ನಿತ್ಯಖರ್ಚಿಗೆ ಒಂದೊಂದು ಸಲ ಹೆಚ್ಚು ಇಕ್ಕಟ್ಟಾಗಿ ಕೂಳಿಗೆ ತತ್ವಾರಯೇಂಬಂತೆ ಆಗುವದಿತ್ತು. ಅಂಥಾ ಅನಿವಾರ್ಯ ಸಂಗತಿಯಲ್ಲಿ ವಾಗ್ದೇವಿಯು ಚಿನ್ನ ಚಿಗುರು ಈಡು ಇಟ್ಟು ತಿಪ್ಪಾಶಾಸ್ತ್ರಿಯ ಪರಿಮುಖ ಹಣವನ್ನು ತರಿಸಿಕೊಂಡು ಅನುಪತ್ಯ ಸುಧಾರಿಸಿಕೊಳ್ಳುತ್ತಿದ್ದಳು. ಒಂದು ದಿನ ಎರಡು ಸರಗಳನ್ನು ತಕ್ಕೊಂಡು ತಿಪ್ಪಾಶಾಸ್ತ್ರಿಯು ಒಬ್ಬ ಸಾಹು ಕಾರನಲ್ಲಿ ಹೋಗಿ ಅವುಗಳ ಈಡಿನ ನೇಲೆ ಹಣವನ್ನು ಪಡಕೊಳ್ಳುವದಕ್ಕೋ ಸ್ಥರ ಪ್ರಸ್ತಾಪ ನಡಿಸಿದನು. ಸಾಹುಕಾರನು ಒಡವೆಗಳನ್ನು ನೋಡಿ ಕೊಂಚ ಅನುಮಾನ ಪಟ್ಟು ಯಾರಿಗೂ ತಿಳಿಯದಂತೆ ಕೊತ್ವಾಲನನ್ನು ಕರಿಸಿದನು. ಅವನು ತಿಪ್ಪಾಶಾಸ್ತ್ರಿಗೆ ಅವುಗಳನ್ನು ಕುರಿತು ಮಾಡಿದ ಪ್ರಶ್ನೆಗಳಿಗೆ ಸಮರ್ಪ ಕವಾದ ಉತ್ತರವನ್ನು ಕೊಡಲಿಕ್ಕೆ ತಪ್ಪಿದ್ದಕ್ಕಾಗಿ ಅವುಗಳನ್ನು ಕೈವಶ ಮಾಡಿ ಕೊಂಡು ಕುಮುದಪುರದ ಕಾರಭಾರಿಗೆ ಬರಕೊಂಡನು. ಕಾರಭಾರಿಯು ಅವು ಗಳನ್ನು ಕುರಿತು ಕುಮುದಪುರ ಸನ್ಯಾಸಿಗಳನ್ನು ವಿಚಾರಿಸಿದನು. ಅವುಗಳನ್ನು ವಾಗ್ದೇವಿಯು ಮಠವನ್ನು ಬಿಟ್ಟು ಹೋಗುವಾಗ್ಯೆ ಕಳ್ಳಾಟಿಕೆಯಿಂದ ಕೊಂಡು ಹೋದ ಸೊತ್ತುಗಳ ಒಂದು ಸಣ್ಣ ಅಂಶವಾಗಿರುವದಾಗಿ ತಿಳದುಬಂತು. ಈ ದೆಸೆಯಿಂದ ಶಾಸ್ತ್ರಿಯನ್ನೂ ಶೃಂಗಾರಿಯನ್ನೂ ಪಹರೆಯಲ್ಲಿ ಇಟ್ಟು ಅವರ ಮೇಲೆ ಒಂದು ಪ್ರಕರಣವನ್ನು ಏರ್ಪಡಿಸೋಣಾಯಿತು. ಅವರ ವಿಚಾರಣೆಯು ಕುಮುದಪುರ ಕಾರಭಾರಿಯಿಂದ ನಡಿಯತಕ್ಕದ್ದಾದುದರಿಂದ ಅದು ಮುಗಿ ಯುವ ಪರಿಯಂತರ ಅವರಿಬ್ಬರೂ ಆ ಪಟ್ಟಣದಲ್ಲಿ ಪಹರೆಯಲ್ಲಿ ಇರಬೇಕಾ ಯಿತು. ಅದು ಸಹಿಸಲಿಕ್ಕೆ ಕೂಡದ ಲಜ್ಜೆ ಯಲ್ಲವೇ? ಕಳೆಗುಂದಿದ ಮುಖ ಗಳುಳ್ಳ ಅವರನ್ನು ನೋಡಿದವರೆಲ್ಲರೂ ಬಹು ಪಶ್ಚಾತ್ತಾಪ ಪಡುವದಾಯಿತು.

ತಿಪ್ಪಾಶಾಸ್ತ್ರಿಯ ಮೇಲೆ ಮತ್ಸರವುಳ್ಳ ಹಲವು ಮಂದಿ ಕುಮುದಪುರ ದಲ್ಲಿರುವುದು ನಿಜ. ಪರಂತು ಶೃಂಗಾರಿಯನ್ನು ಕುರಿತು ಅನುತಾಪಪಟ್ಟು, ಅವಳ ಒತ್ತಾಸೆಗೆ ಮನಸ್ಸುಕೊಡಲಿಕ್ಕೆ ಸಿದ್ಧವಾಗಿರುವ ವ್ಯಕ್ತಿಗಳು ಯಾರೂ ಇರಲಿಲ್ಲವೆನ್ನಕೂಡದು. ತತ್ಕಾಲವಾಗತಕ್ಕ ಹೆಚ್ಚಿನ ಸಹಾಯ ಯಾವುದು? ಜಾಮಾನಿನ ಮೇಲೆ ಸೆರೆಮನೆಯಿಂದ ಬಿಡಿಸಿಬಿಟ್ಟರೆ ಸಾಕು. ಹಾಗೆ ಬಿಟ್ಟ ಮೇಲೆ ಅವಳು ಓಡಿಹೋದರೆ ದೊಡ್ಡ ಮೋಸವಾದೀತು ಎಂದು ಕೆಲವರು, ನೆವನವನ್ನು ಹೇಳಿ ಜಾರಿದರು. ಈ ಮಲಾಮತ್ತು ಒಮ್ಮೆ ಪಟ್ಟಣದಿಂದ ನಿವಾಳಿಸಿ ಹೋದವಳು ಪುನಃ ಬಂದು ಬಿಟ್ಟಳಲ್ಲಾ. ಇವಳಗೆ ಸಹಾಯ ಲೊಲ್ಲೊಟ್ಟೆಯೆಂದು ಬೇರೆ ಕೆಲವರು. ಹಾಗಲ್ಲಾ ಹೆಣ್ಣು ಹೆಂಗಸು, ಅನಾಥೆ ಯೆನ್ನಬೇಕು, ಅವಳ ಸಂಗಡ ಇರುವ ಪಾಪಿ ಸತಿಮನೆಯಲ್ಲಿ ಕೊಳೆಯಲಿ. ಅವಳನ್ನು ಬಿಡಿಸಿದವರಿಗೆ ಪುಣ್ಯಬಾರದೆ ಹೋಗದೆಂದು ವೃದ್ಧರು ಕೆಲವರು ರಾಗಚ್ಛಾಯದಿಂದ ಅಂದುಕೊಂಡರು. ಕೊನೆಗೆ ಕೆಲವು ಹಳೆಗೆಳೆಯರು ಕೂಡಿ, ತಾನಾಗಿ ಮುಂದೆ ಬೀಳದೆ ಗುಪ್ತ ಸಹಾಯಮಾಡಿ, ಒಬ್ಬ ಒಕ್ಕಲಿಗ ನನ್ನು ಹೊಣೆಯಾಗಿ ನಿಲ್ಲಿಸಿ, ಅವಳನ್ನು ಬಿಡಿಸಿದರು. ಆದರೆ ತಿಪ್ಪಾಶಾಸ್ತ್ರಿ ಯನ್ನು ಸಹ ಜಾಮೀನುಕೊಟ್ಟು ಬಿಡಿಸದಿದ್ದರೆ ಅನ್ನ ಮುಟ್ಟಿಲಾರೆನೆಂದು ಅವಳು ಹಟಮಾಡಿದಳು. ಈ ಹೊಲೆಯರ ದೈವದ ತಳ್ಳಿ ತಮಗೆ ಬೇಡವಿತ್ತು. ಆ ಪಂಚಮಹಾಪಾತಕಿಯನ್ನು ಸೆರೆಮನೆಯಿಂದ ಬಿಡಿಸಿದರೆ ಸಿಕ್ಕುವ ಪುಣ್ಯ ಯಾವುದು? ಸುಮ್ಮಗಿರದೆ ದುಷ್ಟರ ಒತ್ತಾಸೆಗೆ ಹೋದ ಸೊಕ್ಕಿಗೆ ತಮಗೆ ಕ್ಷಿಪ್ರ ಪ್ರತಿಫಲ ಸಿಕ್ಕಿತು ಎಂದು ಅವರು ಪಶ್ಚಾತ್ತಾಪಪಟ್ಟರು. ಕಡೆಗೆ ಅವೇ ಒಕ್ಕಲಿಗನ ಜಾಮಾನಿನ ಮೇಲೆ ತಿಪ್ಪಾಶಾಸ್ತ್ರಿಯು ಬಿಡುಗಡೆ ಹೊಂದಿದನು.

ಕಾರಭಾರಿಯು ಈ ವ್ಯಕ್ತಿಗಳಿಬ್ಬರ ಮೇಲೆ ಬಂದಿರುವ ಪ್ರಕರಣವನ್ನು ಚೆನ್ನಾಗಿ ಪರಿಶೋಧಿಸಿ ನೋಡಿದನು. ಅವರ ಸ್ವಾಧೀನಕ್ಕೆ ಸಿಕ್ಕಿದ ಆಭರಣ ಗಳು ಕುಮುದಪುರ ಮಠದ್ದೇ ಎಂಬದಕ್ಕೆ ತಾರ್ಕಣೆ ಇಲ್ಲದೆ ಅವರಿಗೆ ಶಿಕ್ಷೆ ವಿಧಿಸುವುದಕ್ಕೆ ಅಥವಾ ಅವುಗಳನ್ನು ಆ ಮಠಾಧಿಪತಿಗಳಿಗೆ ಬಿಟ್ಟುಕೊಡ ಬೇಕೆಂದು ಆಜ್ಞೆ ಮಾಡುವುದಕ್ಕೆ ಕಾರಣವಿರುವುದಿಲ್ಲವೆಂದು ತೀರ್ಪುಮಾಡಿ ದನು. ಆದರೂ ಆಭರಣಗಳನ್ನು ಪ್ರತಿವಾದಿಗೆ ಬಿಟ್ಟುಕೊಡಲಿಕ್ಕೆ ಅವನು ಅಪ್ಪಣೆಕೊಡಲಿಲ್ಲ. ಅವುಗಳು ತಮ್ಮ ಸೊತ್ತೆಂದು ಪ್ರತಿವಾದನ ಮಾಡುವ ವರೆಗೆ ರಾಜಸ್ಥಾನದಲ್ಲಿಯೇ ಇರಲಿ. ಹಿಂತಿರುಗಿ ಪಡಕೊಳ್ಳುವ ಅವಧಿಯು ದಾಟಿದ ಮೇಲೆ ಅವುಗಳು ಸರಕಾರಕ್ಕೆ ಮುದ್ರಾರ್ಪಣೆಯಾಗುವುದೆಂದು ತೀರ್ಪು ಮಾಡಿದನು. ಕಾರಾಗೃಹದಲ್ಲಿ ಬಿದ್ದು, ಯಾತನೆ ಪಡುವ ಸಂಕಟ ನಿವಾರಣೆ ಆದದ್ದೇ ಸಾಕು. ಆಭರಣಗಳು ಹೊಳೆಗೆ ಬೀಳಲೆಂದು ತಿಪ್ಪಾ ಶಾಸ್ತ್ರಿಯೂ ಶೃಂಗಾರಿಯೂ ಶೀಘ್ರ ವಾಗ್ದೇವಿ ಇದ್ದ ಊರನ್ನು ಸೇರಿಕೊಂಡು ನಡೆದ ವೃತ್ತಾಂತವನ್ನು ವಿದಿತ ಮಾಡಿದರು. ಈಗ ಬಡತನವು ಬಂದ ಕಾಲವೆಂದು ನೋಡದೆ, ನಗಗಳನ್ನು ಹಿಂದೆ ಸಿಕ್ಕುವ ಪ್ರಯತ್ನ ಯಾರ ಕಾಲಾ ದರೂ ಹಿಡಿದು ನಡಿಸುವದರ ಬದಲಿಗೆ ತನ್ನಲ್ಲಿ ಕೂಳೆಗೆ ಗಿರಾಕಿ ಇಲ್ಲದೆ ಹೋಗುವುದೆಂಬ ಭಯದಿಂದ ಓಡಿಬಂದಿರೇ ಎಂದು ಆವಳು ಕಠಿಣವಾಗಿ ಜರೆದು ಮಾತನಾಡಿದಳು. ಉಭಯತ್ರರಿಗೂ ಸಿಟ್ಟೇರಿತು. ಇವಳ ಹಂಗಿ ನಲ್ಲಿ ಇರುವದರಿಂದ ನಮಗೆ ಇಂಧಾ ದುರುಕ್ತಿಗಳ ಉಪಚಾರ ಸಿಕ್ಕುವ ದಾಯಿತು. ಉಪವಾಸಮಾಡಿ ಪ್ರಾಣವಾದರೂ ಕಳಕೊಳ್ಳುವದು ಲೇಸು; ಇಲ್ಲಿಂದ ನಡೆದು ಬಿಡೋಣವೆಂದು ಇಬ್ಬರೂ ಸಟ್ಟನೆ ಹೊರಟು ಶಾಬ ಯೃನೂ ಭೀಮಾಜಿಯೂ ಇರುವ ಶಾಂತಿಪುರಕ್ಕೆ ಬಂದರು.

ಪ್ರಥಮತಃ ಭೀಮಾಜಿಯ ಭೇಟಿ ಮಾಡುವ ಉದ್ದಿಶ್ಶ ಅವನ ಮನೆ ಕಡೆಗೆ ಅವರು ಅಡಿ ಇಟ್ಟರು. ದೂರದಿಂದ ಅವರನ್ನು ಕಂಡು, ಭೀಮಾಜಿಯು ಜಗಲಿಯಿಂದ ಮನೆಯ ಒಳಗೆ ಹೊಕ್ಕುಬಿಟ್ಟನು. ತಿಪ್ಪಾಶಾಸ್ತ್ರಿಯು ಬಾಗಿ ಲಲ್ಲಿ ನಿಂತು ಜವಾನಗೆ ತನ್ನ ಹೆಸರು ಹೇಳಿ ತಿಳಿಸಿದಾಗ, ಧನಿಗಳು ದೂರ ಪ್ರಾಂತ್ಯದಲ್ಲಿರುವ ಒಂದು ಗ್ರಾಮಕ್ಕೆ ಹೋಗಿರುತ್ತಾರೆ. ಹಿಂತಿರುಗಿ ಬರಲಿಕ್ಕೆ ಕೆಲವು ದಿವಸಗಳು ತಗಲಲಿಕ್ಕೆ ಸಾಕೆಂದು ಹೇಳಿದನು. ಕೊತ್ವಾಲನು ಜಗಲಿ ಯಿಂದ ಮನೆಯ ಒಳಗೆ ಬೇಗ ಬೇಗ ಹೋಗುವುದನ್ನು ಶೃಂಗಾರಿಯು ದೂರ ದಿಂದ ಕಂಡಿರುತಿದ್ದಳು. ಶ್ರೀ ಪುರುಷರಿಬ್ಬರೂ ಮರಳಿ ಭೀಮಾಜಿಯು ನಡೆ ಸಿದ ಯುಕ್ತಿಯನ್ನು ಕುರಿತು ಖೇದಪಟ್ಟು, ಮರುದಿನ ಸಾಯಂಕಾಲ ಸಮ ಯದಲ್ಲಿ ಶಾಬಯ್ಯನ ಬಿಡಾರಕ್ಕೆ ಅಭಿಮುಖರಾದರು. ಉಪ್ಪರಿಗೆ ಮೇಲಿಂದ ಅವರನ್ನು ನೋಡಿಕೊಂಡಿರುವ ಶಾಬಯ್ಯನು ಈ ಹೊಲೆಯರ ದೈವಗಳು ತನ್ನನ್ನು ಕಾಡಲಿಕ್ಕೆ ಬರುತ್ತವೆ, ಸರಿ, ಎಂದು ತಪಕ್ಕನೆ ಎದ್ದು ಒಂದು ಕೋಣೆ ಯಲ್ಲಿ ಯಾರೂ ಕಾಣದ ಹಾಗೆ ಕೂತುಕೊಂಡನು. ತಿಪ್ಪಾಶಾಸ್ತ್ರಿಯು ತನ್ನ ಹೆಸರು ತಿಳಿಸಿದಾಗ ಇನ್ನು ಎಂಟು ದಿವಸಗಳ ತನಕ ಧನಿಯು ಸರ್ವಪಾಪ ಪ್ರಾಯಶ್ಚಿತ್ತಾರ್ಥವಾಗಿ ಮೌನಧಾರಣೆಯಲ್ಲಿರುವುದರಿಂದ ಅನ್ಯ ಜನರನ್ನು ನೋಡಿ ಮಾತನಾಡಲಿಕ್ಕೆ ಎಷ್ಟು ಮಾತ್ರಕ್ಕೂ ಅನಾನುಕೂಲವಿದೆ. ಎಂದು ಪೇದೆಯು ಖಂಡಿತವಾಗಿ ಉತ್ತರ ಕೊಟ್ಟನು. ಶೃಂಗಾರಿಯ ಎದೆಯು ಬಿರಿ ಯುವ ಹಾಗೆ ತೋಚಿತು. ತನ್ನ ಸ್ನೇಹಸುಖವನ್ನು ಇಷ್ಟು ಬೇಗ ಮರೆತು ಹೋದ ಈ ಶ್ವಾನನ ಮುಖಾವಲೋಕನದಷ್ಟು ಕಡುಪಾಪ ಇನ್ಯಾವದೆಂದು ಘಟ್ಟಿಯಾಗಿ ಎಲ್ಲರೂ ಕೇಳುವಂತೆ ನುಡಿಯುತ್ತಾ ಶಾಬಯ್ಯನ ಮನೆಗೆ ಬೆನ್ನು ಹಾಕಿದಳು. ತಮ್ಮ ಶತ್ರುಗಳ ಕಣ್ಣಿಗೆ ಬೀಳದಂತೆ ಮಾಡುವುದಕ್ಕಾಗಿ ಇನ್ನೊಂದು ಊರು ಸೇರಿಕೊಳ್ಳುವುದಕ್ಕೆ ಅವರು ಶಾಂತಿಪುರದಿಂದ ಹೊರಟರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಪತ್ತಿ
Next post ಸಾಧ್ಯವಹುದೆ?

ಸಣ್ಣ ಕತೆ

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys