ಸುಭದ್ರೆ – ೧೦

ಸುಭದ್ರೆ – ೧೦

ರಾಮರಾಯನು ಪ್ರತಿನಿತ್ಯವೂ ಶಂಕರರಾಯನ ಕಾ ಗದವನ್ನೆ ನಿ ರೀ ಕ್ಷಿಸುತ್ತಿದ್ದನು. ಮಾಧವನು ರಾಂಪುರದಿಂದ ಪುನಹೆಗೆ ಹೋದಮೇಲೆ ೧೦-೧೨ ದಿನಗಳವರೆಗೂ. ನೋಡಿದರೂ ಉತ್ತರ ಬರಲಿಲ್ಲ. ಅನಂತರ ಒಂದು ತಗಾದೆಯ ಕಾಗದವನ್ನು. ಬರೆದು ಟಪ್ಪಾ ಲಿಗೆ ಹಾಕಿದಮೇಳೆ ಏನೋ ಒಂದು ಯೋಚನೆಯುತೋರಿತಾನೂ ಅದೇದಿನದ ಟಪ್ಪಾಲುಬಂಡಿಯಲ್ಲಿ ` ಕೂತುಕೊಂಡು ಫುನಹೆಗೆ ಬಂ ದನು. ಆದರೆ ಶಂಕರರಾಯನ ಮನೆಗೆ ಹೋಗಲಿಲ್ಲ. ಒಬ್ಬ ಸ್ನೇಹಿತನ ಮನೆಯಲ್ಲಿಳಿದುಕೊಂಡು ಸಮಾಚಾರವನ್ನು ಗುಟ್ಟಾಗಿ ಮೊದಲು ತಿಳಿದು ಅನಂತರ ಶಂಕರರಾಯನನ್ನು ಕಾಣಬೇಕಂದು ನಿಶ್ಲಯಿಸಿದನು. ಮಾರಣೆಯದಿನ ಕಂಕರರಾಯನ ಮನೆಯಲ್ಲಿ ನಡೆದ ಸಮಾಚಾರವೆ ಲ್ಲವೂ ಮನೆಯ ಆಳುಗಳಮೂಲಕ ಹೊರಗೆ ಬಂದುಬಿಟ್ಟಿತು. ರಾಮ ರಾಯನು ತನ್ನ ಕಿವಿಯನ್ನು ತಾನು ನಂಬಲಾರದೆ ಹೋದನು. . ಅವ ನಿಗೆ ತನಗಿಂತಲೂ ಭಾಗ್ಯವಂತರಾರೂ ಇಲ್ಲದುದರಿಂದ. ಶಂಕರರಾ ಯನು ತನ್ನನ್ನು ಬಿಟ್ಟು ಬೇರೆ ಎಲ್ಲಿಯೂ ಬಂಧುತ್ವ ಮಾಡಲಾರನೆಂದು ಚೆನ್ನಾ ಗಿ ನಂಬಿಕೆಯಿತ್ತು. ಈಗ ನೋಡಿದುದರಲ್ಲಿ . ಆ ಅಯೋಗ್ಯನಾದ ಹುಡುಗನಿಂದ ಎಲ್ಲವೂ ಕೆಟ್ಟುಹೋಯಿತು. “ ಇಂಗ್ಸೀಷ್ ಕಾದಂಬರಿಗಳನ್ನು ಓದಿ ಹುಡುಗರಿಲ್ಲರೂ ಪೂರ್ವಾಚಾರ, ಘನತೆ, ಗಾಂಭೀರ್ಯ, ಇವುಗಳೆಲ್ಲವನ್ನೂ ಮರೆತುಬಿಟ್ಟರು. ಶ್ರೀಮಂತನ ಮಗ ಳನ್ನು ಬಿಟ್ಟು ಹುಟ್ಟುದರಿದ್ರನಾದ ಪುರೋಹಿತನ ಮಗಳನ್ನು ವರಿಸಿ ದನೆ ? ಇದೇನು ಕಾಲಮಹಿಮೆಯೊ ? ಇಲ್ಲವೆ. ಆ ಹುಡುಗನಿಗೆ ಬುದ್ಧಿ ಸ್ಥಿಮಿತವಿಲ್ಲವೊ? ಆ ತಿರುಕನ ಮಗಳ ರೂಪವನ್ನು ನೋಡಿ ಮರುಳಾದನೆ ? ಆಹಾ ! ಏನುರೂಪ ! ಆ ಹರುಕುಸೀರೆಯನ್ನುಟ್ಟು ಒಂದು ಚಿನ್ನ ದ ಕರ್ಣಾಭರಣಕ್ಳೂ ಗತಿಯಿಲ್ಲದೆ ಇರುವ ಹುಡುಗಿ ಗೂ ನನ್ನ ಮಗಳಿಗೂ ಸಾಮ್ಯವೆ ? ಅವನಿಗೆಯಾರೋ ಮರುಳಿಕ್ಕಿರ ಬೇಕು, ಇಲ್ಲದಿದ್ದರೆ ಅವನೆಂದಿಗೂ ನನ್ನ ಮಗಳನ್ನು ಬಿಟ್ಟು ಸುಭ ದ್ರೆಯನ್ನು ಒಪ್ಪುತ್ತಿರಲಿಲ್ಲ. ” ಎಂದು. ರಾಮರಾಯನು ನಾನಾ ವಿಧವಾಗಿ ತರ್ಕವಿತರ್ಕಗಳನ್ನು ಮಾಡಿ ಕೊನೆಗೆ ಹೀಗೆಂದು ನಿಶ್ಚ ಯಿನಿದನು :– ಇದಕ್ವೆ ಲ್ಲಾ ಕಾರಣವಾದವಳಾರು ? ಆ ತಿರುಕನ ಮಗಳಲ್ಲವೆ ? ಅವಳು ಕಣ್ಣಿಗೆ ಕಾಣಿಸದಿದ್ದರೆ ನನ್ನ ಮಗಳಿಗೆ, ಜಹ ಗೀರ್ದಾ ರನ ಹೆಂಡತಿಯಾಗುವ ಅದೃಷ್ಟವು ತಪ್ಪುತ್ತಿತ್ತೆ? ಇಲ್ಲ. ಆದು ದರಿಂದ ಆ ಗೋಮುಖವ್ಯಾಘ್ರಕ್ಕೆ ತಕ್ಕ ಪ್ರತೀಕಾರವನ್ನು ಮಾಡ ಬೇಕು. ಮಾಧವರಾಯನು ತಂದೆಯ ಮಾತನ್ನೂ ಉಲ್ಲಂಘಿಸಿ ಮನೆ ಬಿಬ್ಬು ಹೋದನಲ್ಲನೆ? ಯಾರಿಗೋಸ್ಥ್ರರ ? ಇರಲಿ! ಅವಳು ಅವನಿಗೆ ಎಂದೆಂದಿಗೂ ದೊರಕದಹಾಗೆಮಾಡದಿದ್ದರೆ ನನ್ನ ಹೆಸರು ರಾಮರಾ ಯನೇ ಅಲ್ಲ. ಈಕ್ಷಣವೆ ಅದಕ್ಕೆ ತಕ್ಕ ಸನ್ನಾಹವನ್ನು ನಡೆಸುವೆನು.”

ರಾಮರಾಯನು ಕುವಿದ್ಯೆಯಲ್ಲಿ ಬಹುನಿಪುಣ. ಅವನ ತಂದೆ ಯು ಕೇವಲ ದರಿದ್ರನಾಗಿದ್ದನು. ರಾಮರಾಯನ ಐಶ್ವರ್ಯವೆಲ್ಲವೂ ಅವನೇ ಸ್ವಂತವಾಗಿ ಆರ್ಜಿಸಿದುದು. ಮೋಸ, ತಂತ್ರ, ಕಾಪಟ್ಯ, ಈ ಮೊದಲಾದ ಕುಮಾರ್ಗಗಳಲ್ಲಿ ಅವನಿಗೆ ತುಂಬಾ ಅನುಭವ. ಇವುಗಳಿಂದಲೇ ಅವನು ದೊಡ್ಡ ಒಕ್ಕಲಾದವನೆಂದು ಜನಗಳೆಲ್ಲರೂ ಅಡಿಕೊಳ್ಳುತ್ತಿದ್ದರು. ಆದರೆ ದ್ರವ್ಯದಮುಂದೆ ಯಾರಮಾತು ತಾನೆ ಏನು ಪ್ರಯೋಜನಕ್ಕೆ ಬರು ವುದು ? ರಾಮರಾಯನು ಸ್ವಭಾವತಃ ಬುದ್ಧಿ ಶಾಲಿ, ಅರ್ಜಿಸಿದುದನ್ನಲ್ಲಾ ಚೆನ್ನಾ ಗಿ ಕಾಪಾಡಿ ವೃದ್ಧಿ ಪಡಿ ಸುತ್ತಿದ್ದನು. ಅಲ್ಲದೆ ಹೊಸಹೊಸ ತಂತ್ರಗಳನ್ನು ಏರ್ಪಡಿಸಿ ಒಬ್ಬ ರಮೇಲೊಬ್ಬರಿಗೆ ವ್ಯಾಜ್ಯವನ್ನು ತಂದುಹಾಕಿ ತಾನುವಾತ್ರ ಬೇರೆ ಇದ್ದು ಕೊಂಡು ಉಭಯ ಪಕ್ಷದಿಂದಲೂ ಪ್ರಯೋಜನವನ್ನು ಹೊಂ ಡುತ್ತಿದ್ದನು. ಇಂತಹ ರಾಮುರಾಯನಿಗೆ ಈಗಿನ ಸಂದಭದಲ್ಲಿ ಹೇಗೆ ನಡೆಯಬೇಕೆಂದು ನಿರ್ಧರಿಸುವುದು ಸ್ವಲ್ಪವೂ ಕಷ್ಟ್ರವಾದ ಕಾರ್ಯವಾ ಗಿರಲಿಲ್ಲ. ಅತ್ಮಾ ರಾಮನ ಮೊಕದ್ದಮೆಯ ವಿಚಾರವು ಅವನಿ ಗೆ ಚನ್ನಾಗಿ ತಿಳಿದಿತ್ತು. ಆ ದಿನವೆ ಜೈಲಿನಲ್ಲಿದ್ದ ಆತ್ಮಾರಾಮನನ್ನು ನೋಡಲು ಅಪ್ಪಣೆ ಚೀಟಿಯನ್ನು ಪಡೆದು ಅವನನ್ನು ಕಂಡು ಕಾರಣಾಂತರ ದಿಂದ ಅವನಿಗೆ ಸಹಾಯಮಾಡಲು ತಾನು ಬಂದಿರುವರದಾಗಿಯೂ ಅವನು ಸ್ವಲ್ಪವೂ ಹೆದರಬೇಕಾದುದಿಲ್ಲವೆಂದೂತಿಳಿಸಿದನು. ತನಗೆನಿರಂ ತರ ಕಾರಾಗೃಹವಾಸವೇ ಹಣೆಯಲ್ಲಿ ಬರೆದಿರುವುದೆಂದು ತಿಳಿದುಕೊಂಡಿ ದ್ದ ಆತ್ಮಾ ರಾಮನಿಗೆ ರಾಮರಾಯನ ವಾಗ್ಜಾನವು ಸಾಯುವ ರೋಗಿ ಗೆ ಅಮೃತವನ್ನು ಕುಡಿಸಿದಹಾಗಾಯಿತು. ಆತ್ಮಾ ರಾಮನಿಗೆ ವ್ಯಾಜ್ಯ ವನ್ನು ಗೆಲ್ಲುವೆನೆಂಬ ಆಶೆಯು ಲೇಶಮಾತ್ರವೂ ಇರಲಿಲ್ಲ.ಅವನು “ಪಾಪ ರ್” ಆದುದರಿಂದ ಸರಕಾರದವರೇ ಅವನಿಗೋಸ್ಥರ ಒಬ್ಬ ವಕೀಲನ ನ್ನು ಗೊತ್ತುಮಾಡಿಟ್ಬಿದ್ದರು. ಆ ವಕೀಲನಿಗೆ ವ್ಯಾಜ್ಯವು ಗೆದ್ದರೂ, ಸೋತರೂ, ಎರಡೂ ಒಂದೇ ! ಅವನ “ರುಸುಂ” ಮಾತ್ರ ಅವನಿಗೆ ತಪ್ಪುತ್ತಿರಲಿಲ್ಲ. ಎದುರು ಕಕ್ಷಿಯಾದರೊ ಬಹುಬಲವತ್ತಾದುದು. ಶಂಕ ರರಾಯನ ಮಾತಿನಲ್ಲಿ ಗವರ್ನರ್ ಸಾಹೇಬರು, ಜಡ್ದಿಗಳು, ಕಲೆಕ್ಬರು ಇವರೆಲ್ಲರಿಗೂ ಬಹಳಗೌರವ, ಆತನೆ ಮೊದಲನೆಯ ಸಾಕ್ಷಿ. ಅಪರಾಧಿ ಸ್ಮಾನದಲ್ಲಿ ನಿಂತಿರುವ ಆತ್ಮಾ ರಾಮನನ್ನು ಶಂಕರರಾಯನು ವಿಚಾ ರಣೆಯ ಕಾಲದಲ್ಲಿ ಒಂದೆರಡಾವರ್ತಿಕ್ರೂರವಾಗಿ ನೋಡಿದಮಾತ್ರ ದಿಂದಲೆ ಆತ್ಮಾ ರಾಮನಿಗೆ ಕೈಕಾಲು ನಡುಗಲಾರಂಭಿಸಿ ಮುಖವು ಬೆಳ್ಳಗಾಗಿಹೋಯಿತು. ಇದನ್ನು,”ಜಡ್ದಿ“ಯು ನೋಡಿ ತನ್ನಷ್ಟಕ್ಕೆ ತಾನೆ ನಕ್ಕನು. ಇದರಿಂದ ಅವನಿ ಗೆ, ಮತ್ತಷ್ಟು ಭಯವುಂಟಾಗಿ ನಿಲ್ಲಲಾರದೆ ಕೂತುಬಿಟ್ಟನು. ಹತ್ತಿರದಲ್ಲೆ ಇದ್ದ. ಪೋಲೀಸಿನವನು ಕೂಡಲೆ ತೋಳನ್ನು ಹಿಡಿದು ಮೇಲಕ್ಕೆ ಎಬ್ಬಿಸಿದನು. ಪುನಃ . ಅವನು ಕೂತು ಕೊಳ್ಳಲ್ಲ ಪ್ರಯತ್ನ ಮಾಡಿದುದಕ್ಕೆ ಪೋಲೀಸಿನವನ್ನು. ಬಿಡಲಿಲ್ಲ, ಜಡ್ಜಿಯು ಕನಿಕರದಿಂದ ಕೈಯಾಡಿಸಿ ಪೋಲೀಸಿನವನನ್ನು ಸುಮ್ಮ ನಿರುವಂತೆ ಸೂಚಿಸಿದನು. ಕಾನ್‌ಸ್ಟೇಬಿಲನು ಸುಮ್ಮನಾದನು.

ಈ ಸಂಗತಿಗಳೆಲ್ಲವೂ ಆತ್ಮಾ ರಾಮನ ನೆನಪಿನಲ್ಲಿ ಹೊಸದಾಗಿ ದ್ದುದರಿಂದ ಅವನು ತನಗೆಂದಿಗೂ ವಿಮೋಚನೆಯಿಲ್ಲವೆಂದು ದೃಢವಾಗಿ ತಿಳಿದಿದ್ದನು. ಇಂತಹ ಸ್ಥಿತಿಯಲ್ಲಿ ಅಪ್ರಾರ್ಥಿತನಾಗಿ ರಾಮರಾಯನು ಸಹಾಯಕ್ಕೆ ಬಂದುದರಿಂದ ಆತ್ಮಾ ರಾಮನಿಗೆ ಎಷ್ಟುಸಂತೋಷವುಂ ಟಾಗಿರಬಹುದೋ ವಾಚಕರೇ ಊಹಿಸಬಹುದು. ಅವನುರಾಮರಾ ಯನಿಗೆ ದಂಡಪ್ರಣಾಮವನ್ನು ಮಾಡಿ, .ನೀವೇ ನನ್ನ ಭಾಗದದೇವರು. ನಾನು ಪ್ರಾಣವಿರುವವರೆಗೂ ತಮ್ಮ ಉಪಕಾರವನ್ನು ಮರೆಯೆನು. ಅದರೆ ಜಹಗೀರ್ದಾರರು ಎದುರು ಕಕ್ಷಿಯಲ್ಲಿರುವಾಗ್ಗೆ ನಮ್ಮ ವ್ಯಾಜ್ಯವು ಹೀಗೆ ಗೆಲ್ಲುವುದೊ ತಿಳಿಯದು“ ಎಂದನು. ಅದಕ್ಳೆ ರಾಮರಾಯ ನು “ಅವಿಷಯದಲ್ಲಿ ಯೋಚನೆಬೇಡ. ಶಂಕರರಾಯರ ಮಗನು ನಿನ್ನೆ ರಾತ್ರೆ ದೇಶಾಂತರ ಹೊರಟುಹೋದನಂತೆ. ಅದರಿಂದ ಅವರಿಗೆ ಬಹಳ ವ್ಯಥೆಯುಂಟಾಗಿದೆ. ಪ್ರಾಯಶಃ ಈ ವ್ಯಾಜ್ಯಕ್ಕೆ ಗಮನ ಕೊಡಲಾರರು” ಎಂದು ಧೈರ್ಯಹೇಳಿ ಅಲ್ಲಿಂದ ಪುನಹೆಯಲ್ಲೆಲ್ಲಾ ಪ್ರಸಿದ್ಬನಾಗಿದ್ದ “ಅಡ್ವೊಕೇಟ್“ ನನ್ನು ಈ ವ್ಯಾಜ್ಯವನ್ನು ನಡೆ ಸಲು. ಗೊತ್ತುಮಾಡಿ, ತಾನೆ ಅದಕ್ಕೆ ಮುಖಂಡನಾಗಿ ನಿಂತನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೆರುಮಾಳನ ಕೆಂದಾವರೆ
Next post ಮೋಸ ಹೋಗದಿರು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…