ಸಮಾಪತ್ತಿ

ನನ್ನ ಉಸಿರು ಹರಿದಾಡುತಿಹುದು ಇಗೊ ಸೂಕ್ಷ್ಮ ಛಂದದಲ್ಲಿ;
ನನ್ನ ಅವಯವದಿ ಬೆಳೆಯುತಿಹುದು ಭಗವಂತ ಶಕ್ತಿ-ವಲ್ಲಿ:
ಆನಂತ್ಯವನ್ನು ನಾ ಕುಡಿದೆ ಎತ್ತಿಯಾ ಅಸುರ-ಸುರಾ-ಪಾತ್ರೆ
ಕಾಲಲೀಲೆಯದು ನನ್ನ ನಾಟಕವು ನನ್ನ ಸ್ವಪ್ನಯಾತ್ರೆ

ಈಗ ನನ್ನ ಜೀವಾಣುಗಣವು ಪ್ರಪ್ರಮೋದಾಗ್ನಿ ರಚಿತ
ರೋಮ ಹರ್ಷಕನುಕೂಲ ನಾಡಿ ನರಜಾಲ ಸೂಕ್ಷಖಚಿತ
ಪುಲಕ ಪಾರದರ್ಶಿತ್ವ ಹರ್ಷವಾಹಿನಿಯೆ ಸ್ಫೂರ್ತಿಗಾಗಿ
ಆ ಅಗಮ್ಯದಾ ಪರಾಶಕ್ತಿಯಾ ಪ್ರಕೃತಿಪೂರ್ತಿಗಾಗಿ

ದೇಹದಾಸ ನಾನಲ್ಲವೆಂದಿಗೂ ಇನಿಸು ಇನ್ನು ಮೇಲೆ
ಪ್ರಕೃತಿ ಜೀತದಾಳಾಗಿ ದುಡಿಯೆ ನಾ ಬಿಟ್ಟೆ ಜಡದ ಶಾಲೆ
ಗಂಡು ಮೀರಿ ನಾ ನಿಂತೆ ಇನ್ನು ಇಂದ್ರಿಯದ ಇಂದ್ರಜಾಲ
ದ್ರಷ್ಟಾರ ದೃಷ್ಟಿ ಕ್ಷಿತಿಜವನು ಹರಿದು ಮಿತಿಮೀರಿದೊಲು ವಿಶಾಲ

ನನ್ನ ದೇಹ ಸುಖಭರಿತ ದೇವನಾ ಪ್ರಾಣಪೂರ್ಣಯಂತ್ರ
ಬೃಹದ್ಭಾನುವಿನ ಅಮರಜ್ಯೋತಿ ಚೇತನವು ಆತ್ಮತಂತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವಾಡಿಗ!
Next post ವಾಗ್ದೇವಿ – ೫೪

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…