ಮನುಜ ನೀನೊಮ್ಮೆ ಹಿಂತಿರುಗಿ ನೋಡು
ಎಲ್ಲಿಯದು ಆ ನಿನ್ನ ಪೂರ್‍ವ ಧಾಮ
ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ
ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ
ಜನರನ್ನು ಮೆಚ್ಚಿಸಿ ನೀನೇನು ಮಾಡುವುದು
ಸೌಂದರ್‍ಯತೆ ಕಂಡು ನೀನೇನು ಬಯಸುವುದು
ನಿನ್ನಲ್ಲಿದಿಯೇ ಅಂತಹ ಮಹಾ ಸತ್ವ
ಮತ್ತೇಕೆ ಆಸೆಗಳಿಗೆ ಇಷ್ಟೊಂದು ಮಹತ್ವ
ವಿಚಾರ ಶೂನ್ಯವಾಗಿ ವಿಚಾರವಂತನೆ ನೀನು
ಆಚಾರ ಶೂನ್ಯವಾಗಿ ಆಚಾರವಂತನೆ ನೀನು
ದುಡಿದು ಸಂಪಾದಿಸಿದೆ ಯಾರಿಗಾಗಿ ಸಂಪತ್ತು
ನಿನ್ನವರು ಪಡೆಯಬಲ್ಲರೆ ನಿನಗಾದ ವಿಪ್ಪತ್ತು
ಧರ್‍ಮ ಜ್ಞಾನಗಳೆಲ್ಲ ತಿಳಿದು ಮಂಕನಾಗಿದೆ
ಪೂಜೆ ಪುನಸ್ಕಾರಗಳಿಗಾಗಿ ನಿತ್ಯ ಡಾಂಬೀಕನಾದೆ
ನಿನ್ನ ಮನಸ್ಸೆ ನಿನ್ನದಲ್ಲವಾದರೆ ಅಹುದೆ
ಜಗತ್ತು ನಿನ್ನದಾಗಲು ಸಾಧ್ಯವಹುದೆ!
ಎದ್ದೇಳು ಎಚ್ಚರಗೊಳ್ಳು ಇನ್ನು ಕಾಲಮಿಂಚಿಲ್ಲ
ಒಂದೊಂದುಗಳಿಗೆ ನಿರಾಸೆ ತುಂಬಬೇಕಲ್ಲ
ಸಾರ್‍ಥಕ ಬಾಳಿಗೆ ಹರಿನಾಮ ಸ್ಮರಣೆಯೊಂದೇ
ಮಾಣಿಕ್ಯ ವಿಠಲನಾದರೇನು ಬೇಕಿಲ್ಲ
*****