ನಿನಗೆ ನೀನು ನಡೆಯೇ |
ಮನವೆ ನಿನ್ನ ಬಾಳು ಜೀನು ||
ನಿನ್ನ ಕರುಣೆ ಕಮಲದಂತೆ |
ನಡುವೆ ನೀನು ಅಮರನಂತೆ ||ನಿನ್ನ ||
ಹಸಿರ ಹುಲ್ಲು ಹಾಸಿಗೆಯಂತೆ |
ಮಲ್ಲೆ ಹೂವು ಘಮ ಘಮವಂತೆ ||
ತಾಯಿ ಒಡಲ ಬಳ್ಳಿ ನೀನು |
ಬೆಳೆಯೆ ನೀನು ಬಾಳಿನೇ ಬೆಳಕು || ನಿನ್ನ ||
ನಿಂತ ನಿಲುವು ಮಂದಹಾಸ |
ನಿನ್ನ ಬಾಳ್ವೆ ಸಮರಸ ||
ತಿಳಿಯೇ ನೀನು ಸಮರವೇನು ||
ಬಾಳ್ವೆ ಬದುಕು ಹಾಲು ಜೇನು || ನಿನ್ನ ||
ಒಂದೇ ತಾಯ ಮಕ್ಕಳೆಂದು
ಸೃಷ್ಟಿ ಸೊಬಗ ಹೂವುಗಳೆಂದು ||
ಸೃಷ್ಟಿ ಸೊಬಗ ಸವಿಯಲು ಬಂದು |
ನಿನ್ನ ನಿಲುವ ಪಡೆವೆ ಏನು || ನಿನ್ನ ||
*****