ದೇವಾಲಯದ ಪ್ರವೇಶವು ಚಂಚಲನೇತ್ರರು ಚಾಕರರ ಪರಿಮುಖ ತನ್ನ ಕಡೆಯಿಂದ ಆಗ ಬೇಕಾಗಿರುವ ಸಾಹಿತ್ಯಗಳನ್ನು ಒದಗಿಸಿ ದೇವಾಲ ಯದ ಆಯಾ ಠಾವಿನಲ್ಲಿ ಇರಿಸುವುದಕ್ಕೆ ಪೂರ್ವಾರಭ್ಯ ನಡೆದು ಬಂದ ಪದ್ಧತಿಗನುಗುಣವಾಗಿ ಪ್ರಾರಂಭಮಾಡೋಣಾಯಿತು. ಅದನ್ನು ವಿರೋಧಿ ಸಬೇಕೆಂದು ಶತ್ರು ಪಕ್ಷದವರು ದೇವಾಲಯದ ಭಂಡಾರಿಗೆ ಬೋಧಿಸಿ ಎಷ್ಟು ಪ್ರಯತ್ನಮಾಡಿದರೂ ಭೀಮಾಜಿಯ ಮತ್ತು ಕಾರಭಾರಿಯ ಹೆದರಿಕೆ ಯಿಂದಲೂ ಕುಮುದಪುರದ ಮಠಾಧೀಶರ ಹಣದ ಬಲದಿಂದಲೂ ಜಯ ಪ್ರಾಪ್ತಿಯಾಗಲಿಲ್ಲ. ಮುಂದಾದರೂ ಜಯ ಸಿಕ್ಕುವುದಕ್ಕೋಸ್ಟರ ಆಲೋ ಚನೆ ಮಾಡುವುದಕ್ಕೆ ವಕೀಲ ಕೋದಂಡಪಾಣಿರಾಯನನ್ನು ನೃಸಿಂಹಪುರದ ಮಠದಲ್ಲಿ ಬೇರೆ ಮೂರು ಮಠದವರು ಒಟ್ಟು ಕೂಡಿ ಕರಸಿದರು. ರಾಮ ದಾಸನು ಹೊಸವಕೀಲನಾಗಿ ಚುರುಕು ಬುದ್ಧಿಯುಳ್ಳ ಯೌವನಸ್ಥನಷ್ಟೇ. ಅವನ ಆಲೋಚನೆ ಮುನ್ನಾ ಕೇಳಿಬಿಡುವುದಕ್ಕೆ ಕೋದಂಡಪಾಣಿರಾಯಗೆ ತುಂಬಾ ಮನಸ್ಸಿತ್ತು. ರಾಮದಾಸನು ಹಾಗೆಯೇ ಆಸೆಪಡುತ್ತಿದ್ದನು. ನಿನ್ನ ಅಭಿಪ್ರಾಯ ಹ್ಯಾಗಯ್ಯಾ ಎಂದು ಕೋದಂಡಪಾಣಿಯು ಪ್ರಶ್ನೆಮಾ ಡೋಣ ಚಂಚಲನೇತ್ರರಾಗಲೀ ಅವರ ಶಿಷ್ಯನಾಗಲೀ ಆದಿನಾರಾಯಣಾ ಲಯ ಪ್ರವೇಶವಾಗದಂತೆ ಹುಕುಂ ಮಾಡಬೇಕಾಗಿ ರಾಜಾಸ್ಟಾನದಲ್ಲಿಯೇ ಪ್ರಥಮತಾ ದಾವಾ ಹಾಕಿಬಿಡಬೇಕೆಂದನು.
ಈ ಪ್ರಬೋಧವು ಹಿರೇ ವಕೀಲನಿಗೆ ಒಡಂಬಡಿಕೆಯಾಗಲಿಲ್ಲ. ಒಂದು ವೇಳೆ ಭೀಮಾಜಿಯೂ ಶಾಬಯ್ಯನೂ ಜನಜರನಿತವಾಗಿ ವಾಗ್ದೇವಿಯ ಪಕ್ಷ ವನ್ನು ಹಿಡಿದು ನೀತಿಯನ್ನು ಮಾಡವಲ್ಲರೆಂದು ತಿಳಕೊಳ್ಳುವದಕ್ಕೆ ಆಧಾರ ವಿರುವದೆಂದು ತಿಳಕೊಂಡರೂ ನೀತಿಶೀಲನಾದ ವಿಮರ್ಶಾಧಿಕಾರಿಯ ಮೇಲೆ ಯಾರೊಬ್ಬರೂ ಒಂದು ಅಪವಾದವನ್ನು ಹಾಕುವದು ತೀರಾ ಪೋಕಾಟಕೆ ಯೆನ್ನಬೇಕು. ಅವನ ಮೇಲೂ ನಿರ್ನಿಮಿತ್ತವಾಗಿ ದೋಷಕರವಾದ ಮಾತು ಗಳನ್ನು ಆಡಲಿಕ್ಕೆ ಸಂಭಾವಿತನಾದ ಯಾವನೂ ಒಪ್ಪಲಾರನು. ಆದಕಾರಣ ಚಂಚಲನೇತ್ರರು ವಾಗ್ದೇವಿಯ ಮಾಯಾಜಾಲದಲ್ಲಿ ಸಿಲುಕಿ ಬಿದ್ದ ಬಳಿಕ ಇದುವರೆಗೆ ವೈಷ್ಣವ ಮಂಡಲಿಯ ಮತಾಭಿಮಾನಕ್ಕೆ ವಟ್ಟ ತರುವ ಹಾಗಿನ ದುರಾಚಾರದಲ್ಲಿ ನಡೆದು ಲೋಕನಿಂದೆಗೆ ಪಾತ್ರರಾದ ಪ್ರಸಂಗ ಹಾಗಿರಲಿ. ವಾಗ್ದೇವಿಯಲ್ಲಿ ತನಗೆ ಹುಟ್ಟಿದ ಹುಡುಗನನ್ನೇ ತನ್ನ ಉತ್ತರಾಧಿಕಾರಿ ಯಾಗಿ ಆರಿಸಿ ಅವನಿಗೆ ಆಶ್ರಮ ಕೊಟ್ಟ ದುಷ್ಟೃತ್ಯಕಿಂತ ಘೋರವಾದ ಪಾಪವು ಮತ್ಯಾವುದು? ಈ ದೆಸೆಯಿಂದ ಆ ಪತಿತ ಸನ್ಯಾಸಿಯು ಶಿಷ್ಯನ ಸಮೇತ ಅಥವಾ ವಿರಹಿತವಾಗಿ ದೇವಾಲಯವನ್ನು ಪ್ರವೇಶಿಸುವದಕ್ಕೆ ಪ್ರಯತ್ನಿಸಿದರೆ ಅಂಥಾ ಕಾಲದಲ್ಲಿ ವೈಷ್ಣವಪರರಾದ ಸಕಲ ಜನ ಸಮೂ ಹವು ತಮ್ಮ ಮತದ ಮೋಹದಿಂದ ಅಡ್ಡ ತಡಿಯುವದಕ್ಕೆ ಭೀತಿ ಪಡಲಾರರು. ಕುಮುದಪುರದಲ್ಲಿ ಯೋಚಿಸಕೂಡದಾದ ಜಗಳವಾಗಿ ದೊಡ್ಡ ಅನರ್ಥವಾಗದೆ ಇರದು. ಅವರು ದೇವಸ್ಥಾ ನವನ್ನು ಪ್ರವೇಶಿಸದಂತೆ ಅವರಿಗೆ ತಡೆಸಡಿಸುವದಕ್ಕೆ ಸರ್ಕಾರದವರು ಏರ್ಪಾಟು ಮಾಡಬೇಕೆಂದು ಎದುರು ಪಕ್ಷದ ಮಠಾ ಧಿಪತಿಗಳ ಕಡೆಯಿಂದ ವಿಮರ್ಶಾಧಿಕಾರಿಯ ಮುಂದೆ ಮನವಿಯನ್ನು ಕೊಟ್ಟು ತಮ್ಮ ಮತಕ್ಕೇನೇ ಬಂದಿರುವ ಸಂಕಷ್ಟಗಳ ವರ್ಣನೆಯಿಂದ ಅವರ ಮನಸ್ಸಿಗೆ ಈ ವ್ಯಾಜ್ಯದ ಅನುಭವ ಸರಿಯಾಗಿ ಹೊಗ್ಗುವಂತೆ ಮಾಡು ವದು ನ್ಯಾಯವಾದ ಮಾರ್ಗ. ಹೀಗೆಂದು ಕೋದಂಡಪಾಣಿಯು ಕೊಟ್ಟ ಆಲೋಚನೆಯು ಸಮಂಚಿತವಾದ್ದೆಂದು ಸರ್ವರೂ ಒಪ್ಪಿಕೊಂಡು ಹಾಗೆ ಪ್ರವರ್ತಿಸಬೇಕೆಂದು ವಕೀಲನಿಗೆ ಆಜ್ಞಾಪಿಸಿದರು. ಅವನು ಹಾಗಾಗಲೆಂದು ಹೊರಟು ಮನವಿಯನ್ನು ಬರೆದು ಕೊಟ್ಟನು.
ಮನವಿಯನ್ನು ವಿಮರ್ಶಾಧಿಕಾರಿಯ ಕಚೇರಿಯಲ್ಲಿ ತನ್ನ ಮತ್ತು ರಾಮದಾಸನ ಜತೆ ವಕಾಲತಿನ ಸಮೇತ ಅರ್ಪಿಸಿದನು. ವಾಡಿಕೆಯಂತೆ ಅದನ್ನು ಪರಾಂಬರಿಸಿ ಪ್ರಥಮ ವಿಚಾರಣೆಗೋಸ್ಟರ ಕಾರಭಾರಿಯ ಬಳಿಗೆ ಕಳುಹಿಸುವದಾಗಿ ವಿಮರ್ಶಾಧಿಕಾರಿಯ ಅಪ್ಪಣೆಯಾಯಿತು. ಅದಕ್ಕೆ ತನ್ನ ಕಕ್ಷಿಗಾರರ ಕಡೆಯಿಂದ ಆಕ್ಷೇಪವದೆ ಎಂದು ಕೋದಂಡಪಾಣಿರಾಯನು ಬಿನ್ನವಿಸಿದನು. ಗಪಕ್ಕನೆ ವಿಮರ್ಶಾಧಿಕಾರಿಗೆ ದೊಡ್ಡ ಸಿಟ್ಟುಬಂತು. ಆಕ್ಷೇಪ ವೆಂತಾದ್ಹು ಬೇಗ ಹೇಳೆಂದು ದೊಡ್ಡ ಸ್ವರದಿಂದ ಅಧಿಕಾರಿಯು ಕೇಳಲು ಕಾರಭಾರಿಯು– “ಕುಮುದಪುರ ಮಠದ ಪಕ್ಷವನ್ನು ಅವಲಂಬಿಸಿರುವ ದಾಗಿ ತನ್ನ ಕಕ್ಷಿದಗಾರರು ತಿಳಕೊಳ್ಳುವದರಿಂದ ಅವನು ಅದರ ವಿಚಾರಣೆ ಯಲ್ಲಿ ಪ್ರವೇಶಿಸಬಾರದಾಗಿ ಅವರ ಅಪೇಕ್ಷೆ ಇದೆ ಎಂದು ಅರಿಕೆ ಮಾಡಿದ ವಕೀಲನ ಮೇಲೆ ಅಧಿಕಾರಿಯು ಇನ್ನೊಮ್ಮೆ ಸಿಟ್ಟುತಾಳಿ ನಿಷ್ಕಾರಣವಾಗಿ ದೊಡ್ಡ ಅಧಿಕಾರಸ್ಥರ ಮೇಲೆ ದೂರು ಹೇಳುವ ಕಕ್ಷಿಗಾರರ ಮಾತು ಕಿವಿಗೆ ಹಾಕಿ ಕೊಳ್ಳುವದು ಬರೇ ಅನುಚಿತ. ಹಾಗೆಯೇ ಕಕ್ಷಿಗಾರ ಹೇಳಿದಂತೆ ವಿವೇಕಹೀನನಾಗಿ ಕುಣಿಯುವ ವಕೀಲನು ಆ ಹೆಸರು ತಾಳಿಕೊಳ್ಳಲಿಕ್ಕೆ ಅಯೋಗ್ಯ. ಕುತಂತ್ರದಲ್ಲಿ ಪ್ರವೀಣನಾದ ರಾಮದಾಸನನ್ನು ಜತೆಗೆತಕ್ಕೊಂಡು ಮರ್ಯಾದೆಯನ್ನು ಕಳಕೊಳ್ಳಲಿಕ್ಕೆ ಹೊರಟ ನಿನ್ನ ಮುಖವನ್ನು ನೋಡು ವದೇ ಅಸಹ್ಯಕರವೆಂದು ಕಠೋರ ವಾಕ್ಯಗಳಿಂದ ತನ್ನ ಅಸಂತೋಷವನ್ನು ಪ್ರತ್ಯಕ್ಷತೆಗೆ ತಂದರು.
ಕೋದಂಡಪಾಣಿಗೆ ಬಹಳ ದುಮ್ಮಾನವಾಯಿತು. ತಾನು ದೀರ್ಥ ಕಾಲದಿಂದ ಒಬ್ಬ ಮರ್ಯಾದೆವಂತನೆನ್ನಿಸಿಕೊಂಡು’ವಕೀಲಿ ಉದ್ಗೋಗದಲ್ಲಿ ನ್ಯಾಯಾಧಿಕಾರಿಗಳ ಪ್ರೀತಿಯನ್ನು ಗಳಿಸಿ ಅವರ ಮುಂದೆ ವರ್ತನೆಯನ್ನು ನಡಿಸಿ ಬರುವಲ್ಲಿ ಇಂದಿನ ವರೆಗೂ ಇಂಥಾ ಧಿಕ್ಕಾರಕ್ಕೆ ಒಳಪಡಲಿಲ್ಲವಾಗಿತ್ತು. ರಾಮದಾಸನನ್ನು ಸಂಗಡ ಕಟ್ಟಿಕೊಂಡುದರಿಂದಲೂ ಚತುರ್ಮಠದವರ ಮೇಲೆ ಅಧಿಕಾರಿಗೆ ವೈರ ಹುಟ್ಟಿರುವ ಗುಟ್ಟು ತಿಳಿಯದೆ ತಾನು ಅವರ ಕಡೆಯಿಂದ ವಕಾಲತು ತಕ್ಕೊಂಡ ದೆಸೆಯಿಂದಲೂ ಆ ಅವಮರ್ಯಾದೆ ಪಡುವದಾಯಿತೆಂದು ಅವನ ಮನಸ್ಸಿಗೆ ಮಂದಟ್ಟಾಯಿತು. ಈಗಲೇ ವಕಾ ಲತು ಬಿಟ್ಟುಬಿಡುವದು ಹೇಡಿತನ; ಅದರಲ್ಲಿ ಪ್ರವರ್ತಿಸಿಕೊಂಡಿದ್ದರಿಂದ ತನಗೂ ಅಧಿಕಾರಿಗೂ ಮುಂದೆ ಕಲಹದ ಬುನಾದಿ ಬಿತ್ತಿನ್ನಬೇಕು. ಇಂಥಾ ಉಭಯ ಸಂಕಟದಲ್ಲಿ ಸಿಲುಕಿದೆನಷ್ಟೇ. ಹೇಗೆ ತಪ್ಪಿಸಿಕೊಳ್ಳುವದೆಂಬ ಯೋಜನೆಯಲ್ಲಿ ಬಿದ್ದು ಕೋದಂಡಪಾಣಿರಾಯನು ಮನವಿಯ ಪ್ರಸಂಗ ವನ್ನು ಮರೆತೇ ಬಿಟ್ಟನು. ವಿವರ್ಶಾಧಿಕಾರಿಯು ಮನವಿಯನ್ನು ಪ್ರಥಮ ವಿಚಾರಣೆಗೋಸ್ಟರ ಶಾಬಯ್ಯನ ಬಳಿಗೆ ಕಳುಹಿಸಿಕೊಟ್ಟನು. ರಾಮದಾಸ ರಾಯನಿಗೂ ಕೋಡಂಡಪಾಣಿಗೂ ಕಚೇರಿಯ ಹೊರಗೆ ಸಣ್ಣದೊಂದು ಜಗಳಹತ್ತಿತು.
ರಾಮದಾಸ–“ರಾಯರೇ! ಕೋ ಎಂಬ ಅಕ್ಷರ ತಮ್ಮ ಹೆಸರಿನ ಅರ್ಧಾಂಶದ ಪೂರ್ವಭಾಗ. ಅದನ್ನು ಲೋಪಿಸಿದರೆ ಇಂದಿನ ಪ್ರಸಂಗಕ್ಕೆ ಸರಿ ಯಾಗುವದು. ಇಷ್ಟು ಸಣ್ಣ ಪ್ರಮೇಯದಲ್ಲಿ ತಮ್ಮ ಸ್ಮಿತಿ ಹೀಗಾದರೆ ಮುಂದೆ ದೊಡ್ಡ ದೊಡ್ಡ ವಿಷಯಗಳು ಹಾಗೆಯೇ ಬಿದ್ದವೆ. ಅವುಗಳಲ್ಲಿ ತಮ್ಮನ್ನು ಚತುರ್ಮಠದವರು ನೆಚ್ಚಿಬಿಟ್ಟರೆ ಮೊದಲೇ ಬೋಳಿಸಿರುವ ಅವರ ತಲೆಗಳನ್ನು ಇನ್ನೊಮ್ಮೆ ನುಣ್ಣಗೆ ಮಾಡಿದ ಹಾಗೆ ಆಗುವದೇ ಸರಿ.”
ಕೋದಂಡಪಾಣಿ–“ಫಸಾದ ಖೋರನೇ ಕೇಳು, ಶುನಕನಂತೆ ಗಳ ಹಬೇಡಾ. ನಿನಗಿನ್ನು ಮೀಶೆಯೇ ಚಂದಾಗಿ ಹುಟ್ಟಲಿಲ್ಲ. ಕೂದಲುಗಳು ನೆರೆದ ನನಗೆ ಚಾಳಿಸುತ್ತೀಯಾ? ಯಾವ ದೊಡ್ಡ ನ್ಯಾಯಸ್ಥಾನದಲ್ಲಿ ನೀನು ಗೆದ್ದವನೋ ಅರಿಯೆ. ಒಬ್ಬನ ಪ್ರಾಯಕ್ಕಾದರೂ ಮರ್ಯಾದೆ ಕೊಡವಲ್ಲದ ನಾಯಿಯ ಮುಖಾವಲೋಕನವೇ ನಕರ್ತನವ್ಯ ”
ರಾಮದಾಸ –“ನಾಯಿಗೆ ಪ್ರಾಯವಾದಕೆ ಅಜ್ಜನೆಂದು ಕರಿಯ ಬಹುದೆ?”
ಕೋದಂಡಪಾಣಿ–“ಹಾಗಾದರೆ ನಾನೊಂದು ನಾಯಿ, ನೀನೊಬ್ಬ ನಾಯಿ ಪಾಲಕ. ನಿನ್ನ ಉದ್ವೇಗದಿಂದ ಇನ್ನೇನೆಲ್ಲ ಆಗುವದುಂಟೊ? ಅಲ್ಪರ ಸಂಗ ಅಭಿಮಾನಭಂಗವೆಂಬ ಗತಿ ನಾನೇ ವಿಚಾರಹೀನನಾಗಿ. ಮಾಡಿ. ಕೊಂಡ ಮೇಲೆ ಈಗ ವ್ಯಸನಪಟ್ಟು ಪ್ರಯೋಜನವದೆಯೇ?”
ರಾಮದಾಸ–“ಶೆಟ್ಟಿಗಳ ಮಕ್ಕಳು. ಕೊಳತು ಹೋದ ಕುಂಬಳ ಕಾಯಿ ಕೋಣಗಳು ತಿನ್ನುವದಿಲ್ಲವಾದರೆ ‘ಜಿತ್ತಾರಿ ಬಿರಾರುಗೆ’ ದಾನ ಮಾಡಿ ಅದರ ಬೀಜಗಳನ್ನು ತಿರಿಗಿ ಕೊಡೆಂದು ಹೇಳುವ ಸಂಪ್ರದಾಯ ಉಂಟಂತೆ. ಚತುರ್ಮಠದವರು ಕಾಸು ಬಿಚ್ಚುವವರಲ್ಲ. ಕಶಿಶಿಯಿಂದ ವ್ಯಾಜ್ಯ ಸಾಧಿಸುವದಕ್ಕೆ ಜಬ್ಬು ವಕೀಲನ್ಯಾರು ಸಿಕ್ಕುವನೆಂದು ಬಾಯಿ ತೆರೆದುಕೊಂಡಿ ರುವಾಗ ತಮ್ಮ ಸಮಾಗಮವು ಅವರಿಗಾಗಿ ಈ ಹೊತ್ತು ಪರಾಜಯವಾ ಯಿತಲ್ಲಾ. ಶುನಕನಂತೆ ಗಳಹುವ ನಾನಾದರೂ ನಾಲ್ಕು ಮಾತು ಆಡಿದರ ವಿಮರ್ಶಾಧಿಕಾರಿಯ ಸಿಟ್ಟು ತಣಿದು ಹೋಗುತ್ತಿತ್ತು. ಘನವತ್ತಾರರಾದ ತನ್ಮು ಬಾಯಿಗೆ ಜೋಡು ಇಕ್ಕಳ ಹಾಕಿದರೂ ಒಂದೇ ಒಂದು ಶಬ್ದ ಹೊರ ಡದು. ಮಠದಲ್ಲಿ ಕಂಠ ಪೂರ್ಣ ಹೋಳಿಗೆ ಜಲೇಬಿ ಲಾಡು ಡೊಳ್ಹೊಟ್ಟೆ ಯಲ್ಲಿ ತುಂಬಿದ ತಮ್ಮ ಪ್ರತಾಪವು ಮೆರೆಯುವ ಸ್ಥಳವು ಸ್ವಗೃಹನೇ ಸರಿ; ಕಚೇರಿಯಲ್ಲ.
ರಾಮದಾಸರಾಯನ ತೀಕ್ಷಣವಾದ ಪ್ರತಿ ವಚನಗಳಿಂದ ಕೋದಂಡ ಪಾಣಿರಾಯನು ಅತ್ಯಧಿಕ ಸಿಟ್ಟಿನಿಂದ ನಡುಗುತ್ತಾ ಬಾಯಿಯಿಂದ ಬಂದ ಹಾಗೆ ಬಗುಳಿದಿಯಾ ಕತ್ತೆ ಎಂದು ಹೀಯಾಳಸೋಣ ತಾವು ಅದೇ ಮೃಗದ ಸಾಲಿನವರೆ ಎಂದು ರಾಮದಾಸನು ವಿಳಂಬವಿಲ್ಲದೆ ಉತ್ತರ ಕೂಟ್ಟು ತೀರಿತು. ಸಿಟ್ಟಿನ ಕಾವು ತಲೆಗೆ ಏರಿ ಉಭಯತ್ರರೂ ಮುಷ್ಟಿ ಯುದ್ಧಕ್ಕೆ ಸನ್ನದ್ಧರಾಗಿ ನಿಂತು ಒಂದೆರಡು ಗುದ್ದುಗಳು ಆಜೆಗೆ ಈಚೆಗೆ ಬಿದ್ದವೆನ್ನುವಷ್ಟರಲ್ಲಿ ಸಂಗಡ ಇದ್ದ ಮಠದ ಸೇವಕರು ಇಬ್ಬರಿಗೂ ಸಮಾಧಾನ ಪಡಿಸಿದರು. ಕೊಂಚ ನಮ ಯದಲ್ಲಿ ಅವರಿಬ್ಬರೂ ವಿವೇಕದಿಂದ ಜಗಳವನ್ನು ತೀರಿಸಿಕೊಂಡು ಒಂದು ಬಿಡಾರದಲ್ಲಿ ಊಟವಾಟ ಮಾಡಿ ಮರುದಿವಸ ಕುಮುದಪುರಕ್ಕೆ ಹೋಗಿ ಕಾರಭಾರಿಗಳ ಮುಂದಿ ನಿಂತು ವಿಮರ್ಶಾಧಿಕಾರಿಯಿಂದ ಅವರ ಬಳಿಗೆ ಕಳುಹಿಸಿಕೊಡಲ್ಪಟ್ಟಿರುವ ಮನನಿಯ ಪ್ರಥಮ ವಿಚಾರಣೆಯ ಕಾಲದಲ್ಲಿ ತಮ್ಮ ಕಕ್ಷಿಗಾರರ ಕಡೆಯಿಂದ ಇದ್ದು ವ್ಯವಹರಿಸುವದಕ್ಕ್ಟೋಸ್ಕರ ತಾವಿ ಬ್ಬರೂ ಬಂದಿರುವದಾಗಿ ಬಿನ್ನವಿಸಿಕೊಂಡರು. “ಸರಿ ಸರಿ ಬೇಕಾದಾಗ ನಿಮಗೆ ಜವಾನನ್ನಾಗಲೀ ತಾಕೀದಿಯನ್ನಾಗಲೀ ಕೊಟ್ಟು ಕರಸಿಕೋಢೇವು. ಈಗ ಹೋಗಬಹುದು ಎಂದು ಕಾರಭಾರಿಗಳ ಅಪ್ಪಣೆಯಾಯಿತು. ವಕೀಲ ರಿಬ್ಬರೂ ಅಂಜನೇಯಾಲದ ಆರ್ಚಕನಲ್ಲಿ ಉಳಕೊಂಡು ಅವನ ಆಂತರ್ಯವು ವಾಗ್ದೇವಿಯ ಪಕ್ಷಕ್ಕಿರುವ ವಿದ್ಯಮಾನವನ್ನು ಅರಿಯದೆ ಅವನ ಎದುರಿನಲ್ಲಿ ಉಭಯತ್ರರೂ ಆಡಿದ ಗುಟ್ಟಿನ ಮಾತುಗಳನ್ನು ಅವನು ಕಿವಿಕೊಟ್ಟು ಕೇಳಿ ವಾಗ್ದೇವಿಗೆ ತಿಳಸಿದ ದೆಸೆಯಿಂದ ಚತುರ್ಮಠದವರೆ ಕಾರ್ಯಕ್ಕೆ ಹಾನಿಯೂ ಅವಳ ಹಟ ಸಾಧನೆಗೆ ಬಲವೂ ಉಂಟಾದ ಹಾಗಾಯಿತು.
ಚತುರ್ಮಠದವರು ಮನನಿಯ ಪ್ರಧಮ ವಿಮರ್ಶೆಯನ್ನು ತಮಗೆ ಮುಂದಾಗಿ ತಿಳಸದೆ ಕಾರಭಾರಿಯು ಮಾಡನೆಂಬ ಭರವಸೆಯಿಂದ ರಾಮ ದಾಸನೂ ಕೊದಂಡಪಾಣಿರಾಯನೂ ಅಂಜನೇಯಾಲಯದಲ್ಲಿ ಉಂಡು ಸುಖದಲ್ಲಿ ಇದ್ದರು. ಕಾರಭಾರಿಯು ತಡೆಯದೆ ಕೊತ್ವಾಲನಿಂದ ಕುಮುದ ಪುರದ ಮುಖ್ಯ ನಿವಾಸಿಕರ ಒಂದು ಮಹಾಜರು ತರಿಸಿಕೂಂಡು ತನ್ನ ವಿಚಾ ರಣೆಯ ಫಲವನ್ನು ಬರಹ ಮೂಲಕಪಡಿಸಿದನು. ಹಾಗೆಂದರೆ ವಾಗ್ದೇವಿಯು ದೀರ್ಘಕಾಲದಿಂದ ಗಂಡನ ಸಂಗಡ ಚಂಚಲನೇತ್ರರ ಮಠದಲ್ಲಿ ವಾಸವಾ ಗಿದ್ದು ಈಗ ಆಶ್ರಮ ಹೊಂದಿದೆ ಸೂರ್ಯನಾರಾಯಣನನ್ನು ಹಡೆದಳು. ಅವನ ಉಪನಯನವನ್ನು ಅವನ ತಂದ ಆಬಾಚಾರ್ಯನು ವಿಧಿಯುಕ್ತ ವಾಗಿ ಯಾರೊಬ್ಬರ ಆಕ್ಷೇಪವಿಲ್ಲದೆ ಮಾಡಿದನು. ಹಾಗೆಯೇ ಆ ಹುಡುಗ ನಿಗೆ ಆಶ್ರಮವಾಗುವಾಗ್ಗೆ ಒಬ್ಬನಾದರೂ ಜಿಜ್ಞಾಸೆಮಾಡಲಿಲ್ಲ. ಅವನ ಪೂರ್ವಾಶ್ರಮದ ತಂದೆಯು ತೀರಿಹೋದಬಳಿಕ ನೃಸಿಂಹಪುರ ಮಠದ ಸ್ವಾಮಿ ಯವರಿಗೂ ಚಂಚಲನೇತ್ರರಿಗೂ ಭೂಸಂಮಂಧವಾದ ವಿವಾದವು ಹುಟ್ಟಿ ಸರ್ಕಾರದವರೆಗೆ ದೂರು ಹೋಗಿ ಕುಮುದವುರ ಮಠಕ್ಕೆ ಜಯವಾದ ತರು ವಾಯ ಹೊಟ್ಟ ಕಿಚ್ಚಿನಿಂದಲೂ ಹಗೆಯಿಂದಲೂ ನೃಸಿಂಹಪುರಾಧೀಶರು ಬೇರೆ ಮೂರು ಮಠದವರನ್ನು ಪುಸಲಾಯಿಸಿ ತಮ್ಮ ಕಡೆಗೆ ಎಳಕೊಂಡು ಸೂರ್ಯ ನಾರಾಯಣನ ಆಶ್ರಮಕ್ಕೆ ಅಕ್ಷೇಪಿಸಿ ದ್ವಂದ್ವ ಮಠದಿಂದ ಹೊಸ ಆಶ್ರಮ ವಾಯಿತೆಂಬ ಒಂದು ಕಲಹದ ಬೀಜವನ್ನು ನೆಟ್ಟು ತಮ್ಮ ದುಸ್ಸಾಧನೆಯಲ್ಲಿ ಗೆಲ್ಲಬೇಕೆಂದು ಹಟದಿಂದ ವದ್ದಾಡುತ್ತಾರೆ. ಪ್ರಧಮದ ಆಶ್ರಮವೂ ಆಕ್ಷೇಪ ಕರದ್ದು. ದ್ವಂದ್ವ ಮಠದಿಂದ ಆದ ಆಶ್ರಮವು ಸಿಂಧುವಾದ್ದೆಂಬ ವಿವಾದಾಂಶವು ಇನ್ನೂ ಇತ್ಯರ್ಥವಾಗಲಿಲ್ಲ. ತಕ್ಕ ಅಧಿಕಾರಸ್ಥರ ಮುಂದೆ. ಅಂಥಾ ವ್ಯಾಜ್ಯ ಇದುವರಿಗೂ ತರೋಣಾಗಲೇ ಇಲ್ಲ. ಹೀಗಿರುತ್ತಾ ನ್ಯಾಯವಾಗಿ ಚಂಚಲನೇತ್ರರ ಶಿಷ್ಯನು ಪೂರ್ವಪದ್ಭತಿಯನ್ನನುಸರಿಸಿ ಆದಿನಾರಾಯಣಾ ಲಯವಲ್ಲಿ ದಿಗ್ವಿಜಯಾರಾಧನೆಗೋಸ್ಕರ ಪ್ರವೇಶಮಾಡುವ ಮತ್ತು ಆದರ ಮುಂಚಿತವಾಗಿಯೇ ಅವರ ಕಡೆಯಿಂದ ಆ ಜೀವಾಲಯದಲ್ಲಿ ಸನ್ನಾಹಗಳು ಆಗುವ ಸಮಯದಲ್ಲಿ ಎದ್ರಿಗಳು ತಡಿಯಲಿಕ್ಕೆ ಸ್ವತಂತ್ರವುಳ್ಳವರಲ್ಲಾ. ಪರಂತು ಅರ್ಧ ಬಲವೂ ಜನಬಲವೂ ತುಂಬಾ ಉಳ್ಳ ಚತುರ್ಮಠಾಧಿಪತಿ ಗಳು ಅಪಾಪೋಲಿ ಜನರ ಕೂಟವನ್ನು ಕೂಡಿಸಿ ನ್ಯಾಯವಾಗಿ ಚಂಚಲನೇ ತ್ರರ ಕಡೆಯಿಂದ ಉತ್ಸವಾದಿ ವಿಲಯ ನಡೆಯುವಾಗ ಬೇಕೆಂತ ಜಗಳವನ್ನು ಹುಟ್ಟಿಸಿದರೆ ಜನರ ನೆಮ್ಮದಿಗೆ ಭಂಗಬರುವ ಸಂಭವನಿರುವುದು. ಅದರ ಉಪಶಾಂತಿಗೆ ಮಾತ್ರ ಅಗತ್ಯವುಳ್ಳ ಉಪಾಯಗಳನ್ನು ಸರ್ಕಾರದವರು ಮಾಡಿದರೆ ಯಥೇಷ್ಟವಾಗುವದು. ಸೂರ್ಯನಾರಾಯಣನ ಆಶ್ರಮವನ್ನು ಎದುರುಪಕ್ಷ್ಣದವರು ಅದಾಲತಿನಲ್ಲಿ ವ್ಯವಹರಿಸಿ ರದ್ದುಮಾಡಿಸಿಕೊಳ್ಳುವ ಪರಿಯಂತರ ಸಾಂಪ್ರದಾಯಪ್ರಕಾರ ನಡೆಯುವ ಯಾವದೊಂದು ಕಟ್ಟಳೆ ಯನ್ನು ತಡೆಯುವದು ಫೌಜದಾರಿ ಅಧಿಕಾರಸ್ಪರ ಧರ್ಮವಾಗಿರುವದಿಲ್ಲ. ಆದಕಾರಣ ಈಗ ಬಂದಿರುವ ಮನವಿಯನ್ನು ತಳ್ಳಿ ಹಾಕಬಹುದು.
ಹೀಗೆಂಬ ಅನ್ವಯವಾಗುವ ವಿಜ್ಞ್ಞಾಷನಾ ಪತ್ರವನ್ನು ಕಾರಭಾರಿಯು ವ್ಯವಧಾನ ಮಾಡದೆ ವಿಮರ್ಶಾಧಿಕಾರಿಗೆ ಕಳುಹಿಸಿಕೊಟ್ಟನು. ಆ ಅಧಿಕಾ ರಿಯು ಅದನ್ನು ಓದಿ ನೋಡಿ ಕಾರಭಾರಿಯ ಅಭಿಪ್ರಾಯದಲ್ಲಿ ಏಕೀಭವಿಸಿ ನೆಮ್ಮದಿಗೆ ಭಂಗ ಉಂಟಾಗದ ರೀತಿಯಲ್ಲಿ ಕೊತ್ವಾಲನ ಮುಖೇನ ಸಮು ಚಿತ ವ್ಯವಹರಣೆಯನ್ನು ಸ್ವತಹ ನಡಿಸುವ ಜಾಗ್ರತೆ ಇಡಬೇಕೆಂದು ಹುಕುಂ ಮಾಡಿ ಮನವಿಯನ್ನು ತಳ್ಳಿಹಾಕಿದನು. ಹೀಗೆ ಮಂಗಳಪದವಾಗುವ ಪರಿಯಂತ್ರವೂ ವಕೀಲರಿಬ್ಬರೂ ತಮಗೆ ಕರೆ ಬರುವದೆಂಬ ಆಶೆಯಿಂದ ಅಂಜನೇಯಾಲಯದಲ್ಲಿ ಕೂಳುತಿನ್ನುತ್ತಾ ಇದ್ದದ್ದೇ ಸರಿ. ಮನವಿ ತಳ್ಳಿ ಹಾಕಿ ರುವ ಕೌಲಕವು ಊರಲ್ಲಿ ಮುಕ್ಕಾಲುವಾಸಿ ಜನರಿಗೆ ಸಿಕ್ಕುವವರೆಗೂ ಇವರಿಗೆ ತಿಳಿದು ಬರಲೇ ಇಲ್ಲಾ.
“ಈ ಮಠದವರ ಗಲಾಟೆಯಲ್ಲಿ ತಾನು ಕೈಹಾಕಲೇ ಬಾರದಿತ್ತು. ಅವರು ಕೊಟ್ಟ ಪ್ರತಿಫಲಕ್ಕಿಂತಲೂ ಹೆಚ್ಚಿಗೆ ಸಾಹಸಮಾಡಿದೆ, ಅಪಜಯವಾಯಿತು. ಏನು ಮಾಡೋಣ? ಅವರ ಪುಣ್ಯ. ಇನ್ನು ಅವರ ಸಿಡುಮೋರೆ ಗಳನ್ನು ಕಾಣಬೇಕ್ಯಾಕೆ? ಅವಶ್ಯವಿದ್ದರೆ ಕರೆ ಬಂದಾಗ ಹೋಗಬಹುದು” ಎಂದು ಕೋದಂಡಪಾಣಿಯು ತನ್ನ ಊರಿಗೆ ನಡೆದುಬಿಟ್ಟನು. ರಾಮ ದಾಸನು ಮಠದವರಿಗೆ ಕೊಂಚ ಬುದ್ಧಿ ಕಲಿಸುವ ಸಮಯವು ಇದೇ. ಜತೆ ವಕೀಲನು ಮಾಡಿದೆ ಬುದ್ಧಿ ವಂತಿಕೆಯೇ ಲೇಸೆಂದು ಮನೆಗೆ ಅಭಿಮುಖ ವಾದನು. ಇತ್ತಲು ನೃಸಿಂಹಪುರಾದಿ ನಾಲ್ಕು ಮಠದವರಿಗೆ ವಿಮರ್ಶಾಧಿ ಕಾರಿಯು ಮಾಡಿದ ತೀರ್ಮಾನದ ವೃತ್ತಾಂತ ಪರಸ್ಪರವಾಗಿ ತಿಳಿದುಬಂತು. ವಕೀಲರು ಏನು ಬರಲಿಲ್ಲವೆಂದು ಎದುರು ನೋಡುತ್ತಾ ಇರುವಾಗ ಅವರು ತಮ್ಮ ತಮ್ಮ ಮನೆಗೆ ನಡೆದುಬಿಟ್ಟರೆಂದು ಮಠದ ಚಾಕರರಿಂದ ಗೊತ್ತಾಗಿ ಅವರೆಲ್ಲರೂ ಬೆರಗಾದರು. ರಾಮದಾಸರಾಯನನ್ನಾದರೂ ಕರೆಸಿ ನೋಡ ಬೇಕೆಂಬ ಯೋಚನೆಯಲ್ಲಿರುವ ವೇಳೆ ಆ ಮಠದ ಪಾರುಪತ್ಯಗಾರನ ಸೋದ ರನ ಅಳಿಯ ರಘುವೀರರಾಯನು ಬಹುಕಾಲದಿಂದ ವಕಾಲತ್ತು ನಡೆಸಿ ಕೊಂಡು ವಾಸವಾಗಿರುತ್ತಿದ್ದ ಕೊನೇರಿಪುರದ ಹವೆಯು ದೇಹಪ್ರಕೃತಿಗೆ ಒಪ್ಪುವುದಿಲ್ಲವೆಂಬ ಅನುಮಾನದ ಮೇಲೆ ಕುಟಂಬ ಸಮೇತ ಆ ಊರನ್ನೇ ಬಿಟ್ಟು ಕುಮುದಪುರದಲ್ಲಿ ವಾಸ್ತವಿಸಿಕೊಂಡಿರುವುದಕ್ಕೆ ಬಂದು ಒಂದು ಮನೆ ಯನ್ನು ಮಾಡಿಕೊಂಡಿದ್ದಾಗ ಪಂಚಮಠಗಳಲ್ಲಿ ಇತ್ತಂಡಗಳು ಆದ ಸಮಾ ಚಾರವನ್ನು ವೇದವ್ಯಾಸ ಉಪಾಧ್ಯನಿಂದ ತಿಳಿದು ರವಷ್ಟು ದ್ರವ್ಯ ಸಂಪಾದಿ ಸುವುದಕ್ಕೆ ಒಳ್ಳೇ ಸಮಯ ಬಂದಿದೆಯೋ ನೋಡಿಬಿಡೋಣ ಎಂದು ಮೆಲ್ಲಗೆ ನೃಸಿಂಹಪುರಕ್ಕೆ ಹೋದನು. ಅಲ್ಲಿ ಅವನು ಪ್ರಥಮದಲ್ಲಿ ಪಾರುಪತ್ಯ ಗಾರನನ್ನು ತರುವಾಯ ಶ್ರೀಪಾದಂಗಳವರನ್ನೂ ಕಂಡು ತಾನು ಕುಮುದ ಪುರದಲ್ಲಿಯೇ ವಾಸ್ತವ್ಯ ಮಾಡಿಕೊಂಡಿರುವದಾಗಿ ತಿಳಿಸಿದನು. ಶ್ರೀಪಾದಂಗ ಳಿಗೆ ಬಹು ಆನಂದವಾಯಿತು. ರಘುವೀರರಾಯರಿಗೆ ದಿವ್ಯ ಔತಣವೂ ಉಡುಗೊರೆಯೂ ಆಯಿತು. ನಾಲ್ಕು ಮಠದವರ ಕಡೆ ಮುತ್ತಾಲಿಕನಾಗಿ ಎಲ್ಲಾ ವ್ಯವಹರಣೆಗಳನ್ನು ನಡೆಸೆಂದು ಅವನಿಗೆ ನಿರೂಪವಾಗಿ ಮುಂಗಡ ವಾಗಿ ಸಾಕಷ್ಟು ಹಣವೂ ಕೊಡೋಣಾಯಿತು. ಇನ್ನು ಬೇಕಾದ ಹಾಗೆ ಖರ್ಚಿಗೆ ಹಣ ಬರೆದು ತರಿಸಿಕೊಳ್ಳ ಬಹುದೆಂದು ಪಾರುಪತ್ಯಗಾರನು ಅಂತ ರಂಗದಲ್ಲಿ ತಿಳಿಸಿದನು. ಇಷ್ಟು ದೊಡ್ಡ ಪ್ರಕರಣದಲ್ಲಿ ಒಬ್ಬ ಸಹಾಯಕರು ಇರಬೇಕಾದ್ದು ಅಗತ್ಯವೆಂದು ರಘುವೀರರಾಯನು ಅರಿಕೆ ಮಾಡಿಕೊಂಡಲ್ಲಿ ಶ್ರೀಪಾದಂಗಳು ಹೆಚ್ಚು ಸಮಯ ಆಲೋಚನೆಮಾಡಿ ರಾಮದಾಸನನ್ನು ಬಿಟ್ಟು ಬಿಟ್ಟರೆ ಅವನು ಎದುರು ಪಕ್ಷಕ್ಕೆ ಸೇರಿ ತಿಗಡಿ ಬಿಗಡಿ ಮಾಡಿಹಾಕುವ ನೆಂಬ ಹೆದರಿಕೆಯಿಂದ ಅವನನ್ನು ಸಹಾಯಕ್ಕೆ ಕರಕೊಳ್ಳಲಕ್ಕೆ ಅನುಮತಿ ಕೊಟ್ಟರು. ಆಗಲೆಂದು ಪ್ರಣಾಮಮಾಡಿ ಈ ವಕೀಲನು ಕುಮುದಪುರಕ್ಕೆ ಮರಳಿ ರಾಮದಾಸನನ್ನು ಕರೆಸಿಕೊಂಡು ಆದ್ಯಂತ ಚರಿತ್ರೆಯನ್ನು ತಿಳು ಕೊಂಡು ಸೂಕ್ಷ್ಮರೀತಿಯಲ್ಲಿ ಗ್ರಹಿಸಿನೋಡಿದನು. ಇದ್ಯಾವ ದೊಡ್ಡ ಪ್ರಕ ರಣ? ಇದಕ್ಕಿಂತಲೂ ಹೆಚ್ಚು ಗಲಿಬಿಲಿಯುಳ್ಳ ವ್ಯವಹಾರಗಳಲ್ಲ ನಾನು ಕ್ಷಣಾರ್ಧದಲ್ಲಿ ಫೌಜದಾರಿಯಲ್ಲಿಯೂ ಅದಾಲತಿನಲ್ಲಿಯೂ ಗೆದ್ದು ಗಡ್ಡವೆಲ್ಲಾ ಹಣ್ಣಾಯಿತು. ಚಂಚಲನೇತ್ರರಾಗಲೀ ಅವರ ಶಿಷ್ಯರಾಗಲೀ ಆದಿನಾರಾಯ ಣನ ಹೊಸ್ತಿಲು ದಾಟಿ ನೋಡಬಲ್ಲರೇ ಎಂದು ಮೀಶೆಯ ಕೊನೆಯನ್ನು ಉಭಯ ಹಸ್ತಗಳಿಂದಲೂ ತಿರುಹಿದನು. ರಾಮದಾಸನು ಇದನ್ನು ನೋಡಿ ಇವನ ಅಹಂಕಾರವು ಕಾರಭಾರಿಯಿಂದ ಒಂದೇ ನಿಮಿಷದಲ್ಲಿ ಮರ್ಧನ ವಾಗುವದು. ಕ್ರಮೇಣ ಆ ವಿನೋದ ನೋಡಬಹುದೆಂದು ಸುಮ್ಮಗಾಗಿ ಹೌದುರಾಯರೇ! ತಮ್ಮ ಅಭಿಪ್ರಾಯ ಬರಾಬರಿ ಎಂದು ಹೊಗಳಿದನು.
*****
ಮುಂದುವರೆಯುವುದು