ಬಿಟ್ಟರೂ ಬಿಡದೀ ಕಾಮ ಭೂತ
ಜೀವನ ಮಾಡಿದೆ ನರಕ ಸಂಭೂತ
ಕಾಡುತ್ತಿದೆ ಮಾಯೆ, ಹೆಣ್ಣು ಹೊನ್ನು
ಎಲ್ಲಿದೆಯೊ ಶಿವನ ಶಾಂತಿ ಜೊನ್ನ
ಪ್ರತಿಜ್ಞೆ ಮಾಡುತ್ತಿರುವೆ ನಿತ್ಯ ನಾನು
ಇಹ ಸುಖಗಳೆಲ್ಲವೂ ತ್ಯಜಿಸಬೇಕೆಂದು
ಮತ್ತೊಂದುಗಳಿಗೆ ನನ್ನ ನೇಮ ಮರೆತು
ಮೊಹೀತಗೊಳ್ಳುವೆ ಸುಂದರ ಪ್ರಪಂಚ ಕಂಡು
ಯಾವ ಕ್ಷಣದ ಈ ಮಿಂಚು ರೋಮಾಂಚನ
ಬಾಳ ಲಾರೆನು ಇವಗಳೆದುರಿನಲಿ
ಒಂದು ಗಳಿಗೆ ಎನ್ನಲ್ಲಿ ಮರೆವು ನೀಡು
ವಿಷಯ ಸುಖಗಳ ಬಗ್ಗೆ ಅಸಡ್ಡೆ ವಡ್ಡು
ಪ್ರತಿನಿತ್ಯ ಪ್ರಾರ್ಥಿಸುವೆ ದೇವರಲ್ಲಿ
ನನಗೆ ನನ್ನಲಿಯೆ ತೃಪ್ತಿ ನೀಡು
ಯಾವ ಕಾಮನೆಗಳಿಗೆ ನಾ ಬಯಸದಿರಲಿ
ಮಾಣಿಕ್ಯ ವಿಠಲನಲಿ ಒಲವವಿರಲಿ
*****
















