ವಾಗ್ದೇವಿ – ೫೬

ವಾಗ್ದೇವಿ – ೫೬

ಸೂರ್ಯನಾರಾಯಣನು ಯಾವ ದೇಶಕ್ಕೆ ಹೋಗಿರಬಹುದೆಂಬ ಪತ್ತೆಯು ದೊರೆಯದೆಹೋಯಿತು. ವೆಂಕಟಸುಬ್ಬಿಯ ಸಂಬಂಧಿಕರು ಹಲವು ಊರುಗಳಿಗೆ ಹೋಗಿ ಸಮಾಚಾರ ಸಂಗ್ರಹಿಸುವದಕ್ಕೆ ಮಾಡಿದ ಪ್ರಯತ್ನ ಒಂದಾದರೂ ಸಫಲವಾಗಲಿಲ್ಲ. ಇದ್ದ ಊರೆಲ್ಲಾ ತಿರುಗಿ ಮರಳಿ ನಿಟ್ಟುಸಿರು ಬಿಡುತ್ತಾ ಕುಂತುಬಿಟ್ಟರು. ಇನ್ನೊಂದು ಕಡೆಯಿಂದ ವಾಗ್ದೇವಿಯು ಪುತ್ರ ಶೋಧವನ್ನು ಮಾಡುತ್ತಾ ಬಳಲಿದಳು. ಅವನು ಹೋದ ಊರು ಯಾವ ದೆಂದು ತಿಳಿದು ಬರಲಿಲ್ಲ. ವಾಗ್ದೇವಿಯು ಚಿಂತಾಕ್ರಾಂತಳಾಗಿ ದಿನೇ ದಿನೇ ಕೃಶಳಾಗುತ್ತಾ ಬಂದು ಬೇಗನೆ ಪ್ರಾಣಬಿಡುವ ಅವಸ್ಥೆಯನ್ನು ಹೊಂದಿದಳು. ಆದರೂ ಸಿಕ್ಕಿ ಸಿಕ್ಕಿದವರ ಕೂಡೆ ತನ್ನ ಮಗನನ್ನು ಕಂಡಿರೆ ಎಂದು ವಿಚಾರಿ ಸುವದು ಬಿಡಲಿಲ್ಲ. ಆರು ತಿಂಗಳ ವರೆಗೆ ಅವಳು ಯಾವ ಯಾವ ಹಳ್ಳಿಗೆಲ್ಲಾ ಹೋಗಿ ವರ್ತಮಾನ ತಕ್ಕೊಳ್ಳುತ್ತಾ ಇದ್ದಳು. ಒಂದಾನೊಂದು ದಿನ ತಿರ್ಚನ ಹಳ್ಳಿ ಎಂಬ ಕರಾವಳಿ ಸಮಿಪದ ಊರಲ್ಲಿ ಐದಾರು ದಿನ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಉಳಕೊಂಡು ಇರುವಾಗ ಅವನ ತಾಯಿಯಾದ ಮುದುಕಿಯೂ ವಾಗ್ದೇವಿಯೂ ಪರಸ್ಪರ ಸುಖದುಃಖ ಮಾತನಾಡಿಕೊಳ್ಳಲಿಕ್ಕೆ ಪ್ರಾರಂಭಿಸಿ ದರು. ವಾಗ್ದೇವಿಯ ಮಗನ ವೃತ್ತಾಂತವನ್ನು ಆ ಮುದುಕಿಯು ತುಸು ಕೇಳಿದ ಬಳಿಕ ವಾಗ್ದೇವಿಯ ಅನುಮಾನವನ್ನು ಪರಿಹರಿಸಿ ಒಬ್ಬ ಯೌವನಸ್ಥನು ಒಬ್ಬ ಸ್ತ್ರೀಯ ಸಂಗಡ ಒಂದು ರಾತ್ರೆ ತಮ್ಮಲ್ಲಿ ಉಳಕೊಂಡು ಹಗಲು ಕಾಲ ಹೊರಗೆ ಹೊರಡದೆ ಸಾಯಂಕಾಲ ಸಮಯದಲ್ಲಿ ಅವಳ ಸಮೇತ ಹಡಗನ್ನು ಹತ್ತಿ ದ್ವೀಪಾಂತರಕ್ಕೆ ಹೋದನೆಂದು ತಿಳಿದು ಬಂತು

ಆ ಮುದುಕಿಯು ವರ್ಣಿಸಿದ ರೀತಿಯಿಂದ ಆ ಸ್ತ್ರೀಪುರುಷರು ವೆಂಕಟ ಸುಬ್ಬಿಯೂ ಸೂರ್ಯನಾರಾಯಣನೂ ಅಲ್ಲದೆ ಮತ್ಯಾರೂ ಅಲ್ಲವೆಂದು ವಾಗ್ದೇವಿಗೆ ಖಚಿತವಾಯಿತು. ಅವಾಗಲೇ ಅವಳು ಸಂಗ್ರಿಹಿಸಿದ ವರ್ತ ಮಾನವನ್ನು ತಿಪ್ಪಾಶಾಸ್ತ್ರಿಗೆ ತಿಳಿಸಿದಳು. ಅವರನ್ನು ಹುಡುಕಿಕೊಂಡು ಏನು ಪ್ರಯೋಜನ? ಒಂದು ವೇಳ್ಯೆ ಅವರನ್ನು ನಾವು ಕಂಡು ಹಿಡಿದರೂ ನಮ್ಮ ಸಂಗಡ ಅವರು ಬರಲಾರರು. ಶೂದ್ರ ಸ್ತ್ರೀ ವ್ಯಾಮೋಹಕ್ಕೆ ಮರು ಳಾದ ಸೂರ್ಯನಾರಾಯಣನ ಜೀವಿತವೇ ವ್ಯರ್ಥವೆನ್ನ ಬೇಕು. ನಾನು ಇಲ್ಲಿಂದ ಮುಂದರಿಸಲಾರೆನೆಂದು ತಿಪ್ಪಾಶಾಸ್ತ್ರಿಯು ಖಂಡಿತವಾಗಿ ಹೇಳಿದನು. ವಾಗ್ದೇವಿಯು ಎಷ್ಟು ಅತ್ತು ಬೇಡಿಕೊಂಡರೂ ತಿಪ್ಪಾಶಾಸ್ತ್ರಿಯು ಆವಳ ಬಿನ್ನಹಕ್ಕೆ ಕಿವಿ ಕೊಡಲೇ ಇಲ್ಲ. ಶೃಂಗಾರಿಯು ಅರೆಮನಸ್ಸಿನಿಂದಾದರೂ ಅಕ್ಕಾ ನೀನೆಲ್ಲಿಗೆ ಬರಬೇಕಂತಿಯೋ ಅಲ್ಲಿಗೆ ನಿನ್ನ ಬೆನ್ನು ಹಿಡಿದು ಬರುವೆ ನೆಂದು ಮೊಸಳೆಯಂತೆ ಅಶ್ರುಜಲವನ್ನು ಸುರಿಸಿದಳು. ನಾವಿಬ್ಬರು ಅನಾಥ ಯರು ಎಲ್ಲಿಗೆ ಹೋಗೋಣ? ಮಸಣಕ್ಕೇನು? ಗಂಡಸರ ಸಹಾಯವಿಲ್ಲದೆ ಹೆಂಗಸರು ಏನು ಮಾಡಬಹುದು? ಅಯ್ಯೋ ನನ್ನ ಪ್ರಾಚೀನವೇ! ಪುಣ್ಯಾ ತ್ಮನಾದ ಆ ಶೆಟ್ಟಿಯು ಕಟ್ಟಸಿಕೊಟ್ಟ ಮಠದಲ್ಲಿ ಚಿನ್ನದ ಅನ್ನ ಉಂಡು ಕೊಂಡಿರಬಹುದಿತ್ತೆಂದರೆ ಆ ಮೂಳಿಯೊಬ್ಬಳು ಎಲ್ಲಿಂದ ನನ್ನ ಮುದ್ದು ಮಗನಿಗೆ ಗಂಟು ಬಿದ್ದಳಪ್ಪಾ. ಅವಳನ್ನು ಮೆಚ್ಚಿ ಈತ ಅಷ್ಟು ಆತುರದಿಂದ ಅವಳನ್ನು ಕಟ್ಟಿಕೊಂಡು ಹೋಗಬೇಕೇ! ದರಿದ್ರಾವಸ್ಥೆ ಸಹಿಸಕೂಡದೆ ಸನ್ಯಾಸಿಯನ್ನು ಮೆಚ್ಚಿ ಲೋಕನಿಂದೆಗೆ ಪಾತ್ರಳಾದರೂ ಮಗನನ್ನು ಪಡೆದು ಮಠಾಧಿಪತಿಯಾಗಮಾಡಿ ಆನಂದ ಪಡುತ್ತಿರುವಾಗ್ಗೆ ಸಾವಕಾಶವಿಲ್ಲದೆ ದುರ್ದಶೆ ಪ್ರಾಪ್ತಿಯಾಗಿ ವ್ಯಾಜ್ಯದಲ್ಲಿ ಸೋತು ಪಲಾಯನ ಮಾಡುವ ಸಂಕಷ್ಟ ನಮಗೆ ಬಂದೊದಗಿತು. ಈಗ ಅನಕ ದುರ್ಬುದ್ಧಿ ಬಂದು ಅವನು ಊರೇ ಬಿಟ್ಟು ಕಳ್ಳನಂತೆ ಓಡಿಹೋಗಿ ಹಾಳು ವ್ಯಾಸಂಗದಲ್ಲಿ ಸಿಲುಕಿದ ಮೇಲೆ ಅವನಿಗೆ ತಾಯಿಯ ನೆನಪು ಎಲ್ಲಿಂದ ಬರುವದು? ಜಗತ್ರಯ ನಾರಾಯಣನು ನನ್ನ ಪ್ರಾಣವನ್ನು ತೆಗಿಯುವದಿಲ್ಲವಷ್ಟೇ ಎಂದು ವಾಗ್ದೇವಿ ಯು ಅಳುವವಳಾದಳು.

ತಿಪ್ಪಾಶಾಸ್ತ್ರಿಯು ಯಾವದಕ್ಕೂ ಕಿವಿ ಕೊಡಲಿಲ್ಲ. ವಾಗ್ದೇವಿಗೆ ದೊಡ್ಡ ಸಿಟ್ಟು ಬಂತು. ಅವಳು ತಿಪ್ಪನನ್ನು ಬಹಳವಾಗಿ ಜರದು ಕಂಡಾಬಟ್ಟೆ ಬೈದು ಬಿಟ್ಟಳು. ತಾನು ಮೌನವಾಗಿದ್ದರೆ ಅಕ್ಕ ಅನುಮಾನಪಟ್ಟು ತನ್ನ ಮೇಲೆ ಸಿಟ್ಟು ತಾಳುವಳೆಂದು ಭಯದಿಂದ ಶೃಂಗಾರಿಯೂ ತಿಪ್ಪಾಶಾಸ್ತ್ರಿ ಯನ್ನು ಜರೆಯಲಿಕ್ಕೆ ಹೊರಟಳು. ಇವರಿಬ್ಬರು ದಿಂಡೆ ಹೆಂಗಸರು. ಇವರ ಮೋಹ ಮಾಯಪಾಶದಿಂದ ಬದ್ಧನಾಗಿ ತಾನು ಅನುಭವಿಸಿದ ಸುಖದುಃಖ ಅಂತ್ಯವಾಗುವ ಕಾಲವು ಇದೇ ಎಂದು ಅವನು ವಸ್ತ್ರ ಇತ್ಯಾದಿ ಒಡವೆಗ ಳನ್ನು ಕಟ್ಟಿ ಕೊಂಡು ಅವರಿಬ್ಬರ ಮೋರೆಯನ್ನು ನೋಡದೆ ಸ್ವದೇಶಕ್ಕೆ ನಡದುಬಿಟ್ಟನು. ತಮ್ಮನ್ನು ಅಗಲಿ ಹೋಗುವ ತಿಪ್ಪನನ್ನು ಹಿಂದೆ ಕರಿಯ ಲಿಕ್ಕೈ ಅವರಿಗೆ ನಾಚಿಕೆಯಾಯಿತು. ಈ ಮಾರಿಗಳ ಬಾಯಿಯಿಂದ ದೇವರು ತನ್ನನ್ನು ತಪ್ಪಿಸಿದನೆಂಬ ಹರುಷದಿಂದ ತಿಪ್ಪಾಶಾಸ್ತ್ರಿಯು ಹಿಂದೆ ತಿರುಗಲೇ ಇಲ್ಲ. ಹೆಂಗಸರಿಬ್ಬರು ತಿರ್ಚನ ಹಳ್ಳಿ ಯಲ್ಲಿಯೇ ಅಲೆದಾಡಿಕೊಂಡಿರಬೇಕಾ ಯಿತು. ಕೂಳಿಗೆ ತತ್ವಾರವಾಗಿ ಆವರು ಕಷ್ಪಪಟ್ಟರು. ಹೊಟ್ಟೆ ಹೊರಯುವದು ಹ್ಯಾಗೆಂಬ ಯೋಚನೆಯಿಂದ ಆ ಸ್ತ್ರೀಯರಿಬ್ಬರು ಒಂದು ದೇವಾಲಯದ ಮುಂದುಗಡೆ ಕಟ್ಟೆಯಲ್ಲಿ ಕೂತಿರುವಾಗ ಧರ್ಮರಾಯ ಪಂಡಿತನೆಂಬ ವೈದ್ಯನೊಬ್ಬನು ಅವರನ್ನು ನೋಡಿ ಅವರ ಸ್ಪಿತಿಗತಿಯನ್ನು ಕುರಿತು ವಿಚಾ ರಿಸಿದನು. ಅನ್ನಾರ್ಥಿಯಾಗಿ ಬಂದವರೆಂದು ಅವರ ಬಾಯಿಯಿಂದಲೇ ತಿಳಿದುಬಂತು. ಅವರಿಬ್ಬರನ್ನು ತನ್ನ ಮನೆಯಲ್ಲಿ ನಿಲ್ಲಿಸಿಕೊಳ್ಳುವದಕ್ಕೆ ಅವನು ಒಪ್ಪಿದನು. ಅವನ ಪತ್ನಿಯು ನಿತ್ಯ ರೋಗಿಯಾಗಿ ಮಕ್ಕಳ ಪರಾ ಮರಿಕೆ ತಕ್ಕೊಂಡು ಮನೆಯ ಆಡಳ್ತೆಯನ್ನು ನೋಡಲಿಕ್ಕೆ ಯಾರೂ ಇಲ್ಲದೆ ಇರುವದರಿಂದ ಶೃಂಗಾರಿಯನ್ನು ಆ ಪಾರುಪತ್ಯವನ್ನೆಲ್ಲಾ ನೋಡಲಿಕ್ಕೂ ಅಡಿಗೆಗೆ ಸರಿಯಾದ ಜನರಿಲ್ಲದೆ ರುಚಿಕರವಾದ ಊಟ ಶೂನ್ಯವಾಗಿ ಬಹು ಕಾಲವಾದುದರಿಂದ ವಾಗ್ದೇವಿಯನ್ನು ಭೋಜನಶಾಲೆಯ ಮೇಲ್ವಿಚಾರಕ್ಕೂ ನೇಮಿಸಲಿಕ್ಕೆ ತುಂಬಾ ಸಂತೋಷ ಉಳ್ಳವನಾಗಿರುವೆನೆಂದು ಆ ಗೃಹಸ್ನನು ಹೇಳಿದನು. ಕೂಡಲೇ ಅವರಿಗೆ ಬಹು ಪ್ರಮೋದವಾಗಿ ತಥಾಸ್ತು ಎಂದು ಅವನ ಬೆನ್ನು ಹಿಡಿದು ಅವನ ಮನೆಗೆ ತಲಪಿ ಅವರವರ ಉದ್ಯೋಗದಲ್ಲಿ ಅಂದಿನಿಂದಲೇ ಪ್ರವರ್ತಿಸಿದರು.

ಧರ್ಮರಾಯನ ಗೃಹಿಣಿಯು ಶೃಂಗಾರಿಯನ್ನು ನೋಡುತ್ತಲೇ ಮುಖ ವನ್ನು ತಿರುಗಿಸಿ ಕಂಬನಿ ತುಂಬಿದಳು. ಅಸ್ಪಸ್ಥವಾಗಿ ಬಿದ್ದು ಚಾಪೆಯಿಂದ ಏಳಲಾರದೆ ತೀರಾ ಪರಾಧೀನವಾದ ಸ್ಥಿತಿಯಲ್ಲಿ ಇದ್ದರೂ ಸ್ತ್ರೀಯರಿಗೆ ಮತ್ಸರವು ಕುಂದದಿರುವದು ಅತಿ ಆಶ್ಚರ್ಯಕರವಾಗಿ ಯಜಮಾನನಿಗೆ ತೋರಿತು. ಶೃಂಗಾರಿಯು ಮಕ್ಕಳ ಆರೈಕೆಯನ್ನು ಜಾಗ್ರತೆಯಿಂದ ನೋಡಿ ದಳು. ಮನೆಯ ಯಜಮಾನತಿ ತನ್ನ ಕೂಡೆ ಮಾತನಾಡದಿದ್ದರೂ ತಾನಾಗಿ ಅವಳ ಯೋಗಕ್ಷೇಮವನ್ರು ಪದೇ ಪದೇ ವಿಚಾರಿಸಿಕೊಂಡಳು. ಅವಳಿಗೆ ಪಥ್ಯವನ್ನು ಬಲಾತ್ಕಾರದಿಂದ ಕೊಡುವದರಿಂದ ಶೃಂಗಾರಿಯು ಪಂಡಿತನ ಗೃಹಕೃತ್ಯಕ್ಕೆ ಒಹು ಹಿತಕಾರಿಯಾದಳು. ಪಾಕಶಾಲೆಯಲ್ಲಿ ವಾಗ್ದೇವಿಯ ಪ್ರತಾಪವು ಚಂದಾಗಿ ಮೆರೆಯಿತು. ಪಂಡಿತನು ಐಶ್ವರ್ಯವಂತನೂ ಉದಾರ ಮನಸ್ಸಿನ ಧರ್ಮಿಷ್ಟನಾದ ಕಾರಣ ಅವನಲ್ಲಿಯೇ ಭೋಜನಸಮಯಕ್ಕೆ ಗುಂಪು ಕೂಡುವ ದಾರಿಗ ಬ್ರಾಹ್ಮಣರು ಮುಂಚಿಗಿಂತ ಹೆಚ್ಚು ತೃಪ್ತಿ ಹೊಂದಿದರು. ಹೀಗೆ ಈ ಇಬ್ಬರು ಹೆಂಗಸರು ಅವನಿಗೆ ಪ್ರೀತಿವಂತೆಯರಾ ದರು. ಅವರು ಪಂಡಿತನ ಮನೆಯಲ್ಲಿ ಕಾಲಿಟ್ಟ ಕೆಲವು ತಿಂಗಳಲ್ಲಿಯೇ ಅವನ ಪತ್ನಿಯು ಕೈಲಾಸವಾಸಿಯಾದಳು. ಶೃಂಗಾರಿಯು ವಿಷಪ್ರಯೋಗ ಮಾಡಿ ಅವಳ ಜೀವವನ್ನು ತೆಗೆದಳೆಂದು ಮೃತಳ ತಂದೆತಾಯಿಗಳು ಬಂಧು ಜನರು ಹೇಳಿ ವ್ಯಸನಪಟ್ಟರು.

ಪತ್ನಿ ವಿಯೋಗದ ದೆಸೆಯಿಂದ ಪಂಡಿತತು ಕೂರಿಕೊಂಡು ಇರುವ ದನ್ನು ಶೃಂಗಾರಿಯ ಮೇಲೆ ಹೆಚ್ಚು ವಿಶ್ವಾಸವಿಟ್ಟು ಮನೆಯ ಆದಾಯ ವೆಚ್ಚವೆಲ್ಲಾ ಅವಳಿಗೆ ಪೂರ್ಣವಾಗಿ ವಹಿಸಿಕೊಟ್ಟು. ಈ ದೆಸೆಯಿಂದ ಅವಳು ಅವನ ತಲೆಗೆ ಮೆಚ್ಚು ಮದ್ದು ತಿಕ್ಕಿ ಅನನನ್ನು ಕೈವಶಮಾಡಿ ಕೊಂಡು ಕೋತಿಯಂತೆ ಕುಣಿಸುತ್ತಾಳೆಂದು ಹಲವರು ಆಡಲಾರಂಭಿಸಿದರು. ಒಟ್ಟಾರೆ ಶೃಂಗಾರಿಯ ಕಾರಭಾರು ನೋಡಿದರೆ ಪಂಡಿತನು ಅವಳ ಮಾತಿನ ಮೇಲೆ ನಡೆಯುತ್ತಿದ್ದಾನೆಂದು ಸಕಲರಿಗೂ ಸಮಾಧಾನವಾಗುತ್ತಿತ್ತು. ಮನೆಯ ನೌಕರ ಜನರು ಅವಳ ಯಜಮಾನಿಕೆಯಲ್ಲಿ ಪೂರೈಸುವದೇ ಕಷ್ಟ ವೆಂದು ಎದುರೆದುರು ದೂರುತ್ತಿದ್ದರು. ಕೆಲವರು ಅವಳ ಬಾಥೆಯನ್ನು ತಡೆ ಯಲಾರದೆ ಪಂಡಿತನಿಗೆ ದೂರುಕೊಟ್ಟರೆ ಅವನು ಮಹಾ ಸಿಟ್ಟುತಾಳಿ ತಫರಾಕು ಏಟು ಲತ್ತೆ ಇತ್ಯಾದಿಗಳಿಂದ ಅವರನ್ನು ಶಿಕ್ಷಿಸಿ ಶೃಂಗಾರಿಯು ಚಂದಾಗಿ ನಗುವಂತೆ ಪ್ರವರ್ತಿಸುತ್ತಿದ್ದನು. ವಾಗ್ದೇವಿಯನ್ನು ಯಾರು ದೂರು ತ್ತಿರಲಿಲ್ಲ. ಭೋಜನ ಶಾಲೆಯಲ್ಲಿ ಅವಳು ಶ್ಲಾಘನೀಯವಾದ ನಡತೆಯಿಂದ ವಿಶಿಷ್ಟ ಜನರನ್ನು ಸಂತೋಷಿಸುತ್ತಿರುವಳು. ಬಿರುನುಡಿಯವಳಲ್ಲವಾದ ಕಾರಣ ಯಾರೂ ಅವಳ ಮೇಲೆ ದ್ವೇಷತಾಳುತ್ತಿದ್ದಿಲ್ಲ. ಶೃಂಗಾರಿಗೆ ಕೊಂಚ ದವಲತ್ತು ಬಂದ ಹಾಗೆಯೇ ಅವಳು ವಾಗ್ದೇವಿಯನ್ನು ತಾತ್ಸಾರ ಮಾಡಲಿ ಕ್ಕಾದಳು. ಪರಂತು ಅವಳು ಅದನ್ನು ಲಕ್ಷಕ್ಕೆತಾರದೆ ತನ್ನ ಕೆಲಸವನ್ನು ಸರಿಯಾಗಿ ನಡಿಸುವದರಲ್ಲಿ ಬಿದ್ದಳು. ಚಿಂತೆಯು ಅವಳಿಗೆ ವ್ಯಾಪಿಸಿಕೊಂಡಿತು ತನ್ನ ಮಗನು ಎಂಥಾ ದೊಡ್ಡ ದುರವಸ್ಥೆಯಲ್ಲಿ ಬಿದ್ದರೂ ತನ್ನ ಕಣ್ಣಮುಂದೆ ಸ್ವಸ್ಥವಾಗಿ ಇದ್ದು ಹೊಟ್ಟೆಯನ್ನು ತಣ್ಣಗೆ ಮಾಡುತ್ತಿರುವಾಗ್ಗೆ ಶೂದ್ರ ಸ್ತ್ರೀಯ ಮಾಯಾಜಾಲದಲ್ಲಿ ಸಿಕ್ಕಿಬಿದ್ದು ದೇಶಾಂತರ ಪ್ರಯಾಣಮಾಡಿ ತನ್ನನ್ನು ಮರೆತು ದಾರಿಯಲ್ಲಿ ಹಾಕಿದನೆಂದು ಆಗಾಗ್ಯೆ ಕಣ್ಣೀರಿಂದ ಕೈತೊಳಿ ಯುತ್ತಿದ್ದಳೆನ್ನಬಹುದು.

ತಿಪ್ಪಾಶಾಸ್ತ್ರಿಯು ಶೃಂಗಾರಿ ವಾಗ್ದೇವಿ ಇವರನ್ನು ಆಗಲಿ ತನ್ನ ಮನೆಗೆ ಬಂದು ಸೇರಿದನು. ಅವನಿಗೆ ಉಣ್ಣಲಿಕ್ಕೆ ಕಡಿಮೆ ಇರಲ್ಲಿಲ್ಲ. ಸುಲಕ್ಷ್ಮಣವಾದ ಹೆಂಡತಿಯೂ ಒಂದು ಹೆಣ್ಣು ಒಂದು ಗಂಡು ಹೀಗೆ ಎರಡು ಮಕ್ಕಳೂ ಇದ್ದು ಒಳ್ಳೆ ಮನೆತನದವನೆನ್ನಿಸಿಕೊಂಡಿದ್ದನು. ದುಸ್ಸಂಗ ಪ್ರಾಪ್ತವಾಗಿ ಮನೆಮಾರು ಬಿಟ್ಟು ನರಹತ್ಯ ದೋಷವನ್ನು ತಾಳಿದ ಕೇವಲ ದುರಾಚಾರಿಯಾಗಿ ಗೃಹಸ್ಥರ ಸಭೆಗೆ ಬರಲಿಕ್ಕೆ ಅಯೋಗ್ಯನೆಂಬ ಹಾಗಿನ ತುಚ್ಛಕ್ಕೆ ಅವನು ಒಳಗಾಗಿದ್ದನು. ಹೆಂಡತಿ ಮಕ್ಕಳ ಮಮತೆಯು ಅವನ ಮೇಲೆ ತುಂಬಾ ಇದ್ದಿತ್ತು. ಹ್ಯಾಗೂ ಆಗಲಿ ಮನೆಯ ಗೊಡವೆಯೇ ಇಲ್ಲದೆ ಹೋದವನು ಪುನಃ ಬಂದು ತಮ್ಮನ್ನು ಸೇರಿಕೊಂಡನೆಂಬ ಸಂತೋಷವು ಅವನ ಹಿಂದಿನ ದುರ್ನಡತೆಯನ್ನು ಮರಿ ಯುವಂತೆ ಮಾಡಿತು. ಹಲವು ಕಾಲ ಅನನು ಜೋತಿಷ್ಯವಿದ್ಯೆಯ ಬಲದಿಂದ ಪ್ರಾಕಿನಂತೆ ದುಡಿಯಲಿಕ್ಕೆ ತೊಡಗಿದನು. ಪರಂತು ಕ್ರಮೇಣ ಅವನಿಗೆ ಒಂದು ಪಿತ್ತಭ್ರಮೆ ಹಿಡಕೊಂಡಿತು. ಅನ್ನವು ಪಚನವಾಗುತ್ತಿದ್ದಿಲ್ಲ. ರಾತ್ರೆ ಕಾಲ ನಿದ್ರೆ ಬಾರದೆ ದುಸ್ಟಪ್ನಗಳಿಂದ ಹೆದರಿ ದಿಕ್ಕಾಪಾಲಾಗಿ ಚೀರುತ್ತಿದ್ದನು. “ಇಗೊ! ನೇಮರಾಜ ಶೆಟ್ಟಿಯು ಔಡುಗಳನ್ನು ಕಚ್ಚಿಕೊಂಡು ಕಣ್ಣಾಲಿಗಳನ್ನು ಗರಗರನೆ ತಿರುಗಿಸುತ್ತಾ ಕೈಯಲ್ಲಿ ಹಿಡಕೊಂಡಿರುವ ತಲವಾರಿರಿಂದ ನನಗೆ ಕಡಿಯಲಿಕ್ಕೆ ಬರುತ್ತಾನೆ. ಏ ಶೃಂಗಾರಿ! ಎಲ್ಲಿ ಹೋದೆ! ಕತ್ತಿ ತಾ! ಸತ್ತು ಹೋದ ಈ ದುಸ್ಮಾನನು ಪುನರ್ಜೀವಿತನಾಗಿ ಎಲ್ಲಿಂದ ಬಂದನಪ್ಸಾ” ಎಂದು ನಿದ್ರೆಯಲ್ಲಿ ಪ್ರತಿನಿತ್ಯವಾಗಲೀ ದಿನಬಿಟ್ಟು ದಿನವಾಗಲೀ ಕೂಗುವ ವಾಡಿಕೆ ಬಿತ್ತು. ಇದೇ ರೀತಿ ಇವನ ಪಿತ್ತೋಪದ್ರವು ಮೀರಿ ಬಂತು. ಒಂದು ದಿನ ಮಧ್ಯರಾತ್ರೆ ಕಾಲದಲ್ಲಿ ಯಾರಿಗೂ ತಿಳಿಯದಂತೆ ಎದ್ದು ಮನೆಯ ಮುಂದು ಗಡೆಬಾಗಿಲು ತೆರೆದು ಭಾವಿಕಟ್ಟಿಯಲ್ಲಿ ನಿಂತು ಭಾವಿಗೆ ಹಾರಿಬಿಟ್ಟನು. ಒಳಗೆ ಮಲಗಿದವರಿಗೆಲ್ಲ ಚನ್ನಾಗಿ ನಿದ್ರೆ ಬಿದ್ದ ಸಮಯವಾದುದರಿಂದ ಅವನು ಬಾವಿಗೆ ಬಿದ್ದ ಶಬ್ದವು ಕೇಳಲಿಲ್ಲ. ಮರುದಿನ ಬೆಳಗ್ಗೆ ನೋಡುವಾಗ್ಯೆ ಅವನ ಶವವು ಬಾವಿ ನೀರಿನ ಮೇಲೆ ತೇಲಿಕೊಂಡಿತ್ತು. ಹೆಂಡತಿ ಮಕ್ಕಳು ದುಃಖಾ ರ್ನವದಲ್ಲಿ ಮುಳುಗಿದರು. ಶೃಂಗಾರಿಯ ಕಿವಿಗೆ ಈ ದುಃಖಕರವಾದ ವರ್ತ ಮಾನವು ಬೀಳುತ್ತಲೇ ಬಹಳ ಪಶ್ಚಾತ್ತಾಪ ಪಟ್ಟಳು.

ವಾಗ್ದೇವಿಗೂ ಖೇದವಾಯಿತು. ಆದರೆ ಪುತ್ರವಿಯೋಗದಿಂದ ಅವಳಿಗೆ ಉಂಟಾದ ವ್ಯಸನವೇ ಘಟ್ಟಿಯಾಗಿ ತಗಲಿಕೊಂಡಿರುವದರಿಂದ ಇನ್ನೊಂದು ಪ್ರಸಂಗಕ್ಕೆ ಅವಳ ಮನಸ್ಸು ತಿರುಗುತ್ತಿದ್ದಿಲ್ಲ. ತಿಪ್ಪಾಶಾಸ್ತ್ರಿಯು ಬದುಕಿ ಕೊಂಡಿದ್ದರೆ ಶೃಂಗಾರಿಯ ಮೇಲಿನ ಪ್ರೇಮದಿಂದಾದರೂ ಬಂದಲ್ಲಿ ಒಂದು ದಿನ ಅವಳನ್ನು ನೋಡುವದಕ್ಕೆ ಬಂದರೆ ಅವನ ಕೈಕಾಲು ಹಿಡಿದು ಸೂರ್ಯ ನಾರಾಯಣನ ಪ್ರವಾಸ ಸ್ಥಳವನ್ನಾದರೂ ಹುಡುಕಿಸಿ ಅಲ್ಲಿಗೆ ಹೋಗುವ ಯತ್ನ ಮಾಡಬಹುದಿತ್ತು. ತನ್ನ ದುರಾದೃಷ್ಟದಿಂದ ಆ ಅನುಕೂಲವು ತಪ್ಪಿ ಹೋಯಿತೆಂದು ವಾಗ್ದೇವಿಯು ಹಲುಬಿದಳು. ಧರ್ಮರಾಯ ಪಂಡಿತನು ವಾಗ್ದೇವಿಯ ಚಿಂತಾತುರತೆಯನ್ನು ಅವಳ ದೇಹಸ್ಥಿತಿಯಿಂದಲೂ ಮುಖ ಭಾವದಿಂದಲೂ ತಿಳಿದು ಅದರ ಕಾರಣವನ್ನು ತಿಳಿಸಿದರೆ ನಿವೃತ್ತಿ ಉಪಾಯ ವನ್ನು ಮಾಡಬಹುದೆಂದು ಹೇಳಿದನು. ಅವಳು ಅಶ್ರುಜಲಧಾರಾಪೂರ್ವಕ ವಾಗಿ ತನ್ನ ಶೋಕದ ಮೂಲವನ್ನು ವಿವರಿಸಿದಳು. ಸೂರ್ಯನಾರಾಯಣನ ಸಮಾಚಾರವನ್ನು ಕೂಡುವಷ್ಟು ತ್ವರ್ಯದಲ್ಲಿ ತರಿಸಿಕೊಡುವೆನು. ಚಿಂತೆ ಬಿಡೆಂದು ಅವನು ವಾಗ್ದೇವಿಗೆ ಸಮಾಧಾನ ಮಾಡಿದನು. ಪರಂತು ಅವನು ಎಷ್ಟು ಪ್ರಯತ್ನ ಮಾಡಿದರೂ ಯಾವ ಸ್ಥಳಕ್ಕೆ ಅವನನು ಹೋಗಿರುವನೆಂದು ಗುಟ್ಟು ಸರ್ವಥಾ ತಿಳುಕೊಳ್ಳಲಿಕ್ಕೆ ಸಂದರ್ಭವಾಗಲಿಲ್ಲ. ಆದರೂ ಅವಳಿಗೆ ಧೈರ್ಯ ಹೇಳುವದನ್ನು ಬಿಡಲಿಲ್ಲ. ಕ್ರಮೇಣ ಆಶಾಭಂಗವನ್ನು ತಾಳಲಾರದೆ ತನ್ಸ ಪ್ರಾಣತ್ಯಾಗನಾದರೂ ಮಾಡಿಬಿಡಲೇ ಎಂಬ ದುರಾಲೋಚನೆಯು ಅವಳ ಮನಸ್ಸಿಗೆ ಹೊಕ್ಕೊಂಡಿತು. ಪಂಡಿತನ ಮನೆಯಿಂದ ನೂರಿನ್ನೂರು ಮಾರು ದೂರ ಒಂದು ಚಲೋದಾದ ಕೆರೆಯು ಶೋಭಾಯಮಾನವಾಗಿ ಇರುತ್ತದೆ ಅದರಲ್ಲಿ ನಿತ್ಯವು ಬಹುಜನರು ಸ್ನಾನಕ್ಕೆ ಗುಂಪು ಕೂಡುವದುಂಟು. ಯಾರೂ ನೋಡದಂತೆ ಅದರಲ್ಲಿ ಹಾರಿಬಿಟ್ಟು ಪ್ರಾಣಕಳಕೊಳ್ಳುವದಕ್ಕೆ ವಾಗ್ದೇವಿಯು ಖಂಡಿತವಾಗಿ ನಿಶ್ಚಯಿಸಿ ಒಳ್ಳೇ ಸಂದರ್ಭವನ್ನು ಕಾಯುತ್ತಾ ಇದ್ದಳು. ರಾತ್ರೆಕಾಲ ಅಲ್ಲಿಗೆ ಹೋಗಲಿಕ್ಕೆ ಹೊರಟರೆ ಪಂಡಿತನ ಮನೆಯಲ್ಲಿ ನಡಿಯುವ ಬಂದೋಬಸ್ತಿನ ದೆಸೆಯಿಂದ ಅನುಕೂಲವಾಗುವದಿಲ್ಲ. ಹಗಲು ಸಮಯ ಕೆರೆ ತೀರಗಳಲ್ಲಿ ಜನ ತಪ್ಪುವದಿಲ್ಲ. ಹೀಗಾಗಿ ಒಳ್ಳೆ, ಅನುಕೂಲ ವನ್ನು ಅವಳು ನೋಡುತ್ತಾ ಇದ್ದಳು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಯಾಣದ ಕೊನೆ
Next post ವ್ಯಾಕುಲತೆಯ ಜಪ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…