Home / ಕಥೆ / ಕಾದಂಬರಿ / ಸುಭದ್ರೆ – ೪

ಸುಭದ್ರೆ – ೪

ರಾಮರಾಯನು ರಾಮವುರದಲ್ಲಿ ಅಗ್ರಗಣ್ಯನಾದ ಮನುಷ್ಯ ; ದೊಡ್ಡ ಮನೆತನಕ್ವೆ ಸೇರಿದವನು. ತನ್ನ ಮಗಳನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಶೆ ಯಿದ್ದಿತು. ಶಂಕರರಾಯನಿಗೂ ರಾಮರಾಯನಿಗೂ ಪೂರ್ವದಿಂದ ಲೂ ಸ್ನೇಹ, ಅಲ್ಲದೆ ಸ್ವಲ್ಪ ಬಂಧುತ್ವವೂ ಇದ್ದಿತು. ಆದುದರಿಂದ ಕಮಲೆಯನ್ನು ಮಾಧವನಿಗೆ ತಂದುಕೊಳ್ಳಬೇಕೆಂದು ೩-೪ ವರ್ಷಗಳ ಹಿಂದೆಯೆ ಶಂಕರರಾಯನಿಗೆ ಕಾಗದ ಬರೆದಿರಲಾಗಿ ಆತನು, ನಮ್ಮ ಹುಡುಗನಿಗೆ ೨೦ ವರ್ಷ ತುಂಬಿದಲ್ಲದೆ. ಮದುವೆಮಾಡುವುದಿಲ್ಲ ವೆಂದು ಉತ್ತರಕೊಟ್ಟಿದ್ದನು. ಆಗ್ಗೆ ರಾಮರಾಯನು ಸುಮ್ಮನಿದ್ಧು ಬಿಟ್ಟನು. ಹುಡುಗಿಗೆ ೧೨ ವರ್ಷವಾಗಲು, ಇನ್ಸು ‘ನಿಲ್ಲಿಸುವುದ ಕ್ಕಾಗುವುದಿಲ್ಲ, ಈ ವರ್ಷ ಖಂಡಿತವಾಗಿಯೂ ವಿವಾಹವನ್ನು ನೆರ ವೇರಿಸಲೇಬೇಕು` ಎಂದು ತಿರಿಗಿ, ಬರೆದನು. ಶಂಕರರಾಯನಿಗೆ ಸಕಾ ಲವಾಗಿ, ಕಂಡುದರಿಂದಲೂ, ರಾಮರಾಯನಿಗಿಂತ ಯೋಗ್ಯರೂ, ಕುಲೀನರೂ ಸಿಕ್ಕುವುದು ಕಷ್ಟವಾಗಿದ್ದುದರಿಂದಲೂ – “ನಮ್ಮ ಹುಡುಗನು ರಾಮ ಪುರಕ್ವೆ ಬಂದಿದ್ದಾನೆ, ಅವನಿಗೆ ವಯಸ್ಸಾಗಿರು ವುದರಿಂದ ಕನ್ಯೆಯನ್ನೊವ ಭಾರವು ಅವನದಾಗಿದೆ, ಅವನೊ ಪ್ಪಿದರೆ ನನ್ನ ಅಡ್ಡಿಯೇನೂ ಇಲ್ಲ. ನಕ್ಷತ್ರಾನುಕೂಲವಾದರೆ ಸರಿ“. ಎಂದು ಪ್ರತ್ಯುತ್ತರವನ್ನು ಬರೆದನು. ಅದು ಮಾಧವನು ರಾಮ ಪು ರಕ್ಕೆ ಬಂದ ಮಾರನೆಯದಿನ ರಾಮರಾಯನ ಕೈಸೇರಿತು, ಆ˜ಕಾಗದ ವನ್ನು, ತೆಗೆದುಕೊಂಡು ರಾಮರಾಯನು ಮಾಧವನನ್ನು ನೋಡುವು ದಕ್ಕೋಸ್ಕರ ಗಂಗಾಬಾಯಿಯ ಮನೆಗೆ ಹೋದನು. . ಗಂಗಾಬಾ ಯಿಯು ಪಾಠಶಾಲೆಗೆ. ಹೋಗಿದ್ದಳು, ಮಾಧವನೊಬ್ಬನೇ ಮನೆಯ ಲ್ಲಿದ್ದನು. ಮಾಧವನಿಗೂ ರಾಮರಾಯನಿಗೂ ಕುಶಲಪ್ರಶ್ನೆಗಳು ನಡೆದ ಬಳಿಕ ರಾಮರಾಯನು, ಶಂಕರರಾಯನ ಕಾಗದವನ್ನು ತೆಗೆದು ಮಾಧವನ ಕೈಲಿಟ್ಟನು. ಅದನ್ನು ನೋಡಿದಕೂಡಲೆ ಮಾಧವನು “ಸ್ವಾಮೀ ! ನಮ್ಮ ತಂದೆಗಳ ಮಾತಿಗೆ ನಾನುಯಾವಾಗಲೂ ಪ್ರತಿ ಹೇಳುದುದಿಲ್ಲ. ಇದರಲ್ಲಿ ನನಗೆ ಅಭಿಪ್ರಾಯವು ಅನ್ಯಥಾ ಇದ್ದಾಗ್ಗೂ ಅವರ ಅಪ್ಷಣೆಯಾದರೆ ನನ್ನ ಯತ್ನವೇನಿದೆ” ಎಂದನು. ಅದಕ್ಕೆ ರಾಮರಾಯನು –“ಹಾಗಲ್ಲ, ನಮ್ಮ ಮನೆಗೆ ಬಂದು ಕನ್ಯೆಯನ್ನು ನೋಡಿಕೊಂಡು. ಹೋಗುವುದು ಈಗಿನ ಕಾಲದ ಪದ್ಬತಿ. ದಯ ವಿಟ್ಟು ಬಂದು ನೋಡಿಕೊಂಡು ಹೋಗಬೇಕು“ ಎಂದನು. ಮಾಧ ವನು ‘ಮಧ್ಯಾಹ್ನ ಒಂದು ತಮ್ಮ ದರ್ಶನ ತೆಗೆದು ಕೊಳ್ಳುತ್ತೇನೆ“` ಎಂದು ಹೇಳಿ ರಾಮರಾಯನನ್ನು ಕಳುಹಿಸಿಕೊಟ್ಟನು.

ಗಂಗಾಬಾಯಿ ಪಾಠಶಾಲೆಯಿಂದ ಬಂದಕೂಡಲೆ ಮಾಧ ವನ್ನು ಆಕೆಗೆ. ಈ ವೃತ್ತಾಂತವನ್ನು ತಿಳಿಸಿದನು. ಅವಳು –“ಅಪ್ಪಾ ಕಮಲೆಯು ಗರ್ವಿತಳು, ನಿನಗೆ ತಕ್ಕವಳಲ್ಲ, ನಿಮ್ಮ ತಂದೆಯು ರಾಮ ರಾಯನ ಭಾಗ್ಯಕ್ಕೆ ಬೆರಗಾಗಿ ಬಂಧುತ್ವ ಬಳೆಸಬೇಕೆಂದು ಇಷ್ಟ ಪಟ್ಟಿರಬಹುದು,, ಮಧ್ಯಾಹ್ನ ಹೋಗಿ ನೋಡಿಕೊಂಡ್ಲು. ಬಾ. ಮುಂದಿನ ಕೆಲಸ ನೋಡೋಣ” ಎಂದಳು.

ಮಧ್ಯಾಹ್ನ ರಾಮರಾಯನು ಬಂದು ಮಾಧವನನ್ನು ಮನೆಗೆ ಕರೆದುಕೊಂಡು ಹೋಗಿ ಉಪ್ಪರಿಗೆಯಮೇಲೆ “ಸೋಫಾ”ದ ಮೇಲೆ ಕುಳ್ಳಿರಿಸಿದನು. ಅನಂತರ ಹೆಂಡತಿಯನ್ನು ಕರೆದು “ನಿನ್ನ ಅಳಿಯನನ್ನು ನೋಡು ಬಾ” ಎಂದನು. ಆಕೆಯು ಎಷ್ಟಾವೃತ್ತಿ ನೋಡಿದರೂ ತೃಪ್ತಿಯಾಗದೆ ನೆರೆಹೊರೆಯವರನ್ನು ಕರೆದುಕೊಂಡು ಬಂದಳು. ಹಾಗೆಯೆ ಕಮಲೆಯನ್ನು ಮಾಧವನ ಬಳಿ ನಿಲ್ಲಿಸಿ ಅನಂ ತರ ಸೋಘಾದ ಮೇಲೆ ಕುಳ್ಳಿರಿಸಿದರು. ಮಾಧವನಿಗೆ, ಅವಳನ್ನು ನೋಡಿದೊಡನೆಯೆ ಜಿಗುಪ್ಸೆಯುಂಟಾಯಿತು. ಅವಳ ರೂಪಲಾವ ಣ್ಯವೆಲ್ಲವೂ ಉಡಿಗೆ, ತೊಡಿಗೆಗಳನ್ನು ಸೇರಿದ್ದಿತೇ ಹೊರತು ಅವಳಲ್ಲಿ ನೈಜವಾದ ಸೊಬಗಾವುದೂ ಕಂಡುಬರಲಿಲ್ಲ, ಅಲ್ಲದೆ ಮುಖದಲ್ಲಿ ಗರ್ವವು ಉಕ್ಕಿ ಬರುವಂತಿದ್ದಿತು. ಕೂಡಲೆ ಮಾಧವನಿಗೆ ಸುಭದ್ರೆಯ ಜ್ಞಾಪಕವು ಬಂದಿತು. ಆವಳಿಗೂ ಇವಳಿಗೂ ಇರುವ ತಾರತಮ್ಯ ವನ್ನು ಮನಸ್ಸಿನಲ್ಲೆ ಗಣಿಸುತ್ತಿದ್ದನು.

ನೆರಹೊರಿಯ ಹೆಂಗಸರಲ್ಲರೂ ಬಂದು ನೋಡಿ ವರಸಾಮ್ಯ ವನ್ನು ಬಹಳ ಶ್ಲಾಘನೆಮಾಡಿದರು. ಕಮಲೆಯ ತಾಯಿಯ ಸಂ ತೋ ಷವೆಷ್ಟೆಂದು ಹೇಳಬೇಕಾದುದೇ ಇಲ್ಲ. ಬಂದಿದ್ದವರೆಲ್ಲರಿಗೂ ಯಥೋಚಿತವಾಗಿ ಸತ್ಕಾರಮಾಡಿ ಕಳುಹಿಸಿದಳು.. ಮಾಧವನೂ ರಾಮರಾಯನ ಅಪ್ಪಣೆ ತೆಗೆದುಕೊಂಡು. ಹೊರಟುಹೋದನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...