ಪಾಪಿಯ ಪಾಡು – ೧೫

ಪಾಪಿಯ ಪಾಡು – ೧೫

ಜೀನ್ ವಾಲ್ಜೀನ ತಾನು ಸುರಕ್ಷಿತವಾಗಿಯೂ ಸುರಕ್ಷಿತವಾಗಿಯೂ ಸುಖ ವಾಗಿಯೂ ಇದ್ದ ಆ ಮಠವನ್ನೇತಕ್ಕೆ ಬಿಟ್ಟು ಬಂದನೆಂಬುದನ್ನು ತಿಳಿಯಲು ನಾವು ಕೆಲ ವರ್ಷಗಳ ಹಿಂದಣ ಕಥೆಯನ್ನು ತಿಳಿಯು ವ್ರದ ಅವಶ್ಯಕ. ಆರಂಭದಲ್ಲಿ ಇವನ, ಕೋಸೆಟ್ಟಳು ಆ ಮಠ ದಲ್ಲಿಯೇ ಸನ್ಯಾಸಿಯಾಗಿರಲು ಒಪ್ಪುವದಾದರೆ, ತಾನೋ ಅಲ್ಲಿಯೇ ಇದ್ದು ತನ್ನ ಜೀವಮಾನವನ್ನು ಕಳೆಯಬೇಕೆಂಬ ಉದ್ದೇಶದಿಂದಿದ್ದನು. ಆದರೆ ಪ್ರಾಪಂಚಿಕ ವಿಷಯಗಳನ್ನು ಪರಿಶೀಲಿಸಿ ನೋಡಿ ತನಗೆ ಇಷ್ಟವಾದ ಜೀವನ ಕ್ರಮವನ್ನು ಆರಿಸಿಕೊಳ್ಳಲು ಅವಳಿಗೆ ಅವಕಾಶ ಕೊಡದಿರುವುದು, ತಪ್ಪೆಂದು ಕ್ರಮ ಕ್ರಮವಾಗಿ ಅವನ ಗೋಚ ರಕ್ಕೆ ಬಂದಿತು, ಇ ದರಿಂದ ಅಲ್ಲಿಯ ಯೋಗಿನಿಯ ಅಪ್ಪಣೆ ಯನ್ನು ಪಡೆದು ಕೋಸೆಟ್ಟಳನ್ನು ಅಲ್ಲಿಂದ ಕರೆದುಕೊಂಡು ಹೊರಟು ಬಂದನು.

ಮಠಕ್ಕೆ ಬಿಟ್ಟ ಮೇಲೆ, ತನ್ನ ಚಿಕ್ಕ ಪೆಟ್ಟಿಗೆಯನ್ನು ಯಾರ ವಶಕ್ಕೂ ಕೊಡದೆ ತಾನೇ ಹೊತ್ತುಕೊಂಡು ಹೋಗುತ್ತಿದ್ದನು. ಅದರ ಬೀಗದ ಕೈಯ. .ಹ, ಯಾವಾಗಲೂ, ಅವನ ವಶದಲ್ಲಿಯೇ ಇರುತ್ತಿತ್ತು. ಇಲ್ಲಿಂದೀಚೆಗೆ, ಅವನ ಸ್ಮಳವನ್ನು ಬದಲಾಯಿಸಿ ದಾಗಲೆಲ್ಲಾ, ತಪ್ಪದೆ ತೆಗೆದುಕೊಂಡು ಹೋಗುತ್ತಿದ್ದ ಆಸ್ತಿ ಯಲಿ ಇದೇ ಮೊದಲನೆಯದಾಗಿತ್ತು. ಕೆಲವು ವೇಳೆ, ಇದೊಂ ದನ್ನೇ ತೆಗೆದುಕೊ೦ ಹೋಗುತ್ತಿದ್ದನು. ಇದು ವಿಚಿತ್ರವೆಂದು ಕೋಸೆಟ್ಟಳು ನಗುತ್ತಿದ್ದಲ್ಲದೆ, ಈ ಪೆಟ್ಟಿಗೆಗೆ ‘ ಅಗಲಲಾಗದ ಅತಿವಸ್ತು’ ಎಂದು ಹೆಸರಿಟ್ಟು, ‘ನನಗೆ ಅದನ್ನು ಕಂಡರೆ ಆಗದು,’ ಎನ್ನುತ್ತಿದ್ದಳು.

ಹೇಗಾದರೂ ಜೀನ್ ವಾ ನಸು, ಪುಬಲವಾದ ಭೀತಿ ವ್ಯಸನಗಳಿಲ್ಲದೆ, ಒಹಿರಂಗವಾಗಿ ನಗರದಲ್ಲಿ ಬರುತ್ತಿರಲಿಲ್ಲ.

ರೂ ಪ್ಲೂಮೆಟ್‌ ಬೀದಿಯಲ್ಲಿ ಮನೆಯನ್ನು ಗೊತ್ತುಮಾಡಿಕೊಂಡು ಅಲ್ಲಿಯೇ ಅಡಗಿಕೊಂಡಿದ್ದನು. ಇಲ್ಲಿಂದೀಚೆಗೆ ಇವನಿಗೆ ಅಲ್ಟಿಮಸ್ ಫಾಚೆಲ್ ವೆಂಟ್ ಎಲಬ ಹೆಸರು ಸ್ಥಿರ ವಾಯಿತು.

ಅವನು ಪ್ಯಾರಿಸ್ ನಗರದಲ್ಲಿ ಈಗ ಇನ್ನೂ ಎರಡು ಮನೆ ಗಳನ್ನು ಬಾಡಿಗೆಗೆ ತೆಗೆದುಕೊಂಡನು. ಒಂದೇ ಮನೆಯಲ್ಲಿ ಇರು ವುದಕ್ಕೆ ಪ್ರತಿಯಾಗಿ ತಾನು ಹೀಗೆ ಬೇರೆ ಬೇರೆ ಕಡೆಗಳಲ್ಲಿದ್ದರೆ, ತನ್ನ ಮೇಲೆ ಜನರ ಗಮನವೂ ಹೆಚ್ಚಾಗಿ ಬೀಳಲಾರದೆಂತಲೂ, ತನಗೇನಾದರೂ ಭೀತಿಯ ಮನಸ್ಸಿಗೆ ಸ್ವಲ್ಪ ತೋರಿದರೂ ತನ್ನ ವಾಸಸ್ಥಾನವನ್ನು ಬದಲಾಯಿಸಬಹುದೆಂತಲೂ, ಕಡೆಗೆ, ಆ ದಿನ ರಾತ್ರಿ ತಾನು ಜೇ ವರ್ಟನ ಕೈಗೆ ಸಿಕ್ಕಿದ್ದು, ಪರಮಾಶ್ಚರ್ಯ ರೀತಿ ಯಿಂದ ತಪ್ಪಿಸಿಕೊಂಡು ಓಡಿಬಂದಂತಹ ಕ್ಲಿಷ್ಟ ಸಂಧಿಗೆ ತಾನು ಮತ್ತೆ ಸಿಕ್ಕದಿರಬೇಕೆಂತಲೂ ಸಹ ಇವನು ಬೇರೆ ಎರಡು ಮನೆ ಗಳನ್ನು ಬಾಡಿಗೆಗೆ ತೆಗೆದುಕೊಂಡು ತನ್ನ ವಶದಲ್ಲಿಟ್ಟುಕೊಂಡನು. ಈ ಎರಡು ಮನೆಗಳೂ ಬಹಳ ಸಣ್ಣವು. ನೋಡುವುದಕ್ಕೆ ತೀರ ಬಡವರ ಮನೆಗಳಂತೆ ಕಾಣುತ್ತಿದ್ದುವು : ಮತ್ತು ಒಂದೊಂದಕ್ಕೂ ಬಹಳ ದೂರ ಅಂತರವಿತ್ತು. ಒಂದು, ರೂ ಡಿ ಎಲ್ ಔವೆಸ್ಟ್ ಬೀದಿಯಲ್ಲಿಯ ಮತ್ತೊಂದು ರೂ ಡಿ ಎಲ್ ‘ಹೋಂ ಆರಂ‌ ಬೀದಿ ಯಲ್ಲಿಯೂ ಇದ್ದುವು.

ಆಗಾಗ, ಒಂದು ಸಲ ರೂ ಡಿ ಎಲ್ ‘ಹೊ೦ ಆರಂ ಮನೆಗೂ ಒಂದು ಸಲ ರೂ ಡಿ ಎಲ್ ಔವೆ ಮನೆಗೂ ಅವನು ಹೋಗಿ ಅಲ್ಲಿ ಒಂದು ತಿಂಗಳು ಅಥವಾ ಆರು ವಾರಗಳನ್ನು ಕೋಸೆಟ್ಟ ಳೊಡನೆ ಕಳೆಯುತ್ತಿದ್ದು, ಸಾಮಾನು ಹೊರುನಃ ಸೇವಕರು ಇವನ ಆಜ್ಞೆಯನ್ನು ನಿರೀಕ್ಷಿಸಿಕೊಂಡೇ ಇರುತ್ತಿದ್ದರು. ಮತ್ತು, ಇವನು ಆ ಸುತ್ತಮುತ್ತಣ ಯಾವುದೋ ಗ್ರಾಮದ ಧನಿಕ ನೆಂತಲೂ ಪಟ್ಟಣದಲ್ಲಿ ಏನೋ ಕಾರ್ಯಕ್ಕಾಗಿ ಬರುತ್ತಿರುವ ನೆಂತಲೂ ಜನಗಳಲ್ಲಿ ಅಭಿಪ್ರಾಯವುಂಟಾಗುವಂತೆ ಮಾಡಿ ಕೊಂಡನು. ಈ ಪುಣ್ಯಶೀಲನಾದ ಪ್ರಾಣಿಯು, ಪೊಲೀಸಿನವರಿಂದ ತಪ್ಪಿಸಿಕೊಳ್ಳಲು ಪ್ಯಾರಿಸ್ ನಗರದಲ್ಲಿ ಮರು ಸೃರ ನಿವಾಸ ಗಳನ್ನು ಏರ್ಪಡಿಸಿಕೊಳ್ಳುವುದು ಆವಶ್ಯಕವಾಯಿತು. ಈ ರೂ ಪ್ಲೂಮೆಟ್ ಬೀದಿಯಲ್ಲಿಯ ಮನೆಯಿಂದಲೇ ಜೀನ್ ವಾಲ್ಜೀನನೂ ಕೋಸೆಟ್ಟಳೂ, ಲಕ್ಸಂಬರ್ಗಿನ ಉದ್ಯಾನಕ್ಕೆ ನಿತ್ಯವೂ ಸಂಚಾರ ಹೋಗುತ್ತಿದ್ದುದು, ಇವರು ಅಲ್ಲಿ ನೋಡಿದ ತರುಣನು ಕೋಸೆಟ್ಟಳನ್ನು ತನ್ನ ಅನುರಾಗ ಪೂರ್ವಕ ದೃಷ್ಟಿಗಳಿಂದ ನೋಡುತಿದು ದನು ಇವನು ಮೊದಲು ಮೊದಲು ಗಮನಿಸಲಿಲ್ಲ. ಇವನ ಗಮನಕ್ಕೆ ಅದು ಬಂದ ಮೇಲೆ, ಅದರಲ್ಲಿಯ ಆ ತರುಣನು ತಮ್ಮನ್ನೇ ಅನುಸರಿಸಿ ಮನೆಗೆ ಬರುತ್ತಿದ್ದುದನ್ನು ನೋಡಿದಾಗ, ತಾನು ಕೋಸೆಟ್ಟಳನ್ನು ಅಗಲಬೇಕಾದೀತೆಂಬ ಭೀತಿಯು ಇವನಿಗೆ ಪ್ರಬಲವಾಯಿತು. ಇದರಿಂದ ಅವನು ರೂ ಪ್ಲೂಮೆಟ್ ಬೀದಿಯಲ್ಲಿದ್ದ ತನ್ನ ಮನೆಯನ್ನು ಬಿಟ್ಟು ಹೊರಟನು.

ಕೋಸಟ್ಟಳು ಬೇಡವೆನ್ನಲಿಲ್ಲ ; ಮಾತೇ ಆಡಲಿಲ್ಲ ; ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ತಿಳಿ ಯಲು ಅಪೇಕ್ಷಿಸಲೂ ಇಲ್ಲ. ತನ್ನ ಗುಟ್ಟು ರಟ್ಟಾದೀತೆಂಬ ಭೀತಿ ತೋರಿ, ಅದಕ್ಕೆ ಅವಕಾಶಕೊಡದಿರಬೇಕೆಂಬ ಎಚ್ಚರಿಕೆಯು ಅವಳಿಗಾಗಲೇ ಹುಟ್ಟಿತ್ತು. ಜೀನ್ ವಾಲ್ಜೀನನು ಇಂತಹ ಮೋಹ ಚಿಂತೆಯ ವಂಚನೆಯನ್ನು ಕಂಡವನೇ ಅಲ್ಲ. ಮನೋಹರವಾದ ಚಿಂತೆಯೆಂದರೆ ಇದೊಂದೇ. ಈ ಒಂದು ಚಿಂತೆಯನ್ನು ಮಾತ್ರವೇ ಅವನು ಅರಿಯನು, ಆದಕಾರಣ, ಕೋಸೆಟ್ಟಳು ಅಷ್ಟು ಪ್ರಬಲ ಮೌನ ವಹಿಸಿದುದರ ಮುಖ್ಯ ಭಾವವೇನೆಂಬುದು ಅವನಿಗೆ ಗೊತ್ತಾಗಲಿಲ್ಲ. ಅವಳು ವ್ಯಸನಾಕಾಂತಳಾಗಿ ಮಂಕಾಗಿದ್ದ ಳೆಂಬುದನ್ನು ಮಾತ್ರ ಅವನು ಗಮನಿಸಿದ್ದನು. ಈ ಸಂದರ್ಭ ದಲ್ಲಿ ಇಬ್ಬರಲ್ಲಿ ಒಬ್ಬರಿಗಾದರೂ ಸಮಯೋಚಿತವಾದ ಕರ್ತವ್ಯ ವೇನೆಂದು ತಿಳಿಯುವಂತಹ ಅನುಭವವಿರಲಿಲ್ಲ.

ಅನನ್ಯಭಾವದಿಂದ ತಮ್ಮ ತಮ್ಮಲ್ಲಿ ಮನಮುಟ್ಟುವ ಪ್ರೀತಿಯನ್ನು ವಿಸ್ತರಿಸಿ, ಪರಸ್ಪರ ಹಿತಕ್ಕಾಗಿಯೇ ಇಷ್ಟು ದಿನಗಳು ಒಟ್ಟಿಗೆ ಜೊತೆಯಲ್ಲಿದ್ದ ಇವರು, ಒಬ್ಬರಿಗೊಬ್ಬರು ಶತ್ರುಗ ಳಾಗಿರುವಂತೆ ಅವರಿಗೇ ಕಂಡಿತು; ಆದರೂ ಯಾರೊಬ್ಬರೂ ಅದನ್ನು ಉಚ್ಛರಿಸಲೂ ಇಲ್ಲ; ಕಠಿಣ ಮನೋಭಾವವನ್ನೂ ಹೊಂದಿರಲಿಲ್ಲ; ಮುಗುಳ್ಳಗೆಯಿಂದ ಮಾತ್ರ ಸುಮ್ಮನಿದ್ದರು.

ಹೀಗೆ ಇವರ ಜೀವಿತವು ಕುವ ಕ್ರಮವಾಗಿ ದುಃಖಮಯ ವಾಗುತ್ತ ಬಂತು. ಇವರಿಗೆ ಒಂದು ಚಾಪಲ್ಯವು ಮಾತ್ರವಿತ್ತು. ಇದು, ಮೊದಲು ಇವರಿಗೆ ಒಂದು ವಿನೋದವಾಗಿತ್ತು. ಅದೇ ನೆಂದರೆ; ಹಸಿದಿದ್ದವರಿಗೆ ರೊಟ್ಟಿಯನ್ನೂ, ಚಳಿಯಲ್ಲಿ ನಡುಗು ವವರಿಗೆ ಬಟ್ಟೆಗಳನ್ನೂ, ತೆಗೆದುಕೊಂಡು ಹೋಗಿ ಕೊಡುವುದು. ಈ ಕಾರ್ಯದಲ್ಲಿ ಕೋಸೆಟ್ಟಳು ಜೀನ್ ವಾನನ ಜೊತೆಯಲ್ಲಿಯೇ ಅನೇಕಾವೃತ್ತಿ ಬಡವರಿದ್ದೆಡೆಗಳಿಗೆ ಹೋಗಿ ಬರುತ್ತಿದ್ದಳು. ಆ ಸಂದರ್ಭದಲ್ಲಿ ಇವರಿಬ್ಬರಿಗೂ ತಮ್ಮ ಪೂರ್ವದ ಮನಸ್ಸಂತೋಷವು ಸ್ವಲ್ಪ ಮಟ್ಟಿಗೆ ಉಳಿದಿತ್ತು. ಕೆಲವು ವೇಳೆ ಅವರು ಅನೇಕ ಮಂದಿಯ ದುಃಖಗಳನ್ನು ನಿವಾರಿಸಿ, ಅನೇಕ ಮಕ್ಕಳಿಗೆ ಒಟ್ಟಿಗಳನ್ನು ಕೊಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಕೋಸೆಟ್ಟಳು ಸಾಯಂಕಾಲ ದಲ್ಲಿ ಸ್ವಲ್ಪ ಸಂತೋಷವಾಗಿರುತ್ತಿದ್ದಳು. ಈ ಕಾಲದಲ್ಲಿಯೇ ಅವರು ಜಾಂಡ್ರೆಟ್ಟನ ಗವಿಯಂತಿದ್ದ ಮನೆಗೆ ಹೋದುದು.

ಅಲ್ಲಿಗೆ ಹೋಗಿಒಂದ ಮಾರನೆಯ ದಿನ, ಪ್ರಾತಃಕಾಲದಲ್ಲಿ, ಜೀನ್ ವಾಲ್ಜೀನನು ಸ್ವಾಭಾವಿಕವಾದ ಶಾಂತಭಾವದಿಂದ ಮನೆ ಯಲ್ಲಿ ಕಳೆದನು. ಆದರೆ ಅವನ ಎಡದೋಳಿನ ಮೇಲೆ ಒಂದು ದೊಡ್ಡ ಗಾಯವಾಗಿ, ಅದು ಬಹಳ ಉರಿಯುತ್ತಲೂ ನಂಜೇರಿದ ಸುಟ್ಟ ಗಾಯದಂತೆಯೂ ಇತ್ತು. ಇದರ ಕಾರಣವನ್ನು ಇವನು ಯಾವದೋ ಬೇರೆ ರೀತಿಯಿಂದ ವಿವರಿಸಿ ಹೇಳಿದನು. ಈ ಗಾಯದ ತಾಪದಿಂದ ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳವರೆಗೆ ಇವನು ಜ್ವರ ಬಂದು ಮನೆಯನ್ನು ಬಿಟ್ಟು ಹೊರಡಲವಕಾಶವಿಲ್ಲದೆ ಬಿದ್ದಿ ದ್ದನು. ವೈದ್ಯನಿಗೆ ಕಾಣಿಸಿಕೊಳ್ಳಲು ಇವನು ಇಷ್ಟಪಡಲಿಲ್ಲ. ಕೋಸೆಟ್ಟಳು ಬಲಾತ್ಕರಿಸಿದಾಗ, ‘ ನಾಯಿಗಳಿಗೆ ವೈದ್ಯನಾಡು ವರನ್ನು ಕರೆ,” ಎನ್ನುತ್ತಿದ್ದನು.

ದೇವಯೋಗ್ಯವಾದ ದಯೆಯಿಂದಲೂ ಪರಮ ಸಂತೋಷ ದಿಂದಲೂ ಕೋಸೆಟ್ಟಳು ಅವನಿಗೆ ಉಪಕಾರಿಣಿಯಾಗಿ ನಿಂತು, ಹಗಲೂ ಇರುಳೂ ಅವನ ಗಾಯವನ್ನು ತೊಳೆದು, ಔಷಧ ಹಾಕಿ ಕಟ್ಟುತ್ತಿದ್ದಳು. ಈಗ ಜೀನ್ ವಾಲ್ಜೀನನಿಗೆ ತನ್ನ ಪೂರ್ವದ ಸುಖವೇ ಮರಳಿ ಬಂದಂತೆಯ, ತನ್ನ ಭೀತಿಯ, ಕಾತರ ದುಃಖ ಗಳೂ ನಿವಾರಣೆಯಾದಂತೆಯೂ ತೋರಿತು. ಅವನು ಕೋಸೆಟ್ಟ ಳನ್ನು ನೋಡಿ, ‘ ಆಹಾ! ಎಂತಹ ಒಳ್ಳೆಯ ಗಾಯ ! ಎಷ್ಟ ದಯಮಯವಾದ ಗಾಯ !’ ಎನ್ನುತ್ತಿದ್ದನು.

ತನ್ನ ತಂದೆಯು ಅಸ್ವಸ್ಥನಾಗಿದ್ದುದರಿಂದ, ಕೋಸೆಟ್ಟಳು ಬೇಸಗೆಯಲ್ಲಿ ತಾನು ವಾಸಿಸುತ್ತಿದ್ದ ಮನೆಯನ್ನು ತ್ಯಜಿಸಿ, ಚಿಕ್ಕದಾದ ಈ ಮನೆಯ ಹಿತ್ತಲೂ ಇವೇ ತನಗೆ ಹಿತವೆಂದು ತಿಳಿದುಕೊಂಡಳು. ಸಾಮಾನ್ಯವಾಗಿ ತನ್ನ ಕಾಲವೆಲ್ಲವನ್ನೂ ಅವಳ ಜೀನ್ ವಾನನ ಬಳಿಯಲ್ಲಿಯೇ ಕಳೆಯುತ್ತ, ಅವನಿಗೆ ಬೇಕಾದ ಪುಸ್ತಕಗಳನ್ನು ಓದಿ ಹೇಳುತ್ತಿದ್ದಳು. ಒಟ್ಟಿನಲ್ಲಿ ಪ್ರಯಾಣಗಳ ಸಂಬಂಧವಾದ ಪುಸ್ತಕಗಳೇ ಹೆಚ್ಚು. ಜೀನ್ ವಾಲ್ಜೀನನಿಗೆ ಇದೊಂದು ಪ್ರತ್ಯೇಕ ಜನ್ಮವೇ ಆದಂತೆ ಇತ್ತು. ಅವನ ಸಂತೋಷವು ಅನಿರ್ವಚನೀಯವಾದ ಒಂದು ಅದ್ಭುತ ಕಳೆಯಿಂದ ಕೂಡಿತ್ತು. ಲಕ್ಸಂಬರ್ಗ್ ಕಡೆಯ ವಿಚಾರವೂ, ಆ ಅಪರಿಚಿತನಾದ ತರುಣ ಸಂಚಾರಿಯ ವಿಷಯವೂ ಕೋಸೆಟ್ಟಳ ಮನಸ್ಸಿನ ದುಗುಡವೂ, ಈ ಮೇಘಾವರಣಗಳೆಲ್ಲವೂ ಅವನ ಆತ್ಮ ಸಂತೋಷದ ಮುಂದೆ ಮಾಯವಾದುವು. ಈಗ ಅವನು ತನ್ನಲ್ಲಿ ತಾನು, ‘ ನಾನು ಅವೆಲ್ಲವನ್ನೂ ಕುರಿತು ಚಿಂತಿಸುತ್ತಿದ್ದೆನಲ್ಲಾ, ನಾನೆಂತಹ ಹುಚ್ಚು ಮುದುಕ !’ ಎಂದುಕೊಂಡನು.

ವಸಂತ ಕಾಲವು ಬಂತು. ಈ ಸಮಯದಲ್ಲಿ ಉಪವನವು ಆಶ್ಚರ್ಯಕರವಾದ ಸೊಬಗಿನಿಂದ ಕಂಗೊಳಿಸುತ್ತಿತ್ತು. ಜೀನ್ ವಾಲ್ಜೀನನು ಕೋಸೆಟ್ಟಳನ್ನು ನೋಡಿ, “ನೀನು ಅಲ್ಲಿಗೆ ಹೋಗು ವುದೇ ಇಲ್ಲವಲ್ಲಾ ! ನೀನು ಆ ಉಪವನದಲ್ಲಿ ಸಂಚರಿಸಿದರೆ ನನ ಗೆಷ್ಟೋ ಆನಂದವಾಗುವುದು,’ ಎನ್ನಲು, ಕೋಸೆಟ್ಟಳು ‘ ನಿನ್ನ ಇಷ್ಟದಂತೆ ಆಗಲಿ, ಅಪ್ಪಾ ! ” ಎಂದಳು.

ತನ್ನ ತಂದೆಯ ಮಾತನ್ನು ನಡೆಸುವುದಕ್ಕಾಗಿ, ಅವಳು ಉಪವನದಲ್ಲಿ ಸಂಚಾರ ಹೋಗುವುದಕ್ಕೆ ಆರಂಭಿಸಿದಳು, ಅನೇಕಾ ವೃತ್ತಿ ಒಂಟಿಯಾಗಿಯೇ ಹೋಗುತ್ತಿದ್ದಳು. ಏತಕ್ಕೆಂದರೆ, ಹಿಂದೆಯೇ ಸೂಚಿಸಿದಂತೆ, ತನ್ನನ್ನು ಹೆಬ್ಬಾಗಿಲಿನಿಂದ ಯಾರಾದರೂ ನೋಡಿಯಾರೆಂಬ ಭೀತಿಯಿಂದ ಜೀನ್ ವಾಲ್ಜೀನನು ಅಲ್ಲಿಗೆ ಹೋಗುತ್ತಲೇ ಇರಲಿಲ್ಲ.

ಇದೇ ಏಪ್ರಿಲ್ ತಿಂಗಳಲ್ಲಿ ಒಂದು ದಿನ, ಸಂಧ್ಯಾಕಾಲದಲ್ಲಿ, ಜೇನ್ ವಾಲ್ಜೀನನು ಎಲ್ಲಿಯೋ ಹೊರಗೆ ಹೊರಟು ಹೋಗಿದ್ದನು. ಕೋಸೆಟ್ಟಳು ಸೂರ್ಯನು ಮುಳುಗಿದ ಮೇಲೆ ಉಪವನಕ್ಕೆ ಹೋದಳು. ಗಿಡಗಳ ಕೊಂಬೆಗಳು ಬಹಳ ತಗ್ಗಾಗಿ ಬೆಳೆದಿದ್ದುದ ರಿಂದ ಅವಳು ಅವುಗಳನ್ನು ಆಗಾಗ ತನ್ನ ಕೈಗಳಿಂದ ಓರೆಯಾಗಿ ನೂಕುತ್ತ ಆ ಕೊಂಬೆಗಳ ಕೆಳಗಡೆಯಲ್ಲಿ ಸಂಚರಿಸುತ್ತಿದ್ದಳು. ಅನಂತರ ಕುಳಿತುಕೊಳ್ಳಲು ಮಾಡಿರುವ ಪೀಠಗಳಿರುವ ಸ್ಥಳಕ್ಕೆ ಬಂದು ಒಂದು ಪೀಠದ ಮೇಲೆ ಕುಳಿತುಕೊಂಡಳು. ಅಕಸ್ಮಿಕವಾಗಿ ತನ್ನ ಹಿಂದೆ ಯಾರೋ ನಿಂತಿರುವಂತೆ ಅವಳಿಗೆ ತೋರಿತು. ತಟ್ಟನೆ ಹಿಂದಿರುಗಿ ಅವಳು ಮೇಲಕ್ಕೆ ಎದ್ದಳು. ಅವನೇ ! ತಲೆಗೆ ಟೋಪಿಯು ಇರಲಿಲ್ಲ. ಕಳಾಹೀನನಾಗಿಯ ಕೃಶನಾಗಿಯ ಇದ್ದನು.

ಕೋಸೆಟ್ಟಳು ಇನ್ನೇನು ಮರ್ಧೆ ಬೀಳುವಷ್ಟರಲ್ಲಿದ್ದಳು. ಕೂಗಿಕೊಳ್ಳಲಿಲ್ಲ, ಅನಂತರ ಅವಳಿಗೆ ಅವನ ಧ್ವನಿಯು ಕೇಳಿಸಿತು. ಆ ಧ್ವನಿಯನ್ನು ಅವಳು ಹಿಂದೆ ಎಂದೂ ಕೇಳಿರಲಿಲ್ಲ. ಎಲೆಗಳ ಮೊರಮೊರ ಶಬ್ದದಲ್ಲಿ, ‘ ನನ್ನನ್ನು ಕ್ಷಮಿಸು ; ನಾನು ಬಂದಿರು ವೆನು, ನನ್ನ ಹೃದಯವು ಸಿಡಿದು ಒಡೆಯುತ್ತಿರುವುದು, ಈ ಸ್ಥಿತಿಯಲ್ಲಿ ನಾನು ಜೀವಿಸಿರಲಾರದೆ ಇಲ್ಲಿಗೆ ಬಂದೆನು. ನೀನು ನನ್ನ ಗುರುತನ್ನಾದರೂ ಹಿಡಿಯುವೆಯಾ ? ನನ್ನನ್ನು ನೋಡಿ ಹೆದರಬೇಡ, ನೀನಿರುವ ಮನೆಯ ಕಿಟಿಕಿಯಲ್ಲಿ ಇಣುಕಿ, ನಿನ್ನನ್ನು ಹತ್ತಿರದಲ್ಲಿ ನೋಡಬೇಕೆಂಬ ಆಶೆಯಿಂದ ಹೀಗೆ ರಾತ್ರಿಯಲ್ಲಿ ನಾನು ಇಲ್ಲಿಗೆ ಬಂದೆನು, ನೋಡು, ನೀನೇ ನನ್ನ ಭಾಗದ ಆಪ್ಸರೋಮಣಿಯು ; ನಾನು ಆಗಾಗ ಬರಲು ಅವಕಾಶ ಕೊಡು. ನಿನ್ನನ್ನು ಬಿಟ್ಟು ನಾನು ಜೀವಿಸಿಗಲಾರೆ. ನನ್ನ ಪ್ರೇಮವು ನಿನ್ನ ಮನಮುಟ್ಟಿದರೆ ಸಾಕು. ನಾನು ನಿನ್ನೊಡನೆ ಮಾತನಾಡುತ್ತಿರು ವೆನು ; ಏನನ್ನು ಹೇಳುತ್ತಿರುವೆನೆಂಬುದು ನನಗೇ ತಿಳಿಯದು ; ನನ್ನನ್ನು ಮನ್ನಿ ಸು. ಒಂದು ವೇಳೆ ಇದರಿಂದ ನಿನಗೆ ಅಸಹ್ಯವಾಗಿ ಕೋಪ ಬರುವುದೋ ಏನೋ ! ನಿಜವಾಗಿಯೂ ನಾನು ನಿನಗೆ ಕೋಪ ಬರುವಂತೆ ಮಾಡಿರುವೆನೇ ? ‘ ಎಂದು ಮೆಲ್ಲನೆ ಅವನು ಮಾತನಾಡಿದುದು ಕೇಳಿಸಿತು.

” ಅಯ್ಯೋ ! ” ಎಂದು ಹೇಳಿ, ಅವಳು ತನ್ನ ಪೀಠದ ಮೇಲೆ ಕುಸಿದು ಬಿದ್ದು, ಮರಣಾವಸ್ಥೆಯಲ್ಲಿದ್ದಂತೆ ಕಂಡಳು.

ಅವನೂ ಆ ಪೀಠದ ಮೇಲೆ, ಅವಳ ಪಕ್ಕದಲ್ಲಿಯೇ ಬಿಟ್ಟು ಬಿಟ್ಟನು. ಮುಂದೆ ಮಾತೆ ನಿಂತಿತು. ಗಗನದಲ್ಲಿ ನಕ್ಷತ್ರಗಳು ಒಂದೊಂದಾಗಿ ಥಳಗುಟ್ಟಲು ಆರಂಭಿಸಿದ್ದುವು. ಅವರಿಬ್ಬರ ತುಟಿ ಗಳೂ ಪರಸ್ಪರ ಸಂಧಿಸಿದುವಲ್ಲಾ! ಅದು ಹೇಗೆ ? ಹಕ್ಕಿಯು ಹಾಡುವುದಲ್ಲಾ ! ಅದು ಹೇಗೆ ? ಮಂಜು ಕರಗುವ್ರದಲ್ಲಾ! ಅದು ಹೇಗೆ ? ಗುಲಾಬಿ ಹೂವು ಅರಳುವುದಲ್ಲಾ! ಅದು ಹೇಗೆ ? ಮೇ ತಿಂಗಳಲ್ಲಿ ಲತೆಗಳು ಪುಷ್ಟಿತವಾಗುವುವಲ್ಲಾ ! ಉಷಃಕಾಲವು, ಗುಡ್ಡಗಳ ಮೇಲೆ ಅದಿರುತ್ತಿರುವಂತೆ ಕಾಣುವ ಶಿಖರದ ಮೇಲೆ ಕರಿಯ ಬಣ್ಣದ ವೃಕ್ಷಗಳ ಹಿಂದೆ ಶುಭವಾದ ಕಾಂತಿಯನ್ನು ಪಸರಿಸುವುದಲ್ಲಾ! ಅದು ಹೇಗೆ? ಇದೂಹಾಗೆಯೇ ?

ಒಂದೇ ಒಂದು ಮುತ್ತು, ಅಷ್ಟೆ !

ಅವರಿಬ್ಬರಿಗೂ ನಡುಕಹತ್ತಿತು. ಇಬ್ಬರೂ ಕತ್ತಲೆಯಲ್ಲಿ ಹೊಳೆಯುವ ಕಣ್ಣುಗಳಿಂದ ಪರಸ್ಪರ ನೋಡಿದರು.

ಇನೂ, ರಾತ್ರಿಯ ಮೊದಲನೆಯ ಯಾಮವೆಂತಲಾಗಲಿ, ತಣ್ಣಗಿರುವ ಬಂಡೆಯೆಂಬುದಾಗಲಿ, ತೇವವಾದ ನೆಲವೆಂದಾಗಲಿ, ನೆನೆದ ಹುಲ್ಲೆಂದಾಗಲಿ, ಅವರ ಗೋಚರಕ್ಕೆ ಬರಲಿಲ್ಲ. ಅವ ರಿಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಅವರ ಹೃದಯ ದಲ್ಲಿ ವಿಧವಿಧಾಲೋಚನೆಗಳು ತುಂಬಿ ತುಳುಕುತ್ತಿದ್ದುವು. ಅವರು ಒಬ್ಬರೊಬ್ಬರ ಕೈಗಳನ್ನು ಹಿಡಿದಿದ್ದರೆಂಬುದು ಅವರಿಗೆ ತಿಳಿಯದು.

ಕ್ರಮಕ್ರಮವಾಗಿ ಅವರು ಮಾತನಾಡಲಾರಂಭಿಸಿದರು. ಮಿತಿಮೀರಿದ ಆನಂದ ಉಕ್ಕಿ, ಮಾತನಾಡಿ ಕಡೆಗೆ ನಿಶ್ಯಬ್ದ ವಾಗಿ ನಿಂತರು. ಇದೇ ಪರಿಪೂರ್ಣಾನಂದ ಎರಡು ಹೃದಯಗಳೂ ಕರಗಿ ದ್ರವವಾಗಿ ಒಂದರೊಳಗೊಂದು ಮಿಳಿತವಾದುವು. ಕಡೆಗೆ, ಒಂದು ಗಂಟೆಯ ಕಡೆಯಲ್ಲಿ ಅವನ ಆತ್ಮವು ಅವಳಲ್ಲಿಯೋ, ಅವಳ ಆತ್ಮವು ಅವನಲ್ಲಿ ನೆಲೆಸಿದ್ದಿತು. ಅವರು ಮತ್ತೆ ಮತ್ತೆ ಒಬ್ಬರನೊಬ್ಬರು ನೋಡಿ, ಆನಂದದಿಂದ ಸಂವಶರಾದರು. ಒಬ್ಬರನ್ನೊಬ್ಬರು ತಮ್ಮ ಮೋಹ ತೇಜಸ್ಸಿನಿಂದ ಕಣ್ಣು ಮುಚ್ಚು ವಂತೆ ಮಾಡಿದರು.

ಅಲ್ಲಿಂದ ಮುಂದೆ, ಪ್ರತಿ ದಿನ ರಾತ್ರಿಯೂ ಕೋಸೆಟ್ಟಳು ಉಪವನದ ಸಂಚಾರಕ್ಕೆ ಬರುತ್ತಿದಳು. ಪ್ರತಿ ರಾತ್ರಿಯೂ ಮೇಯಸ್ಸನೂ ಅಲ್ಲಿ ಅವಳನ್ನು ಕಾಣುತ್ತಿದ್ದನು. ಇವರ ಪರಸ್ಪರ ಭೇಟಿಯ ವಿಷಯವಾಗಿ ಜೀನ್‌ ವನಸಿಗೆ ಮಾತ್ರ ಏನೊಂದೂ ಗೊತ್ತೇ ಇಲ್ಲ.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾತರ
Next post ಕಂಡೀ ಕೋಲು (೩) (ಇಂದಿನ ಪುರವದಲ್ಲಿ)

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys