ವಿಧುರ ಮಂಡಲ ಮತ್ತು ಅದರ ಅವಶ್ಯಕತೆಯು

ವಿಧುರ ಮಂಡಲ ಮತ್ತು ಅದರ ಅವಶ್ಯಕತೆಯು

ಕೇವಲ ನೈತಿಕ ಅಥವಾ ಆರ್ಥಿಕ ದೃಷ್ಟಿಯನ್ನಿಟ್ಟು ಯಾವದೊಂದು ರಾಷ್ಟ್ರವು ಅಥವಾ ಸಮಾಜವು ಉನ್ನತಿ ಹೊಂದಿರುತ್ತದೆಂದು ಹೇಳುವದು ಸಮಂಜಸವಾಗಲಾರದು. ಸಮಾಜದ ಅಥವಾ ರಾಷ್ಟ್ರದ ಸ್ವಘಟಕಾವಯವಗಳು ಸುಸಂಘಟಿತವಿದ್ದರೆ ಮಾತ್ರ, ಅದಕ್ಕೆ ಉಚ್ಚರಾಷ್ಟ್ರ ಅಥವಾ ಸಮಾಜವೆಂದು ಕರೆಯಬಹುದು. ಹಿಂದೀ ಸಮಾಜದ ಸರ್ವವಿಧದ ಬೆಳವಣಿಗೆ ಯಾಗಬೇಕೆಂದು ಪ್ರಯತ್ನ ನಡೆದಾಗ ಅದರ ಅಂಗಭೂತವಾದ ವಿಧುರ ಸಮಾಜವು ದಿನೇ ದಿನೇ ಬೆಳೆಯಹತ್ತಿದಾಗ್ಯೂ ಅದು ಸುಸಂಘಟತವಿಲ್ಲದೆ ವಿಸ್ಖಲಿತವಾಗಿರುವದು ಹಾನಿಕಾರಕವಿರುತ್ತದೆ. ವಿಧುರ ಸಮಾಜದ ಸ್ಥಿತಿಯು ದಿನದಿನಕ್ಕೆ ಸುಧಾರಿಸುವ ಕುರಿತು ಒಂದು ಮಂಡಳ ಸ್ಥಾಪಿಸುವದು ಎಷ್ಟು ಅವಶ್ಯವಿರುತ್ತದೆಂಬುದು ಮೇಲಿನ ವಿವೇಚನೆಯ ಮೇಲಿಂದ ಸ್ಟುಟವಾಗಿ ಕಂಡು ಬರುವದು. ಇಂಥ ಮಂಡಳದ ಇಷ್ಟು ಅವಶ್ಯಕತೆಯಿದ್ದರೂ ಯಾವ ಪ್ರಾಂತದಲ್ಲಿಯೂ ಈ ಮಂಡಳವು ಸ್ಥಾಪಿತವಾದಂತೆ ತೋರುವುದಿಲ್ಲ. ಇದರ ಮುಖ್ಯ ಕಾರಣವೇನೆಂದರೆ ಜನರ ಔದಾಸಿನ್ಯವು. ನಮ್ಮ ಕರ್ನಾಟಕದ ಕಡೆಗೆ ನೋಡಿರಿ. ಡೇ. ಗಂಗಾಧರರಾವ ದೇಶಪಾಂಡೆ ಕರ್ನಾಡ ಸದಾಶಿವರಾಯರಂಥ ಹಗಲಿರುಳು ದೇಶದ ಸಲುವಾಗಿ ಕುದಿಯುವ ವಿಧುರಾಗ್ರಣಿಗಳು ನಮ್ಮ ಪ್ರಾಂತದಲ್ಲಿದ್ದರೂ ಒಂದು ಸಣ್ಣ ವಿಧುರ ಮಂಡಳವನ್ನು ಸ್ಥಾಪಿಸಬೇಕನ್ನುವದು ಅವರ ಧ್ಯಾನದಲ್ಲಿಲ್ಲದ್ದು ನಮ್ಮ ಸಮಾಜಕ್ಕಿಂತಲೂ ನಮ್ಮ ಪ್ರಾಂತದ ದುರ್ದೈವವೇ ಸರಿ. “ಎಂದೂ ಇಲ್ಲದ್ದಕ್ಕಿಂತಲೂ ತಡವಾದರೂ ಲೇಸು” ಏಂಬ ಇಂಗ್ಲೀಷ ನಾಣ್ಣುಡಿಯಂತೆ ಈಗಾದರೂ ಒಂದು ವಿಧುರ ಸಂಸ್ಥೆ ಸ್ಥಾಪಿಸಿ ವಿಧುರರ ಉದ್ಧಾರ ಮಾಡುವರೆಂಬ ಆಶೆಯಿಂದ ಕೆಲವು ಸೂಚನೆಗಳನ್ನು ಮಹಾಜನರ ಮುಂದೆ ಇಡುತ್ತೇನೆ.

ವಿಧುರ ಮಂಡಳದ ಉದ್ದೇಶವೇನು? ಎಂದು ಕೆಲವರು ಶಂಕಿಸಬಹುದು. ಅನಾಧ ಅಂದರೆ ಅಪತ್ನೀಕ ವಿಧುರರ ಸಂಘಟನೆ ಮಾಡಿ ಅವರ ಸಲುವಾಗಿ ಕುಮಾರಿಯರನ್ನು ಅಧವಾ ವಿವಾಹ ಮಾಡಿಕೊಳ್ಳುವ ಇತರ ಸ್ತೀಯರ ಶೋಧ ಮಾಡಿ ವಿಧುರರನ್ನು ಸನಾಥ ಇಲ್ಲವ ಸಪತ್ನೀಕ ಅಂದರೆ ಸಧುರರನ್ನಾಗಿ ಮಾಡುವದು ಈ ಮಂಡಲದ ಧ್ಯೇಯವಿರಬೇಕೆಂದು ಕೆಲವರು ಒಮ್ಮೆಲೇ ಭಾವಿಸಬಹುದು. ಹಾಗೆ ಮಾಡುವದಿಂದರೆ ತಮ್ಮ ಕಾಲುಗಳ ಮೇಲೆ ತಾವೇ ಕಲ್ಲು ಹಾಕಿಕೊಂಡಂತಾಗುವದು. ಇದು ಆತ್ಮಘಾತವೇ ಸರಿ. ಅನೇಕ ಧರ್ಮಗುರುಗಳು ತಮ್ಮ ಶಿಷ್ಯವೃಂದವು ಹೆಚ್ಚಾಗಲೆಂದು ಪ್ರಯತ್ನಪಹಡುತ್ತಿರುವಾಗ ವಿಧುರರು ಮಾತ್ರ ತಮ್ಮ ಸಂಖ್ಯೆಯು ಕುಗ್ಗುವ ಮಾರ್ಗ ಹಿಡಿಯುವದು ಲಜ್ಜಾಸ್ಪದವಾದೀತು ಆದ್ದರಿಂದ ವಿಧುರರಲ್ಲಿ ಪರಸ್ಪರ ಸಂಘಟನೆಯನ್ನೂ ಸಹಕಾರವನ್ನೂ ಹೆಚ್ಚಿಸಿ ಪ್ರತಿಯೊಬ್ಬ ವಿಧುರರಿಗೆ ವಿಧುರಾವಸ್ಥೆಯಿಂದ ಹೆಚ್ಚು ಸೌಖ್ಯ ಮತ್ತು ಅನಂದಉಂಟಾಗುವಂತೆ ಪ್ರಯತ್ನ ಮಾಡುತ್ತಿರಬೇಕು. ಮೇಲಿನ ಉದ್ದೇಶವು ಸ್ಪಷ್ಟವಿದ್ದು ಆಕರ್ಷಕವಿರುತ್ತದೆ. ಮಂಡಳವು ಸ್ಥಾಪಿತವಾದಕೂಡಲೇ ಸಭಾಸದರನ್ನು ಮಾಡಿಕೊಂಡು ಆದಷ್ಟು ಮಂಡಳದ ಸಂಖ್ಯಾಬಲವನ್ನು ಹೆಚ್ಚು ಮಾಡಬೇಕು. ವಿಧುರರಾಗುವದು ಮನುಷ್ಯನ ಆಧೀನವಾಗಿರದೆ ದೇವರಾಧೀನವಿರುತ್ತದೆ. ಅದು ಮನುಷ್ಯರ ಆಧೀನವಿದ್ದರೆ ಈಗ ಕಂಡುಬರುವ ಸಾವಿರಗಟ್ಲೆ ಬದಲು ಲಕ್ಷಗಟ್ಲೆ ವಿಧುರರು ಸಿಗುತ್ತಿದ್ದರು. ಈಶ್ವರಾಧೀನವಿದ್ದ ವಿಷಯವಾಗಿ ಹಳಹಳಿಸಿ ಫಲವೇನು? ಆದರೆ ಕೇವಲ ಪರಮಾತ್ಮನ ಮೇಲೆ ಭಾರ ಹಾಕಿ ಮಂಡಳದ ಹಿತಚಿಂತಕರು ಸ್ವಸ್ಥ ಕುಳಿತರೆ ಜಗತ್ತಿನಲ್ಲಿ ಪ್ರಯತ್ನವಾದಕ್ಕೆ ಅರದಾಳ ಹಾಕಬೇಕಾದೀತು. ವಿಧುರನನ್ನು ನಿರ್ಮಾಣ ಮಾಡಲಿಕ್ಕೆ ಬರದಿದ್ದರೂ ದೈವಯೋಗದಿಂದ ವಿಧುರರಾದವರನ್ನು ಅದೇ ಅವಸ್ಥೆಯಲ್ಲಿಡಲಿಕ್ಕೆ ಪ್ರಯತ್ನ ಮಾಡುವದು ಪ್ರತಿಯೋರ್ವ ಮಂಡಳದ ಹಿತಚಿಂತಕನ ಆದ್ಯ ಕರ್ತವ್ಯವಿರುತ್ತದೆ. ವಿಧುರ ಮಂಡಳದ ಕಾರ್ಯಕ್ರಮದಲ್ಲಿ ಇದೇ ಮುಖ್ಯ ಕೆಲಸವಿರುತ್ತದೆ. ಸುದೈವದಿಂದ ಅಧವಾ ದುರ್ದೈವದಿಂದ ಪ್ರಾಪ್ತವಾದರೆ ಅವನ ಗೂಡ ಸ್ನೇಹ ಬೆಳಿಸಿ ಬಶ್ದದಿಂದಾಗಲೀ ಅಥವಾ ಸನ್ನೆಗಳಿಂದಾಗಲೀ ಮತ್ತು ಇತರ ಮಾರ್ಗದಿಂದಾಗಲೀ ಅವನನ್ನು ಆಮರಣ ಪರ್ಯಂತ, ಅದೇ ಸ್ಥಿತಿಯಲ್ಲಿಡಲಿಕ್ಕೆ ಪ್ರಯತ್ನ ಮಾಡುವದು ಮಂಡಳದ ಮುಖ್ಯ ಕೆಲಸವಿರುತ್ತದೆ. ವಿಧುರ ಮಂಡಳದ ಮುಖ್ಯ ಕಾರ್ಯನಿರ್ದೇಶ ಮಾಡಿದ ಮೇಲೆ ಕಾರ್ಯದಲ್ಲುಂಟಾಗುವ ತೂಂದರೆಗಳನ್ನು ಹೇಳಿದರೆ ತಪ್ಪಾಗಲಾರದು.

ವಿದುರಾವಸ್ಥೆಯು ಪ್ರಾಪ್ತವಾದ ಮೊದಲನೇ ವರುಷವು ಅತ್ಯಂತ ಕಂಟಕಮಯವಾಗಿರುತ್ತದೆ. ಹೆಂಡತಿಯು ಸತ್ತ ಮೊದಲನೇ ಹದಿನೈದು ದಿವಸಗಳು ನಿಸ್ಸೀಮ ವೈರಾಗ್ಯದ ದಿವಸಗಳು. ಪತ್ನಿಯಗೂಡ ಸಹಗಮನ ಮಾಡುವ ಕಲ್ಪನೆಗಳು ಸಹ ವಿಧುರರ ತಲೆಯಲ್ಲಿ ಒಮ್ಮೊಮ್ಮೆ ತಾಕಲಾಡುತ್ತವೆ, ಪೆನಶನ್‌’ ತೆಗೆದುಕೊಂಡು ಮನೆಯಲ್ಲಿ ಕುಳಿತ ವೃದ್ಧನಿಗೆ ಹೇಗೆ ಸಂಸಾರ ಅಸಾರವಾಗಿ ತೋರುವದೊ ಅದರಂತೆ ಹೊಸ ವಿಧುರನಿಗೆ ಸಂಸಾರ ಅಸಾರವೆಂದು ತೋರುವದು. ಮೃತಪತ್ನಿಯ ಗುಣವರ್ಣನೆಯನ್ನು ಸ್ವತಃ ಮಾಡದಿದ್ದರೂ ಎರಡನೇಯವರ ಬಾಯಿಂದ ಆ ವರ್ಣನೆಯನ್ನು ಕೇಳುವದರಲ್ಲಿ ಆನಂದವಾಗುತ್ತಿದೆ. ಬಂಧುಬಳಗದವರಲ್ಲಿ ಯಾರಾದರೂ ಎರಡನೇ ಲಗ್ನದ ಮಾತೆತ್ತಿದ ಕೂಡಲೆ ನವವಿಧುರನು ಸಿಟ್ಟಗೆದ್ದು ಆಕಾಶ ಪಾತಾಳವನ್ನು ಒಂದು ಮಾಡುವದರಲ್ಲಿ ಎಂದೂ ಕಡಿಮೆ ಮಾಡುವುದಿಲ್ಲ. ದೇವನಿರ್ಮಿತವಾದ ವಿಸ್ಮೃತರೂಪಿ ಆವರಣದ ಪ್ರಭಾವದಿಂದ ವಿಧುರನಲ್ಲಿ ಸಾವಕಾಶವಾಗಿ ಪರಿವರ್ತನವಾಗಹತ್ತುತ್ತದೆ. ಹೊರಗಿನಿಂದ ಮನೆಗೆ ಬಂದಕೂಡಲೆ ಮನೆಯು ಭಣಗುಟ್ಟುತ್ತದೆ. ಎಲ್ಲಿ ನೋಡಿದಲ್ಲಿ ಔಿದಾಸೀನ್ಯವು ಕಂಡು ಬರುತ್ತದೆ.

ಹೊರಗಿನಿಂದ ನೀರಡಿಸಿ ಮನೆಗೆ ಬಂದರೆ ಒಂದು ಪಾತ್ರೆ ನೀರು ಕೊಡುವವರು ಸಹ ಯಾರಿಲ್ಲೆಂಬುದು ಎಂಥ ದುರ್ದೈವವು. ತನ್ನ ಚಿಕ್ಕಮಕ್ಕಳನ್ನು ನೋಡಿ ಹೊಟ್ಟೆಯಲ್ಲಿ ಬೆಂಕಿಯನ್ನು ಹಚ್ಚಿದಂತಾಗುತ್ತದೆ. ವಿಧುರನ ಮನಃ ಸ್ಥಿತಿಯನ್ನು ಕಂಡುಹಿಡಿದು ಅವನ ಹಿತಚಿಂತಕತವು ಒಳ್ಳೇ ಜೋರಿನಿಂದ ಉಪದೇಶ ಪ್ರಾರಂಭ ಮಾಡುತ್ತಾರೆ. ಗೃಹಲಕ್ಷ್ಮಿಯಿಲ್ಲದ ಗೃಹದ ಭಯಾನಕ ಚಿತ್ರವಿಟ್ಟು, ಐತಿಹಾಸಿಕ ಕಾಲದ ಓರ್ವ ವಿಧುರನು ಹೇಗೆ ದುರ್ಮಾರ್ಗಕ್ಕೆ ಹತ್ತಿದನೆಂಬುದನ್ನು ವೇಳೆ ಅವೇಳೆಯಲ್ಲಿ ಹೇಳುವದರಲ್ಲಿ ನವವಿಧುರನ ಬಂಧು ಬಳಗದವರಿಗೂ ಮಿತ್ರರಿಗೂ ಒಂದು ತಾಮಸಿಕ ಅನಂದವನಿಸುತ್ತದೆ. ಇವೆಲ್ಲ ಸಂಗತಿಗಳನ್ನು ಕೇಳಿ ವಿಧುರನ ಅಂತಃಕರುಣ ಮತ್ತು ಮಿದುಳು ಕಿಂಚಿತ್‌ ಮೆತ್ತಗಾಗುತ್ತದೆ. ಇಂಥ ಸಮಯದಲ್ಲಿ ವಿಧುರನ ಇಷ್ಟ ಮಿತ್ರರಿಗೆ ವಿಧುರನು ತರುಣ ಕಾಣಿಸುತ್ತಾನೆ. ಅವನ ವಯಸ್ಸಿನಲ್ಲಿ ಹತ್ತು ಹದಿನೈದು ವರುಷಗಳು ಕಳಚಿ ಕೆಳಗೆ ಬೀಳುತ್ತವೆ. ವಿಧುರನ ವಯಸ್ಸು ೪೦-೫೦ ಆಗಿದರೂ ಅವನ ಕಿವಿಗೆ ಬೀಳದಂತೆ ಅವನು ೩೦ ವರುಷದವನಿದ್ದಾನೆಂಬ ವಿಧಾನವನ್ನು ಪುನಃಪುನಃ ಮಾಡುವದರಿಂದ ತಾನು ನಿಜವಾಗಿಯೂ ೩೦ ವರುಷದವನಿದ್ದೇನೆಂದು ಅವನಿಗೆ ಅನಿಸಹತ್ತುತ್ತದೆ. ಇಷ್ಟಾದಮೇಲೆ ವಿಧುರ ಮಹಾರಾಜನು (ಮಹಾಭಾರತದ ವಿಧಾನದಲ್ಲಿ) ಮತ್ತೊಂದು ಮೆಟ್ಟಿಲನ್ನು ಏರುತ್ತಾನೆ. ಎಂದಾದರೊಮ್ಮೆ ಅಪ್ಪಿತಪ್ಪಿಯಾಗಲಿ ಇಲ್ಲವೆ ಬುದ್ಧಿ ಪೂರ್ವಕವಾಗಲಿ ಆತನು ತನ್ನ ಮೋರೆಯನ್ನು ಕನ್ನಡಿಯಲ್ಲಿ ನೋಡುವನು. ಆಗ ಕನ್ನಡಿಯಲ್ಲಿ ಜೊಂಡಿಗದ ಮೀಸೆಯಂತೆ ಉದವಾಗಿ ಬೆಳೆದ, ನಡುನಡುವೆ ಬೆಳ್ಳಿಯ ಬಣ್ಣದಿಂದ ವಿಭೂಷಿತವಾದ ಮೀಸೆಯಿಂದ ವಿದ್ರೂಪವಾದ ಅವಡೊತ್ತಿದ ಮೋರೆ ಕಾಣಿಸುವದು ಸಹಜವಿದೆ. ಎಲ್ಲರೂ ತರುಣನೆಂದೆನ್ನುತ್ತಿರುವಾಗ ಬಾಡಿದ ಮುಖಮುದ್ರೆಯ ಮೂಲಕ ಮುಪ್ಪಿನತನದ ಡಂಗುರ ಸಾರುವದು, ಆತನಿಗೆ ಅಸಹ್ಯವೆನಿಸುತ್ತದೆ. ಆಮೇಲೆ ಕೇವಲ ಲೌಕಿಕರ ಅಭಿಪ್ರಾಯ ಸತ್ಯ ಮಾಡಿ ತೋರಿಸುವದಕ್ಕೋಸ್ಕರ ವಿಧುರ ಮನುಷ್ಯನು ತರುಣ ನಾಗಲು ಧಡಪಡಿಸುವನು. ಬಿಳಿಗೂದಲುಗಳ ಸಂಖ್ಯೆ ಕಡಿಮೆ ಇದ್ದರೆ ಅಷ್ಟು ಕೂದಲುಗಳನ್ನು ತೆಗೆದು ಮೀಸೆಯನ್ನು ಒಳಿತಾಗಿ ಕತ್ತರಿಸಿ, ತಲೆಯ ಮೇಲಿನ ಕೂದಲುಗಳನ್ನು ಬೆಳಿಯಿಸಿ ತಾರುಣ್ಯದ ಸೋಗನ್ನು ಮಾಡಲು ವಿಧುರನು ಪ್ರವೃತ್ತನಾಗುತ್ತಾನೆ. ಆದರೆ ಬೆಳ್ಳಿಯ ಕೂದಲುಗಳು ಮಿತಿ ಮೀರಿದ್ದರೆ ಕತ್ತಿಯ ಒಂದು ಎಳೆತದಿಂದ ಮೀಸೆಯ ಗುಂಜನ್ನು ತೆಗೆದೊಗೆದು, ತನ್ನ ವಯಸ್ಸಿನಲ್ಲಿ ೨೦ ವರ್ಷ ಕಡಿಮೆ ಮಾಡಿಕೊಳ್ಳಲು ವಿಧುರನು ಪ್ರಯತ್ನಿಸುವನು. ಮೀಸೆಗಳು ಮಾಯೆವಾದವೆಂದರೆ ವಿಧುರ ಮಣಿಯು ತೀವ್ರವೇ ವಿವಾಹಬದ್ಧ ನಾಗುವನೆಂದು ನಿರಾತಂಕಶವಾಗಿ ತಿಳಿದು ಕೊಳ್ಳಬೇಕು. ಈ ವಿವಾಹವನ್ನು ಆತನು ತನ್ನ ಅನುಕೂಲ ಅನಾನುಕೂಲತೆಗಾಗಿ ಮಾಡಿಕೊಳ್ಳುವನೆಂದು ಯಾರೂ ತಿಳಿಯಕೂಡದು. ಯಾಕಂದರೆ ವಿಧುರರ ವಿವಾಹದಲ್ಲಿ ಯಾವಾಗಲೂ ಪರೋಪಕಾರಬುದ್ದಿಯಿರುತ್ತದೆ. ಕೇವಲ ತನ್ನ ವೃದ್ಧ ಮಾತೋಶ್ರೀಯ ಸೇವಾಶುಶ್ರೂಷೆಗಾಗಲಿ, ಇಲ್ಲವೆ ತನ್ನ ಕೂಸು ಕುನ್ನಿಗಳ ಪಾಲನ ಪೋಷಣೆಗಾಗಿಯಾಗಲಿ ಎರಡನೆಯ ಲಗ್ನವನ್ನು ಮಾಡಿಕೊಳ್ಳುವರಿರುತ್ತಾರೆ. ತನ್ನ ಸ್ವಂತದ ಸುಖೋಪಭೋಗಕ್ಕಾಗಿ ಲಗ್ನ ಮಾಡಿಕೊಳ್ಳುತ್ತೀನೆಂದು ಹೇಳುವ ವಿಧುರರು ಅಪರೂಪ.

ಮೇಲಿನ ಎಲ್ಲ ವಿವೇಚನೆಯಿಂದ ವಿಧುರಾವಸ್ಥೆಯಲ್ಲಿ ನಿರಂತರವಾಗಿ ಇರುವದು ಎಷ್ಟು ಕಠಿಣವಾಗಿದೆಯಂಬದು ಕಂಡುಬರುತ್ತದೆ. ಅದಕ್ಕಾಗಿಯೇ ಯಾವನೊಬ್ಬ ವಿಧುರನನ್ನು ವಿಧುರ ಮಂಡಳದ ನಿರಂತರ ಸಭಾಸದನನ್ನು ಮಾಡಿಕೊಳ್ಳುವ ಪೂರ್ವದಲ್ಲಿ ಆತನನ್ನು ಕನಿಷ್ಟ ಪಕ್ಷಕ್ಕೆ ಒಂದು ವರುಷದವರೆಗಾದರೂ ಕೇವಲ ಉಮೇದವಾರರ ಪಟ್ಟಿಯಲ್ಲಿಯೇ ಇಡುವದು ಸಯುಕ್ತಿಕವಾಗುವದು. ಮೇಲಿನ ಎಲ್ಲ ಮೋಹಪರಂಪರೆಯಿಂದ ಮುಕ್ತನಾಗಿ ಒಂದು ವರ್ಷದ ವರೆಗೆ ತನ್ನ ಅವಸ್ಥೆಯನ್ನು ನಿರಂತರವಾಗಿಟ್ಟರೆ ಬಳಿಕ ಆತನನ್ನು ಸಭಾಸದನನ್ನಾಗಿ ಮಾಡಿಕೊಳ್ಳುವದು ಯೋಗ್ಯವಾಗುವದು. ಉಮೇದವಾರಿಯ ಅವಧಿಯಲ್ಲಿಯೂ ಈತನನ್ನು ಸ್ಪತಂತ್ರವಾಗಿಡುವದು ಯೋಗ್ಯವಲ್ಲ. ಉಮೇದವಾರರ ಪಟ್ಟಿಯಲ್ಲಿ ಆತನ ಹೆಸರನ್ನು ಹಚ್ಚಿಕೊಂಡು ನಿತ್ಯನೇಮಗಳ ಸಂಬಂಧವಾಗಿ ಕೆಲವು ನೇಮಗಳನ್ನು ಹಾಕಿಕೊಡಬೇಕು. ಕೇವಲ ದಿಗ್ದರ್ಶನವೆಂದು ಅವುಗಳಲ್ಲಿಯ ಒಂದೆರಡನ್ನು ಇಲ್ಲಿ ಉಲ್ಲೇಖಿಸುವೆವು.

(೧) ಎರಡನೇ ಅಥವಾ ಮೂರನೆಯ ಲಗ್ನ ಮಾಡಿಕೊಂಡು ಕೂಡಾ ಇಂತಿಂಥಹ ಮನುಷ್ಯನು ಸುಖದಿಂದ ಸಂಸಾರ ಮಾಡುತ್ತಿರುವನು ಎಂಬ ವಿಷಯಗಳ ಸತ್ಯ ಅಸತ್ಯ ಸುದ್ದಿಗಳನ್ನು ಯಾರಾದರೂ ಹೇಳಿದರೆ ವಿಧುರನ ಅವುಗಳಿಗೆ ಕಿವಿಗೊಡಬಾರದು. ಅಧವಾ ಕೇಳಿದರೂ ಅವನ್ನು ನಂಬಬಾರದು.

(೨) ವಿಧುರನು ತರುಣನಂತೆ ಕಾಣಸಿಕೊಳ್ಳುನ ಯತ್ನವನ್ನು ಎಂದೂ ಮಾಡಕೂಡದು. ಇಷ್ಟೇ ಅಲ್ಲ ವೃದ್ದನಂತೆ ತೋರಿಸಿಕೊಳ್ಳುವ ಯತ್ನವನ್ನು ಮಾಡಬೇಕು. ಅಂದರೆ ಪುನಃ ಲಗ್ನವಾಗಲು ಆಗ್ರಹ ಮಾಡುವ ಒಂದು ಆಧಾರವು ಕಡಿಮೆಯಾಗುತ್ತದೆ. ಇದಲ್ಲದೆ ವಿಧುರ ಸಂಸ್ಥೆಯಿಂದ ಕೆಲವೊಂದು ವ್ಯವಸ್ಥೆ ಮಾಡಬೇಕಾಗುತ್ತದೆ.

(೩) ವಿಧುರನಿಗೆ ನಿರುದ್ಯೋಗಿಯಾಗಿ ಕೂಡಲು ತುಸು ಕೂಡ ಅವಕಾಶ ಕೊಡಕೂಡದು. ಹಗಲಿರುಳು ಅತನ ಮನಸ್ಸು ಬುದ್ಧಿಯು ಯಾವದೇ ವ್ಯವಸಾಯದಲ್ಲಿ ತೊಡಕದಿದ್ದರೆ ಗೂಳಿಯಂತೆ ಇರುವ ಆತನ ಚಿತ್ತವು ಅವ್ಯಸ್ಥಿತವಾಗುತ್ತದೆ. ಆದುದರಿಂದ ವಿಧುರನನ್ನು ಯಾವದೊಂದು ಕಾರ್ಯದಲ್ಲಿ ತೊಡಕಿಸಿ, ಆತನಿಗೆ ಆತನ ವಿಧುರಾವಸ್ಥೆಯ ವಿಸ್ಮರಣೆಯನ್ನು ಮಾಡುವದು ವಿಧುರ ಮಂಡಲದ ಕರ್ತವ್ಯವಿದೆ.

(೪) ಎರಡನೆಯ ಮಾತು ತುಸು ಖರ್ಚಿನದಿದೆ. ಬಾಲ ವಿಧವೆಯರಿಗಾಗಲಿ, ವೃದ್ಧ ವಿಧವೆಯರಿಗಾಗಲೀ, ಶಿಕ್ಷಣವು ದೂರೆತು ತನ್ಮುಖವಾಗಿ ಅವರಿಗೆ ಸಮಾಧಾನದಿಂದ ಕಾಲಕಳೆಯಲು ಬರೆಬೇಕೆಂದು ತಿಳಿದು ಅವರ ದುಸ್ಥಿತಿಯು ವಿಸ್ಮರಣೆವುಂಟಾಗಬೇಕಾಗಬೇಕಂದು ಅಲ್ಲಲ್ಲಿ ವಿಧವಾಶ್ರಮಗಳನ್ನು ಅನಾಥ ಬಾಲಿಕಾಶ್ರಮಗಳನ್ನು ಸ್ಥಾಪಿಸಲಾಗಿದೆಯಷ್ಟೆ! ಇದೇ ಪಂಕ್ತಿ ಯನ್ನನುಸರಿಸಿ ಮತ್ತು ಇದೇ ಧ್ಯೇಯದಿಂದ ತಾಣತಾಣಗಳಲ್ಲಿ ನಿರಾಶ್ರಿತ ವಿಧುರಾಶ್ರಮಗಳನ್ನು ಸ್ಥಾಪಿಸಬೇಕೆಂದು ನಮ್ಮ ಸೂಚನೆಯಿದೆ.

ಈ ಆಶ್ರಮವು ಶಕ್ಯವಾದಷ್ಟು ಕೈಲಾದ ಮಟ್ಟಿಗೆ ವಿಧವಾಶ್ರಮಗಳಿಂದ ದೂರವಾಗಿರಬೇಕೆಂದು ಯಾವ ಸಮಂಜಸ ಪುರುಷನಿಗಾದರೂ ಹೊಳೆಯದೆ ಇರದು. ಅದೇ ಪ್ರಕಾರಾ ಪ್ರತಿಯೊಂದು ಜಿಲ್ಲೆಯಲ್ಲಿ ಮುದುಕ ವರಗಳಿಗೆ ಕನ್ಯಾದಾನ ಮಾಡಿಕೊಟ್ಟು ಸಂಪತ್ತಿಯನ್ನು ದೊರಕಿಸುವ ವಿಷಯದಲ್ಲಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಈ ಊರುಗಳ ಸಂಪರ್ಕವು ವಿಧುರಾಶ್ರಮಗಳಿಗೆ ಆಗಬಾರದಂತೆ ಎಚ್ಚರಪಡುವದು ಅವಶ್ಯವು. ಹೀಗಾದರೆಯೇ ಈ ಆಶ್ರಮಗಳು ಗಟ್ಟಿಯಾಗಿ ಉಳಿಯುವವು.

ಮೇಲಿನ ಸೂಚನೆಗಳನ್ನು ಲಕ್ಷದಲ್ಲಿಟ್ಟು ಕೊಂಡು ಕೆಲಸ ಮಾಡಹತ್ತಿದರೆ, ವಿಧುರ ಮಂಡಳದ ಉತ್ಕರ್ಷವಾಗಲು ಬಹಳ ಅವಕಾಶವು ಬೇಕಾಗುವದಿಲ್ಲ. ನಮ್ಮ ಕರ್ನಾಟಕದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಪ್ರಚಾರಕ, ಪ್ರಸಾರಕ, ಕೋಶಾಧ್ಯಕ್ಷ, ಮೊದಲಾದ ಮಂಡಳದ ಹೊಣೆಗಾರಿಕೆಯ ಕೆಲಸವನ್ನು ಕೈಕೊಳ್ಳಲು ಸಾರ್ವಜನಿಕ ಕೆಲಸಕ್ಕೆ ಆತ್ಮಾರ್ಪಣ ಮಾಡಿದ ಅನೇಕ ವಿಧುರ ಮಣಿಗಳು ಸಿಕ್ಕುವರು. ಆದರೆ ಈ ಸತ್ಕಾರ್ಯವು ಆರಂಭವಾಗಲಿಕ್ಕೆ ಯಾರಾದರೂ ಮುಂದಾಳುಗಳ ಕೈನೆರವು ಅವಶ್ಯವಾಗಿದೆ.

ಅನೇಕ ಕಾರ್ಯ ಬಾಹುಲ್ಯದ ಮೂಲಕ ಲೋಕಮಾನ್ಯರಿಗೆ ಸವಡು ಸಿಕ್ಕಲಿಲ್ಲ. ಇಲ್ಲದಿದ್ದರೆ ಮಂಡಾಲೆಯಿಂದ ತಿರುಗಿ ಬಂದ ಬಳಿಕ ಒಂದೇ ಒಂದು ವರ್ಷದಲ್ಲಿ ಇಂತಹ ಮಂಡಲವನ್ನು ಸ್ಥಾಪಿಸಿಬಿಡುತ್ತಿದ್ದರು. ಅವರು ಅನುಯಾಯಿಗಳ ಪೈಕಿ ಅನೇಕೆ ಜನರು ವಿಧುರರಿದ್ದರೂ ಲೋಕಮಾನ್ಯರಲ್ಲಿದ್ದ ಮುಂಬರಿಯು ಇವರಲ್ಲಿಲ್ಲದ್ದರಿಂದ ಈ ಕಾರ್ಯವು ಹಾಗೆಯೇ ಉಳಿದು ಹೋಗಿದೆ. ಇರಲಿ, ಈಗ ಮಹಾತ್ಮಾ ಗಾಂಧಿಯವರು ವಿಲಾಯತಿಗೆ ಹೋಗಿದ್ದಾರೆ. ಅವರು ಮರಳಿ ಬಂದರೆಂದರೆ ಸುಮ್ಮನೆ ಏನಾದರೂ ಗಲಭೆ
ಎಬ್ಬಿಸುತ್ತಾರೆ. ಅವರಿಲ್ಲದ ಈ ವೇಳೆಯಲ್ಲಿ ಜೋರಿನಿಂದ ಸಾಹಸ ಮಾಡಿದರೆ ಈ ಮಂಡಳವು ಸಹಜವಾಗಿ ಸ್ಥಾಪಿತವಾಗುವುದೆಂದು ನಮಗೆ ತುಂಬಾ ನಂಬಿಗೆಯಾಗಿದೆ.

ಓರ್ವ ವಿಧುರ.

ಪ್ರಸಿದ್ಧಿ ಕಾಲ
೨೯ – ೧೧ – ೧೯೩೧
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂಥಾ ಬಕಾಸುರ ಸಾಮರ್ಥ್ಯವೆಮಗ್ಯಾಕೋ?
Next post ಹರಕೆ

ಸಣ್ಣ ಕತೆ

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys