ಕತ್ತಲಲ್ಲಿ ವಾಹನಗಳ ಬರುವಿಕೆಯನ್ನು ಅವುಗಳ ಹೆಡ್ ಲೈಟ್‌ಗಳಿಂದ ಪತ್ತೆ ಹಚ್ಚಬಹುದು. ದಾರಿಯಲ್ಲಿಯ ಕೈಮರ, ಸೂಚನಾ ಫಲಕಗಳಿಗೆ ಬೆಳಕು ಬಿದ್ದಾಗ ಅದರಲ್ಲಿಯ ರಂಜಕದ ಅಂಶದಿಂದ ಅಲ್ಲಿಯ ಅಕ್ಷರಗಳು ಹೊಳೆಯುತ್ತವೆ. ರಾತ್ರಿಯಲ್ಲಿ ಬೆಕ್ಕೂ, ಹುಲಿಗಳು ತಿರುಗಾಡಿದರೂ ಅವುಗಳ ಕಣ್ಣುಗಳು ಸಹ ಹೊಳೆಯುತ್ತವೆ. ಆದರೆ ಮನುಷ್ಯರು ಧರಿಸಿದ ಬಟ್ಟೆಗಳು ರಾತ್ರಿಯಲ್ಲಿ ಹೊಳೆಯುತ್ತವೆ, ಎಂದರೆ ಸೋಜಿಗ ಅಲ್ಲವೆ? ಇಂಥಹ ಶರ್ಟ್‌ಗಳನ್ನು ಜಪಾನ್ ದೇಶ ಕಂಡುಹಿಡಿದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕತ್ತಲಾದಂತೆಲ್ಲ ತಮ್ಮ ಕಾಂತಿಯಿಂದ ಎದುರಿಗೆ ಬರುವವರಿಗೆ ಒಬ್ಬ ವ್ಯಕ್ತಿ ಬರುತ್ತಿದ್ದಾನೆ ದಾರಿಬಿಡಬೇಕೆಂದು ತಿಳಿಯುತ್ತದೆ. ಇಂಥಹಬಟ್ಟೆಗಳನ್ನು ದೇಹದ ಮೇಲೆ ಸುಲಭವಾಗಿ ಧರಿಸಬಹುದು. ಇದು ಬೆಳಕಿನಲ್ಲಿ ಸಾಧಾರಣವಿರುತ್ತದೆ, ಆದರೆ ರಾತ್ರಿಯಾಯಿತೆಂದರೆ ಹೊಳೆಯಲಾರಂಭಿಸುತ್ತದೆ. ಈ ಬಟ್ಟೆಯಲ್ಲಿ ಮನೆಯಲ್ಲಿಯ ಪ್ರಮುಖ ವಸ್ತುಗಳನ್ನು ಸುತ್ತಿಟ್ಟರೆ ಅದು ಹೊಳೆದು ಅದರ ಸ್ಥಳವಮ್ನ ಗುರುತಿಸುತ್ತದೆ.
*****