ನಾ ಕಂಡ ಸಂಗೀತ ಕಾರಂಜಿ

ನಾ ಕಂಡ ಸಂಗೀತ ಕಾರಂಜಿ

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿದೆ. ನಮ್ಮ ನೋವ ಮರೆಯಲಿಲ್ಲಿ ತಕ್ಕನಾಗಿದೆ.

ದಿನಾಂಕ ೦೮.೦೮.೨೦೧೫ ರಂದು ಶನಿವಾರದ ದಿನದಂದು ಜಗಮೋಹನ ಪ್ಯಾಲೇಸ್ ಸಭಾಭವನದಲ್ಲಿ ತಣ್ಣನೆಯ ಸಂಜೆಯಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿ ವಿಖ್ಯಾತಿ ಪ್ರಖ್ಯಾತಿಯ ಗಾಯಕಿಯರಾದ ರಂಜನಿ ಹಾಗೂ ಗಾಯತ್ರಿ ಇವರ ಸಂಗೀತ ಕಾರಂಜಿಗೆ ಜನರು ಸುಜನರಲ್ಲಿ ಕಿಕ್ಕಿರಿದು ಸೇರಿತ್ತು.

ಕೊನೆಯ ಸೀಟಿನಲ್ಲಿದ್ದೆ! ಸಂಗೀತ ಇಂಪೆನಿಸಲಿಲ್ಲವೆಂದರೆ ಎದ್ದು ಹೋಗಲು ಎಂದು. ಆದರೆ… ಕೇಳುತ್ತಾ ಕೇಳುತ್ತಾ ಭಲೇ ರಸಾನುಭೂತಿ ಕಲಗಿತು!

“ಹೂವಿನಿಂದ ನಾರು ಸ್ವರ್ಗ ಸೇರಿತು” ಎನ್ನುವಂತೆ ನನ್ನ ಮಡದಿ ಮಣಿ ವೆಂಕಟಲಕ್ಷ್ಮಿಯಿಂದ ಒಳ್ಳೆಯ ಸಂಗೀತ ಕಾರಂಜಿಗೆ ಬಂದಿದ್ದೆ. ಮೈಸೂರು ಮೈಸೂರಿನ ಜನರೇ ಹಾಗೆ ಮೈಸೂರು ಮಲ್ಲಿಗೆಯಾ ಹಾಗೇ… ಕರ್ನಾಟಕ ಶಾಸ್ತ್ರೀಯ ಗಾಯನ ಜನರ ಮನಸ್ಸು ತಣಿಸಿತು.

ಸಂಗೀತವೇ ಹಾಗೆ ಗೊತ್ತಿಲ್ಲದವರ ತಲೆದೂಗುವಂತೆ ಮಾಡುವ ಮೋಡಿ ಅದಕ್ಕಿದೆ!

ಅಲ್ಲಿ ಆರಂಭ ಶೂರತ್ವವಿರಲಿಲ್ಲ. ಪ್ರತಿಭೆ, ಉತ್ಪತ್ತಿ, ಸಾಧನೆ, ಏನೆಲ್ಲ ಅಲ್ಲಿ ಮೇಳೈಸಿತ್ತು. ಅವರು ಸಂಗೀತ ಶಾರದೆಯರಂತೆ ಜನರ ಸೂರೇಗೊಂಡರು.

ಅಬ್ಬಾ! “ಶ್ರೀ ಮಹಾ ಗಣಪತಿಂ ಭಜೇಹಂ” ಎಂದು ನಮ್ಮ ಮೈಸೂರು ಮಹಾರಾಜರ ಹಾಡನ್ನು ಹಾಡಿದ ರೀತಿ ಎಲ್ಲರಿಗೆ ಮೆಚ್ಚಿಗೆಯಾಯಿತು. ನಂತರ “ಓಂ ನಮೋ ಭಗವತೇ ವಾಸುದೇವಾಯ”, “ಯಾರೆ ರಂಗನ ಯಾರೆ ಕೃಷ್ಣನ” ಮೈಸೂರು ವಾಸುದೇವಾಚಾರ್‍ಯರ “ಭಜನಸೇಯರಾದ” ಶ್ಯಾಮಾಶಾಸ್ತ್ರಿಗಳ “ನನ್ನುಯ್ರೋವು ಲಲಿತ” ತ್ಯಾಗರಾಜರ “ಇಂತ ಸೌಖ್ಯಮನಿ ನೇ…” ಮುತ್ತಯ್ಯ ಭಾಗವತರ “ಶರವಣ ಭವ ಸಮಯಮಿದಿರಾ” ಪುರಂದರದಾಸರ “ಆದದ್ದೆಲ್ಲ ಒಳಿತೇ ಆಯಿತು” “ನಾಚತೆ ಆಯ ನಟಿಕಟ್ಗಿರಿಧರ್” “ಎಂಥಾ ಪುಣ್ಯವೇ ಗೋಪಿ”, “ವಿಕೋಬ ಸಂಗ ಸದಾ” ಇವೆಲ್ಲ ಕೇಳುಗರ ಮನದಲ್ಲಿ ರಸಸ್ವಾದನೆಯನ್ನುಂಟು ಮಾಡಿದವು.

ಸಂಗೀತ ಅದರಲ್ಲೂ ಇಂಥಾ ಸಾಧಕಿಯರಾದ ಇಂಥಾ ಗಾಯಕಿಯರು ಕೇಳುಗರ ಮನವನ್ನು ಗೆಲ್ಲಬಲ್ಲವರೆಂಬುದಕ್ಕೆ ಅಲ್ಲಿ ಕಿಕ್ಕಿರಿದು ನಿಂತು ಕೆಳಗೆ ಹೊರಗೆ ಬಾಗಿಲಲ್ಲಿ ಗುಂಪುಗುಂಪು ಕೇಳುತ್ತಿತ್ತು. ಜನರು ತಲೆದೂಗಿ ಖುಷಿಖುಷಿಯಲ್ಲಿ ಚಪ್ಪಾಳೆ ಹೊಡೆಯುತ್ತಿತ್ತು.

ಎಂದರೋ ಮಹಾನುಭವರು ಉತ್ಕೃಷ್ಟ ಸ್ಥಾಯಿಯಲ್ಲಿ ಸುಲಲಿತ ಸುಮಧುರ ಸೌಖ್ಯ ಭಾವ ಪೂರ್‍ವ ಮನೋಜ್ಞವಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಪಂಕ್ತಿಯಲಿ ಇವರ ಹೆಸರುಗಳು ಬಹುಕಾಲ ಉಳಿಯುವುವು ಎಂದು ಮನದುಂಬಿ ಬರೆದಿರುವೆ. ಆದ್ದರಿಂದ ಪುಟಾಣಿಗಳೆ… ನೀವೂ ಸಂಗೀತ ಕಲಿಯುವತ್ತ ಆಸಕ್ತಿಯುಳ್ಳವರಾಗಿ ಎಂದು ಹರಸುವೆ. ಆಗಬಹುದೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರಿ ರುಮ್ಮಾಲ ಸುತ್ತಿ
Next post ಹತ್ತವತಾರಗಳು ಆಗಿಹೋದರೂ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…