ಅವನಿಗೆ ಕಥೆ ಬರೆಯಬೇಕೆಂಬ ಹುಚ್ಚು. ಒಂದೆರಡು ಸಾಲು ಬರೆದು ಚಿತ್ತುಮಾಡಿ ಗೆರೆಗಳನ್ನು ಅಡ್ಡಾದಿಡ್ಡಿ ಹಾಕಿ ಅದನ್ನೇ ಚಿತ್ರವಾಗಿಸುತ್ತಿದ್ದ. ಅವನಿಗೆ ಏನೂ ತೋಚದಾಗ ಕನ್ನಡದ ಅಕ್ಷರಮಾಲೆ ಅಲ್ಲೊಂದು ಇಲ್ಲೊಂದು ಬರೆದು ಇದು ಒಂದು ಗಹನವಾದ ಕಥೆ ಎನ್ನುತಿದ್ದ. ಓದುವವರು ಚಿತ್ರ ನೋಡಿ ಇದೊಂದು ಪತ್ತೇದಾರಿ ಕಥೆ ಇರಬೇಕು. ಈ ಅಕ್ಷರಗಳ ಸುಳಿವು ತಿಳಿದರೆ ಕಥೆ ಅರ್ಥವಾಗುತ್ತದೆ ಎಂದು ಗಂಟಗಟ್ಟಲೆ ಯೋಚಿಸುತಿದ್ದರು.
*****