ನಿನ್ನ ಒಂದು ನೋಟ ಸಾಕು

ನಿನ್ನ ಒಂದು ನೋಟ ಸಾಕು
ಕೋಟಿ ಜನ್ಮ ಸಾರ್ಥಕಾ
ನಿನ್ನ ಒಂದು ನಗೆಯು ಸಾಕು
ಕಷ್ಟ ಕೋಟಿ ಚೂರ್ಣಕಾ ||೧||

ನೀನೆ ನೀನು ಕಾಮಧೇನು
ಪುಂಗಿ ನಾದ ಪವನಪಂ
ನೀನೆ ಕಂಪು ತಂಪು ಇಂಪು
ಸೊಂಪು ಸುಮನ ಸೋಮಪಂ ||೨||

ಲಲನೆ ಲಲನೆ ಚಲನೆ ಚಲನೆ
ಹಲಲ ಹಲಲ ಹಲ್ಲಣ್ಣ
ನೀನೆ ನನ್ನ ಕುಲಿಮೆ ಕುಲಿಮೆ
ಕಲಿಯ ಕಾಲ ಝಲ್ಲಣ್ಣಂ ||೩||

ಬಂದೆ ಬಂದೆ ಬಂದೆ ತಾಯಿ
ನಿನ್ನ ಪಾದ ಪದ್ಮಕೆ
ಬಂದೆ ಬಂದೆ ತಾಯೆ ಮಾಯೆ
ನಿನ್ನ ಯೋಗ ಸದ್ಮಕೆ ||೪||

ನೀನೆ ನನ್ನ ಕಥೆಯ ವ್ಯಥೆಯ
ಚಿತೆಯ ಮತಿಯ ತೋರಣಂ
ನೀನೆ ನನ್ನ ಜನುಮ ಹನುಮ
ನೀನೆ ನನ್ನ ಕಾರಣಂ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ತೇದಾರಿ ಕಥೆ
Next post ಮಕ್ಕಳು

ಸಣ್ಣ ಕತೆ

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…