ಇಂದಿನ ಪುರವದಲ್ಲಿ ಹಬ್ಬ ಕಾಣೀ ತಂಗೀ
ಹೆಬ್ಬೂಲಿ ಚರ್ಮದಲ್ಲಿ ಸಿದ್ದ ಕಾಣೀ ತಾನಾ || ೧ ||

ಊರೂರು ತಿರ್ಗುತಾನೇ ಜೋಗೀಯಾಗೇ ತಂಗೀ
ಮನಿಯಾಗೆ ಕುಳುತಾನೆ ಯೋಗಿಯಂತೇ ತಾನಾ || ೨ ||

ನೀರು ಕಂಡಲ್ಲೀ ಸಾನ ಜಪವೇ ತಂಗೀ
ಹೊಳಿಯಾ ಕಂಡಲ್ಲೀ ಸಾನ ಜಪವೇ ತಾನ || ೩ ||

ಗುಡಿಯ ಕಂಡಲ್ಲಿ ಶಿವ ಪೂಜೆ ತಂಗೀ
ಕಯ್ಯಾಗೆ ನಾಗರ ಹೆಡೆ ಬೆತ್ತ ಕಾಣೀ ತಾನಾ || ೪ ||

ತಲೆ ಮೇನೇ ನಾಗರ ಹೆಡೆ ಬೆತ್ತ ಕಾಣೀ ತಂಗೀ
ಊರೂರು ತಿರ್ಗುತಾನೇ ಜೋಗಿಯಂತೆ ತಾನಾ || ೫ ||

ಮನಿಯಾಗೆ ಕುಳ್ಳತಾನೆ ಯೋಗಿಯಂತೆ ತಂಗೀ
ಇಂದೀನ ಪುರವದಲ್ಲಿ ಹಬ್ಬ ಕಾಣೀ ತಂಗೀ
ಹೆಬ್ಬೂಲಿ ಚರ್ಮದಲ್ಲಿ ಸಿದ್ದ ತಾನಾ || ೬ ||
*****
ಹೇಳಿದವರು: ಊರಬೈಲು ನಾಗು ತಿಮ್ಮ ಗೌಡಾ, ೨೨ ವರ್ಷ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.