ಅನ್ನದೊಳು ಕ್ರಾಂತಿಯೋ, ಜಗದೊಳೀ
ಮನುಜ ಹುಟ್ಟುವ ಮೊದಲೆ ಹುಟ್ಟರಿ
ವಿನೊಳದ್ಭುತವ ಮೆರೆದಿದ್ದ ಹಸುರು ಮಂದಿರದೊಳಗೆ
ತನ್ನ ಬಲದೊಳಗಿನ್ನುಹುಟ್ಟದಧಿಕ ಫಸಲಿನ ಬೀಜ
ತಿನ್ನುತ ಬಯಲು ಮಾಡಿದ ಬರಡು ನೆಲದೊಳಗೆ – ವಿಜ್ಞಾನೇಶ್ವರಾ
*****