ತಿಳಿಯಲಾಗದು ನರಗೆ ಭಗವಂತನ ಲೀಲೆ
ಭಗವಂತನರಿಯುವುದು ಸಾಮಾನ್ಯವಲ್ಲ
ಮನಸ್ಸು ಪವಿತ್ರ ತಾನೆ ಆಗಿದ ಮೇಲೆ
ತಿಳಿಯಬಹುದು ಭಗವಂತನ ಭಾವವೆಲ್ಲ
ಕ್ಷಣಿಕವಾದುದಕ್ಕೆ ಆಶಿಸುತ್ತ ನಾವು
ನಮ್ಮ ನಾವೇ ನಿತ್ಯ ಕುಬ್ಜರಾಗುತ್ತಿದ್ದೇವು
ಬಾಳು ನೀಡಿದ ನಮ್ಮೊಡೆಯಗೆ ಮರೆತು
ಸಂಸಾರದ ವ್ಯಾಮೋಹದಲ್ಲಿ ಬಾಳುತ್ತಿದ್ದೇವು
ಗ್ರಂಥಗಳನ್ನೋದಿ ಪಡದರೇನು ಜ್ಞಾನ
ಅದರಿಂದ ಪರಶಿವಗೆ ನಾವು ಪಡೆಯಲಾದಿತೆ!
ಹಾಲು ಇದೆ ಎಂದು ಅರಿತರಾಯ್ತೆ ಏನ
ಶ್ರಮ ವಹಿಸದೆ ಕ್ಷೀರದಿಂದ ಬೆಣ್ಣೆ ಪಡೆಯಲಾದಿತೆ!
ಭಗವನ್ ಸಾಕ್ಷಾತ್ಕಾರಕ್ಕೆ ತ್ಯಾಗಬೇಕು
ಹೆಣ್ಣು ಹೊನ್ನು ಮಣ್ಣು ಕಡೆಗಣಿಸಬೇಕು
ನಡೆ ನುಡಿಗಳೆಲ್ಲ ನಿತ್ಯ ಒಂದೇ ಆಗಬೇಕು
ಮಾಣಿಕ್ಯ ವಿಠಲನಾಗಿ ಜಪಿಸಬೇಕು
*****